ಹೌಸ್ ಟು ಮೌಸ್, ಆಫೀಸ್ ಮಹಿಳೆಯ ಆಫ್ಬೀಟ್ ಕತೆ!
Team Udayavani, Jul 26, 2017, 6:55 AM IST
ಎಷ್ಟೋ ಸಾರಿ ಬೆಳಗಿನ ತಿಂಡಿ ಆಪ್ಷನಲ್ ಬಿಸಿ ದೋಸೆ ಹಾಕಿಕೊಡೋಣ ಅಂದರೆ ದೋಸೆ, ತವಾ ಬಿಟ್ಟು ಏಳುವುದಿಲ್ಲ ಅನ್ನುತ್ತದೆ. ಹೊಸ ತವಾ ಕೊಳ್ಳೋಣ ಅಂತ ಆರು ತಿಂಗಳಿಂದ ಪ್ಲಾನು ಮಾಡುತ್ತಲೇ ಇದ್ದಾಳೆ. ಆಫೀಸಿಗೆ ಹೋಗುವ ರಸ್ತೆಯಲ್ಲೇ ಬಿಗ್‌ಬಜಾರ್ ಇದೆ. ಒಂದು ನಿಮಿಷ ಇಳಿದು, ಇವತ್ತು ಎಷ್ಟು ಹೊತ್ತಾದರೂ ಒಂದು ತವಾ ತೆಗೆದುಕೊಳ್ಳಲೇ ಬೇಕು ಎಂದು ಆ ಗೃಹಿಣಿ ನಿರ್ಧರಿಸುತ್ತಾಳೆ. ಗಡಿಯಾರ ನೋಡಿದರೆ ಇನ್ನು ಅರ್ಧ ಗಂಟೆಯಲ್ಲಿ ತಾನು ಆಫೀಸಿನಲ್ಲಿರಬೇಕು. ಇಲ್ಲದಿದ್ದರೆ ಮ್ಯಾನೇಜರ್‌ನ “ಯಾಕ್ರೀ ಲೇಟು?’ ಎಂಬ ಸಹಸ್ರ ನಾಮಾರ್ಚನೆ ಕೇಳಿಸಿಕೊಳ್ಳಬೇಕು. “ಇವತ್ತಿನ ದಿನದಲ್ಲಿ, ಮಕ್ಕಳ ಶಾಲೆ, ಗಂಡನ ಆಫೀಸು, ಕೈಕೊಡುವ ಅಡುಗೆ ತಿಂಡಿಗಳು ಮತ್ತು ಗಿಜಿಗುಡುವ ಟ್ರಾಫಿಕ್ಕಿನಲ್ಲಿ ಲೇಟಾಗಿ ಬರದೆ ಬೇಗ ಬರೋಕಾಗುತ್ತಾ? ಲೇಟ್ ಆಗೇ ಆಗುತ್ತೆ. ಏನೀಗ?’ ಅಂತ ಅವರ ಮುಖಕ್ಕೆ ಅನ್ನೋಣ ಅನ್ನಿಸುತ್ತೆ!
ಬೆಳಗಿನ ಹೊತ್ತು “ದ ಕಸ್ಟಮರ್ ಯು ಆರ್ ಟ್ರೈಯಿಂಗ್ ಟು ಕಾಲ್ ಈಸ್ ಬಿಝಿ’ ಎನ್ನುವ ಮಾತು ಅಕ್ಷರಶ: ಹೊಂದಿಕೆಯಾಗುವುದು ಗೃಹಿಣಿ ಎನ್ನುವ ಜೀವಿಗೆ. ಅದರಲ್ಲೂ ಆಕೆ ವರ್ಕಿಂಗ್ ವುಮನ್ ಆಗಿದ್ದರಂತೂ ಮುಗಿದೇಹೋಯಿತು. ಸಾûಾತ್ ಭಗವಾನ್ ವಿಷ್ಣು ಬಂದು ಮನೆಬಾಗಿಲು ತಟ್ಟಿದರೂ ಆಕೆ “ಒಂಭತ್ತು ಗಂಟೆಗೆ ಒಂದು ಕಾಲ್ ಮಾಡಿºಡಿ. ಆಫೀಸ್ ಬಸ್‌ನಲ್ಲಿರ್ತೀನಿ. ಕಾಲ್ ಪಿಕ್ ಮಾಡ್ತೀನಿ’ ಅನ್ನುತ್ತಾಳೆ. ದೇವರಿಗೇ ಅಪಾಯಿಂಟ್ಮೆಂಟ್ ಕೊಡುವ ಲೆವೆಲ್ಲಿಗೆ ಬೆಳೆದ ಮಹಿಳೆಯ ಬಗ್ಗೆ ದೇವರೂ ಸಹ ಗರ್ವ ಮಿಶ್ರಿತ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ರಾತ್ರಿಯೇ ಬೆಳಗಿನ ತಿಂಡಿಗೆ ಯೋಚಿಸಿ ಮಲಗಿದ್ದರೆ ಹೆಂಡತಿ/ ಮಮ್ಮಿ/ ವರ್ಕಿಂಗ್ ಮಮ್ಮಿ ಬಚಾವು. ಇಲ್ಲದಿದ್ದರೆ ಬೆಳಿಗ್ಗೆ ಎಲ್ಲರೂ ಹೊರಡುವ ಟೆನÒನ್ನಿನಲ್ಲಿ ಯಾವ ತಿಂಡಿಯೂ ತಟ್ಟೆಯ ಭಾಗ್ಯ ಕಾಣುವುದಿಲ್ಲ.
ಇದು ಮಾಯಾಬಜಾರು
ಎಷ್ಟೋ ಸಾರಿ ಬೆಳಗಿನ ತಿಂಡಿ ಆಪ್ಷನಲ್ ಬಿಸಿ ದೋಸೆ ಹಾಕಿಕೊಡೋಣ ಅಂದರೆ ದೋಸೆ, ತವಾ ಬಿಟ್ಟು ಏಳುವುದಿಲ್ಲ ಅನ್ನುತ್ತದೆ. ನಾನ್ ಸ್ಟಿಕ್ ಪ್ಯಾನ್ ಒಂದು ಲೇಯರ್ ಕೋಟಿಂಗ್ ಅಲ್ಲಲ್ಲಿ ಕಿತ್ತಂತಾಗಿದೆ. ಹೊಸ ತವಾ ಕೊಳ್ಳೋಣ ಅಂತ ಆರು ತಿಂಗಳಿಂದ ಪ್ಲಾನು ಮಾಡುತ್ತಲೇ ಇ¨ªಾಳೆ. ಎಲ್ಲ ಕೆಲಸಗಳ ನಡುವೆ ಅದು ಮರೆತುಹೋಗುತ್ತಲೇ ಇದೆ. ಹೀಗೆ ದೋಸೆ ಅಂಟಿಕೊಂಡಾಗಲೇ ಪೇಚಾಡುವುದು. ಆಫೀಸಿಗೆ ಹೋಗುವ ರಸ್ತೆಯÇÉೆ ಬಿಗ್‌ಬಜಾರ್ ಇದೆ. ಒಂದು ನಿಮಿಷ ಇಳಿದು ಇವತ್ತು ಎಷ್ಟು ಹೊತ್ತಾದರೂ ಒಂದು ತವಾ ತೆಗೆದುಕೊಳ್ಳಲೇ ಬೇಕು ಎಂದು ಆ ಗೃಹಿಣಿ ನಿರ್ಧರಿಸುತ್ತಾಳೆ.
ಗಡಿಯಾರ ನೋಡಿದರೆ ಇನ್ನು ಅರ್ಧ ಗಂಟೆಯಲ್ಲಿ ತಾನು ಆಫೀಸಿನಲ್ಲಿರಬೇಕು. ಇಲ್ಲದಿದ್ದರೆ ಮ್ಯಾನೇಜರ್ ಕಡೆಯಿಂದ ಸಿಡಿಮಿಡಿಯ ಮಾತುಗಳು, ಜೊತೆಗೆ, “ಯಾಕ್ರೀ ಲೇಟು?’ ಎಂಬ ಸಹಸ್ರ ನಾಮಾರ್ಚನೆಯನ್ನೂ ಕೇಳಿಸಿಕೊಳ್ಳಬೇಕು. ಇವತ್ತಿನ ದಿನದಲ್ಲಿ, ಈ ಮಕ್ಕಳ ಶಾಲೆ, ಗಂಡನ ಆಫೀಸು, ಕೈಕೊಡುವ ಅಡುಗೆ ತಿಂಡಿಗಳು ಮತ್ತು ಗಿಜಿಗುಡುವ ಟ್ರಾಫಿಕ್ಕಿನಲ್ಲಿ ಲೇಟಾಗಿ ಬರದೆ ಬೇಗ ಬರೋಕಾಗುತ್ತಾ? ಲೇಟ… ಆಗೇ ಆಗುತ್ತೆ. ಏನೀಗ ಅನ್ನೋಣ ಅನ್ನಿಸುತ್ತದೆ. ಆದರೆ, ಮನಸಿಗೆ ಬಂದ ಮಾತು ತುಟಿಯಿಂದಾಚೆ ಬರುವುದಿಲ್ಲ.
ಬೆಳಗ್ಗಿನ ತಿಂಡಿ ಪುರಾಣ
ಇದೇ ಹಿಟ್ಟಿಗೆ ಇಡ್ಲಿ ಹಾಕಿದರೆ ಬರುತ್ತೇನೋ ಅಂತ ಇಡ್ಲಿ ಮಾಡಲು ಪಾತ್ರೆ ಇಡುತ್ತಾಳೆ. ಆ ಇಡ್ಲಿಯೋ, ಎಸೆದರೆ ವಾಪಾಸು ಬೌನ್ಸ್ ಆಗುವಷ್ಟು ಗಟ್ಟಿಯಾಗಿರುತ್ತದೆ. ಇಡ್ಲಿ ಜೊತೆ ಒಳ್ಳೆಯ ಕಾಂಬಿನೇಷನ್ ಅಂತ ಆಸೆಪಟ್ಟು ಮಾಡಿದ ಉದ್ದಿನವಡೆಗೆ ಮಧ್ಯೆ ಹೇಗೆ ತೂತು ಮಾಡಬೇಕು ಎಂಬುದು ಮನೆಯೊಡತಿಗೆ ಗೊತ್ತಾಗುತ್ತಿಲ್ಲ. ಇವತ್ತೆÇÉೋ ಎಡ ಮಗ್ಗುಲಿಗೆ ಎದ್ದಿದ್ದೀನಿ ಅಂತ ತಲೆ ಚಚ್ಚಿಕೊಳ್ಳುತ್ತಾ ಯೂಟ್ಯೂಬ್ನಲ್ಲಿ ಹಲವಾರು ಅಡುಗೆ ರೆಸಿಪಿ ಹುಡುಕುತ್ತಾಳೆ. “ಆಫೀಸ್‌ಗೆ ಹೋಗುವ ಮಹಿಳೆಯರಿಗೆ ದಿಢೀರ್ ತಿಂಡಿಗಳು’ ಅಂತ ಟೈಪಿಸುತ್ತಾಳೆ. ರೆಸಿಪಿಯಲ್ಲಿ ರುಚಿಯಾಗಿ ಕಲರ್ ಫುಲ್ ಆಗಿ ಕಾಣುವ ಹುಣಸೆಹಣ್ಣು ಚಿತ್ರಾನ್ನದ ಚಿತ್ರಗಳು ಕಣ್ಣು ಕುಕ್ಕುತ್ತವೆ. ಮಾಡಿ ಬಿಡೋಣ ಆ ಕಡೆ. ಬೇಗ ಆಗುತ್ತದೆ ಅಂತ ಕಲ್ಲು ಇಡ್ಲಿ, ತೂತಿಲ್ಲದ ಶೇಪ್ ಲೆಸ್ ಉದ್ದಿನವಡೆಯನ್ನು ಸೈಡಿಗೆ ಹಾಕಿ ಅನ್ನಕ್ಕಿಟ್ಟಾಗ ನೆನಪಾಗುತ್ತದೆ. ಓಹ್ ಹುಣಸೆಹಣ್ಣು ಖಾಲಿಯಾಗಿದೆ. ಆಫೀಸಿನಿಂದ ಬರುವಾಗ ತರಬೇಕು ಅಂತ ನೆನಪಿಸಿಕೊಂಡವಳು ಮತ್ತೆ ಮರೆತೆ, ಛೇ.. ಅಂತ ಒಮ್ಮೆ ತಲೆಕುಟ್ಟಿಕೊಳ್ಳುತ್ತಾಳೆ.
“ತಿಂಡಿ ಆಯ್ತಾ?’ ಗಂಡ ಅವಸರದಲ್ಲಿ ಮೊಬೈಲು, ಲ್ಯಾಪ್‌ಟಾಪ್ ಎತ್ತಿಕೊಳ್ಳುತ್ತಾ ಕೇಳುತ್ತಾನೆ. “ರಾತ್ರಿಯ ಸಾರು, ಬಿಸಿ ಅನ್ನ ಇದೆ. ಪ್ಲೀಸ್ ಊಟ ಮಾಡ್ತೀರಾ?’ ತಪ್ಪಿತಸ್ಥೆಯಂತೆ ಕೇಳುತ್ತಾಳೆ. “ಬೆಳಬೆಳಗ್ಗೆ ಅನ್ನವಾ?’ ಗಂಡ ಮುಖ ಕಿವುಚುತ್ತಾನೆ. ಅವನ ಅಮ್ಮ ಒಂದು ತಲೆಮಾರಿನ ಹಿಂದಿನವಳು. ಎಂದೂ ಕೆಲಸಕ್ಕೆ ಹೋಗದವಳು. ಮನೆಯÇÉೇ ಹುರಿದು, ಕುಟ್ಟಿ ಪುಡಿ ಮಾಡಿ ಬಿಸಿಬೇಳೆ ಬಾತು, ವಾಂಗೀಬಾತು, ಮಾವಿನಕಾಯಿ ಚಿತ್ರಾನ್ನ ಅಂತ ರುಚಿಯಾಗಿ, ಬಿಸಿಯಾಗಿ ಮಗನಿಗೆ ತಿನ್ನಿಸಿ ಬೆಳೆಸಿದವಳು. ಆಕೆ ಮಲಗಿದಲ್ಲಿಂದಲೇ “ನನ್ನ ಮಗನಿಗೆ ಅನ್ನ ಸಾರು ತಿನ್ನು ಅಂತೀಯಲ್ಲಮ್ಮ ಬೆಳಬೆಳಗ್ಗೆ?’ ಅಂತ ರಾಗ ಹಾಡುತ್ತಾಳೆ. “ನಿಮಗೇನು ಗೊತ್ತು ನನ್ನ ಕಷ್ಟ?’ ಸೊಸೆ, ಗೊಣಗಿಕೊಳ್ಳುತ್ತಾಳೆ.
ಆಪದಾºಂಧವ ಉಪ್ಪಿಟ್ಟು!
ಅದೇ ಕ್ಷಣಕ್ಕೆ ಉಪ್ಪಿಟ್ಟು ಆಪದಾºಂಧವನಂತೆ ನೆನಪಾಗುತ್ತದೆ. ಉಪ್ಪಿಟ್ಟಿನ ಸ್ಪೆಷಾಲಿಟಿ ಎಂದರೆ ಎಲ್ಲಾ ಹಾಕಿ ಮಾಡಬಹುದು. ಅಥವಾ ಏನೂ ಹಾಕದಿದ್ದರೂ ಅರಳಿಕೊಳ್ಳುತ್ತದೆ. “ರೀ, ಎರಡು ನಿಮಿಷ ಇರಿ. ಉಪ್ಪಿಟ್ಟು ಮಾಡಿಬಿಡ್ತೀನಿ’ ಅನ್ನುತ್ತಾ ಈರುಳ್ಳಿ, ಮೆಣಸಿನಕಾಯಿ, ರವೆ ಮಾಡಿಕೊಳ್ಳುತ್ತಾಳೆ. ಹಾಗೂ ಹೀಗೂ ಉಪ್ಪಿಟ್ಟು ಸೋದರಮಾವನ ಥರ ಸಹಾಯಕ್ಕೆ ಒದಗುತ್ತದೆ. ಇಷ್ಟು ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಈರುಳ್ಳಿ, ಟಮೋಟೋ, ನಾಲ್ಕು ಬೀನ್ಸು, ಕ್ಯಾರೆಟ್ಟು, ಕೊತ್ತುಂಬರಿ, ಕಾಯಿತುರಿ ಹಾಕಿ ಬಿಸಿ ಉಪ್ಪಿಟ್ಟು ಮಾಡಿ ಮುಂದಿಟ್ಟರೆ ಹೋಳಿಗೆಯನ್ನು ಪಕ್ಕಕ್ಕಿಡಬೇಕು. ಎಷ್ಟೋ ಸಾರಿ ಮನೆಯಲ್ಲಿ ಅಷ್ಟೂ ಐಟಮ್ಸ… ಇರುವುದೇ ಇಲ್ಲ. ಹಾಗಾಗಿ ರುಚಿ ಕೆಡುತ್ತದೆ.
ಗಂಡ ತಿಂದಂತೆ ಮಾಡಿ ಇನ್ನರ್ಧ ತಟ್ಟೆಯಲ್ಲೇ ಉಳಿಸಿ ಹೊರಡುತ್ತಾನೆ. ಇರಲಿ ಅಂತ ಟೊಮೊಟೊ, ಸೌತೆಕಾಯಿ ಹಾಕಿ ಸ್ಯಾಂಡ್‌ವಿಚ್ ಮಾಡಿಕೊಡುತ್ತಾಳೆ. ಮಕ್ಕಳು ಅದೇ ಉಪ್ಪಿಟ್ಟು ತಿಂದು, ಹಾಲು ಕುಡಿದು ಸ್ಕೂಲಿಗೆ ಹೊರಡುತ್ತವೆ. ಮಕ್ಕಳ ಸ್ಕೂಲ್ ವ್ಯಾನು ಹತ್ತಿಸಿ ಹಾಗೆಯೇ ಆಫೀಸ್ ಕ್ಯಾಬ್ ಹಿಡಿದು ಗಂಡನೂ ಹೊರಡುತ್ತಾನೆ. ಇನ್ನು ಕಾಲು ಗಂಟೆಯಲ್ಲಿ ಅವಳೂ ಹೊರಡಬೇಕು. ಇಲ್ಲದಿದ್ದರೆ ಆಫೀಸಿಗೆ ಯಥಾಪ್ರಕಾರ ಲೇಟಾಗುತ್ತದೆ. ಎಲ್ಲವನ್ನೂ ಹಾಗೇಬಿಟ್ಟು ಸ್ನಾನ ಮಾಡಿ ರೆಡಿಯಾಗಿ ತುಟಿಗೆ ಲಿಪ್ ಬಾಮ್, ಕಣ್ಣಿಗೆ ಕಾಜಲ್ ಹಾಕಿ ಕೂದಲಿಗೆ ಪುಟ್ಟ ಕ್ಲಿಪ್ ಹಾಕಿ ಬಸ್ಸಿಗೆ ಕಾಯುತ್ತಾಳೆ. ಇಲ್ಲಿ ಗೆಲುವಿಗಿಂತ ದಿನದಿನ ದೋಣಿ ತೇಲಿಸುತ್ತಿರುವುದೇ ಬಹುಮುಖ್ಯ.
ಅವಳ ಸಮಯ ಈಗ ಶುರು!
ಗಂಡ- ಮಕ್ಕಳನ್ನು ಆಫೀಸು, ಸ್ಕೂಲಿಗೆ ರೆಡಿ ಮಾಡಿ ಕಳಿಸಿದ ಹೆಮ್ಮೆಯಲ್ಲಿ ಬಸ್ಸು ಹತ್ತುತ್ತಾಳೆ. “ಸಾರಿ, ತಿಂಡಿ ಸರಿ ಆಗಲಿಲ್ಲ. ಆಫೀಸ್‌ನಲ್ಲಿ ಏನಾದ್ರೂ ತಿನ್ನಿ. ಈ ಸಂಡೆ ಪಹಾಡಿ ಚಿಕನ್ ಮಾಡ್ತೀನಿ…’ ಬಸ್ಸಲ್ಲಿ ಕೂತು ಗಂಡನಿಗೆ ಮೆಸೇಜ್ ಮಾಡುತ್ತಾಳೆ. ಗೂಗಲ್ ನೋಡಿ ಚಿಕನ್ ರೆಸಿಪಿ ಸೇವ್ ಮಾಡಿಟ್ಟುಕೊಳ್ಳುತ್ತಾಳೆ. ಮಕ್ಕಳಿಗೆ ಇವತ್ತು ರಾತ್ರಿ ಮಶ್ರೂಮ್ ಸೂಪ್ ಮಾಡಿಕೊಡಬೇಕು. ಅವತ್ತು ತಂದ ಮಶ್‌ರೂಮ್ ಫ್ರಿಡಿjನಲ್ಲಿ ಹಾಗೇ ಕೊಳೆಯುತ್ತಾ ಬಿದ್ದಿದೆ. ಅತ್ತೆಯ ಬಿಪಿ ಮಾತ್ರೆ ಖಾಲಿ ಆಗಿದೆ. ಮನೆ ಓನರ್‌ಗೆ ಬಾಡಿಗೆ ಹಣವನ್ನು ಟ್ರಾನ್ಸ್‌ಫರ್ ಮಾಡಬೇಕು. ಮನೆಯಲ್ಲಿ ಹುಣಸೆಹಣ್ಣು, ಬೆಳ್ಳುಳ್ಳಿ ಖಾಲಿಯಾಗಿದೆ, ತರಬೇಕು. ಹೊಸ ತವಾ ಕೊಳ್ಳಬೇಕು.
ಫ್ರಿಜ್ಜಿನಲ್ಲಿ ಬೀನ್ಸು, ಕ್ಯಾರೆಟ್ಟು ಎರಡು ವಾರದಿಂದ ಬಿದ್ದಿವೆ. ನಾಳೆ ಪಲಾವ್ ಮಾಡಿ ಖಾಲಿ ಮಾಡಬೇಕು… ಅವಳ ಲೆಕ್ಕಾಚಾರಗಳು ಬಸ್ಸಿನ ವೇಗವನ್ನು ಮೀರಿ ಬೆಳೆಯುತ್ತಿರುತ್ತವೆ. ಆಗಲೇ ಫೋಟೋಗಳಲ್ಲಿ ಪಾರ್ವತಿ, ಲಕ್ಷ್ಮೀ ಮುಂತಾದ ದೇವತೆಗಳಿಗೆ ಯಾಕೆ ಆರು ಕೈಗಳು ಇರುತ್ತವೆ ಎಂಬುದಕ್ಕೆ ಉತ್ತರ ಹೊಳೆದಂತಾಗುತ್ತದೆ. ವುಮೆನ್ ಆರ್ ಗುಡ್ ಮ್ಯಾನೇಜರ್. ಕೆಲವೊಮ್ಮೆ ಗುಡ್ ಅಲ್ಲದಿದ್ದರೂ ಮಾನೇಜರ್ ಅಂತೂ ಹೌದು. ಪ್ರತಿಕ್ಷಣ ಪ್ರತಿದಿನ ಎಲ್ಲವನ್ನು ನಿರ್ವಹಿಸುತ್ತಲೇ ಇರುತ್ತಾರೆ. ಹಾಗಾಗಿಯೇ ಸಂಸಾರನೌಕೆಗಳು ತೇಲುತ್ತಲಿವೆ. ಅಂದುಕೊಂಡು ತನ್ನಷ್ಟಕ್ಕೆ ತಾನೇ ನಗುತ್ತಾಳೆ.
ಬಸ್ಸಿನಲ್ಲಿ ಪಕ್ಕದವಳು ಮಾತಿಗೆಳೆಯುತ್ತಾ “ಏನು ತಿಂಡಿ? ಅನ್ನುತ್ತಾಳೆ. ತಟ್ಟೆ, ಲೋಟ, ಹಾಲಿನ ಪಾತ್ರೆ, ತರಕಾರಿ ಸಿಪ್ಪೆಗಳಿಂದ ತುಂಬಿ ಮಿನಿ ತಿಪ್ಪೆಯಂತೆ ಕಾಣುತ್ತಿರುವ ತನ್ನ ಅಡುಗೆಮನೆ ಕಟ್ಟೆಯನ್ನು ನೆನೆಯುತ್ತಲೆ ಈಕೆ ಹೇಳಿಬಿಡುತ್ತಾಳೆ: “ಇವತ್ತು ನಮ್ಮ ಮನೆಯಲ್ಲಿ ಮೂರು ತಿಂಡಿ.. ದೋಸೆ, ಇಡ್ಲಿ ಮತ್ತೆ ಉಪ್ಪಿಟ್ಟು!
“ವ್ಹಾವ್… ಮೂರು ಥರ ತಿಂಡಿ ಮಾಡಿದ್ರಾ? ಗ್ರೇಟ್’
“ಮಾಡ್ಬೇಕು. ಮನೆಯಲ್ಲಿ ಎಲ್ಲರೂ ತಿನ್ನಬೇಕಲ್ಲ… ಹಾಗಾಗಿ…’ ಇಷ್ಟು ಹೇಳಿ ಆತ್ಮವಿಶ್ವಾಸ ಮತ್ತು ಮುಗುಳ್ನಗೆ ಹೊತ್ತು ಆಫೀಸಿಗೆ ಕಾಲಿಡುತ್ತಾಳೆ.
ಅದು ದಿನದ ಮತ್ತೂಂದು ಪರ್ವ.
– ಸುನೀತಾ ಹೆಚ್.ಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.