ಬ್ಯಾಂಕ್ ಎಟಿಎಂಗಳ ಹನಿಮೂನ್ ಮುಗಿಯಿತೇ?
Team Udayavani, Dec 3, 2018, 6:00 AM IST
ಮುಂದಿನ ವರ್ಷ ಮಾರ್ಚ್‌ನಿಂದ ಈಗಿರುವ ಒಟ್ಟು ಎಟಿಎಂಗಳ ಪೈಕಿ, ಅರ್ಧದಷ್ಟು ಎಟಿಎಂ ಸೆಂಟರ್‌ಗಳನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿ ಹರಡಿದೆ. ಎಟಿಎಂ ಯಂತ್ರಕ್ಕೆ ಹಣ ತುಂಬುವಾಗ ಆಗುವ ಕಿರಿಕಿರಿ, ಹೆಚ್ಚುತ್ತಿರುವ ಸೈಬರ್ ಕ್ರೈಂ, ಸಾಫ್ಟ್ವೇರ್ ಸಮಸ್ಯೆ ಇಂಥವೇ ಕಾರಣಗಳನ್ನು ಮುಂದಿಟ್ಟು ಎಟಿಎಂ ಸೆಂಟರ್‌ಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಆದರೆ ಹೀಗೆ ಮಾಡುವುದರಿಂದ ಗ್ರಾಹಕರಿಗೆ ತೊಂದರೆಗಳು ಹೆಚ್ಚುವ ಸಾಧ್ಯತೆಗಳಿವೆ…
ದೇಶಾದ್ಯಂತ 2.38 ಲಕ್ಷ ಬ್ಯಾಂಕ್ ಎಟಿಎಂಗಳಿದ್ದು, 2019 ರ ಮಾರ್ಚ್ ವೇಳೆಗೆ ಸುಮಾರು ಅರ್ಧದಷ್ಟು ಎಟಿಎಂಗಳು ಬಾಗಿಲುಮುಚ್ಚಲಿವೆ ಎಂದು ಎಲ್ಲೆಡೆ ಸುದ್ದಿ ಹಬ್ಬಿದೆ. ಮುಚ್ಚಲ್ಪಡುವ 1.13 ಲಕ್ಷ ಎಟಿಎಂ ಗಳಲ್ಲಿ ಒಂದು ಲಕ್ಷ off site ಮತ್ತು 15000 white label ಎಟಿಎಂ ಗಳು ಇರುತ್ತವೆ. ಎಟಿಎಂ ಗಳಿಗೆ ನಗದು ಸಾಗಿಸುವ , ಪೂರೈಸುವ ಮತ್ತು ಎಟಿಎಂ ಗಳಿಗೆ ನಗದು ತುಂಬುವ ನಿಟ್ಟಿನಲ್ಲಿ ರಿಸರ್ವೆ ಬ್ಯಾಂಕ್‌ನ ಹೊಸ ನಿರ್ದೇಶನವನ್ನು ಜಾರಿಗೊಳಿಸಿದರೆ ಸ್ಥಿತಿ ಗಂಭೀರ ಎನ್ನುವ ಆತಂಕ ಎದುರಾಗಿದೆ. ಎಟಿಎಂ ಉತ್ಪಾದಕರು ಮತ್ತು ಹೊರಗುತ್ತಿಗೆ ದಾರರನ್ನೊಳಗೊಂಡ ಈ ಒಕ್ಕೂಟದ ಪ್ರಕಾರ, ರಿಸರ್ವ್ ಬ್ಯಾಂಕ್‌ನ ಈ ಹೊಸ ಮಾದರಿ ನಗದು ಸಾಗಾಟ ಮತ್ತು ಕ್ಯಾಸೆಟ್ ಸ್ವಾಪಿಂಗ್ ನಿರ್ದೇಶನವನ್ನು ಪಾಲಿಸಲು 3500 ಕೋಟಿ ಹೆಚ್ಚಿಗೆ ಹೊರೆ ಬೀಳುತ್ತದೆ. ಎ ಟಿಎಂಗಳ hardware ಮತ್ತು soft ware ಗಳ ಉನ್ನತೀಕರಣ (upgradation), ಕ್ಯಾಷ್ ತುಂಬುವ ಕ್ಯಾಸೆಟ್ ಸ್ವಾಪ್ ಪದ್ಧತಿಯ ಬಳಕೆಯಲ್ಲಿ ಏಕರೂಪತೆ ತರುವ ಆಡಳಿತಾತ್ಮಕ ಕಾರಣಗಳಿಗಾಗಿ ಎಟಿಎಂಗಳ ಮುಚ್ಚುವಿಕೆ ಅನಿವಾರ್ಯ ಎಂದು ಹೇಳಲಾಗುತ್ತಿದೆ.
ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು 3,500 ಕೋಟಿ ಬೇಕಾಗುತ್ತದೆ. ಇಷ್ಟು ದೊಡ್ಡ ಮೊತ್ತವನ್ನು ಭರಿಸುವವರು ಯಾರು ಎನ್ನುವುದು ಮೂಲಭೂತ ಪ್ರಶ್ನೆಯಾಗಿದೆ. ಬ್ಯಾಂಕುಗಳೇ ಈ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಒಂದು ವೇಳೆ ಬ್ಯಾಂಕುಗಳು ಈ ನಿಟ್ಟಿನಲ್ಲಿ ಹಿಂದೇಟು ಹಾಕಿದರೆ, ಎಟಿಎಂಗಳು ಗ್ಯಾರಂಟಿಯಾಗಿ ಮುಚ್ಚುತ್ತವೆ ಎಂದು ಈ ಒಕ್ಕೂಟ ಹೇಳುತ್ತಿದೆ. ಬ್ಯಾಂಕಿಂಗ್ ಮೂಲಗಳು ಮತ್ತು ಗೃಹ ಸಚಿವಾಲಯದ ಪ್ರಕಾರ, ದೇಶಾದ್ಯಂತ 8000 ಖಾಸಗಿ ಮಾಲೀಕತ್ವದ ವ್ಯಾನ್‌ಗಳು ಎಟಿಎಂ ಗಳ ಸೇವೆಯಲ್ಲಿದ್ದು, ದಿನಂಪ್ರತಿ ಸುಮಾರು 15,000 ಕೋಟಿ ನಗದನ್ನುಬ್ಯಾಂಕುಗಳ ಮಧ್ಯ ಸಾಗಿಸುತ್ತವೆ. ಈ ವ್ಯಾನ್‌ಗಳು ಬ್ಯಾಂಕೇತರ ಖಾಸಗಿ ಸಂಸ್ಥೆಗಳ ಆಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆಗಳು ಕೆಲವು ಬಾರಿ ಬ್ಯಾಂಕಿನ ಪರವಾಗಿ ತಮ್ಮ ಕ್ಯಾಶ್‌ವಾಲ್ಟ್ನಲ್ಲಿ ರಾತ್ರಿ ಪೂರ್ತ ನಗದನ್ನು ಇರಿಸಿಕೊಳ್ಳುತ್ತವೆ.
ಗೃಹ ಮಂತ್ರಾಲಯದ ಇತ್ತೀಚಿನ ಆದೇಶದ ಪ್ರಕಾರ ಎಟಿಎಂಗಳನ್ನು ಲೋಡ್ ಮಾಡುವ ಮತ್ತು ನಗದನ್ನು ಸಾಗಿಸುವ ಕಾರ್ಯವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸಾಯಂಕಾಲ ಆರು ಗಂಟೆಯೊಳಗಾಗಿ ಮತ್ತು ಪಟ್ಟಣ ನಗರಪ್ರದೇಶಗಳಲ್ಲಿ ರಾತ್ರಿ 9ರೊಳಗಾಗಿ ಮುಗಿಸಬೇಕು. ಈ ವ್ಯಾನ್‌ಗಳಿಗೆ GPS ಅಳವಡಿಸಿರಬೇಕು. ಈ ಹೊಸ ನಿರ್ದೇಶನವನ್ನು ಪಾಲಿಸಿದರೆ, ಈ ಸಂಸ್ಥೆಗಳ ವೆಚ್ಚ 30-40% ಹೆಚ್ಚಾಗುತ್ತದೆ ಎಂದು ಅವುಗಳು ಹೇಳುತ್ತಿವೆ. ಈ ಹೊಸ ನಿರ್ದೇಶನವನ್ನು ಪಾಲಿಸಲು ಅಸಾಧ್ಯವೆನ್ನುತ್ತಿವೆ.
ವೆಚ್ಚ ಕಡಿತಮಾಡುವ ಯಾವುದಾದರೂ ಯೋಜನೆಗಳು ಜಾರಿಯಾದಾಗ ಸಾಮಾನ್ಯವಾಗಿ ಹೆಚ್ಚು ಲಾಭಗಳಿಸದ ಮತ್ತು ಹೆಚ್ಚು ವ್ಯವಹಾರ ನೀಡದ ಗ್ರಾಮಾಂತರ ಶಾಖೆಗಳೇ ಮೊದಲ ಬಲಿಪಶುಗಳಾಗುವುದು ಈ ದೇಶದಲ್ಲಿ ಲಾಗಾಯ್ತಿನಿಂದ ಇದೆ. ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಎಟಿಎಂ ಗಳು ಮುಚ್ಚುವುದು ಗ್ಯಾರಂಟಿ. ಅದಕ್ಕೂ ಮೇಲಾಗಿ ಸರ್ಕಾರದ ಹಲವು ರೀತಿಯ ಸಬ್ಸಿಡಿಗಳನ್ನು ಪಡೆಯುವ ಫಲಾನುಭವಿಗಳು ಗ್ರಾಮೀಣ ಭಾಗದವರಾಗಿರುವುದರಿಂದ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಹಣಕಾಸು ಒಳಗೊಳ್ಳುವಿಕೆಯ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆಯಂತೆ. ಸಮಸ್ಯೆಯ ಆಳವನ್ನು, ದೂರಗಾಮಿ ಪರಿಣಾಮವನ್ನು ವಿಶ್ಲೇಷಿಸಿದ ಬ್ಯಾಂಕರುಗಳು, ಸರ್ವೀಸ್ ಪೊ›ವೈಡರ್‌ಗಳು ಹೆಚ್ಚಿನ ವೆಚ್ಚವನ್ನು ಭರಿಸಬೇಕಾಗಿಲ್ಲ ಎನ್ನುವ ಭರವಸೆ ನೀಡುತ್ತಿದ್ದಾರೆ. ಅವರ ಬಳಿ ಇದನ್ನು ನಿಭಾಯಿಸುವ ಅರ್ಥಿಕ ಚೈತನ್ಯ ಇಲ್ಲವೆಂದೂ ಹೇಳಲಾಗುತ್ತದೆ. ಆದರೆ, ಅಂತಿಮವಾಗಿ ವೆಚ್ಚ ಹಂಚಿಕೊಳ್ಳುವ ವ್ಯವಸ್ಥೆ ಯಾವ ರೀತಿ ತಿರುವು ಪಡೆಯುತ್ತದೆ ಎಂದು ಹೇಳಲಾಗದು. ಈ ವೆಚ್ಚ ಹಂಚುವಿಕೆಯ ಸಮೀಕರಣವೇ ಮುಂದಿನ ದಿನಗಳಲ್ಲಿ ಎಟಿಎಂನ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಹೆಚ್ಚು ಕಾಣುತ್ತದೆ
ಮುಚ್ಚುವಿಕೆಯ ಪರಿಣಾಮಗಳೇನು?
ಎಟಿಎಂ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳುತ್ತಾರೆ. ಎಟಿಎಂ ಸಂಖ್ಯೆ ಕಡಿಮೆಯಾಗುವುದರಿಂದ, ಇರುವ ಎಟಿಎಂ ಗಳ ಮುಂದೆ ನಗದಿಗಾಗಿ ದಟ್ಟಣೆ ಕಾಣಬಹುದು. ನೋಟು ಅಮಾನ್ಯಿàಕರಣದ ದಿನಗಳಲ್ಲಿ ಎಟಿಎಂ ಎದುರು ಕಾಣುತ್ತಿದ್ದ, ನುಗ್ಗಾಟ ಮತ್ತು ದಟ್ಟಣೆ ಪುನರಾವರ್ತನೆ ಆಗಬಹುದು. ಅದೇ ರೀತಿ, ಬ್ಯಾಂಕ್ ನಗದು ಕೌಂಟರ್ ಗಳಲ್ಲೂ ದಟ್ಟಣೆ ಹೆಚ್ಚಾಗಬಹುದು. ಈವರೆಗೆ ಸ್ವಲ್ಪ ನಿರಾಳವಾಗಿದ್ದ ನಗದು ಕೌಂಟರ್‌ಗಳು ಹಿಂದಿನ ಚಟುವಟಿಕೆಗಳನ್ನು ಕಾಣಬಹುದು. ಎಟಿಎಂಗಳ ಸಂಖ್ಯೆಯಲ್ಲಿ ಕಡಿತವಾಗುವುದರಿಂದ ಕೊಳ್ಳುಬಾಕ ಸಂಸðತಿಗೆ ಸ್ವಲ್ಪ ನಿಯಂತ್ರಣ ಬೀಳಬಹುದು ಎನ್ನುವ ಮಾತೂ ಕೇಳಿ ಬರುತ್ತಿದೆ. ಬ್ಯಾಂಕ್‌ನಲ್ಲಿ ನಗದು ಕಡಿಮೆ ಮಾಡಬೇಕೆನ್ನುವ ಬ್ಯಾಂಕುಗಳ ಕಾರ್ಯಸೂಚಿಗೆ ಹಿನ್ನಡೆ ಯಾಗಬಹುದು. ತಗಲುವ ವೆಚ್ಚಕ್ಕೆ ಸರಿಯಾಗಿ ಎಟಿಎಂಗಳು ಅದಾಯವನ್ನು ನೀಡುವುದಿಲ್ಲ ಎನ್ನುವ ಅಭಿಪ್ರಾಯ ಇರುವಾಗ, ಎಟಿಎಂಗಳ ಮುಚ್ಚುವಿಕೆ ಬ್ಯಾಂಕರುಗಳನ್ನು ಸಂದಿಗªದಲ್ಲಿ ಸಿಲುಕಿಸಿದೆ. ಬ್ಯಾಂಕುಗಳ ಎಟಿಎಂ ಸೇವೆ ಒಂದು ರೀತಿಯಲ್ಲಿ vಚluಛಿ ಚಛಛಛಿಛ sಛಿrvಜಿcಛಿ ಆಗಿದ್ದು, ಬ್ಯಾಂಕಿನ ಬಡ್ಡಿಯೇತರ ಆದಾಯಕ್ಕೆ ಗಣನೀಯ ಕೊಡುಗೆ ನೀಡುವುದಿಲ್ಲ. ಅವುಗಳ ನಿರ್ವಹಣೆ ಕೂಡಾ ಒಂದು ರೀತಿಯಲ್ಲಿ ಅನಾನುಕೂಲ ಎನ್ನುವ ಭಾವನೆ ಇದೆ. ಎಟಿಎಂಗಳ ದರೋಡೆ,ಲೂಟಿ, ಹಾರ್ಡ್‌ವೇರ್ ಸಾಫ್ಟ್ವೇರ್ ಸಮಸ್ಯೆ, ಎಟಿಎಂ ಗಳಲ್ಲಿ ಸೈಬರ್ ಕ್ರೈಮ್, ನಗದುಲೋಡ್ ಮಾಡುವಲ್ಲಿನ ಕಿರಿಕಿರಿ ಮುಂತಾದವುಗಳಿಂದ ಸಾಕಷ್ಟು ತೊಂದರೆ ಅನುಭವಿಸಿರುವ ಬ್ಯಾಂಕುಗಳಿಗೆ, ಈ ಎಟಿಎಂ ಸೆಂಟರ್‌ಗಳನ್ನು ಮುಚ್ಚಲಾಗುವುದು ಎಂಬ ಸುದ್ದಿ ಸ್ವಲ್ಪ ನೆಮ್ಮದಿ ಕೊಡಬಹುದು.
ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಲ್ಲಿ ಎಟಿಎಂಗಳ ಕೆಲವುಸೇವೆಯನ್ನು ಹೊರಗುತ್ತಿಗೆಗೆ ನೀಡಿದ ನಂತರ ಅನಾನುಕೂಲಗಳ ಸಂಗಡ ಅನನುಕೂಲವೂ ಆಗಿದೆ ಎನ್ನುವ ಅಭಿಪ್ರಾಯವೂ ಸ್ವಲ್ಪ ಮಟ್ಟಿಗೆ ಕೇಳಿಬರುತ್ತಿದೆ.
ಮೇಲು ನೋಟಕ್ಕೆ ರಿಸರ್ವ್ ಬ್ಯಾಂಕ್‌ನ ನಿರ್ದೇಶನ ಆಧುನಿಕ ಬ್ಯಾಂಕಿಂಗ್ ಚಿಂತನೆಗೆ ವ್ಯತಿರಿಕ್ತ ಎನ್ನಬಹುದು. ಆದರೆ, ಬ್ಯಾಂಕುಗಳ ಹಿತರಕ್ಷಣೆ ದೃಷ್ಟಿಯಲ್ಲಿ, ಸುರಕ್ಷಿತತೆಯ ದೃಷ್ಟಿಯಲ್ಲಿ ಇದೊಂದು ಮಹತ್ವಪೂರ್ಣ ಮತ್ತು ದೂರದೃಷ್ಟಿಯ ಹೆಜ್ಜೆ ಎನ್ನಬಹುದು. ಎಟಿಎಂ ನಿರ್ವಹಣೆ ನಿಟ್ಟಿನಲ್ಲಿ ಕಂಡು ಬಂದ ಲೋಪ ದೋಷಗಳು, ಮುಖ್ಯವಾಗಿ ಸುರಕ್ಷತತೆಯ ದೃಷ್ಟಿಯಲ್ಲಿ ಅನುಭವಿಸಿದ ನಷ್ಟವನ್ನು ಗಮದಲ್ಲಿರಿಸಿ ರಿಸರ್ವ್ ಬ್ಯಾಂಕ್ ಇಂಥ ಎಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದೆ. ಗ್ರಾಹಕರ ಹಿತವನ್ನು ಗಮದಲ್ಲಿರಿಸಿಕೊಂಡು, ವೆಚ್ಚದ ದೃಷ್ಟಿಯಲ್ಲಿ ಎಟಿಎಂಗಳನ್ನು ಕಡಿಮೆಮಾಡುವ ಸಾಧ್ಯತೆ ತುಂಬಾ ಕಡಿಮೆ. ಮಾರ್ಚ್ ತಿಂಗಳು ಇನ್ನೂ ದೂರವಿದ್ದು, ಅಷ್ಟರೊಳಗೆ ಇದಕ್ಕೊಂದು ಪರಿಹಾರ ಹುಡುಕುವುದನ್ನು ಅಲ್ಲಗೆಳೆಯಲಾಗದು. ಒಕ್ಕೂಟವಾಗಲಿ, ಬ್ಯಾಂಕುಗಳಾಗಲೀ ಅಥವಾ ಗ್ರಾಹಕರಾಗಲಿ ಇಂಥ ಬೆಳವಣಿಗೆಯನ್ನು ನಿರೀಕ್ಷಿಸುವುದಿಲ್ಲ. ಪರಸ್ಪರರ ಹಿತಕ್ಕಾಗಿ ಸ್ವಲ್ಪ ರಾಜಿ ಮಾಡಿಕೊಳ್ಳಲೇ ಬೇಕಾಗುತ್ತದೆ. ಗ್ರಾಹಕರು ಇಂದು ಎಟಿಎಂ ಸಂಸðತಿಗೆ ಒಗ್ಗಿ ಹೋಗಿ¨ªಾರೆ. ಸಮಸ್ಯೆಗಳು ಏನೇ ಇರಲಿ, ದಿಢೀರ್ ಎಂದು ದಿನ ಬೆಳಗಾಗುವುದರೊಳಗಾಗಿ ಅನುಸರಿಸಿಕೊಂಡು ಬಂದ ವ್ಯವಸ್ಥೆಗೆ ಬೈ ಹೇಳಲು ಸಾಧ್ಯವಿಲ್ಲ ಎನ್ನುವುದು ಸತ್ಯ. ಅದಕ್ಕೂ ಮೇಲಾಗಿ ಎಟಿಎಂ ಒಂದು ಜಾಗತಿಕ ವ್ಯವಸ್ಥೆ ಕೂಡಾ. ಆ ವ್ಯವಸ್ಥೆಯ ಸಂಗಡ ನಾವೂ ಹಜ್ಜೆ ಹಾಕಬೇಕಾಗುತ್ತದೆ.
– ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.