ಮನೆಯ ಸ್ವತ್ಛತೆ, ಸಿದ್ದಿಗೆಲ್ಲ ಸಾಧ್ಯತೆ…
Team Udayavani, Nov 6, 2017, 6:15 PM IST
ಮನೆಯ ಒಳಗಡೆಯ ಅಂದ ಚೆಂದ, ಅಲಂಕಾರ, ಪೇಂಟಿಂಗ್,ಉಪಕರಣಗಳ ಸೌಂದರ್ಯ ಎಲ್ಲಾ ಸರಿ. ಆದರೆ ಇವು ಒಂದು ಒಳ್ಳೆಯ ಮನೆಯನ್ನು ರೂಪಿಸಲಾರವು. ಒಳಗೆ ಕಾಪೆìಟ್ ಹಾಸು, ಆಧುನಿಕತೆಯೊಂದ ಸುಸಜ್ಜಿತ ಸಂಯೋಜನಗಳೆಲ್ಲ ಒಳಿತು ತರುವುದಾಗಿದ್ದರೆ ಅನೇಕಾನೇಕ ಕೋಟ್ಯಧೀಶರುಗಳಿಗೆ ಸುಖದ ವಿನಾ, ದುಃಖ, ಒತ್ತಡ, ನಿರಾಶೆ, ಹಳಹಳಿಕೆಗಳೆಲ್ಲ ಇರುತ್ತಲೇ ಇರಲಿಲ್ಲ. ಹಾಗಾದರೆ ಮಾನಸಿಕ ಶಾಂತಿಗೆ ಯಾವುದು ಕಾರಣ, ಏನು, ಯಾವಾಗ, ಎಷ್ಟು, ಹೇಗೆ, ಯಾವೆಲ್ಲ ವಿಚಾರಗಳು ಯಾಕೆ ಮನಸ್ಸಿನ ಶಾಂತಿಗೆ ಒಳಿತನ್ನು ತರುತ್ತಿರುತ್ತವೆ ಎಂಬುದು
ಪ್ರಧಾನವಾದ ಅಂಶಗವಾಗುತ್ತದೆ. ನಿಜ, ಮನೆಯು ಸರಳವಾಗಿ, ಗುಡಿಸಲೇ ಆಗಿದ್ದರೂ ಸರಿ, ಸ್ವತ್ಛತೆಯ ದೃಷ್ಟಿಯಿಂದ ಎಲ್ಲವನ್ನೂ ಪರಿಶೀಲಿಸಬೇಕು. ಬೇಕು ಬೇಕಾದಲ್ಲಿ ವಸ್ತುಗಳನ್ನು ತುಂಬಿಡುವ, ಎಸೆದಿಡುವ ಪರಿಪಾಠ ಬೆಳೆಸಿಕೊಳ್ಳಲೇಬಾರದು.
ಕಣ್ಣ ಮುಂದೇ ಇರಲಿ ಎಂದು ಇಟ್ಟರೂ ಕೂಡ, ಯಾವುದೋ ಕಾರಣಕ್ಕೆ ಮುಖ್ಯವಾದೊಂದು ವಸ್ತು, ಹಲವು ವಸ್ತುಗಳ ನಡುವೆ ಸಿಕ್ಕಿ ಎಲ್ಲೋ ಮಾಯವಾಗಿ ಬಿಡುತ್ತದೆ. ಎಲ್ಲಾ ಒಮ್ಮೆ ರಗಳೆ ಎಂದೆನಿಸಿದರೂ ಯಾವುದು ಬೇಕಾದ್ದು,
ಯಾವುದು ಬೇಡದ್ದು ಎಂಬುದನ್ನು ವಿಂಗಡಿಸಿ ಬೇಡದ್ದನ್ನು ಕೂಡಲೇ ತ್ಯಾಜ್ಯದ ಜೊತೆ ಕಳುಹಿಸಿಬಿಡಿ.
ನಮ್ಮ ಸ್ನೇಹಿತರೊಬ್ಬರ ಮನೆ, ಒಳ್ಳೆಯ ಸ್ನೇಹಿತ, ಮನೆತನ ದೊಡ್ಡದು. ಆಸ್ತಿವಂತ. ಸ್ಥಿತಿವಂತ. ಆದರೆ ಆಸ್ತಿ ವಿಚಾರದಲ್ಲಿ ಯುಕ್ತವಾದ ನಿಶ್ಚಿತ ಸಂಧಾನವನ್ನ ಮಾಡಿಕೊಳ್ಳಲು ದಾಯಾದಿಗಳು ಅವಕಾಶ ಕೊಡುತ್ತಿಲ್ಲ. ಒಂದು ವಿಸ್ತಾರವಾದ ಜಾಗವನ್ನು ಬ್ಯಾಂಕ್ ಒಂದಕ್ಕೆ ಅನುಕೂಲಕರ ರೀತಿಯಲ್ಲಿ ಸೂಕ್ತವಾಗಿ ಮಾಡಿಕೊಡುವ ಎಲ್ಲಾ ಅವಶ್ಯಕ ಖರ್ಚು ವೆಚ್ಚವನ್ನು ಈ ನಮ್ಮ ಗೆಳೆಯ ಪೂರೈಸಿದರು.
ಪ್ರತಿ ತಿಂಗಳ ಬಾಡಿಗೆ 60ಸಾವಿರ ಎಂಬುದೂ ನಿಶ್ಚಯವಾಯಿತು. ಅರವತ್ತು ಸಾವಿರದಲ್ಲಿ ಉತ್ತಮವಾದ ರೀತಿಯಲ್ಲಿ
ಬದುಕಿ ಬಾಳುವುದೆಂಬ ಕನಸನ್ನು ಗೆಳೆಯ ಕಾಣುತ್ತಲೇ ಇದ್ದ. ಆದರೆ ದಾಯಾದಿಗಳ ಜೊತೆಯಲ್ಲೇ ಎಲ್ಲಾ ವ್ಯವಹಾರಿಕ
ವಹಿವಾಟುಗಳು ನಡೆಯುತ್ತಿದ್ದವು. ಎಲ್ಲರ ಮನೆಗಳು ಬೇರಾಗಿದ್ದರೂ, ವಹಿವಾಟುಗಳು ಎಲ್ಲರ ಒಕ್ಕೂಟದ ಪಾಲುದಾರಿಕೆಯಲ್ಲಿತ್ತು.
ಬ್ಯಾಂಕಿಗೆ ಎಂದು ರೂಪಿಸಿಕೊಟ್ಟ ಸ್ಥಳ ಮಾತಿನ ಪ್ರಕಾರ, ಒಂದು ಪ್ರತ್ಯೇಕ ಖಾಲಿ ಕಾಗದದಲ್ಲಿ ಎಲ್ಲರೂ ಸಹಿಹಾಕಿ ಕೊಟ್ಟ ಆಧಾರದ ಪ್ರಕಾರ ನಮ್ಮ ಈ ಗೆಳೆಯನಿಗೆ ಸೇರುವಂಥತ್ತು. ಹೀಗಾಗಿ ಎಲ್ಲಾ ಕಾಗದದ ಪ್ರತ್ಯೇಕ ಪತ್ರ ಈಗ
ನಿಗೆ ಹುಡುಕಲಾಗುತ್ತಿಲ್ಲ. ಇವುಗಳ ನಡುವೆಯೇ ಇತ್ತು ಹುಡುಕುತ್ತಲೇ ಇದ್ದಾನೆ. ಒಂದು ೇ ಕೆಲಸ ಮಾಡುತ್ತಿದ್ದಾನೆ.
ಹೆಸರಿನಲ್ಲಿ ಸಾಲ ಇದೆ. ಬಾಡಿಗೆಯನ್ನೀಗ ಎಲ್ಲರೂ ಒಟ್ಟುಗೂಡಿ ಪಡೆಯುತ್ತಿದ್ದಾರೆ.
ನಮ್ಮ ಈ ಗೆಳೆಯನಿಗೆ ಕೇವಲ ಐದುಸಾವಿರ ಸಿಗುತ್ತಿದೆ. ತುಂಬುವ ಬಡ್ಡಿಯೇ 25ಸಾವಿರ ಇದೆ. ಬರುವ ಅರವತ್ತು ಸಾವಿರ ಬಾಡಿಗೆಯಲ್ಲಿ ಸಾಲಕ್ಕೆ 25 ಸಾವಿರ ಕಟ್ಟಿ, ಉಳಿದ 35 ಸಾವಿರದಿಂದ ಜೀವನವನ್ನು ನಡೆಸುವ ಅವನ ನಿರ್ಧಾರ
ಕುಸಿದು ಬಿದ್ದಿದೆ. ಮನೆಯಲ್ಲಿ ಯುಕ್ತತೆ ಹಾಗೂ ಸೂಕ್ತ ಜೋಡಣೆ ಸಾಧ್ಯವಾಗಿದ್ದಲ್ಲಿ ಎಲ್ಲರೂ ಸಹಿ ಹಾಕಿದ್ದ ಪತ್ರ ಕಳೆದು ಹೋಗುತ್ತಿರಲಿಲ್ಲ. ಅನೇಕಾನೇಕ ವಾಸ್ತು ದೋಷಗಳು ನಿಮ್ಮಿà ಗೆಳೆಯ ವಾಸಿಸುತ್ತಿರುವ ಮನೆಯಲ್ಲಿ ಅಂತರ್ಗತವಾಗಿದ್ದರಿಂದ ಅವನ ಮನಸ್ಸು ಸ್ತಿಮಿತದಲ್ಲಿಲ್ಲ. ಹೀಗಾಗೀ ಸ್ವತ್ಛತೆ ಮನೆಯ ಶಾಂತಿಯ ದೃಷ್ಟಿಯಿಂದ ಮುಖ್ಯ.
ಉಳಿದ ವಿವರಗಳನ್ನು ಮುಂದಿನವಾರ ಚರ್ಚಿಸೋಣ.
– ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.