ಬ್ಯಾಂಕುಗಳು ಲಾಭ ಮಾಡೋದು ಹೇಗೆ ಗೊತ್ತಾ?
Team Udayavani, Mar 13, 2017, 12:29 PM IST
ಬ್ಯಾಂಕಿಂಗ್ ಕೂಡಾ ಒಂದು ಬಿಜಿನೆಸ್. ಸಾಮಾಜಿಕ ಕಳಕಳಿಯೊಂದಿಗೆ ಜನತೆಗೆ ಬ್ಯಾಂಕಿಂಗ್ ಸೇವೆ ನೀಡುತ್ತಾ, ಎÇÉಾ ಬಿಜಿನೆಸ್‌ಗಳಂತೆ ಲಾಭಗಳಿಸುವುದು ಅವುಗಳ ಉದ್ದೇಶಗಳಲ್ಲಿ ಒಂದು. ಅವು ತಮ್ಮ ನಿರ್ವಹಣೆ ವೆಚ್ಚವನ್ನು ನಿಭಾಯಿಸಿಕೊಂಡು, ಸರ್ಕಾರಕ್ಕೆ ಲಾಭಾಂಶವನ್ನು ಕೊಡಬೇಕಾಗುತ್ತದೆ. ತೆರಿಗೆ ಕೊಡಬೇಕಾಗುತ್ತದೆ ಮತ್ತು ಶೇರುಧಾರರಿಗೆ ಆಕರ್ಷಕ ಡಿವಿಡೆಂಡ್ ಅನ್ನೂ ಕೊಡಬೇಕಾಗುತ್ತದೆ. ಒಂದು ಬ್ಯಾಂಕಿನ ಸಾಧನೆಯನ್ನು, ಅದು ಹೊಂದಿರುವ ಶಾಖೆಗಳು, ಆ ವರ್ಷ ತೆರೆದ ಶಾಖೆಗಳು,ಅದರ ಒಟ್ಟೂ ಠೇವಣಿ, ನೀಡಿದ ಸಾಲ, ಮಾಡಿದ ಒಟ್ಟೂ ವ್ಯವಹಾರ,ನೀಡಿದ ಮತ್ತು ವಸೂಲಾದ ಸಾಲಗಳಲ್ಲದೇ, ಗಳಿಸಿದ ಲಾಭ,ನೀಡಿದ ಡಿವಿಡೆಂಡ್ ಮೇಲೂ ಅವಲಂಭಿಸಿರುತ್ತದೆ. ಈ ಸಾಧನೆಯ ಮೂಲ ಇರುವುದು ಅವುಗಳು ಗಳಿಸುವ ಆದಾಯ ಮತ್ತು ಅದಕ್ಕಾಗಿ ಮಾಡುವ ವೆಚ್ಚದ ಮೇಲೆ. ಹಾಗಾದರೆ ಬ್ಯಾಂಕುಗಳಿಗೆ ಆದಾಯಗಳು ಹೇಗೆ ಬರುತ್ತವೆ ಮತ್ತು ಅವುಗಳ ಖರ್ಚಿನ ಬಾಬ್ತುಗಳು ಯಾವುವು? ಅವುಗಳ ಸಂಕ್ಷಿಪ್ತ ಮಾಹಿತಿ ಹೀಗಿದೆ
ಆದಾಯದ ಮೂಲಗಳು
ಬ್ಯಾಂಕುಗಳ ಮುಖ್ಯ ಆದಾಯ, ಅವು ನೀಡುವ ಸಾಲದ ಮೇಲೆ ಗಳಿಸುವ ಬಡ್ಡಿ. ಒಂದು ಅಂದಾಜಿನ ಪ್ರಕಾರ ಸುಮಾರು ಶೇ. 80ರಷ್ಟು ಆದಾಯವನ್ನು ಅವು ನೀಡುವ ಸಾಲದ ಮೇಲಿನ ಬಡ್ಡಿಯ ಮೂಲಕ ಪಡೆಯುತ್ತವೆ. ಬ್ಯಾಂಕಿಂಗ್ ಎಂದರೆ ಠೇವಣಿ ಪಡೆಯುವುದು ಮತ್ತು ಸಾಲ ನೀಡುವುದು ಮತ್ತು ತನ್ಮೂಲಕ ಆದಾಯಗೊಳಿಸುವುದು ಎನ್ನುವ ಪರಿಕಲ್ಪನೆಗೆ ಅನ್ವರ್ಥಕವಾಗಿ ಬಡ್ಡಿ ಆದಾಯವನ್ನು ಪಡೆಯುತ್ತವೆ. ಈ ಬಡ್ಡಿ ಆದಾಯದ ಮುಂದೆ ಉಳಿದೆಲ್ಲ ಆದಾಯ ಗೌಣ. ಕೆಲವು ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಬಡ್ಡಿಯೇತರ ಆದಾಯವೂ ಬಡ್ಡಿಯಷ್ಟೇ ಇರುತ್ತದೆಯಂತೆ.
ಸೇವಾ ಶುಲ್ಕಗಳು
ಯಾವ ಸೇವೆಯೂ ಉಚಿತವಾಗಿ ದೊರಕದು. ಪ್ರತಿ ಸೇವೆಯನ್ನೂ ಶುಲ್ಕ ಕೊಟ್ಟು ಪಡೆಯಬೇಕು ಎನ್ನುವ ತತ್ವದ ಆಧಾರದ ಮೇಲೆ, ಬ್ಯಾಂಕಿನಲ್ಲಿ ಕೂಡಾ ಸಾಮಾನ್ಯವಾಗಿ ಪ್ರತಿ ಸೇವೆಗೂ ಶುಲ್ಕ ಇರುತ್ತದೆ. ಇವು ಬ್ಯಾಂಕುಗಳ ಮಧ್ಯೆ ಏಕರೂಪವಾಗಿರದೇ, ಸ್ವಲ್ಪ ಭಿನ್ನವಾಗಿರುತ್ತದೆ ಮತ್ತು ಕಾಲ ಕಾಲಕ್ಕೆ ಇದನ್ನು ಪರಿಷ್ಕರಿಸಲಾಗುತ್ತದೆ. ಕೆಲವು ಬ್ಯಾಂಕಿನಲ್ಲಿ ಕೆಲವು ರೀತಿಯ ಶುಲ್ಕಗಳು ಇರಬಹುದು ಮತ್ತು ಇನ್ನು ಕೆಲವು ಬ್ಯಾಂಕುಗಳಲ್ಲಿ ಇವು ಇರದಿರಬಹುದು. ಸಾಮಾನ್ಯವಾಗಿ ಹೊಸ ಚೆಕ್‌ಬುಕ್‌ಗೆ, ಡ್ರಾಫ್ಟ್ ಖರೀದಿಸಲು, ಹಣವರ್ಗಾಯಿಸಲು, ಚೆಕ್ ನಗದಾಗದೇ ಹಿಂತಿರುಗಿ ಬಂದರೆ, ಡುಪ್ಲಿಕೇಟ್ ಪಾಸ್ ಬುಕ್‌ಗೆ, ಎರಡನೇ ಬಾರಿ ಸ್ಟೇಟ್‌ಮೆಂಟ್ ಆಪ್ ಅಕೌಂಚ್ ಪಡೆಯಲು, ನಗದು ಡಿಪಾಸಿಟ್ ಮಾಡಲು, ಸಹಿ ದೃಢೀಕರಣಗೊಳಿಸಲು, ಸಾಲದ ಅರ್ಜಿಪೊ›ಸೆಸಿಂಗ…, ಲಾಕರ್ ಸೌಲಭ್ಯ ಪಡೆಯಲು, ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಇಡದಿ¨ªಾಗ, ಬಿಲ…ಗಳನ್ನು ಡಿಸ್ಕೌಂಟ್ ಮಾಡಿದಾಗ, ಲೆಟರ್ ಆಫ್ ಕ್ರೆಡಿಟ್ ತೆರೆದಾಗ ಮತ್ತು ಅಡ್ವೆ„ಸ್ ಮಾಡಿದಾಗ, ಪೋಸ್ಟೇಜ…, ಸ್ವಿಪ್ಟ ಬಿಲ… ( ಅಂತರಾಷ್ಟ್ರೀಯ ಹಣವರ್ಗಾವಣೆ Society For International Funds Transfer), ಕಮೀಷನ್. ವಿದೇಶಿ ವಿನಿಮಯ ನಷ್ಟ, ಹಿಂಪಡೆಯುವ ಮಿತಿ ಮೀರಿದಾಗ ಏಟಿಎಂ ಶುಲ್ಕ, ಡೆಬಿಟ್ ಮತ್ತು ಕ್ರೆಡಿಟ… ಕಾರ್ಡ… ಶುಲ್ಕ, ಮತ್ತು ಕೆಲವು ಸಂದರ್ಭದಲ್ಲಿ ಸಾಲದ ಅರ್ಜಿಯ ಶುಲ್ಕ, ಹೀಗೆ ವಿವಿಧ ರೀತಿಯ ಶುಲ್ಕಗಳನ್ನು ಬ್ಯಾಂಕುಗಳು ತಾವು ನೀಡುವ ಸೇವೆಗಾಗಿ ಗ್ರಾಹಕರಿಂದ ಪಡೆಯುತ್ತವೆ. ಈ ಶುಲ್ಕಗಳು ಗ್ರಾಕರರ ಗಮನಕ್ಕೆ ಬರುವುದು ಅವರು ಅಂಥ ವ್ಯವಹಾರವನ್ನು ಮಾಡಿದಾಗ ಮಾತ್ರ. ಬ್ಯಾಂಕುಗಳ ಆದಾಯದಲ್ಲಿ ಇಂಥಹ ಬಡ್ಡಿಯೇತರ ಅದಾಯವು ಸುಮಾರು ಶೇ.15 ಇರುತ್ತದೆ ಎಂದು ಹೇಳಲಾಗುತ್ತದೆ. ಜಾಗತಿಕವಾಗಿ ಹಲವು ದೇಶಗಳಲ್ಲಿ ಆದಾಯದ ಶೇ. 50ರಷ್ಟು ಇರುತ್ತದೆಯಂತೆ. ಬ್ಯಾಂಕುಗಳ ಈ ಆದಾಯದ ಮೇಲೆ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದಾ ನಿಗಾ ಇಟ್ಟಿರುತ್ತಿದ್ದು, ಇತ್ತೀಚೆಗೆ ಇವುಗಳ ಮೇಲೆ ಕೆಲವು ನಿಯಂತ್ರಣವನ್ನೂ ಹೇರಿವೆ.
ಕೆಲವು ಬ್ಯಾಂಕುಗಳು ಅಲ್ಪ ಕಾಲೀನ ಅವಧಿಗೆ ತಮ್ಮೊಳಗೇ ಸಾಲವನ್ನು ಕೊಟ್ಟು ಮತ್ತು ತೆಗದುಕೊಳ್ಳುವುದನ್ನು ಮಾಡಿಕೊಳ್ಳುತ್ತಿದ್ದು, ಮೂರು ತಿಂಗಳ ಮೀರದ ಇಂಥ ಸಾಲದ ಮೇಲೆ ಬಡ್ಡಿಯನ್ನು ಗಳಿಸುತ್ತವೆ. ಹಾಗೆಯೇ ಮಿಗತೆ ನಗದು (surplus funds ) ಇರುವಾಗ ಇಂಟರ್ ಬ್ಯಾಂಕ್ ಮಾರುಕಟ್ಟೆಯಲ್ಲಿ ಸಾಲ ನೀಡಿ ಬಡ್ಡಿ ಆದಾಯವನ್ನು ಗಳಿಸುತ್ತವೆ. ಮತ್ತು ರೆವರ್ಸ್ ರೆಪೋ ಹೆಸರಿನಲ್ಲಿ ರಿಸರ್ವ್ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಬಡ್ಡಿ ಆದಾಯ ಗಳಿಸುತ್ತವೆ. ಕೆಲವು ಬ್ಯಾಂಕ್‌ಗಳ ಹೂಡಿಕೆ ವಿಭಾಗಗಳು ದೊಡ್ಡ-ದೊಡ್ಡ ಕಂಪನಿಗಳಿಗೆ ಮತ್ತು ಸಂಸ್ಥೆಗಳಿಗೆ ಹೂಡಿಕೆ, ಬಾಂಡ್ ಇಸ್ಯೂ, ಅಂಡರ್ ರೈಟಿಂಗ್‌ಗಳಂಥ ಮರ್ಚಂಟ್ ಬ್ಯಾಂಕಿಂಗ್ ರೀತಿಯ ವಿಷಯಗಳಲ್ಲಿ ಸಲಹೆ ನೀಡಿ , ಸಹಾಯ ಮಾಡಿ ಅಪಾರ ಶುಲ್ಕವನ್ನು ಪಡೆಯುತ್ತವೆ. ತುಂಬಾ ಸಂಕೀರ್ಣವಾದ ಕಂಪನಿಗಳ ವಿಲೀನ, ಕಂಪನಿಗಳ ಕೈವಶ ವಿಚಾರದಲ್ಲಿ ಅಡ್ವೆ„ಸ್ ಮಾಡಿ ದೊಡ್ಡ ಪ್ರಮಾಣದಲ್ಲಿ ಶುಲ್ಕ ಪಡೆಯುತ್ತವೆ. ಹಾಗೆಯೇ ಸೆಕೆಂಡರಿ ಮಾರುಕಟ್ಟೆಯಲ್ಲಿ ಸೆಕ್ಯುರಿಟಿಗಳನ್ನು ಟ್ರೇಡ್ ಮಾಡಿ ಶುಲ್ಕ ಮತ್ತು ಲಾಭವನ್ನು ಗಳಿಸುತ್ತವೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಯ ವಿನಿಮಯ ವ್ಯವಹಾರ ಮಾಡಿ ಆದಾಯ ಗಳಿಸುತ್ತಾರೆ. ಕೆಲವು ಬ್ಯಾಂಕುಗಳ ಬಡ್ಡಿಯೇತರ ಆದಾಯದಲ್ಲಿ, ಟ್ರೆಜರಿ ಅಪರೇಷನ್ ಮತ್ತು ವಿದೇಶಿ ವಿನಿಮಯ ವಿಭಾಗದ ಆದಾಯವೇ ಗಮನಾರ್ಹವಾಗಿ ಇರುತ್ತದೆ. ಬ್ಯಾಂಕುಗಳ ಮೂಲ ಉದ್ದೇಶವಾದ ಠೇವಣಿ ಪಡೆಯುವುದು ಮತ್ತು ಸಾಲ ನೀಡುವುದು ಈಗ ಹಳೆಯದಾಗಿದ್ದು, ಅವುಗಳ ಸಂಗಡ ಈಗ ಬದಲಾದ ಆರ್ಥಿಕ-ಸಾಮಾಜಿಕ ನಿರೀಕ್ಷೆಗನುಗುಣವಾಗಿ ವಿವಿಧ ಸೇವೆಗಳನ್ನು ಸೇವೆಗಳನ್ನ ನೀಡುತ್ತಿದ್ದು, ಆ ಸೇವೆಗಳ ಬೇಡಿಕೆಗಳಿಗೆ ತಕ್ಕಂತೆ ಶುಲ್ಕವನ್ನು ವಿಧಿಸುತ್ತವೆ.
ಬ್ಯಾಂಕುಗಳ ಆದಾಯ ಖರ್ಚಾಗುವುದೆಲ್ಲಿ?
ಬ್ಯಾಂಕಿಂಗ್ ಉದ್ಯಮಕ್ಕೆ ಗ್ರಾಹಕರು ನೀಡುವ ಠೇವಣಿಗಳೇ ಕಚ್ಚಾ ಮಾಲುಗಳಾಗಿದ್ದು, ಇದಕ್ಕೆ ಬ್ಯಾಂಕುಗಳು ಬಡ್ಡಿ ರೂಪದಲ್ಲಿ ಪೇಮೆಂಟ್ ಮಾಡಬೇಕಾಗುತ್ತದೆ. ಬೇರೆ- ಬೇರೆ ರೀತಿಯ ಠೇವಣಿಗಳಿಗೆ ಬೇರೆ ಬೇರೆ ರೀತಿಯ ಬಡ್ಡಿ ನೀಡಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ ಬ್ಯಾಂಕುಗಳು ಮಾಡುವ ವೆಚ್ಚದಲ್ಲಿ ಗ್ರಾಹಕರ ಠೇವಣಿಗೆ ನೀಡುವ ಬಡ್ಡಿಯೇ ಗಮನಾರ್ಹವಾಗಿದ್ದು, ಇದು ಒಟ್ಟು ವೆಚ್ಚದಲ್ಲಿ ಸುಮಾರು ಶೇ. 50 ಇರುತ್ತದೆ. ಇದಕ್ಕೆ ಹೊರತಾಗಿ ಸಿಬ್ಬಂದಿ ಸಂಬಳ ಮತ್ತು ಇತರ ನಿರ್ವಹಣಾ ವೆಚ್ಚ ಸುಮಾರು ಶೇ. 32 ರಷ್ಟು ಇರುತ್ತದೆ ಎಂದು ಹೇಳಲಾಗುತ್ತದೆ.
ಬ್ಯಾಂಕುಗಳು ಬಹುತೇಕ ಬಾಡಿಗೆ ಕಟ್ಟಡದಲ್ಲಿ ವ್ಯವಹಾರ ಮಾಡುತ್ತಿದ್ದು, ಅವುಗಳ ಮುಖ್ಯಕಚೇರಿಗಳು, ಕೆಲವು ಶಾಖೆಗಳು ಮತ್ತು ಪ್ರಾದೇಶಿಕ ಕಾರ್ಯಾಗಳು ಮಾತ್ರ ಸ್ವಂತ ಕಟ್ಟಡದಲ್ಲಿರುತ್ತಿದ್ದು, ಬ್ಯಾಂಕುಗಳ ಸಿಬ್ಬಂದಿ ಯೇತರ ವೆಚ್ಚದಲ್ಲಿ ಬಾಡಿಗೆ ಪ್ರಮಾಣ ಗಣನೀಯವಾಗಿರುತ್ತದೆ. ಅದಕ್ಕೂ ಮೇಲಾಗಿ ಬ್ಯಾಂಕುಗಳಲ್ಲಿ ಗಣಕೀಕರಣ ಮತ್ತು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿದ ಮೇಲೆ ಹಾರ್ಡ್ ವೇರ್ ಮತ್ತು ಸಾಪ್ಟವೇರ್ ನಿರ್ವಹಣಾ ವೆಚ್ಚ ಬ್ಯಾಂಕುಗಳ ಮಾಡುವ ಖರ್ಚಿನಲ್ಲಿ ಸಾವಕಾಶವಾಗಿ ಅಗ್ರ ಸ್ಥಾನ ಪಡೆಯುತ್ತಿವೆ. ಕಂಪ್ಯೂಟರ್‌ಗಳ written down value ಬಹುಬೇಗ ಕಡಿಮೆಯಾಗುತ್ತಿದ್ದು, ಅವುಗಳ ಬದಲಿ ವೆಚ್ಚ ಗಮನಾರ್ಹವಾಗಿ ಇರುತ್ತದೆ. ಇದಕ್ಕೂ ಮೇಲಾಗಿ ಬ್ಯಾಂಕುಗಳು ಸರ್ಕಾರಕ್ಕೆ ಮತ್ತು ಶೇರುಧಾರರಿಗೆ ಲಾಭಾಂಶ ನೀಡಬೇಕು ಮತ್ತು ತೆರಿಗೆ ಕಟ್ಟಬೇಕು. ಕೆಲವು ಖರ್ಚುಗಳಿಗಾಗಿ ಹಣವನ್ನು ತೆಗೆದಿಡಬೇಕು. ಸುಮಾರು ಶೇ. 17ರಷ್ಟು ಖರ್ಚು ಈ ಬಾಬಿ¤ನಲ್ಲಿಯೇ ಆಗುತ್ತದೆ.
ಬ್ಯಾಂಕುಗಳಲ್ಲಿ ಅವುಗಳ ಆದಾಯಕ್ಕೆ ಅನುಗುಣವಾಗಿ ವೆಚ್ಚವೂ ಇರುತ್ತದೆ. ಎÇÉಾ ಆದಾಯವನ್ನೂ received ಆಧಾರದ ಮೇಲೆ ಗಣನೆಗೆ ತೆಗೆದುಕೊಳ್ಳುವುದರಿಂದ ಆದಾಯ ಕರಾರುವಾಕ್ ಆಗಿರುತ್ತದೆ. ಹಾಗೆಯೇ ಲಾಭದ ಕೆಲವು ಪ್ರಮಾಣವನ್ನು ಸುಸ್ತಿ ಸಾಲಕ್ಕೆ ವರ್ಗಾಯಿಸುವದರಿಂದ ಲಾಭದ ಪ್ರಮಾಣ ಕಡಿಮೆಯಾಗುತ್ತದೆ. ಇವುಗಳು ಮೇಲು ನೋಟಕ್ಕೆ ಕಾಣುವ ಬ್ಯಾಂಕುಗಳ ಆದಾಯ ಮತ್ತು ವೆಚ್ಚದ ವಿವರಗಳು. ಬ್ಯಾಲೆನ್ಸ ಶೀಟ್ ಅನ್ನು ಪರಾಮರ್ಶಿಸಿದಾಗ ಇನ್ನೂ ವಿಸ್ತ್ರತ ಮತ್ತು ಜನಸಾಮಾನ್ಯರಿಗೆ ತಿಳಿಯದ ಮಾಹಿತಿಗಳು ದೊರಕುತ್ತವೆ.
– ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.