ಹಲೋ ಮೋಟೋ: ಹೊಸ ಬೈಕುಗಳ ಹವಾ!
Team Udayavani, Jul 29, 2019, 9:53 AM IST
ಸಿ.ಎಫ್ ಮೋಟೋ ಸಂಸ್ಥೆ 300NK, 650NK, 650GT ಮತ್ತು 650GT ಎಂಬ ನಾಲ್ಕು ಬೈಕುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಬೈಕರ್‌ಗಳು ಇವುಗಳನ್ನು ರೈಡ್ ಮಾಡಲು ಕಾತರರಾಗಿದ್ದಾರೆ. ಚೀನಾ ಮೂಲದ ಸಂಸ್ಥೆಯಾಗಿರುವ ಸಿಎಫ್.ಮೋಟೋ, ಬೆಂಗಳೂರು ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಎಎಂಡಬ್ಲ್ಯು ಜೊತೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಸಿ.ಎಪ್ ಮೋಟೋ ಬೈಕುಗಳ ಜೋಡಣೆ ಮತ್ತು ಮಾರಾಟದ ಜವಾಬ್ದಾರಿಯನ್ನು ಎಎಂಡಬ್ಲ್ಯುಸಂಸ್ಥೆ ವಹಿಸಿಕೊಂಡಿದೆ. ಕಿಟ್ ರೂಪದಲ್ಲಿ ಬರುವ ಎಲ್ಲಾ ಬಿಡಿಭಾಗಗಳನ್ನು ಎಎಂಡಬ್ಲ್ಯು ತನ್ನ ಪ್ಲಾಂಟ್‌ನಲ್ಲಿ ಅಸೆಂಬಲ್ ಮಾಡಲಿದೆ. ಅಚ್ಚರಿಯ ಸಂಗತಿಯೆಂದರೆ ಯುರೋಪ್, ದಕ್ಷಿಣ ಏಷ್ಯಾ, ದಕ್ಷಿಣ ಆಫ್ರಿಕಾ ಮತ್ತಿತರ ಭಾಗಗಳಲ್ಲಿ ಸಿ.ಎಫ್ ಮೋಟೋ, ಕೆಟಿಎಂ ಜೊತೆಗೇ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ, ಎರಡೂ ಬೈಕುಗಳ ನಡುವೆ ವಿನ್ಯಾಸದಲ್ಲಿ ಸಾಮ್ಯತೆ ಗುರುತಿಸಬಹುದಾಗಿದೆ. ಸಿ.ಎಫ್ ಮೋಟೋ 1989ರಲ್ಲಿ ಸ್ಥಾಪನೆಯಾದ ಕಂಪನಿಯಾಗಿದ್ದು, ಅಲ್ಲಿ ಎಟಿವಿ (ಆಲ್ ಟೆರೇನ್ ವೆಹಿಕಲ್), ನ್ಪೋರ್ಟ್ಸ್ ಎಂಜಿನ್ ಮತ್ತಿತರ ವಾಹನಗಳ ಬಿಡಿಭಾಗಗಳ ತಯಾರಿಯಲ್ಲಿ ಮುಂಚೂಣಿಯಲ್ಲಿದೆ.
ದೈನಂದಿನ ಬಳಕೆಗೆ
ಕಂಪನಿ ಬಿಡುಗಡೆ ಮಾಡಿರುವ ನಾಲ್ಕು ಬೈಕುಗಳಲ್ಲಿ ಕಡಿಮೆ ಬೆಲೆ ಇರುವುದು ಸಿಎಫ್300ಎನ್‌ಕೆ ಬೈಕಿಗೆ. ಅದೂ ಕಡಿಮೆಯೇನಲ್ಲ, ಆ ಬೈಕ್‌ಗೆ ಎರಡರಿಂದ ಎರಡೂವರೆ ಲಕ್ಷ ರು. ಬೆಲೆ ನಿಗದಿ ಪಡಿಸಲಾಗಿದೆ. ಇದು ಕೆ.ಟಿಎಂ 250 ಬೈಕಿಗೆ ಪೈಪೋಟಿ ನೀಡಲಿದೆ. ಎಲ್ಇಡಿ ಹೆಡ್‌ಲೈಟ್, ಟಿಎಫ್ಟಿ ಕನ್ಸೋಲ್, 6 ಸ್ಪೀಡ್ ಗೇರ್ ಬಾಕ್ಸ್ ಮತ್ತು ಎಬಿಎಸ್ ತಂತ್ರಜ್ಞಾನ ಈ ನೇಕೆಡ್ ಸ್ಟ್ರೀಟ್ ಬೈಕಿನ ವೈಶಿಷ್ಟ್ಯವಾಗಿದೆ. ಎರಡು ಬದಿಗಳಲ್ಲಿಯೂ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಇದು 30 33 ಕಿ.ಮೀ ಮೈಲೇಜನ್ನು ನೀಡುವುದೆಂದು ಕಂಪನಿ ಘೋಷಿಸಿದೆ.
650 ಸಿಸಿ ಶ್ರೇಣಿ
ಉಳಿದ ಮೂರು ಬೈಕುಗಳೂ ಸಿಎಫ್650ಎನ್‌ಕೆ ಸ್ಟ್ರೀಟ್ಫೈಟರ್, ಸಿಎಫ್650ಎಂಟಿ ಅಡ್ವೆಂಚರ್ ಟೂರರ್ ಮತ್ತು ಸಿಎಫ್650ಜಿಟಿ ನ್ಪೋರ್ಟ್ಸ್ ಟೂರರ್ 650 ಸಿಸಿ ಹೊಂದಿದೆ. ಅಲ್ಲದೆ ಅವೆಲ್ಲವಕ್ಕೂ 649ಸಿಸಿಯ ಟ್ವಿನ್ ಸಿಲಿಂಡರ್ ಎಂಜಿನ್ನುಗಳನ್ನೇ ನೀಡಲಾಗಿದೆ. ಇವುಗಳ ಬೆಲೆ 4 5.5 ಲಕ್ಷಗಳ ವರೆಗೂ ಇದೆ. ಸಿಎಫ್ ಮೋಟೋ ಬೈಕುಗಳು ಚೀನಾದಲ್ಲಿ ನಿರ್ಮಾಣ ಗೊಂಡಿದ್ದರೂ ಅವುಗಳ ವಿನ್ಯಾಸ ಆಸ್ಟ್ರಿಯಾದಲ್ಲಿ ಮಾಡಲ್ಪಟ್ಟಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ನಾಲ್ಕೂ ಬೈಕುಗಳು ಆಧುನಿಕ ಸವಲತ್ತುಗಳಿಂದ ಕಂಗೊಳಿಸುತ್ತಿರುವುದರಿಂದ ಎಲ್ಲಾ ವಯೋಮಾನ ಹಾಗೂ ಅಗತ್ಯಗಳಿಗೆ ತಕ್ಕಂತೆ ಇರುವುದರಿಂದಲೂ ಅವನ್ನು ಖರೀದಿಸಲು, ಸವಾರಿ ಮಾಡಲು ಬೈಕರ್‌ಗಳು ಕಾತರರಾಗಿದ್ದಾರೆ.
650ಎನ್‌ಕೆ
* 4.35 ಲಕ್ಷ ರು. ಬೆಲೆ
* 17 ಲೀಟರ್ ಟ್ಯಾಂಕ್
* ಹೈಡ್ರಾಲಿಕ್ ಬ್ರೇಕ್
* 206 ಕೆ.ಜಿ ತೂಕ
*60 ಬಿಎಚ್‌ಪಿ
650ಎಂಟಿ
* 5 ಲಕ್ಷ ರು.
* 18 ಲೀಟರ್ ಟ್ಯಾಂಕ್
* ಹೈಡ್ರಾಲಿಕ್ ಬ್ರೇಕ್
* 218 ಕೆಜಿ ತೂಕ
* 69ಬಿಎಚ್‌ಪಿ
650ಜಿಟಿ
* 6 ಲಕ್ಷ ರು.
* 19 ಲೀಟರ್ ಟ್ಯಾಂಕ್
* ಹೈಡ್ರಾಲಿಕ್ ಬ್ರೇಕ್
* 226 ಕೆ.ಜಿ ತೂಕ
* 61 ಬಿಎಚ್‌ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.