ಆಧಾರ್ ಎಷ್ಟು ಸುರಕ್ಷಿತ?
ಆರ್ಡರ್ ಆರ್ಡರ್ ಆಧಾರ್!
Team Udayavani, Aug 5, 2019, 5:00 AM IST
ವಿಳಾಸ ಬದಲಾವಣೆ ಮಾಡಿಸಬೇಕೆಂದು ಬ್ಯಾಂಕಿಗೆ ಹೋದರೆ, ನಿಮ್ಮ ಆಧಾರ್ ಕಾರ್ಡ್‌ನ ದಾಖಲೆ ಕೊಡಿ ಅನ್ನುತ್ತಾರೆ. ಆಧಾರ್ ಕಾರ್ಡ್‌ನಲ್ಲಿ ನಮ್ಮ ಸಮಗ್ರ ವಿವರವೂ ಇರುತ್ತದೆ. ಅ ದೇನಾದರೂ ಲೀಕ್ ಆಗಿ, ಕಡೆಗೊಮ್ಮೆ ದುರುಪಯೋಗ ಆಗಿಬಿಟ್ಟರೆ ಗತಿಯೇನು ಎಂಬುದು ಹಲವರ ಆತಂಕ…
ಇತ್ತೀಚೆಗೆ, ಪರಿಚಯದವರೊಬ್ಬರು ನನ್ನಲ್ಲಿ ಒಂದು ವಿಚಾರ ಪ್ರಸ್ತಾಪಿಸಿದರು. ಅವರ ಮಗುವಿನ ಆಧಾರ್ ಕಾರ್ಡ್ ಮಾಡಿಸಿದ್ದರು. ಮಗುವಿಗೆ ಬ್ಯಾಂಕ್‌ನಲ್ಲಿ ಖಾತೆಯೊಂದನ್ನು ಮಾಡಿಸಲಾಗಿದೆ. ಅಲ್ಲಿ ನಮೂದಾಗಿದ್ದ ಹಳೆಯ ವಿಳಾಸ ಬದಲಾಯಿಸಬೇಕಾಗಿದೆ. ಅದಕ್ಕಾಗಿ ಬ್ಯಾಂಕಿನಲ್ಲಿ ಆಧಾರ್ ಪತ್ರದ ದಾಖಲೆ ಕೊಡುವಂತೆ ಕೇಳಿ¨ªಾರೆ. ಆದರೆ, ಆಧಾರ್ ಮಾಹಿತಿ ಬ್ಯಾಂಕಿನಲ್ಲಿ ಎಷ್ಟು ಸುರಕ್ಷಿತ ಎಂಬುದು ಅವರ ಪ್ರಶ್ನೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಮಾಹಿತಿಯ ಸುರಕ್ಷತೆ ಕುರಿತು ಹಲವರಿಗೆ ಅನುಮಾನವಿದೆ.
ವಿಶಿಷ್ಟ ಗುರುತಿನ ಸಂಖ್ಯೆ (ಆಧಾರ್) ಎಂಬುದು ಭಾರತ ಸರ್ಕಾರದ ವತಿಯಿಂದ ಜಾರಿಗೊಳಿಸಲ್ಪಟ್ಟ ಒಂದು ಉಪಕ್ರಮವಾಗಿದೆ. ಭಾರತದ ಎಲ್ಲಾ ನಾಗರಿಕರು ಮತ್ತು ನಿವಾಸಿಗಳಿಗೆ ಒಂದು ಕೇಂದ್ರೀಕೃತ ಗುರುತಿಸುವಿಕೆಯ ವ್ಯವಸ್ಥೆಯನ್ನು ರೂಪಿಸುವ ಉದ್ದೇಶ ಇದರ ಹಿಂದಿದೆ. ಆಧಾರ್ ಕಾಯ್ದೆ 2016ರ ಅಡಿಯಲ್ಲಿ, ಆಧಾರ್ ಸಂಖ್ಯೆಯನ್ನು ಗುರುತಿನ ಮಾಹಿತಿ ಎಂದು ಗುರುತಿಸಲಾಗಿದೆ ಮತ್ತು ಇದನ್ನು ಬಳಸಿ ಭಾರತದಲ್ಲಿ ವಾಸಿಸುವವರನ್ನು ಪ್ರಾಂತ್ಯಾವಾರು ರೀತಿಯಲ್ಲಿ ಗುರುತಿಸಬಹುದಾಗಿದೆ. ಹಣಕಾಸಿನ ವಹಿವಾಟನ್ನು ಒಳಗೊಂಡ ಸೇವೆ ಸೇರಿ, ವಿವಿಧ ಸೇವೆಗಳನ್ನು ಪಡೆಯಲು ಇದು ಅನುವು ಮಾಡಿಕೊಡುತ್ತದೆ.
ದುರುಪಯೋಗ ತಡೆಗಟ್ಟುವುದೇ ಮೂಲಮಂತ್ರ
ಆಧಾರ್ ಸಂಖ್ಯೆಯ ಬಳಕೆ ಜಾರಿಗೆ ಬಂದಮೇಲೆ ಅಕ್ರಮಗಳನ್ನು ತಡೆಯಲು ಹಲವಾರು ಕ್ರಮಗಳನ್ನು ರೂಪಿಸುವುದು ಸುಲಭವಾಯಿತು. ಪ್ರಮುಖವಾಗಿ, ಸರ್ಕಾರದಿಂದ ದೇಶವಾಸಿಗಳಿಗೆ ತಲುಪಿಸಲಾಗುತ್ತಿರುವ ಅನೇಕ ಸಬ್ಸಿಡಿ ಕೊಡುಗೆಗಳು, ಬಡತನ ನಿರ್ಮೂಲನಾ ಯೋಜನೆಗಳ ಹಣ, ವಿದ್ಯಾರ್ಥಿವೇತನ, ಉದ್ಯೋಗ ಖಾತರಿ ಹಣ ಮುಂತಾದವು ದುರುಪಯೋಗವಾಗುವುದನ್ನು ತಡೆಗಟ್ಟುವುದು ಸಾಧ್ಯವಾಯಿತು. ಈ ಎಲ್ಲ ಪಾವತಿಗಳು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹೋಗುವಂತೆ ಮಾಡಬೇಕಿತ್ತು. ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಜೋಡಿಸುವುದನ್ನು ಕಡ್ಡಾಯಗೊಳಿಸಿದ್ದರಿಂದ ಎಲ್ಲಾ ಯೋಜನೆಗಳೂ ಫಲಾನುಭವಿಗಳಿಗೆ ತಲುಪುವುದು ಸಾಧ್ಯವಾಯಿತು.
ಆಧಾರ್ ದತ್ತಾಂಶದಲ್ಲಿ ಏನೆಲ್ಲಾ ಇದೆ?
ಆಧಾರ್ ಎರಡು ರೀತಿಯ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ನಾಗರಿಕನ ಹೆಸರು, ಜನ್ಮ ದಿನಾಂಕ, ತಂದೆ/ ಗಂಡನ ಹೆಸರು, ವಿಳಾಸ ಇತ್ಯಾದಿ ವಿವರಗಳು (Demographic Data) ಮತ್ತು ಹತ್ತು ಕೈ ಬೆರಳುಗಳ ಬಯೋಮೆಟ್ರಿಕ್ ಅಚ್ಚು, ಕಣ್ಣಿನ ಪಾಪೆಯ (Iris) ಅಚ್ಚು. ಮುಖದ ಭಾವಚಿತ್ರ ಮುಂತಾದ ವೈಯಕ್ತಿಕ ದತ್ತಾಂಶ (Personal Data) ಇವುಗಳನ್ನು ಸಂಗ್ರಹಿಸಲಾಗುತ್ತದೆ. ಮೊದಲ ವರ್ಗದ ದತ್ತಾಂಶದಿಂದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾದರೆ ಎರಡನೆಯ ವರ್ಗದ ದತ್ತಾಂಶದಿಂದ ವ್ಯಕ್ತಿಯ ಅನನ್ಯತೆ Uniqueness)ಯನ್ನು ಗುರುತಿಸಬಹುದಾಗಿದೆ.
ಹೇಗೆ ಸಂಗ್ರಹಿಸಿದ್ದಾರೆ?
ಆಧಾರ್ ದತ್ತಾಂಶ, UIADI (ಆಧಾರ್ ನಿರ್ವಹಣಾ ಪ್ರಾಧಿಕಾರ) ಬಳಿ ಮಾತ್ರ ಲಭ್ಯವಿದೆ . ಬ್ಯಾಂಕ್, ಟೆಲಿಕಾಂ ಕಂಪನಿಗಳ ಕೋರಿಕೆಯ ಮೇರೆಗೆ ನಾಗರಿಕರ ವೈಯಕ್ತಿಕ ವಿವರಗಳು ಹಾಗೂ ಅನನ್ಯತೆಯನ್ನು ಆಧಾರ್ ಸಂಖ್ಯೆಯನ್ನಾಧರಿಸಿ ಖೀಐಅಈಐ ದೃಢೀಕರಿಸುತ್ತದೆ. ಆಧಾರ್ ಸಂಖ್ಯೆಯನ್ನು ಹೊರತುಪಡಿಸಿ ಯಾವ ಸಂಸ್ಥೆಗಳೂ ಆಧಾರ್ ದತ್ತಾಂಶವನ್ನು ಸಂಗ್ರಹಿಸುವಂತಿಲ್ಲ. ಆಧಾರ್ ನೋಂದಣಿ ಮಾಡುವ ಸಂಸ್ಥೆಗಳು ಸಹಾ ಇದೇ ನಿಯಮವನ್ನು ಪಾಲಿಸಬೇಕು. ಆಧಾರ್ ಸಂಖ್ಯೆಯನ್ನು ಸಹ ಒಂದು ವಿಶಿಷ್ಟ ರೀತಿಯಲ್ಲಿ ಸಂಗ್ರಹಿಸಬೇಕಾಗುತ್ತದೆ. ಅದಕ್ಕಾಗಿ UIADI ನಿರ್ದಿಷ್ಟ ನಿಯಮಗಳನ್ನು ರೂಪಿಸಿದೆ. ಇದನ್ನು ಆಧಾರ್ ಡೇಟಾ ವಾಲ್ಟ…ನಲ್ಲಿ ರೆಫರೆ®Õ… ಕೀ ಮೂಲಕ ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ಈ ವಿಧಾನದಲ್ಲಿ ಕೇವಲ ಆಧಾರ್ ಸಂಖ್ಯೆ ಮಾತ್ರ ಪರೋಕ್ಷವಾಗಿ ಬೇರೊಂದು ಕೀ ಮೂಲಕ ಅತ್ಯಂತ ಸುರಕ್ಷಿತ ಮಾರ್ಗದಲ್ಲಿ ಶೇಖರಗೊಳ್ಳುತ್ತದೆ. ಯಾವುದೇ ರೀತಿಯ ಸೋರುವಿಕೆಗೆ ಅವಕಾಶವಿರುವುದಿಲ್ಲ. ಇಡೀ ಆಧಾರ್ ವ್ಯವಸ್ಥೆಯಲ್ಲಿ ದತ್ತಾಂಶ ಸುರಕ್ಷತೆಯ ಬಗ್ಗೆ UIADI ತನ್ನ ಜಾಲತಾಣ uidai.gov.in ನಲ್ಲಿ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು (Frequently Asked Questions) ವಿಭಾಗದಲ್ಲಿ ವಿವರಗಳನ್ನು ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಿದೆ.
ಆಧಾರ್ ಸ್ವಾತಂತ್ರ್ಯ
ಬ್ಯಾಂಕುಗಳಲ್ಲಿ ಈಗ ಆಧಾರ್ ಸಂಖ್ಯೆಯನ್ನೊಳಗೊಂಡ ಆಧಾರ್ ಪತ್ರದ ಧೃಢೀಕೃತ ಪ್ರತಿಯನ್ನು “ನಿಮ್ಮ ಗ್ರಾಹಕರನ್ನು ತಿಳಿಯಿರಿ’ – “Know Your Customer’ ಭಾಗವಾಗಿ- ಗ್ರಾಹಕರು ಒಂದು ಆಯ್ಕೆಯಾಗಿ ಸ್ವಇಚ್ಛೆ ಯಿಂದ ಕೊಟ್ಟಲ್ಲಿ ಮಾತ್ರ- ಪಡೆದುಕೊಳ್ಳುತ್ತಿವೆ. ಈಗ ಬೆರಳಚ್ಚುಗಳ ಮೂಲಕ UIADIನ ಧೃಢೀಕರಣವನ್ನು ಯಾವುದೇ ಸಂದರ್ಭಗಳಲ್ಲಿ ಪಡೆದುಕೊಳ್ಳುತ್ತಿಲ್ಲ. ಇನ್ನು ಪ್ಯಾನ್ ಕಾರ್ಡ್ ವಿಷಯಕ್ಕೆ ಬಂದರೆ, ಅಲ್ಲಿರುವ ದತ್ತಾಂಶಗಳು ಬ್ಯಾಂಕಿನ ಖಾತೆಗೆ ಸಂಬಂಧಪಟ್ಟ ವಿವರಗಳಿಗಿಂತ ಭಿನ್ನವಾಗಿಲ್ಲ. ಹಾಗಾಗಿ, ಅದನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ ಹೆಚ್ಚಿನ ಲಾಭವೇನೂ ಇಲ್ಲ. ತನ್ನಲ್ಲಿರುವ ದತ್ತಾಂಶಗಳೇ ತನ್ನ ವ್ಯವಹಾರಗಳಾದ ಅಡ್ಡ ಮಾರಾಟ (CROSS SELLING) ಮುಂತಾದವುಗಳಿಗೆ ಸಾಕಾಗಿರುವಾಗ ಬೇರೆ ದತ್ತಾಂಶಗಳನ್ನು ಉಪಯೋಗಿಸಿಕೊಳ್ಳುವ ಪ್ರಚೋದನೆಯ (Motive) ಪ್ರಶ್ನೆ ಉದ್ಭವಿಸಲಾರದು.
– ಶ್ರೀಧರ ಬಾಣಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.