ಬಿಸಿಬಿಸಿ ಉಪ್ಪಿಟ್ಟು ರಾಘವೇಂದ್ರ ಪ್ರಸಾದ
Team Udayavani, Jan 22, 2018, 1:01 PM IST
ಮನೆಗಳಲ್ಲಿ ಮಾಡುವ ಉಪ್ಪಿಟ್ಟು ತಿನ್ನಲು ಹಿಂದೇಟು ಹಾಕುವ ಮಂದಿಯೇ ಹೆಚ್ಚು. ಆದರೆ ಅನೇಕರಿಗೆ ಇಷ್ಟವಾಗದ ಉಪ್ಪಿಟ್ಟಿನ ಮೂಲಕವೇ ನೂರಾರು ಗ್ರಾಹಕರ ಮೆಚ್ಚಿನ ಸ್ಥಳವಾಗಿ ಹೆಸರು ಮಾಡಿರುವ ಹೋಟೆಲ್ ಎಂದರೆ ಅದು ಮೈಸೂರಿನ ಶ್ರೀ ರಾಘವೇಂದ್ರ ಟಿಫಾನೀಸ್.
ಹೌದು, ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮೈಸೂರು ನಗರದೆಲ್ಲೆಡೆ ಐಷಾರಾಮಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ನಡುವೆಯೂ ಮೈಸೂರಿನ ನಾರಾಯಣಶಾಸಿ ರಸ್ತೆಯಲ್ಲಿರುವ ಶ್ರೀರಾಘವೇಂದ್ರ ಟಿಫಾನೀಸ್, ರುಚಿ ಮತ್ತು ಶುಚಿಯಾದ ತಿಂಡಿ-ತಿನಿಸುಗಳನ್ನು ನೀಡುವ ಮೂಲಕ ಇಂದಿಗೂ ತನ್ನ ಗ್ರಾಹಕರ ಆಕರ್ಷಣೆಯನ್ನು ಉಳಿಸಿಕೊಂಡಿದೆ.
ಅದರಲ್ಲೂ ಈ ಹೋಟೆಲ್‌ನಲ್ಲಿ ಲಭಿಸುವ ಉಪ್ಪಿಟ್ಟು ಮೈಸೂರಿನ ಹಿರಿತಲೆಗಳು ಮಾತ್ರವಲ್ಲದೆ ಅದೆಷ್ಟೋ ಮಂದಿಗೆ ಅಚ್ಚುಮೆಚ್ಚಿನ ತಿನಿಸಾಗಿದೆ. 4 ದಶಕಗಳ ಹಿಂದೆ ಎನ್. ಬಲರಾಮ್ ಮತ್ತು ಸಹೋದರರು ಆರಂಭಿಸಿದ ಈ ಹೋಟೆಲ್‌ಗೆ ಇದೀಗ 43ರ ಹರೆಯ.
ತಮ್ಮ ಸಹೋದರನ ಜೊತೆಗೂಡಿ ಆರಂಭಿಸಿದ ಹೋಟೆಲ್ ಅನ್ನು ಇಂದಿಗೂ ಎನ್. ಬಲರಾಮ್ ನೋಡಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 6ಕ್ಕೆ ಆರಂಭವಾಗುವ ಟಿಫಾನೀಸ್ ರಾತ್ರಿ 8 ಗಂಟೆವರೆಗೂ ಕಾರ್ಯನಿರ್ವಹಿಸುತ್ತದೆ.
ಬೆಳಗ್ಗಿನ ಉಪಹಾರಕ್ಕೆ ಉಪ್ಪಿಟ್ಟು, ಕೇಸರಿಬಾತ್, ಇಡ್ಲಿ, ಬಿಸಿಬೇಳೆ ಬಾತ್, ಪೊಂಗಲ್ ಜತೆಗೆ ಉದ್ದಿನವಡೆ ಹಾಗೂ ಮಸಾಲೆವಡೆ ದೊರೆಯುತ್ತದೆ. ಮಧ್ಯಾಹ್ನ ರೈಸ್‌ಬಾತ್ ಮತ್ತು ಮೊಸರನ್ನ ಮಾತ್ರ ಲಭ್ಯ. ಸಂಜೆ 4 ಗಂಟೆ ನಂತರ ಉಪ್ಪಿಟ್ಟು, ಕಾಫಿ, ಟೀ ಹಾಗೂ ಜಾಮೂನು ಲಭಿಸಲಿದೆ. ಎಲ್ಲಾ ತಿನಿಸುಗಳನ್ನು ಸಾಮಾನ್ಯ ಜನರ ಕೈಗೆಟಕುವ ದರದಲ್ಲೇ ನೀಡಲಾಗುತ್ತಿದೆ.
ಉಪ್ಪಿಟ್ಟಿಗೆ ಸಕತ್ ಡಿಮ್ಯಾಂಡ್: 40 ವರ್ಷಗಳಿಂದಲೂ ತನ್ನತನವನ್ನು ಉಳಿಸಿಕೊಂಡಿರುವ ರಾಘವೇಂದ್ರ ಟಿಫಾನೀಸ್‌ನ ಉಪ್ಪಿಟ್ಟಿನ ರುಚಿಗೆ ಮನಸೋಲದವರೇ ಇಲ್ಲ. ನಿತ್ಯದ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಪ್ರತಿದಿನ ಸಂಜೆ ಇಲ್ಲಿಗೆ ಆಗಮಿಸಿ ಉಪ್ಪಿಟ್ಟು, ಕಾಫಿ ಸೇವಿಸಿ ಹೋಗುವ ಹವ್ಯಾಸವನ್ನು ಅನೇಕರು ರೂಢಿಸಿಕೊಂಡಿದ್ದಾರೆ.
ಈ ಹೋಟೆಲ್ ವಾರದ ಏಳು ದಿನಗಳೂ ತೆರೆದಿರುತ್ತದೆ. ಇನ್ನೂ ಹೋಟೆಲ್‌ನ ಎದುರಿನಲ್ಲೇ ಇರುವ ಶಾಂತಲಾ ಚಿತ್ರಮಂದಿರವಿದೆ. ಅಲ್ಲಿಗೆ ಬರುವ ಅನೇಕ ಸಿನಿಪ್ರಿಯರು ಸಿನಿಮಾ ಆರಂಭಕ್ಕೂ ಮುನ್ನ ಈ ಟಿಫಾನೀಸ್‌ಗೆ ಹೋಗಿ, ತಿಂದು ನಂತರ ಥಿಯೇಟರ್‌ನ ಕಡೆಗೆ ಹೆಜ್ಜೆಹಾಕುತ್ತಾರೆ.
“ನಮ್ಮ ಹೋಟೆಲ್‌ನಲ್ಲಿ ರುಚಿ ಹಾಗೂ ಶುಚಿತ್ವದಲ್ಲಿ ಯಾವುದೇ ರಾಜಿಯಾಗಿಲ್ಲ. ನಾಲ್ಕು ದಶಕದಿಂದಲೂ ತಿನಿಸುಗಳು ತಯಾರಿಲ್ಲಿ, ಆರಂಭದಿಂದ ಇಲ್ಲಿಯವರೆಗೂ ಒಂದೇ ಗುಣಮಟ್ಟ ಕಾಪಾಡಿಕೊಂಡು ಬರಲಾಗಿದೆ. ಇದೇ ಕಾರಣಕ್ಕಾಗಿ ಹಲವು ಗ್ರಾಹಕರು ಇಂದಿಗೂ ನಮ್ಮ ಹೋಟೆಲ್‌ಗೆ ಇಷ್ಟಪಟ್ಟು ಬರುತ್ತಾರೆ ಎನ್ನುತ್ತಾರೆ ಹೋಟೆಲ್ ಮಾಲೀಕ ಎನ್.ಬಲರಾಮ್ ಹರ್ಷ.
* ಸಿ. ದಿನೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.