ಅಷ್ಟದಿಕ್ಕುಗಳಿಗೆ ಕಾಯಕಲ್ಪ ಹೇಗೆ?
Team Udayavani, Nov 27, 2017, 12:48 PM IST
ಪದೇ ಪದೇ ಜನರ ಬೇಸರ. ತಳಮಳ ಇತ್ಯಾದಿಗಳು ಸದಾ ಜೀವಂತ. ಮನೆಯ ವಾಸ್ತು. ವಿಚಾರಗಳು ಸೂಕ್ತವಾಗಿ ಇರದಿರುವುದರಿಂದಲೇ ( ತೊಂದರೆಗಳು ಎದ್ದೇಳುತ್ತಿವೆ ಎಂಬುದರಿಂದಾಗಿ ಜನರು ಚಿಂತಿತರಾಗಿಯೇ ಇರುತ್ತಾರೆ)ಕಷ್ಟ ಬಂದಿದೆ ಎಂಬುದಾಗಿ ಜನ ಗ್ರಹಿಸಿರುತ್ತಾರೆ. ವಾಸ್ತು ವಿಚಾರದಿಂದ ತೊಂದರೆ ಬರುವುದು ಸತ್ಯ. ಆದರೆ ಅವಸರದ ನಿರ್ಣಯಗಳು ತಪ್ಪು. ಮನೆಯ ದೋಷಗಳಿಂದಲೂ ತೊಂದರೆಗಳು ಎದುರಾಗಬಹುದು. ಆದರೆ ಜಾತಕದ ಗ್ರಹಗಳು ಯಾವ ಪ್ರಾರಬ್ಧಗಳನ್ನು ನಿರ್ಮಿಸಿವೆ ಎಂಬುದನ್ನೂ ಗ್ರಹಿಸಬೇಕು. ಸೂಕ್ತ ಜ್ಯೋತಿಷಿಯು ನಾಮ ನಕ್ಷತ್ರ, ಕಟ್ಟಡ ಅಥವಾ ಸೈಟು, ಮನೆ, ಸೌಧಗಳಿಗೆ ಯಜಮಾನತ್ವ ಪಡೆದ, ಸದ್ಯ ನಡೆಯತ್ತಿರುವ ದಶಾ ಭುಕ್ತಿಗಳನ್ನು ಚೆನ್ನಾಗಿ ವಿಶ್ಲೇಷಿಸಿ ಗುರುತಿಸಬಲ್ಲ. ಗ್ರಹಗಳು ವಿಷಮ ಸ್ಥಿತಿಯಲ್ಲಿರುವಾಗ ವಾಸ್ತು ದೋಷವನ್ನಷ್ಟೇ ಪರಿಶೀಲಿಸಿದರೆ ಚೆನ್ನಾಗಿರದು. ದಶಾಕಾಲ, ಭುಕ್ತಿ ಕಾಲಗಳು ಚೆನ್ನಾಗಿದ್ದರೆ ವಾಸ್ತು ದೋಷಗಳನ್ನು ಸುಲಭವಾಗಿ ಪರಿಹರಿಸಬಹುದು. ನವಗ್ರಹ ರಜತ ಧಾತು ಎಂಬು ಪುಟ್ಟ ನಿಕ್ಷೇಪವನ್ನು ಸ್ವರ ಶುದ್ಧಿಯಿಂದ ( ಮನೆಯ ಯಜಮಾನ, ಇಲ್ಲಾ ಯಜಮಾನನ ಪತ್ನಿ, ತಪ್ಪಿದರೆ ಮಕ್ಕಳು, ಓದಿದರೆ ಅದ್ಬುತವಾದುದನ್ನು ಸೃಷ್ಟಿಸಬಹುದು. ಇದನ್ನು ಸೂಕ್ತ ಗುರು ಮುಖೇನವಾಗಿ ಓದಲು (ಗುರು ನೀಡುವ ದೀಕ್ಷೆಯ ವಿಚಾರ ಕೆಲವು ಸಾಲುಗಳ ಮೂಲ ಬೀಜಾಕ್ಷರ ಮಂತ್ರವಿರುತ್ತದೆ) ನಿಯುಕ್ತಗೊಂಡರೆ ಆದಂತೂ ಅದ್ಬುತ ಪರಿಣಾಮ ನೀಡುವಲ್ಲಿ ಹಿಂದೆ ಬೀಳದು.
ನವಗ್ರಹ ರಜತ ಧಾತು ಬೆಳ್ಳಿಯಿಂದಲೂ ನಿರ್ಮಿಸಿಕೊಳ್ಳಬಹುದು
ಮೂಲ ಮಂತ್ರಪಠಣ ಕಠಿಣ ಎಂದೆನಿಸಿದರೆ ಸಿದ್ಧಿ ಪೂರಕವಾದ ಬೆಳ್ಳಿ ವೃದ್ಧಿ ( ರಜತ ಸಂವರ್ಧಿನಿ) ಘಟಕವನ್ನು ಮನೆಯಲ್ಲಿ ಅಂತರ್ಗತ ಗೊಳಿಸಿಕೊಳ್ಳುವುದರಿಂದಲೂ ಸಂಪನ್ನಗೊಳಿಸಿಕೊಳ್ಳಬಹುದು. ಸೂಕ್ತವಾದ ದಿಕ್ಕಿನ ಶಕ್ತಿ ಅಲೆಯನ್ನು ಮನೆಯಲ್ಲಿ ಗ್ರಹಿಸಿ, ಶಕ್ತಿ ಅಲೆ ಸಂಚಯವಿರುವ ಕಡೆಯೇ ಸೂಕ್ತ ದಿನ (ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳನ್ನು ಮತುವರ್ಜಿಯಿಂದ ಗ್ರಹಿಸಿ ನಿರ್ಧರಿಸಬೇಕು) ಅಂತರ್ಗತಗೊಳಿಸಿಕೊಳ್ಳಬಹುದು. ಕೆಲವು ಸಿದ್ಧಿ ಶಕ್ತಿಯ ಚಲನಶೀಲತೆಯು, ಮನೆಯು ಕುಸಿಯುವ ಶಕ್ತಿಯ ದೌರ್ಬಲ್ಯದಿಂದ ಏಳ್ಗೆ ಹೊಂದದೇ ಇರುವಲ್ಲಿಂದ ಒಳಿತಿನ ದಿನಗಳತ್ತ ಮುಮ್ಮುಖಗೊಳ್ಳುವಂತೆ ದಾರಿಯನ್ನು ನಿರ್ಮಿಸಿ ಕೊಡುತ್ತದೆ.
ಅಷ್ಟದಿಕ್ಕುಗಳಿಗೆ ಕಾಯಕಲ್ಪ
ಸುದೈವಕ್ಕೆ ಮನೆಯ ಎಲ್ಲಾ ದಿಕ್ಕುಗಳೂ ಘಾತಕ ಶಕ್ತಿ ಪಡೆದಿರಲಾರದು. ಪಡೆದಿದ್ದರೂ ಪರಿಹಾರೋಪಾಯ ಇದ್ದೇ ಇರುತ್ತದೆ. ಚತುರ್ವಿಧನಾದ ಗಣೇಶನ ಅಭಯ ಹಸ್ತ ಸಿಗಬೇಕು. ವಿರಾಗಿಗಳು, ಸಂಸಾರ ಬಂಧನ ವಿಮುಕ್ತರೂ ಆದ ಆತ್ರಯ ಸಿದ್ಧಿ ಮಹೋದಯರು ಪರಿಣಾಮಕಾರಿಯಾದ ಸಾತ್ವಿಕ ಶಕ್ತಿ ಪಡೆದಿರುತ್ತಾರೆ. ಈ ಆಧುನಿಕ ಯುಗದಲ್ಲೂ ಶಬ್ದ ನಾರಾಯಣಿ, ಸಿಂಧೂರ ಗೌರಿ, ಕ್ಷಿಪ್ರ ಧಾರಾ, ವೇದವಾ ಶಕ್ತಿ, ರುದ್ರನೀಲ, ವಜ್ರನೇತ್ರೆ, ನವಪಲ್ಲಿ, ಚೈತ್ರ ಚಿತ್ತೆಯರನ್ನು ಆರಾಧಿಸುವ ಅವಧೂತರು ಸಂಕಲ್ಪ ಶಕ್ತಿಯಿಂದಲೇ ಸವಕಳಿಹೊಂದಿದ ಶಕ್ತಿ ಮೂಲಗಳನ್ನು ಮನೆಯ ವಾಸ್ತು ವಾಹಿನಿಗೆ ತುಂಬ ಬಲ್ಲ ಶಕ್ತಿ ಹೊಂದಿದ್ದಾರೆ. ಆದರೆ ಉಪಾಸಕರನ್ನು, ಸಾತ್ವಿಕತೆಯೊಂದಿಗೆ ಆರಾಧನೆಯ ಮೂಲಕ ದೈವೀ ಅನುಗ್ರಹವನ್ನು ಪಡೆದವರು, ಅತ್ರಯ ತಂತ್ರ ಪರಂಪರೆಯ ವಿರಾಗಿಗಳನ್ನು ಅರಸಬೇಕು. ಹಿಮಾಲಯದ ತಪ್ಪಲುಗಳು, ಕಾಶಿ, ಹೃಷಿಕೇಶ, ಗಯಾ, ಮಥುರಾ, ಗಂಡಕಿ ನದಿ ತೀರಗಳಲ್ಲಿ ಅವಧೂತ ಪರಂಪರೆಯ ಜನ ಎಲೆ ಮರೆಯ ಕಾಯಿಗಳಂತೆ ಇದ್ದಾರೆ. ಸಾಲಸೋಲ ಮಾಡಿ ಸುಸ್ತಾದ ಉದ್ಯಮಿಗಳು, ರಾಜಕಾರಣಿಗಳು, ಸ್ವಯಂ ಉದ್ಯೋಶೀಲರು, ಆಯಾತ, ನಿರ್ಯಾತ ವಹಿವಾಟಿನ ಸಂಕೀರ್ಣಗಳಲ್ಲೂ ವಾಸ್ತು ದೋಷ ಜಡಗಟ್ಟಿರುತ್ತದೆ. ಇವುಗಳ ನಿವಾರಣೆಗಳನ್ನೂ ಸೂಕ್ತವಾದ ಅವಧೂತ ಶಕ್ತಿ ಯೋಗ ಸಂಪನ್ನರು ನೆರವೇರಿಸಿಕೊಡಬಲ್ಲರು.
ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.