ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…


Team Udayavani, Oct 19, 2020, 8:25 PM IST

isiri-tdy-3

ಒಂದು ಕಡೆ ಪ್ರವಾಹ, ಇನ್ನೊಂದು ಕಡೆ ಕೋವಿಡ್, ಮತ್ತೂಂದು ಕಡೆಯಲ್ಲಿ ಆರ್ಥಿಕ ಸಂಕಷ್ಟದ ನೆಪದಲ್ಲಿ ಉದ್ಯೋಗಗಳ ಕಡಿತ… ಹೀಗಾದರೆ ಸಂಪಾದನೆಗೆ ಉಳಿದಿರುವ ದಾರಿ ಯಾವುದು? ಕೃಷಿ ಮಾಡಿಯಾದರೂಬದುಕೋಣ ಎಂದು ಮಾತಾಡುವುದು ಸುಲಭ. ಆದರೆ ಹಾಗೆ ಬದುಕಲು ನಿಜಕ್ಕೂಕಷ್ಟ. ಏಕೆಂದರೆ, ಕೃಷಿ ಕ್ಷೇತ್ರದಲ್ಲಿ ಯಾವುದೇ ಒಂದು ಬೆಳೆಗೆ ದೀರ್ಘ‌ಅವಧಿಯವರೆಗೆ ಉತ್ತಮಬೆಲೆ ಇರುವುದಿಲ್ಲ. ಈಕಾರಣದಿಂದಲೇ ಕೃಷಿಕರಾಗಿ ತಕ್ಷಣವೇ ಗೆಲ್ಲಬಹುದು ಎಂಬ ಧೈರ್ಯ ಮತ್ತು ನಂಬಿಕೆ ಹೆಚ್ಚಿನವರಿಗೆ ಇಲ್ಲ. ಇಂಥಸಂದರ್ಭದಲ್ಲಿ, ಹೆಚ್ಚಿನ ಶ್ರಮ ಮತ್ತು ಚಿಂತೆ ಇಲ್ಲದೆ ನಾಲ್ಕುಕಾಸು ಸಂಪಾದಿಸಬೇಕು ಅನ್ನುವವರು ಜೇನು ಸಾಕಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಣ್ಣ ಬಂಡವಾಳ ಸಾಕು :  ಇತರೆ ಉಪಕಸುಬುಗಳಿಗೆ ಹೋಲಿಸಿದಾಗ, ಜೇನುಸಾಕಾಣಿಕೆಗೆ ಭೂಮಿ, ವಿದ್ಯುತ್‌, ನೀರಾವರಿ ಮತ್ತು ಯಾವುದೇ ಮೂಲಭೂತ ಸೌಕರ್ಯದ ಅಗತ್ಯವಿಲ್ಲ. ಅಲ್ಪಬಂಡವಾಳದ ಈ ಜೇನು ಕೃಷಿಯು, ಆರ್ಥಿಕವಾಗಿ ಲಾಭ ತಂದುಕೊಡುವ ಉದ್ದಿಮೆ. ಮೊದಲು ಜೇನು ಸಾಕಣೆ ಕುರಿತು ತರಬೇತಿ ಪಡೆಯಬೇಕು. ನಂತರಕೇವಲ 4,500 ರೂಪಾಯಿಗಳನ್ನು ಖರ್ಚು ಮಾಡಿ ಒಂದು ಜೇನು ಪೆಟ್ಟಿ ಗೆ, ಜೇನು ನೊಣಗಳ ಕುಟುಂಬ ಮತ್ತು ಸ್ಟಾÂಂಡ್‌ಖರೀದಿಸಿ ಜೇನು ಸಾಕಾಣಿಕೆ ಆರಂಭಿಸಬಹುದು. ವರ್ಷಕ್ಕೆ ಒಂದು ಕುಟುಂಬದಿಂದ ಸರಾಸರಿ 8 ರಿಂದ 10 ಕೆ.ಜಿ.ಜೇನುತುಪ್ಪ ಮತ್ತು ಒಂದು ಕುಟುಂಬದಿಂದ ಎರಡು ಕುಟುಂಬವನ್ನು ಪಾಲು ಮಾಡಿ ಮಾರಾಟ ಮಾಡುವುದರಿಂದ ಒಟ್ಟು 7,000 ರೂ. ಕ್ಕೂ ಹೆಚ್ಚು ಆದಾಯ ಗಳಿಸಬಹುದು.

ನಮ್ಮ ರಾಜ್ಯದಲ್ಲಿ ಒಟ್ಟು ಐದು ಪ್ರಭೇದಗಳ ಜೇನುನೊಣಗಳಿವೆ. ಹೆಜ್ಜೇನು , ಕೋಲುಜೇನು, ತುಡುವೆಜೇನು, ಯೂರೋಪಿಯನ್‌ ಜೇನು ಮತ್ತು ನಸುರು ಜೇನು. ಹೆಜ್ಜೆàನು ಮತ್ತು ಕೋಲುಜೇನು ನೊಣಗಳನ್ನು ಸಾಕುವುದು ಕಷ್ಟ. ತುಡುವೆ ಜೇನು, ಯೂರೋಪಿಯನ್‌ ಜೇನು ಮತ್ತು ನಸುರು ಜೇನು ನೊಣಗಳನ್ನು ಸಾಕಾಣಿಕೆಮಾಡಬಹುದು. ಎಷ್ಟೋ ಮಂದಿಗೆ ಗೊತ್ತಿಲ್ಲದ ಸಂಗತಿಯೊಂದಿದೆ. ಏನೆಂದರೆ, ಜೇನುಕೃಷಿಗೆ, ಬ್ಯಾಂಕ್‌ ಗಳಿಂದ ಆರ್ಥಿಕ ನೆರವೂ ಸಿಗುತ್ತದೆ.

ವಿಂಗಡಿಸಿ ಮಾರಿದರೆ ಲಾಭ :  ಮಾರುಕಟ್ಟೆಯಲ್ಲಿ ಬಗೆಬಗೆಯ ಜೇನು ತುಪ್ಪದ ಬ್ರಾಂಡ್‌ ಗಳಿವೆ. ಜೇನುಕೃಷಿ ಸಂಘಗಳು, ಅರಣ್ಯ ಇಲಾಖೆ, ಕೆಲವು ಡೀಲರ್‌ ಗಳಿಂದ, ನೇರವಾಗಿ ರೈತರಿಂದ ಅಥವಾ ಸ್ವಂತಗೂಡುಗಳಿಂದ ಜೇನುತುಪ್ಪವನ್ನು ಸಂಗ್ರಹಿಸಿ, ಸಂಸ್ಕರಿಸಿ,ಬಾಟಲಿಯಲ್ಲಿ ತುಂಬಿ ಮಾರಾಟ ಮಾಡಬಹುದು.ವಿವಿಧ ಹೂ, ಜೇನು ಪ್ರಭೇದ, ಪ್ರದೇಶಗಳಿಂದ ಜೇನುಸಂಗ್ರಹಿಸಿ, ಅದೇ ರೀತಿ ಹೆಸರನ್ನು ಕೊಟ್ಟು ಮಾರಾಟಮಾಡಬಹುದು. ನೇರಳೆ ಜೇನುತುಪ್ಪ, ಹೊಂಗೆ ಜೇನು ತುಪ್ಪ, ಕೂರ್ಗ್‌ ಜೇನು, ನಸರು ಜೇನು ಈ ರೀತಿವಿಂಗಡಿಸಿ ಮಾರಾಟ ಮಾಡಿದರೆ ಹೆಚ್ಚು ಲಾಭ.ಮಾರುಕಟಯಲ್ಲಿ  ಒಂದು ಕೆ.ಜಿ. ಜೇನಿಗೆ ಸುಮಾರು 250ರಿಂದ ರೂ. 2000 ದವರೆಗೂ ಬೆಲೆಯಿದೆ. ಸಂಸ್ಕರಿಸಿದ ಜೇನಿಗಿಂತ ಕಚ್ಚಾ ಜೇನಿನಲ್ಲಿ ಸುವಾಸನೆ, ವಿಟಮಿನ್‌, ಮುಂತಾದ ಆರೋಗ್ಯ ಅಂಶಗಳುಹೆಚ್ಚಿರುತ್ತವೆ. ಆದರೆ ಕಚ್ಚಾ ಜೇನು ಬಹು ಬೇಗನೆ ಹರಳು ಕಟ್ಟುತ್ತದೆ. ಹರಳುಗಟ್ಟಿದ ಜೇನು ಅಂದರೆ ಕಲಬೆರಕೆಯದ್ದು ಎನ್ನುವ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ, ಅದು ತಪ್ಪು ಗ್ರಹಿಕೆ. ಹರಳುಗಟ್ಟಿದ ಜೇನಿನಲ್ಲಿ ಗ್ಲುಕೋಸ್‌ ಅಂಶ ಹೆಚ್ಚಿರಬಹುದು ಅಥವಾ ತೇವಾಂಶ ಕಡಿಮೆಯಿರಬಹುದು, ಅಥವಾ ಕೆಲವು ಹೂಗಳ ಪುಷ್ಪ ರಸದ ಮೂಲವೇ ಹಾಗೆ ಇರಬಹುದು.

ಬೇಡಿಕೆ ಹೆಚ್ಚಿಸಿ ಕೊಳ್ಳಲುದಾರಿ :  ಬೀ ನರ್ಸರಿಗಳನ್ನು ರಚಿಸಿಕೊಂಡು ಜೇನು ಕುಟುಂಬಗಳನ್ನು ಪಾಲು ಮಾಡಿಯೂ, ಮಾರಾಟ ಮಾಡಬಹುದು. ಆರೋಗ್ಯವಂತ, ಸದೃಢಕುಟುಂಬಗಳನ್ನು ಪಾಲು ಮಾಡಬೇಕು. ಜೇನು ಕುಟುಂಬಗಳಿಗೆ ಬೇಡಿಕೆ ಜಾಸ್ತಿಯಿದ್ದು, ಒಂದುಕುಟುಂಬಕ್ಕೆ ಸುಮಾರು 1500 ರೂ. ರಿಂದ 2000 ರವರೆಗೂ ಬೆಲೆಯಿದೆ. ಕೃಷಿ ಮೇಳ, ರೈತ ಮೇಳದಲ್ಲಿ ಮಳಿಗೆತೆರೆಯುವಮೂಲಕರೈತರಿಗೆಹತ್ತಿರವಾಗಬಹುದು.ಹೀಗೆ ಜೇನುಕೃಷಿಯನ್ನು ಲಾಭದಾಯಕ ಉದ್ಯಮವಾಗಿರೂಪಿಸಿಕೊಳ್ಳಲು ಹಲವು ದಾರಿಗಳಿವೆ.

 

– ಡಾ.ಕೆ.ಟಿ.ವಿಜಯಕುಮಾರ್‌ ಜೇನು ಕೃಷಿ ವಿಜ್ಞಾನಿ

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.