ನೋ ಕ್ಯಾಶ್‌ ಹೇಗೆ, ಏನು?


Team Udayavani, Jul 3, 2017, 3:45 AM IST

no-cash.jpg

ನೋಟು ಅಮಾನ್ಯಿàಕರಣದ ಹಿಂದಿನ ದಿನಗಳ ಮಾತು. ಹೊಸತಾಗಿ ಬಂದ ಬ್ಯಾಂಕ್‌  ಮ್ಯಾನೇಜರ್‌  ಒಬ್ಬರು, ಠೇವಣಿ ಸಂಗ್ರಹಕ್ಕಾಗಿ ಆ ಹಳ್ಳಿಯ ಪ್ರತಿಷ್ಟಿತರ ಮನೆಗೆ  ಹೋಗಿದ್ದರು. ಅವರು ದೊಡ್ಡ ಮೊತ್ತದ ಠೇವಣಿ ಕೊಡಲೊಪ್ಪಿದ್ದು, ಅವಶ್ಯಕತೆ ಬಿ¨ªಾಗ  ಒಂದೆರಡು ಘಂಟೆಗಳಲ್ಲಿ ಹಣ ನೀಡಬೇಕೆಂದು  ಕಂಡೀಷನ್‌ ಹಾಕಿದರು.   ಆ ಮ್ಯಾನೇಜರ್‌ ಸಂತಸದ  ತುದಿಗೇರಿ, ಹಾಗೆಯೇ ಹಾವು ಏಣಿ ಆಟದಲ್ಲಿ ಕೆಳಗಿಳಿಯುವಂತೆ ಸರಕ್ಕನೆ ಕೆಳಗಿಳಿದು, ಅವರಿಗೆ ಕೃತಜ್ಞತೆ ಅರ್ಪಿಸಿ, ಇನ್ನೊಮ್ಮೆ ಬಂದು  ಠೇವಣಿ ತೆಗೆದುಕೊಂಡು ಹೋಗುವುದಾಗಿ ಹೇಳಿ ಹೊರಬಂದರು. ಅವರು ಆಮೇಲೆ ಅವರ ಬಳಿ ಠೇವಣಿ ಕೇಳಲು ಹೋಗಲಿಲ್ಲ. ಆ  ದೊಡ್ಡವರೂ ಬ್ಯಾಂಕಿಗೆ ಬರಲಿಲ್ಲ.

ಇನ್ನೊಂದು  ಸಣ್ಣ ಶಾಖೆಯಲ್ಲಿ, ದೊಡ್ಡ ಗ್ರಾಹಕರೊಬ್ಬರು ದೊಡ್ಡ ಮೊತ್ತದ ಹಣ ಡ್ರಾ ಮಾಡಲು ಬಂದಿದ್ದು,  ಸಾಕಷ್ಟು ಕ್ಯಾಶ್‌ ಇಲ್ಲವೆಂದೂ, ಮಾರನೇ ದಿನ ಬರಲು ಮ್ಯಾನೇಜರ್‌  ವಿನಂತಿಸಿ ಕೊಳ್ಳಲು, ಆ ಗ್ರಾಹಕರು ದೊಡ್ಡ ಧ್ವನಿಯಲ್ಲಿ, “ನಾನು ಸಾಲ ಕೇಳುತ್ತಿಲ್ಲ. ನನ್ನ ಹಣ ನಾನು  ಕೇಳುತ್ತಿದ್ದೇನೆ. ನನಗೆ ಬೇಕಾದಾಗ ಹಿಂಪಡೆಯಲು ನಿಮ್ಮ  ಬ್ಯಾಂಕಿನಲ್ಲಿ ಇಟ್ಟದ್ದು. ನನಗೆ ಅವಶ್ಯಕತೆ ಇ¨ªಾಗ  ನನ್ನ ಹಣ ನನಗೆ ಸಿಗದಿದ್ದರೆ, ನಿಮ್ಮ  ಬ್ಯಾಂಕ…ನಲ್ಲಿ ಏಕೆ ಹಣ ಇಡಬೇಕು’  ಎಂದು ಕೂಗಿದರು ಮತ್ತು ಬ್ಯಾಂಕಿನ ಮಾನ- ಮರ್ಯಾದೆ ಹರಾಜು ಹಾಕುವುದರೊಂದಿಗೆ ಸಿಬ್ಬಂದಿಗಳನ್ನೂ ತರಾಟೆಗೆ ತೆಗೆದುಕೊಂಡರು. ದೊಡ್ಡ ಮೊತ್ತದ ಹಣ ಬೇಕಿದ್ದರೆ ಒಂದು  ದಿನ ಮೊದಲೇ ಬ್ಯಾಂಕಿಗೆ ತಿಳಿಸಬೇಕು ಎಂದು ಬ್ಯಾಂಕ್‌ ಸಿಬ್ಬಂದಿ  ಹೇಳಲು, ಆ ಗ್ರಾಹಕ, ಅರ್ಜೆನ್ಸಿ ಫೋನ್‌  ಮಾಡಿಕೊಂಡು ಬರುತ್ತಾ ಎಂದು ತಾರ್ಕಿಕವಾಗಿ ಮತ್ತು ಕಾನೂನಾತ್ಮಕವಾಗಿ ಅಬ್ಬರಿಸಿದರು. ಇದೇ ಸಮಯವೆಂದು  ಬ್ಯಾಂಕಿನ  ಇತರ ಕೆಲವು  ಗ್ರಾಹಕರು ತಮಗೆ ಆಗಿದ್ದ ಕಹಿ ಅನುಭವಗಳನ್ನು ವಿವರಿಸಿ, ತಾವೂ ಜೋರು ಮಾಡಿದರು. ದೊಡ್ಡ ಮೊತ್ತದ ಕ್ಯಾಶ್‌  ಹಿಂಪಡೆದು ಬ್ಯಾಂಕಿನ ಠೇವಣಿ ಕಡಿಮೆಯಾಗಿ, ಮ್ಯಾನೇಜರ್‌ಗೆ ಪದೋನ್ನತಿ ತಪ್ಪಿದರೆ ಅಥವಾ   ಎತ್ತಂಗಡಿ ಯಾದರೆ ಎಂದು  ಬ್ಯಾಂಕಿನವರು ದೊಡ್ಡ ಮೊತ್ತ ಡ್ರಾ ಮಾಡಲು ಕೊಡುವುದಿಲ್ಲ ಎಂದು ಕೆಲವರು  ಭಾಷ್ಯಬರೆದರು. ಬ್ಯಾಂಕ್‌ ತೊಂದರೆಯಲ್ಲಿರಬಹುದು ಎಂದು ಇನ್ನು ಕೆಲವರು ಸಂದೇಹಿಸಿದರು.

ಬ್ಯಾಂಕುಗಳು ಇಂಥ ಮುಜುಗರವನ್ನು ಏಕೆ ಅನುಭವಿಸುತ್ತವೆ?
ಬ್ಯಾಂಕ್‌ ಶಾಖೆಗಳು ಸಣ್ಣದಿರಲಿ, ದೊಡ್ಡದಿರಲಿ, ಹಳ್ಳಿಯಲ್ಲಿರಲಿ ಅಥವಾ ನಗರದಲ್ಲಿರಲಿ, ಬ್ಯಾಂಕಿಂಗ್‌ ಕಾನೂನು ಮತ್ತು ನಿಯಮಾವಳಿ ಪ್ರಕಾರ, ಸಂಗ್ರಹವಾದ ಎÇÉಾ ಠೇವಣಿಯನ್ನು, ಅದೇ ಶಾಖೆಯಲ್ಲಿ ಇಟ್ಟುಕೊಳ್ಳುವಂತಿಲ್ಲ.  ಒಂದು ಬ್ಯಾಂಕ್‌ ಶಾಖೆಯಲ್ಲಿ ಸಂಗ್ರಹವಾದ ಠೇವಣಿ ಮತ್ತು ನೀಡಿದ ಸಾಲ  ಕೇವಲ  ಆ ಶಾಖೆಗೆ  ಮಾತ್ರ ಸಂಬಂಧಪಡದೇ ಇಡೀ ಬ್ಯಾಂಕಿನ  ಆಸ್ತಿ ಮತ್ತು ಸಾಲ ಆಗಿರುತ್ತದೆ. ಶಾಖೆಯಲ್ಲಿ ಸಂಗ್ರಹವಾದ ಠೇವಣಿ  ಬ್ಯಾಂಕಿನ ಠೇವಣಿ ಯಾಗಿರುತ್ತದೆ. ಅವಶ್ಯಕತೆ ಬಿ¨ªಾಗ ಬೇರೆ ಶಾಖೆಗಳಿಂದ ತರಿಸಿಕೊಳ್ಳಬಹುದು.

ಬ್ಯಾಂಕಿನ ಪ್ರಾದೇಶಿಕ ಕಾರ್ಯಾಲಯ  ಅಥವಾ ಮುಖ್ಯ ಕಾರ್ಯಾಲಯ,  ಪ್ರತಿಯೊಂದು ಶಾಖೆಗೂ,  ಶಾಖೆ ಇರುವ ಪ್ರದೇಶ,  ಅದರ ಒಟ್ಟೂ ವ್ಯವಹಾರದ ಪ್ರಮಾಣ, ಸರಾಸರಿ ನಗದು ವ್ಯವಹಾರ, ದಿಢೀರ್‌ ಬರಬಹುದಾದ  ನಗದು ಬೇಡಿಕೆ ಮುಂತಾದ ಅಂಶಗಳನ್ನು  ಗಣನೆಗೆ ತೆಗದುಕೊಂಡು,  ಆ ಶಾಖೆಯಲ್ಲಿ ಇಟ್ಟುಕೊಳ್ಳಬಹುದಾದ ಗರಿಷ್ಠ  ನಗದು ಪ್ರಮಾಣವನ್ನು ನಿರ್ಧರಿಸುತ್ತವೆ. ಈ ಪ್ರಮಾಣಕ್ಕಿಂತ ಹೆಚ್ಚು ಇರುವ  ನಗದನ್ನು  ಬ್ಯಾಂಕುಗಳು  ತಮ್ಮ ಬ್ಯಾಂಕಿನ ಕರೆನ್ಸಿಚೆಸ್ಟ್‌ ಅಥವಾ ಹತ್ತಿರದ ನಗದು  ಪೂಲಿಂಗ್‌  ಶಾಖೆಗೆ  ರವಾನಿಸುತ್ತವೆ. ಈ ರೀತಿ ಮಾಡುವುದರಿಂದ, ಬ್ಯಾಂಕುಗಳು ರಿಸರ್ವ್‌ ಬ್ಯಾಂಕ್‌ನಲ್ಲಿ ಇಡಬೇಕಾದ ಕಡ್ಡಾಯವಾದ ಶೇ.4ರಷ್ಟು  ನಗದನ್ನು ಕ್ರೋಢೀಕರಿಸಲು ಸಹಾಯವಾಗುತ್ತದೆ.  ಕರೆನ್ಸಿ ಚೆಸ್ಟ್‌ನಲ್ಲಿ ಇರುವ  ಬ್ಯಾಲೆನ್ಸ  ರಿಸರ್ವ್‌ ಬ್ಯಾಂಕ್‌ನ ಆಸ್ತಿ ಆಗಿರುವುದರಿಂದ, ರಿಸರ್ವ್‌ ಬ್ಯಾಂಕ್‌ನ ನಿಯಮಾವಳಿಯನ್ನು ಅನುಸರಿಸಿದಂತೆ ಆಗುತ್ತದೆ.   ಕರೆನ್ಸಿ ಚೆಸ್ಟ್‌ ಬ್ಯಾಂಕಿನಲ್ಲಿಯೇ ಇದ್ದರೂ  ಮತ್ತು ಬ್ಯಾಂಕ್‌ ಸಿಬ್ಬಂದಿಗಳೇ ಅದನ್ನು ನಿರ್ವಹಿಸಿದರೂ, ಅದು ರಿಸರ್ವ್‌ ಬ್ಯಾಂಕ್‌ನ   ಆಸ್ತಿಯಾಗಿರುತ್ತದೆ.   ಬ್ಯಾಂಕ್‌ನಲ್ಲಿ ಇರುವ ಕ್ಯಾಶ್‌ ಅನ್ನು ಸುರಕ್ಷಿ$ತತೆಯ ದೃಷ್ಟಿಯಲ್ಲಿ  ಕೂಡಾ ಬ್ಯಾಂಕಿನಲ್ಲಿ ಹೆಚ್ಚು ನಗದನ್ನು ಇಡುವುದಿಲ್ಲ.  ಬ್ಯಾಂಕ್‌ನಲ್ಲಿ ನಿಗದಿ ಪಡಿಸಿದ   ನಗದು ಪ್ರಮಾಣಕ್ಕೆ ವಿಮೆ ಇರುತ್ತಿದ್ದು, ಇದಕ್ಕೆ ಮೀರಿ ನಗದು ಇರಿಸಿಕೊಂಡು ಏನಾದರೂ ಸಂಭವಿಸಿದರೆ, ಬ್ಯಾಂಕಿಗೆ  ವಿಮಾ ಪರಿಹಾರ ದೊರಕುವುದಿಲ್ಲ. ಅಂತೆಯೇ ಬ್ಯಾಂಕುಗಳಲ್ಲಿ ದೊಡ್ಡ  ಪ್ರಮಾಣದ  ನಗದನ್ನು  ಇಟ್ಟು ಕೊಳ್ಳುವುದಿಲ್ಲ. ನಗದು ಬೇಡಿಕೆ ದೊಡ್ಡದಿ¨ªಾಗ, ಮುಂಚಿತವಾಗಿ ತಿಳಿಸಬೇಕು ಅಥವಾ ಮಾರನೆ ದಿನ ಬರಬೇಕು ಎಂದು ಬ್ಯಾಂಕ್‌ಗಳು ಹೇಳುತ್ತವೆ.   ಈ ನಗದು ಪ್ರಮಾಣವನ್ನು ಮೀರಿದರೆ  ಶಾಖೆ ವಿರುದ್ಧ ಶಿಸ್ತು ಕ್ರಮವನ್ನು ತೆಗದುಕೊಳ್ಳುತ್ತಾರೆ.

ಕಡಿಮೆ ಕ್ಯಾಶ್‌ ಇಟ್ಟುಕೊಳ್ಳುವುದರ ಹಿಂದಿನ  ಉದ್ದೇಶ ಏನು?
ಅರ್ಥ ಶಾಸ್ತ್ರದಲ್ಲಿ ಮತ್ತು ಬ್ಯಾಂಕಿಂಗ್‌ನಲ್ಲಿ    ಐಡ್ಲ್ ಕ್ಯಾಶ್‌  (idle cash) ಪರಿಕಲ್ಪನೆ, ಕ್ಯಾಶ್‌ ಅನ್ನು ದುಡಿಸಿ  ಗರಿಷ್ಠ ಆದಾಯವನ್ನು ಪಡೆಯಬೇಕು ಎನ್ನುವ  ಚಿಂತನೆಗೆ  ವ್ಯತಿರಿಕ್ತ. ಹೆಚ್ಚಿಗೆ ಕ್ಯಾಶ್‌ ಅನ್ನು ಬ್ಯಾಂಕಿನಲ್ಲಿ ಇಟ್ಟರೆ, ಅದನ್ನು ದುಡಿಸಿ ಆದಾಯ ಪಡೆಯುವ ಅವಕಾಶ ತಪ್ಪಿ  ಆ ಮಟ್ಟಿಗೆ ಆದಾಯ   ಕಡಿಮೆಯಾಗುತ್ತದೆ ಮತ್ತು  ಬೇರೆ ಕಡೆ ವರ್ಗಾಯಿಸಿ  ಆದಾಯ ಪಡೆಯುವ ಅವಕಾಶವೂ ತಪ್ಪುತ್ತದೆ.  ಅಂತೆಯೇ ಬ್ಯಾಂಕುಗಳು ಕಡಿಮೆ ಅಥವಾ ವ್ಯವಹಾರಕ್ಕೆ ಬೇಕಾಗುವಷ್ಟು ನಗದನ್ನು ಬ್ಯಾಂಕಿನಲ್ಲಿ ಇಟ್ಟುಕೊಳ್ಳುತ್ತವೆ. ಈ ನಿಯಮಾವಳಿಯೇ ಒಮ್ಮೊಮ್ಮೆ ಗ್ರಾಹಕರು  ಹೆಚ್ಚಿನ ಮೊತ್ತದ ಹಣವನ್ನುಡ್ರಾ ಮಾಡಲು  ಇಚ್ಚಿಸಿದಾಗ ಬ್ಯಾಂಕುಗಳು ಮುಜುಗರ ಅನುಭವಿಸುವಂತೆ ಮಾಡುತ್ತವೆ.  
ಅದೇ ರೀತಿ ಕೆಲವು ಬಾರಿ ದೊಡ್ಡ ಮೊತ್ತದ ಠೇವಣಿ ಬಂದಾಗ ಕೂಡಾ ಅದನ್ನು ಸ್ವೀಕರಿಸಲು ಹಿಂಜರಿಯುತ್ತವೆ.

ಅಕಸ್ಮಾತ್‌ ಆ ಗ್ರಾಹಕರು ದೊಡ್ಡ ಮೊತ್ತದ ಹಣವನ್ನು ಡ್ರಾ ಮಾಡಲು ಬಂದು  ಬ್ಯಾಂಕಿನಲ್ಲಿ ಅಷ್ಟು   ಕ್ಯಾಶ್‌  ಇಲ್ಲದಿದ್ದರೆ ಮುಜುಗರ ಅನುಭವಿಸ ಬೇಕಾಗುತ್ತದೆ.ಕೆಲವು ಗ್ರಾಹಕರಿಗೆ  ಬ್ಯಾಂಕಿನ ನಿಯಮಾವಳಿಯನ್ನು  ಕೇಳಿಸಿಕೊಳ್ಳುವ ವ್ಯವಧಾನ ಇರುವುದಿಲ್ಲ. ಇನ್ನು ಕೆಲವರು ಕೇಳಿಸಿಕೊಳ್ಳುವುದಿಲ್ಲ. ಅವರಿಗೆ ಅವರ ಕಾರ್ಯ ಮುಖ್ಯ.
ಬ್ಯಾಂಕುಗಳಲ್ಲಿ idle cash ಇರದಂತೆ ನೋಡಿಕೊಳ್ಳುವುದು,  ಗ್ರಾಹಕರ  ಬೇಡಿಕೆ ಪೂರೈಸುವುದು, ಮುಖ್ಯಕಾರ್ಯಾಲಯ ನಿಗದಿ ಪಡಿಸಿದ ನಗದು ಮಿತಿಯನ್ನು ಮೀರದಂತೆ ಜಾಗೃತೆ ವಹಿಸುವುದು, ಬ್ಯಾಂಕ್‌ ಮ್ಯಾನೇಜರುಗಳಿಗೆ ಒಂದು ರೀತಿಯ ತಂತಿಯ  ಮೇಲಿನ ನಡಿಗೆಯಂತೆ. ಮೇಲಿನ  ಅಧಿಕಾರಿಗಳಿಂದ ತರಾಟೆಯನ್ನು ಸಹಿಸಿ ಕೊಳ್ಳಬಹುದು.ಆದರೆ, ಗ್ರಾಹಕರ ಬೇಡಿಕೆಯನ್ನು  ಪೂರೈಸಲಾಗದಿದ್ದರೆ ಆಗುವ ಪರಿಣಾಮ ಮಾತ್ರ ತೀವ್ರವಾಗಿರುತ್ತದೆ.

– ರಮಾನಂದ ಶರ್ಮಾ

ಟಾಪ್ ನ್ಯೂಸ್

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

Pro Kabaddi: ಒಂದಂಕದಿಂದ ಸೋತ ಬೆಂಗಳೂರು ಬುಲ್ಸ್‌

Pro Kabaddi: ಒಂದಂಕದಿಂದ ಸೋತ ಬೆಂಗಳೂರು ಬುಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.