ಮನೆಯ ಹವಾಮಾನ 


Team Udayavani, Oct 9, 2017, 2:09 PM IST

09-25.jpg

ತೀರಾ ಒಣ ವಾತಾವರಣ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ರೀತಿಯಲ್ಲೇ ಗಾಳಿಯಲ್ಲಿ ನೀರಿನ ಅಂಶ ಹೆಚ್ಚಾದಷ್ಟೂ ವ್ಯತಿರಿಕ್ತ ಪರಿಣಾಮ ಬೀರಲು ತೊಡಗುತ್ತದೆ. ಮನೆಯ ಹೊರಗಿನ ವಾತಾವರಣವನ್ನು ಸರಿದೂಗಿಸಲು ಅಸಾಧ್ಯವಾದರೂ ಸಾಧ್ಯವಾದಷ್ಟೂ ಮನೆಯೊಳಗಿನ ಪರಿಸರವನ್ನು ಆರೋಗ್ಯಕರವಾಗಿ ಇಟ್ಟುಕೊಂಡರೆ, ದಿನದ ಹೆಚ್ಚು ಹೊತ್ತು ನಾವು ಮನೆಯೊಳಗೇ ಕಳೆಯುವುದರಿಂದ, ನಮ್ಮ ದೇಹಕ್ಕೆ ಆರಾಮವೆನಿಸುತ್ತದೆ. ಮನೆಯ ಒಳಾಂಗಣವನ್ನು ಸೂಕ್ತ ವಿನ್ಯಾಸದ ಮೂಲಕವೂ ನಾವು ಹೊರಗಿನ ವ್ಯತಿರಿಕ್ತ ವಾತಾವರಣವನ್ನು ಸರಿದೂಗಿಸುವಂತೆ ಮಾಡಬಹುದು.

ಶಾಖ ಹಾಗೂ ತೇವಾಂಶಕ್ಕಿರುವ ಸಂಬಂಧ
ತಾಪಮಾನ ಕಡಿಮೆಯಾದಷ್ಟೂ ಗಾಳಿಯಲ್ಲಿ ಇರಬಹುದಾದ ನೀರಿನ ಅಂಶ ಕಡಿಮೆಯಾಗುತ್ತ ಹೋಗುತ್ತದೆ. ಹಾಗೆಯೇ ಬಿಸಿಯೇರಿದಷ್ಟೂ ಹೆಚ್ಚು ಹೆಚ್ಚು ತೇವಾಂಶ ಸೇರಿಕೊಳ್ಳಲು ಅನುಕೂಲಕರ. ಇದನ್ನು ರಿಲೆಟೀವ್‌ ಹ್ಯೂಮಿಡಿಟಿ ಅಥವಾ ಆಯಾ ತಾಪಮಾನದೊಂದಿಗೆ ತಾಳೆ ನೋಡಿ ಲೆಕ್ಕಾಚಾರವಾಗಿ ಕಂಡುಕೊಂಡ ಅಂಶ ಎನ್ನಬಹುದು. ಇನ್ನೊಂದು ರೀತಿಯಲ್ಲಿ ಹೇಳಬಹುದಾದರೆ, ತಾಪಮಾನ ಮೂವತ್ತೆ„ದು ಡಿಗ್ರಿ ಸೆಲಿÒಯಸ್‌ ಇದ್ದಾಗ ತೇವಾಂಶ- ಶೇ. 50 ರಷ್ಟು ಇದ್ದರೆ, ಫ್ಯಾನ್‌ ಹಾಕಿಕೊಂಡರೆ ಸಾಕು, ಆರಾಮವೆನಿಸುತ್ತದೆ. ಆದರೆ ತಾಪಮಾನ ಮೂವತ್ತು ಡಿಗ್ರಿ ಇದ್ದಾಗಲೂ ಹ್ಯುಮಿಡಿಟಿ ಶೇ.90ರಷ್ಟು ಇದ್ದರೆ, ಫ್ಯಾನ್‌ ತಿರುಗಿದರೂ ನಮಗೆ ಆರಾಮ ಎನಿಸುವುದಿಲ್ಲ! ಏಕೆಂದರೆ, ನಮ್ಮ ದೇಹದಿಂದ ಶಾಖ ಹೊರಹೋಗಲು ಅಗತ್ಯವಿರುವ ತಂಪಾಗಿಸುವ ಕ್ರಿಯೆಗೆ – ಎವಾಪೊರೇಷನ್‌, ಅಂದರೆ- ಬೆವರು ಹರಿದದ್ದು 

ಆವಿಯಾಗಿಹೋದಾಗ ಮಾತ್ರ ನಮಗೆ ತಂಪು ಎಂದೆನಿಸುತ್ತದೆ! ಗಾಳಿಯಲ್ಲಿ ತೇವಾಂಶ ಹೆಚ್ಚಿದ್ದಷ್ಟೂ ಅಂದರೆ ಸುಮಾರು ಶೇ.90ಕ್ಕಿಂತ ಹೆಚ್ಚಿದ್ದರೆ ನಮಗೆ ಆರಾಮ ಎಂದೆನಿಸುವುದಿಲ್ಲ!

ನೈಸರ್ಗಿಕ ವಸ್ತುಗಳಿಂದ ಸಮತೋಲನ
ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟಲು ಹೆಚ್ಚು ಹೆಚ್ಚು ಕೃತಕ ವಸ್ತುಗಳನ್ನು ಬಳಸುತ್ತಿದ್ದೇವೆ. ಇವು ಮರ, ಇಟ್ಟಿಗೆ, ಕಲ್ಲಿನಂತೆ “ಉಸಿರಾಡುವುದಿಲ್ಲ’! ಅಂದರೆ, ಇಟ್ಟಿಗೆ ಹಾಗೂ ಮರದಲ್ಲಿ ಸಣ್ಣ ಸಣ್ಣ ರಂದ್ರಗಳಿದ್ದು, ಇವು ಮನೆಯ ಹೊರಗೆ ಹಾಗೂ ಒಳಗಿನ ವಾತಾವರಣವನ್ನು ಸರಿದೂಗಿಸಿಕೊಂಡು ಹೋಗಲು ಸಹಾಯಕಾರಿಯಾಗಿರುತ್ತವೆ. ಪ್ಲಾಸ್ಟಿಕ್‌ ಹಾಗೂ ಪ್ಲಾಸ್ಟಿಕ್‌ ಆಧಾರಿತ ಬಣ್ಣ ಬಳಿದ ಗೋಡೆಗಳಿಗೆ ಈ ಮುಖ್ಯ ಗುಣ ಇರುವುದಿಲ್ಲ. ಮನೆಯ ಒಳಾಂಗಣದಲ್ಲಿ ಸೂಕ್ತ ರೀತಿಯಲ್ಲಿ ಗಾಳಿ ಆಡದಿದ್ದರೆ, ತೇವಾಂಶ ಹೆಚ್ಚಾಗಿ, ಬೂಷ್ಟು ಹಿಡಿಯುವುದು, ಮುಗ್ಗಲು ವಾಸನೆ ಬರುವುದು ಇತ್ಯಾದಿ ಶುರುವಾಗುತ್ತದೆ. ಸಾಮಾನ್ಯವಾಗಿ ಮಳೆಯ ಆರ್ಭಟಕ್ಕೆ ಎಲ್ಲರೂ ಎಲ್ಲ ಕಿಟಕಿ ಬಾಗಿಲುಗಳನ್ನೂ ಭದ್ರ ಪಡಿಸಿ, ಗಾಳಿ ಆಡದಂತೆ ಮಾಡಿಬಿಡುತ್ತಾರೆ. ಹೇಳಿ ಕೇಳಿ ಈ ಸಂದರ್ಭದಲ್ಲಿ ಮನೆಯೊಳಗೆ ಹೊರಗಡೆಗಿಂತಲೂ ಹೆಚ್ಚು ತಾಪಮಾನವಿರುತ್ತದೆ.  ಜೊತೆಗೆ ನೀರಿನ ಅಂಶವೂ ವಿವಿಧ ಮೂಲಗಳಿಂದ, ಅಂದರೆ, ಉಸಿರು ಹೊರಬಿಡುವ ಗಾಳಿಯಿಂದಲೂ ನಿರಂತರವಾಗಿ ಸೇರ್ಪಡೆ ಯಾಗುತ್ತಿರುತ್ತದೆ. ಇದೆಲ್ಲ ಹೊರಹೋಗಲು ಸೂಕ್ತ ವ್ಯವಸ್ತೆ ಇರದಿದ್ದರೆ, ಮನೆಯ ಒಳಾಂಗಣದಲ್ಲಿ ವಿಪರೀತ ಎನ್ನುವಷ್ಟು ತೇವಾಂಶ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.

ವೆಂಟಿಲೇಟರ್‌ ಅಳವಡಿಸಿ
ದೊಡ್ಡ ದೊಡ್ಡ ತೆರೆದ ಜಾಗ ಅಂದರೆ ಕಿಟಕಿ ಬಾಗಿಲುಗಳನ್ನು ಮಳೆ ಜೋರಾಗಿ ಸುರಿಯುತ್ತಿದ್ದರೆ ಮುಚ್ಚುವುದು 
ಅನಿವಾರ್ಯವಾದರೂ, ಕೆಲವೊಂದು ಸಣ್ಣ ಸ್ಥಳ ಅಂದರೆ ಗವಾಕ್ಷಿಗಳ ಮೂಲಕ ಸ್ವಲ್ಪವಾದರೂ ತಾಜಾ ಗಾಳಿ ಮನೆಯ ಒಳಗೆ ಪ್ರವೇಶಿಸುವಂತೆ ಮಾಡಬೇಕು. ಸಾಮಾನ್ಯವಾಗಿ ಸೂಕ್ತ ನೀರು ನಿರೋಧಕ ಸಜ್ಜಾ ಮಾದರಿಯ ಹೊರಚಾಚುಗಳನ್ನು ವೆಂಟಿಲೇಟರ್‌ಗಳಿಗೆ ನೀಡಿದರೆ, ಮಳೆ ಮನೆಯೊಳಗೆ ಪ್ರವೇಶಿಸುವುದಿಲ್ಲ. ಹಿಂದಿನ ಕಾಲದಲ್ಲಿ, ಕಡೇ ಪಕ್ಷ ಮನೆಯೊಳಗೆ ಗಾಳಿ ಆಡಲಿ ಎಂದು ಬಾಗಿಲುಗಳಿಗೇ “ಲೂವರ್‌’ – ಮರದ ಅಡ್ಡ ಪಟ್ಟಿಗಳನ್ನು ಸ್ವಲ್ಪ ಸಂದಿಯೊಡನೆ ಅಳವಡಿಸಿ, ನೀಡಲಾಗುತ್ತಿತ್ತು. ಖಾಸಗಿತನ ಬೇಕೆಂದಾಗ ಕರ್ಟನ್‌ ಎಳೆಯುವುದರ ಮೂಲಕ ಗಾಳಿಯ ಹರಿವು ನಿಲ್ಲದಂತೆ ನೋಡಿಕೊಳ್ಳಲಾಗುತ್ತಿತ್ತು. ಈ ಹಿಂದೆ ಫ್ಯಾನ್‌ ಇಲ್ಲದ ದಿನಗಳಲ್ಲಿ ಹೀಗೆಲ್ಲ ಮಾಡುವುದು ಅನಿವಾರ್ಯವಾಗಿತ್ತು. ಆದರೆ, ಇಂದಿನ ವಿದ್ಯುತ್‌ ಚಾಲಿತ ಫ್ಯಾನ್‌ ಹಾಗೂ ಅದಕ್ಕೂ ಮೀರಿದರೆ ಏರ್‌ ಕಂಡಿಷನ್‌ ಮಾಡಿಬಿಡುತ್ತೇವೆ ಹೊರತು ಈ  ನೈಸರ್ಗಿಕ ಮೂಲಗಳತ್ತ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಎ.ಸಿ ಇಲ್ಲವೇ ಫ್ಯಾನ್‌ಗೆ ಹೋಲಿಸಿದರೆ, ಮನೆಯೊಳಗೆ ಸ್ವಾಭಾವಿಕವಾಗಿ ಹರಿದಾಡುವ ಗಾಳಿಯೇ ಹೆಚ್ಚು ಆರೋಗ್ಯಕರ.

ಮನೆಯ ಶಾಖ ಕಾಪಾಡಿಕೊಳ್ಳಿ
ಮನೆಯ ಒಳಗಿನ ತಾಪಮಾನ ಹೆಚ್ಚಾದರೆ, ತೇವಾಂಶ ರಿಲೆಟೀವ್‌ ಆಗಿ ಅಂದರೆ ಹೊರಗಿನ ತಾಪಮಾನಕ್ಕೆ ಹೋಲಿಸಿದರೆ ಕಡಿಮೆ ಆದಂತೆ ಆಗುತ್ತದೆ. ಆದುದರಿಂದ, ಮಳೆಗಾಲದಲ್ಲಿ ಹೊರಗಿನ ತಾಪಮಾನ ಕಡಿಮೆ (ಅಂದರೆ ಸುಮಾರು ಇಪ್ಪತ್ತೆ„ದು ಡಿಗ್ರಿ ಸೆಲಿÏಯಸ್‌ ಗಿಂತ ಕಡಿಮೆ) ಇದ್ದಾಗಅಡುಗೆ ಮನೆಯ ಶಾಖ ಒಳಾಂಗಣದೊಳಗೆ ಹರಿದು ಹೋಗುವಂತೆ ಮಾಡುವುದರ ಮೂಲಕವೂ ನಾವು  ಹ್ಯುಮಿಡಿಟಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಮನೆಯ ವಿನ್ಯಾಸ ಮಾಡುವಾಗಲೇ ನಿರ್ಧರಿಸಿ, ಮಳೆಗಾಲದ ಗಾಳಿಯ ದಿಕ್ಕನ್ನು ಪರಿಗಣಿಸಿ, ಸೂಕ್ತ ಸ್ಥಳದಲ್ಲಿ ಅಡುಗೆ ಮನೆಯನ್ನು ನಿರ್ಮಿಸಬೇಕು. ಹೀಗೆ ಮಾಡುವುದರಿಂದ ಥಂಡಿ ಹೊಡೆಯುವಾಗ ಮನೆ ಬೆಚ್ಚಗಿರುವುದರ ಜೊತೆಗೆ, ಹೊರಗಿನ ತಾಪಮಾನ ಹೆಚ್ಚಿನ ತೇವಾಂಶದಿಂದ ಹದಗೆಟ್ಟಿದ್ದರೂ, ಮನೆಯ ಒಳಾಂಗಣದಲ್ಲಿ ರಿಲೆಟೀವ್‌ ಹ್ಯುಮಿಡಿಟಿ ಕಡಿಮೆ ಇರುತ್ತದೆ.

ಮನೆಯ  ಎತ್ತರ ಹಾಗೂ ತೇವಾಂಶ
ಸಾಮಾನ್ಯವಾಗಿ ಒಂದಲ್ಲ ಒಂದು ರೀತಿಯಲ್ಲಿ ನೆಲ ಮಟ್ಟದಲ್ಲಿ ನೀರು ಮನೆಯನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ  ನಾವು ಎಷ್ಟೇ ಎಚ್ಚರದಿಂದಿದ್ದರೂ ತೇವಾಂಶ ಹೇಗೋ ಒಳನುಸುಳಿ, ಇಡೀ ಮನೆ ಥಂಡಿ ಹೊಡೆಯುವಂತೆ ಮಾಡಿಬಿಡುತ್ತದೆ. ಮನೆಯ ಪ್ಲಿಂತ್‌ ಅನ್ನು ಒಂದೆರಡು ಅಡಿ ಹೆಚ್ಚಿಗೆ ಇಡುವುದರ ಮೂಲಕವೂ ನಾವು ಮನೆಯೊಳಗೆ ನೆಲದ ಮೂಲಕ ತೇವಾಂಶ ಹೆಚ್ಚುವರಿಯಾಗಿ ಸೇರುವುದನ್ನು ತಡೆಯಬಹುದು. ಜೊತೆಗೆ, ಗೋಡೆಗಳ ಮೂಲಕ ತೇವಾಂಶ ಮೇಲೆ ಬರುವುದನ್ನು ತಡೆಯಲು, ಸೂಕ್ತ ಪ್ಲಿಂತ್‌ – ತೇವಾಂಶ ನಿರೋಧಕ ಪದರವನ್ನು ಪಾಯದ ಮೇಲೆ ಹಾಗೂ ಗೋಡೆಯ ಕೆಳಗೆ, ವಾಟರ್‌ ಪೂ›ಫ್ ಕೆಮಿಕಲ್‌ ಬೆರೆಸಿ ಹಾಕಬೇಕು. 

ಮಳೆ ಬಿದ್ದಂತೆ, ಬಿಸಿಲು ಕಾಯ್ದಂತೆ ವಾತಾವರಣ ಬದಲಾಗುತ್ತಲೇ ಇರುತ್ತದೆ. ನಮ್ಮ ದೇಹದ ಹಾಗೆಯೇ ನಮ್ಮ ಮನೆಯೂ ಕೂಡ ಕೆಲ ನಿರ್ದಿಷ್ಟ ತಾಪಮಾನ ಹಾಗೂ ತೇವಾಂಶ ಹೊಂದಿದ ವಾತಾವರಣದಲ್ಲಿ ಇರಲು ಬಯಸುತ್ತದೆ. ಹಾಗಾಗಿ ಮನೆಯ ವಿನ್ಯಾಸ ಮಾಡುವಾಗ ಸ್ವಲ್ಪ ಕಾಳಜಿವಹಿಸಿ ಈ ಆಂಶಗಳನ್ನು ಪರಿಗಣಿಸಿದರೆ, ಆರೋಗ್ಯಕರ ಒಳಾಂಗಣ ನಮ್ಮದಾಗುತ್ತದೆ.

ಹೆಚ್ಚಿನ ಮಾತಿಗೆ ಫೋನ್‌ 98441 32826

ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.