ಹೈನುಗಾರಿಯಿಂದ ಹೈ-ಕ್ಲಾಸ್‌ ಬದುಕು!


Team Udayavani, May 21, 2018, 12:52 PM IST

hynugaarike.jpg

ಕೃಷಿಯೊಂದಿಗೆ ಹೀರೇಮಠರು ಕೋವಾ ತಯಾರಿಯಲ್ಲಿ  ನಿಪುಣರು. ಇದಕ್ಕಾಗಿ ಮನೆಯಲ್ಲಿ ಹೈನೋದ್ಯಮ ಶುರು ಮಾಡಿದ್ದಾರೆ. ಬೆಳಗ್ಗೆ ಹಾಗೂ ಸಾಯಂಕಾಲ ತಯಾರಾದ ಕೋವಾವನ್ನು ಒಟ್ಟಿಗೆ ಸೇರಿಸಿ, ದಿನಕ್ಕೆ ಒಂದೂ ಕಾಲು ಕ್ವಿಂಟಾಲ್‌ ಕೋವಾ ತಯಾರಿಸಿ ಮಾರುತ್ತಾರೆ. ಹೀಗಾಗಿ ಕೈ ತುಂಬ ಲಾಭ.

ಬೆಳಗಾವಿ ತಾಲೂಕಿನ ಕೆ. ಕೆ. ಕೊಪ್ಪ ಗ್ರಾಮದ ಗದಿಗೆಯ್ಯ ನಿಂಗಯ್ಯ ಹಿರೇಮಠ ಉಳಿದವರಂತಲ್ಲ. ಈತ ಕೃಷಿಯ ಜೊತೆಗೆ ಹೈನುಗಾರಿಕೆ ಮಾಡುತ್ತಿದ್ದಾರೆ.  ಹಾಲಿನ ಮೌಲ್ಯವರ್ಧನೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಇವರದು ಎಳು ಎಕರೆ ಜಮೀನು.  ಪ್ರತಿ ವರ್ಷ ಜೂನ್‌ ವೇಳೆಗೆ ನಾಲ್ಕು ಎಕರೆಯಷ್ಟು ಸೋಯಾಬಿನ್‌ ಬಿತ್ತುತ್ತಾರೆ. ಉಳಿದ ಮೂರು ಎಕರೆಯಲ್ಲಿ ತರಕಾರಿ ಬೆಳೆಯುತ್ತಾರೆ. ಸೋಯಾ ಕೊಯ್ಲು ಮುಗಿದ ನಂತರ ಈ ಭೂಮಿಯನ್ನು ತರಕಾರಿ ಬೆಳೆಯಲು ಉಪಯೋಗಿಸಿಕೊಳ್ಳುತ್ತಾರೆ. ಇವರ ಹೊಲದಲ್ಲಿ ವರ್ಷಪೂರ್ತಿ ವೈವಿಧ್ಯಮಯ ತರಕಾರಿ ಬೆಳೆಗಳು ಲಭ್ಯವಿರುತ್ತದೆ.

ಕೃಷಿ ಏನಿದೆ?: ಬೆಂಡೆ, ಟೊಮೆಟೊ, ಎಲೆಕೋಸು, ಹೂಕೋಸು, ಬದನೆ, ಮೆಣಸು, ವಿವಿಧ ರೀತಿಯ ಸೊಪ್ಪು ತರಕಾರಿಗಳನ್ನು ಬೆಳೆಯುತ್ತಾರೆ. ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಟೊಮೆಟೋವನ್ನು ಮೂರು ಎಕರೆಯಲ್ಲಿ ಬೆಳೆದಿದ್ದರು. 20 ಟನ್‌ ಇಳುವರಿ ದೊರೆತಿತ್ತು.  ಎರಡು ಎಕರೆಯಲ್ಲಿ ಬೆಂಡೆ ಕೃಷಿ ಮಾಡಿದ್ದರು. ಅದು 60,000 ರೂಪಾಯಿ ಆದಾಯ ಗಳಿಸಿಕೊಟ್ಟಿತ್ತು.

ಒಂದೂ ಕಾಲು ಎಕರೆಯಲ್ಲಿ ಬೆಳೆದಿದ್ದ ಎಲೆಕೋಸು ಕೂಡ ಉತ್ತಮ ಗಳಿಕೆಯನ್ನೇ ನೀಡಿತ್ತು. ಎಲ್ಲವನ್ನೂ ಬೆಳಗಾವಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಕೋವಾ ತಯಾರಿಯಲ್ಲಿ ಇವರು ಎತ್ತಿದ ಕೈ. ಹೈನುಗಾರಿಕೆ ಮಾಡುತ್ತಾ ಹಾಲಿನಿಂದ ಕೋವಾ ತಯಾರಿಯಲ್ಲಿ ತೊಡಗುತ್ತಿದ್ದ ಚಿಕ್ಕಪ್ಪನ ಕೆಲಸವನ್ನು ಕುತೂಹಲದಿಂದ ಗಮನಿಸುತ್ತಿದ್ದ ಗದಿಗೆಯ್ಯ ತಾನೂ ಸಹ ಹಾಲು ಕುದಿಸುವ ಕಸರತ್ತು ಮಾಡುತ್ತಿದ್ದರಂತೆ. ಹೀಗಾಗಿ ಕೋವ ತಯಾರಿಕೆಯಲ್ಲಿ ನಿಪುಣರಾದರು. 

ಕೋವಾ ತಯಾರಿಯ ಹವಾ: ಎರಡು ಕೋವಾ ತಯಾರಿಯ ಭಟ್ಟಿ ಹೊಂದಿದ್ದಾರೆ. ಒಂದು ಭಟ್ಟಿಯಲ್ಲಿ ಎರಡು ಒಲೆ. ಏಕ ಕಾಲದಲ್ಲಿ ಎರಡು ಬೃಹತ್‌ ಕಡಾಯಿಗಳನ್ನಿಡಬಹುದು. ಇದಕ್ಕೆ ಗುಣಮಟ್ಟದ ಹಾಲು ಅಗತ್ಯ. ನೀರು ಬೆರಸಿರದ, ಆಗತಾನೇ ಹಿಂಡಿದ ಶುದ್ದ ಹಾಲು ಬೇಕು. ಒಂದು ಕಿಲೋ ಗ್ರಾಂ ಕೋವ ತಯಾರಾಗಲು ನಾಲ್ಕು ಲೀಟರ್‌ ಹಾಲು ಅಗತ್ಯ. ಆಕಳ ಹಾಲು ಆಗಿದ್ದಲ್ಲಿ 6-8 ಲೀಟರ್‌ ಬೇಕಾಗುತ್ತದೆ.

ಸುರ್ತಿ, ಮುರ್ರಾ ತಳಿಯ ಒಂದೊಂದು ಎಮ್ಮೆಯನ್ನು ಹಾಗೂ ಎಚ್‌.ಎಫ್ ತಳಿಯ ಒಂದು ಆಕಳನ್ನು ಹೊಂದಿದ್ದಾರೆ. ದಿನಕ್ಕೆ 25-30 ಲೀಟರ್‌ ಹಾಲು ದೊರೆಯುತ್ತದೆ. ಎಲ್ಲವೂ ಕೋವಾ ತಯಾರಿಕೆಗೆ ಬಳಕೆಯಾಗುತ್ತದೆ. ಬೆಳಗ್ಗೆ 180-200 ಲೀಟರ್‌, ಸಂಜೆ-180 ಲೀಟರ್‌ ಹಾಲು ಸಂಗ್ರಹವಾಗುತ್ತದೆ. ಇವರು ಹಾಲು ಪಡೆಯಬೇಕೆಂದರೆ ಕಟ್ಟು ನಿಟ್ಟಿನ ನಿಯಮವೊಂದಿದೆ. ಜಾನುವಾರಿನ ಬಳಿ ಇವರಿದ್ದಾಗ ಮಾತ್ರ ಹಾಲು ಹಿಂಡಬೇಕು.

ಮುಂಚಿತವಾಗಿ ಹಿಂಡಿಟ್ಟರೆ ಖರೀದಿಸುವುದಿಲ್ಲ. ಹತ್ತಿರ ಹತ್ತಿರ ಮನೆಗಳಿರುವುದರಿಂದ ನೂರು ಸಂಖ್ಯೆಯ ರೈತರಿಂದ ಹಾಲು ಸಂಗ್ರಹಣೆ ತೀರಾ ಕಷ್ಟವೇನಲ್ಲ ಎನ್ನುವುದು ಇವರ ಅಭಿಪ್ರಾಯ. ಬೆಳಗ್ಗೆ ಹಾಗೂ ಸಾಯಂಕಾಲ ತಯಾರಾದ ಕೋವಾವನ್ನು ಒಟ್ಟಿಗೆ ಸೇರಿಸಿ, ದಿನಕ್ಕೆ ಒಂದೂ ಕಾಲು ಕ್ವಿಂಟಾಲ್‌ ಕೋವಾ ತಯಾರಿಸಿ ಮಾರುತ್ತಾರೆ. ವಾರಕ್ಕೊಮ್ಮೆ ಹೈನುಗಾರರಿಗೆ ಹಾಲು ಪಡೆದ ಮೊತ್ತ ಪಾವತಿಸುತ್ತಾರೆ. ಆಕಳ ಹಾಲಿಗೆ 28 ರೂ. ಎಮ್ಮೆಯ ಹಾಲಿಗೆ 40 ರೂ. ದರ ನೀಡುತ್ತಾರೆ.

ಕಿಲೋ ಗ್ರಾಂ ಕೋವಾಕ್ಕೆ 180 ರೂಪಾಯಿ ದರ ಸಿಗುತ್ತದೆ. ಕೋವಾ ತಯಾರಿಯಲ್ಲಿ ಇವರ ತಾಯಿ ರಾಚವ್ವಾ ಹಿರೇಮಠರ(82) ಪಾತ್ರ ಹಿರಿದು. ಐವತ್ತೆರಡು ವರ್ಷಗಳಿಂದ ರಾಚವ್ವಾ ಇದೇ ಕೆಲಸ ಮಾಡುತ್ತಿದ್ದಾರೆ. ಐದು ದಶಕಗಳ ಕಾಲ ಒಲೆಯ ಹೊಗೆಯನ್ನುಂಡರೂ ಗಟ್ಟಿ ಮುಟ್ಟಾಗಿ ಕ್ರಿಯಾಶೀಲರಾಗಿರುವ ಇವರ ಆರೋಗ್ಯದ ಗುಟ್ಟು ಹಾಲಿನಲ್ಲಿ ಅಡಗಿದೆ ಎನ್ನುತ್ತಾರೆ ಮಗ ಗದಿಗೆಯ್ನಾ.

* ಕೋಡಕಣಿ ಜೈವಂತ ಪಟಗಾರ

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.