ಯುವರ್‌ “ಆನರ್‌’: ಭಾರತಕ್ಕೆ ಬರಲಿದೆ, “ಆನರ್‌ 8ಎಕ್ಸ್‌’


Team Udayavani, Oct 22, 2018, 12:59 PM IST

huawei-honor-8x-1-copy.jpg

 ಆನರ್‌ ಕಂಪನಿ ತನ್ನ ಹೊಸ ಮೊಬೈಲ್‌ 8ಎಕ್ಸ್‌ ಅನ್ನು ಭಾರತಕ್ಕೆ ಬಿಡುಗಡೆ ಮಾಡಿದೆ. ಮೂರು ವರ್ಶನ್‌ಗಳಲ್ಲಿ ಈ ಮಾಡೆಲ್‌ ದೊರಕಲಿದೆ. ಅ. 24ರಿಂದ ಅಮೆಜಾನ್‌ನಲ್ಲಿ ಲಭ್ಯ

ಮಿತವ್ಯಯದ ದರದಲ್ಲಿ ಮೊಬೈಲ್‌ ಫೋನ್‌ ನೀಡಿದರೂ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದ ಕಂಪನಿಗಳಲ್ಲಿ ಹುವಾವೇಯ ಆನರ್‌ ಪ್ರಮುಖ ಸಾಲಿನಲ್ಲಿದೆ. ಅದರ ಎಕ್ಸ್‌ ಸರಣಿಯ ಮೊಬೈಲ್‌ ಫೋನ್‌ಗಳು ಕಡಿಮೆ ದರದಲ್ಲಿ ಉತ್ತಮ ತಾಂತ್ರಿಕ ಅಂಶಗಳನ್ನು ಒಳಗೊಂಡಿರುತ್ತವೆ. 

 ಇರಲಿ, 2015ರಲ್ಲಿ ಆನರ್‌ ಕಂಪನಿ ತನ್ನ ಆನರ್‌ 4ಎಕ್ಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ನಂತರ 5ಎಕ್ಸ್‌, 6ಎಕ್ಸ್‌, 7ಎಕ್ಸ್‌ ಫೋನ್‌ಗಳು ಸಾಲಾಗಿ ಬಂದವು. ಪ್ರತಿ ಫೋನಿನಲ್ಲೂ ಹೊಸ ಅಂಶಗಳನ್ನು ಅಳವಡಿಸಿದ್ದರಿಂದ ಈ ಸರಣಿಯ ಫೋನ್‌ಗಳು ಯಶಸ್ವಿಯಾದವು. “5ಎಕ್ಸ್‌’ ಆಗಿನ ಕಾಲಕ್ಕೆ ತುಂಬಾ ಶಕ್ತಿಯುತ ಮೆಟಲ್‌ ಬಾಡಿಯ, ಸ್ಲಿಮ್‌ ಆದ ಸುಂದರ ಫೋನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅವರ 6 ಎಕ್ಸ್‌ ಫೋನು 15 ಸಾವಿರ ರೂ. ದರ ಪಟ್ಟಿಯಲ್ಲಿ “ಉತ್ತಮ ಕ್ಯಾಮೆರಾ ಫೋನ್‌’ ಎಂದು ಹೆಸರಾಯಿತು. 7 ಎಕ್ಸ್‌ ಸಹ ಕ್ಯಾಮೆರಾ ಮತ್ತು ಸ್ಲಿಮ್‌, ಗುಣಮಟ್ಟದಿಂದ ಯಶಸ್ವಿಯಾಯಿತು. ಈಗ 8ಎಕ್ಸ್‌ ಭಾರತದಲ್ಲಿ ಮೊನ್ನೆ ಬಿಡುಗಡೆಯಾಗಿದ್ದು, ಅ.24ಅಮೆಜಾನ್‌ನಲ್ಲಿ ಮೊದಲ ಮಾರಾಟ ಆರಂಭಿಸಲಿದೆ. 

ಸಾಮಾನ್ಯವಾಗಿ ಆನರ್‌ ಕಂಪೆನಿ ತನ್ನ ಯಾವುದೇ ಮೊಬೈಲ್‌ ಅನ್ನು ಭಾರತಕ್ಕೆ ಬಿಟ್ಟಾಗ ಎರಡು ವರ್ಶನ್‌ಗಳನ್ನು ಮಾತ್ರ ನೀಡುತ್ತಿತ್ತು. ಈ ಬಾರಿ ಆನರ್‌ 8ಎಕ್ಸ್‌ನ ಮೂರು ವರ್ಶನ್‌ಗಳನ್ನು ಬಿಡುಗಡೆ ಮಾಡಿರುವುದು ವಿಶೇಷ. ಹೀಗಾಗಿ, ಗ್ರಾಹಕರು ತಮ್ಮ ಬಜೆಟ್‌ ಮತ್ತು ಅಗತ್ಯಕ್ಕನುಗುಣವಾಗಿ ಯಾವ ವರ್ಶನ್‌ ಬೇಕಾದರೂ ಆರಿಸಿಕೊಳ್ಳಬಹುದಾಗಿದೆ. ಆನರ್‌ 8ಎಕ್ಸ್‌ನಲ್ಲಿ ಯಾವ್ಯಾವ ಅಂಶಗಳಿವೆ? ಅದರ ತಾಂತ್ರಿಕ ಸೌಲಭ್ಯಗಳೇನು ಎಂಬುದರ ಪರಿಚಯ ಇಲ್ಲಿದೆ. ಇದು ಪರಿಚಯವಷ್ಟೇ. ವಿಮರ್ಶೆಯಲ್ಲ. 

ಆನರ್‌ 8 ಎಕ್ಸ್‌ ಪ್ರಮುಖಾಂಶಗಳು:
•  6.5 ಇಂಚಿನ ಎಫ್ಎಚ್‌ಡಿ ಪ್ಲಸ್ ಡಿಸ್‌ಪ್ಲೇ, (1080*2340) 19.5:9 ಅನುಪಾತ
• 20 + 2 (ಡೆಪ್ತ್ ಸೆನ್ಸರ್‌) ಮೆಗಾಪಿಕ್ಸಲ್‌ ಯುಗಳ ಲೆನ್ಸಿನ ಹಿಂಬದಿಯ ಕ್ಯಾಮೆರಾ
• 16 ಮೆಗಾಪಿಕ್ಸಲ್‌ ಸೆಲ್ಫಿ ಕ್ಯಾಮೆರಾ
• ಹುವಾವೇನವರ ಕಿರಿನ್‌ 710 ಚಿಪ್‌ಸೆಟ್‌ (12ಎನ್‌ಎಂ)
•  8 ಕೋರ್‌ ಸಿಪಿಯು. 4 ಕೋರ್‌ಗಳು 2.2 ಗಿಗಾಹಟ್ಜ್jì, ಇನ್ನು 4 ಕೋರ್‌ಗಳು 1.7 ಗಿ.ಹ. ಜಿಪಿಯು ಮಾಲಿ ಜಿ. 51.
•  4 ಜಿಬಿ ರ್ಯಾಮ್‌, 64 ಜಿಬಿ ಆಂತರಿಕ ಸಂಗ್ರಹ (15 ಸಾವಿರ ರೂ.) 6 ಜಿಬಿ ರ್ಯಾಮ್‌ 64 ಜಿಬಿ ಆಂತರಿಕ ಸಂಗ್ರಹ, (17 ಸಾವಿರ ರೂ.) 6 ಜಿಬಿ ರ್ಯಾಮ್‌, 128 ಜಿಬಿ ಆಂತರಿಕ ಸಂಗ್ರಹ (19 ಸಾವಿರ ರೂ.) ಹೀಗೆ ಮೂರು ವರ್ಶನ್‌ಗಳು. 
•    3750 ಎಂಎಎಚ್‌ ಬ್ಯಾಟರಿ. 5ವಿ 2ಎ 10 ವ್ಯಾಟ್ಸ್‌ ಚಾರ್ಜರ್‌. ಮೈಕ್ರೋ ಯುಎಸ್‌ಬಿ.
•    ಕೆಂಪು, ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯ.

ಆನರ್‌ 8 ಎಕ್ಸ್‌ ಭಾರತದಲ್ಲಿ ಕಿರಿನ್‌ 710 ಪ್ರೊಸೆಸರ್‌ ಉಳ್ಳ ಮೊದಲ ಆನರ್‌ ಫೋನ್‌. ಹುವಾವೇ ನೋವಾ 3ಐಗೂ ಇದೇ ಪ್ರೊಸೆಸರ್‌ ಹಾಕಲಾಗಿದೆ. ಇದು ಮಧ್ಯಮ ದರ್ಜೆಯ ಶಕ್ತಿಶಾಲಿ ಪ್ರೊಸೆಸರ್‌.

ಮೊಬೈಲ್‌ನ ಹಿಂಬದಿಯಲ್ಲಿ ಶಕ್ತಿಶಾಲಿಯಾದ ಗಾಜಿನ ಬಾಡಿಯನ್ನು ಜನಪ್ರಿಯಗೊಳಿಸಿದ್ದು ಆನರ್‌. ಅದರಲ್ಲೂ ಅದು ಪರಿಚಯಿಸಿದ ನೀಲಿ ಬಣ್ಣದ ಎರಡು ಶೇಡ್‌ಗಳುಳ್ಳ ವಿನ್ಯಾಸವನ್ನು ಇಂದು ಎಲ್ಲ ಕಂಪನಿಗಳೂ ಕಾಪಿ ಮಾಡುತ್ತಿವೆ. ಆನರ್‌ 8 ಎಕ್ಸ್‌ ಕೂಡ ಅದೇ ರೀತಿಯ ಎರಡು ಬಣ್ಣದ ಶೇಡ್‌ ಬರುವ, 15 ಪದರಗಳುಳ್ಳ ಗಾಜಿನ ದೇಹ ಹೊಂದಿದೆ. ಇದರ ಡಿಸ್‌ಪ್ಲೇ ಶೇ.91ರಷ್ಟಿದ್ದು, ಇನ್ನು ಶೇ.9ರಷ್ಟು ಮಾತ್ರ ಅಂಚುಗಳಿವೆ. ಹೆಚ್ಚು ಕಡಿಮೆ ಬಾರ್ಡರ್‌ ಲೆಸ್‌ ಡಿಸ್‌ಪ್ಲೇಎಂದು ಕಂಪನಿ ಹೇಳಿದೆ. 3750 ಎಂಎಎಚ್‌ ಬ್ಯಾಟರಿ ಇರುವುದರಿಂದ ಒಂದೂವರೆ ದಿನ ಹೆವಿ ಯೂಸೇಜ್‌ ಮಾಡಿದರೂ ಬ್ಯಾಟರಿ ಸಾಕಾಗುತ್ತದೆ.

ಇನ್ನೊಂದು ಪ್ರಮುಖಾಂಶವೆಂದರೆ 2 ಸಿಮ್‌ಗಳನ್ನು ಹಾಕಿಕೊಂಡರೂ, ಇನ್ನೊಂದು ಸ್ಲಾಟ್‌ ಅನ್ನು ಹೆಚ್ಚುವರಿಯಾಗಿ ನೀಡಿದ್ದು, ಅದರಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಹಾಕಿಕೊಳ್ಳಬಹುದು. ಆದರೆ, ಮೊಬೈಲ್‌ನ ಆಂತರಿಕ ಸಾಮರ್ಥ್ಯ 64 ಜಿಬಿ ಮತ್ತು 128 ಜಿಬಿ ಇರುವುದರಿಂದ ಅಡಿಷನಲ್‌ ಆಗಿ ಮೆಮೊರಿಕಾರ್ಡ್‌ ಹಾಕುವ ಅವಶ್ಯಕತೆ ಬರುವುದಿಲ್ಲ. (ಸಾಧ್ಯವಾದಷ್ಟೂ ನಿಮ್ಮ ಮೊಬೈಲ್‌ ಫೋನ್‌ಗಳಿಗೆ ಮೆಮೊರಿ ಕಾರ್ಡ್‌ ಹಾಕದಿರುವುದು ಒಳ್ಳೆಯದು. ಇದರಿಂದ ಮೊಬೈಲ್‌ಗ‌ಳ ವೇಗ ಕಡಿಮೆಯಾಗುತ್ತದೆ. ವೈರಸ್‌ಗಳು ಉಂಟಾಗುತ್ತವೆ. ಎಷ್ಟೋ ಮೆಮೊರಿ ಕಾರ್ಡ್‌ಗಳಲ್ಲಿ ಫೋಟೋಗಳು ಇದ್ದಕ್ಕಿದ್ದಂತೆ ಮಾಯವಾಗಿಬಿಡುತ್ತವೆ!)

ಅಮೆಜಾನ್‌ನಲ್ಲಿ ಅ.24ರಿಂದ ಮಾರಾಟ. ಅಂದಿನಿಂದ ಮತ್ತೆ ಐದು ದಿನಗಳ ಕಾಲ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ನೀಡಿದೆ! ಐಸಿಐಸಿಐ ಕಾರ್ಡ್‌ಗೆ ಹಾಗೂ ಸಿಟಿಕ್ರೆಡಿಟ್‌ ಕಾರ್ಡ್‌ಗೆ ಶೇ.10ರಷ್ಟು ಕ್ಯಾಶ್‌ಬ್ಯಾಕ್‌ ದೊರಕಲಿದೆ. ಆನರ್‌ 8ಎಕ್ಸ್‌ ಅದರ ದರಕ್ಕಿಂತ ಒಂದೂವರೆ ಸಾವಿರ ಕಡಿಮೆಗೆ ದೊರಕುವ ನಿರೀಕ್ಷೆ ಇದೆ.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11

Mangaluru: ಕರಾವಳಿ ಉತ್ಸವ; ಅರಣ್ಯ ಅನುಭವ!

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

10(1

Mangaluru: ನಗರದ 18 ಕಡೆಗಳಲ್ಲಿ ಪೇ ಪಾರ್ಕಿಂಗ್‌

9(1

Kundapura: ಟಿಟಿ ರೋಡ್‌ನ‌ಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.