ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟೋ, ಕೋಟಿರ್ನ ಆದೇಶವೋ…


Team Udayavani, Jun 12, 2017, 12:20 PM IST

number-plate.jpg

ನಾವು ವಾಹನ ಚಾಲಕರು. ನಮ್ಮ ವಾಹನದ ನಂಬರ್‌ಪ್ಲೇಟ್‌ ವಿಚಾರದಲ್ಲೂ ವೈವಿಧ್ಯತೆಯನ್ನು ಬಯಸುವವರು. ತರಹೇವಾರಿ ಅಕ್ಷರಗಳು, ಡಿಸೈನ್‌ಗಳ ನಂಬರ್‌ಪ್ಲೇಟ್‌ ಹಾಕಿಸುತ್ತಿದ್ದೇವೆ. ಇದರಿಂದ ಅಂತಹ ಸಮಸ್ಯೆಯೇನಿಲ್ಲ. ಆದರೆ ಉಗ್ರಗಾಮಿಗಳು, ದರೋಡೆಕೋರರು ನಕಲಿ ನಂಬರ್‌ ಪ್ಲೇಟ್‌ಗಳನ್ನು ಬಳಸಿ ದೇಶದ ಸಮಗ್ರತೆಗೆ ಧಕ್ಕೆ ತರಬಲ್ಲರು. ಜನರ ಜೀವ, ದುಡಿಮೆಗಳನ್ನು ಕೊಳ್ಳೆಹೊಡೆಯಬಲ್ಲರು. ಈ ಹಿನ್ನೆಲೆಯಲ್ಲಿಯೇ ಇವಕ್ಕೆಲ್ಲ ಜನರ ಫ್ಯಾಶನಬಲ್‌ ನಂಬರ್‌ ಪ್ಲೇಟ್‌ಗೂ ಗುಡ್‌ಬೈ ಹೇಳಿ ರಾಷ್ಟ್ರದಾದ್ಯಂತ ಏಕಪ್ರಕಾರದ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳುವ ಕಾಲ 2005ರ ವೇಳೆಗೇ ಬಂದಿತ್ತು. 2005ರ ರಿಟ್‌ ಆದೇಶದ ಸಂಬಂಧ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ಗಳನ್ನು ಕಡ್ಡಾಯವಾಗಿ ಬಳಸಲು ಸುಪ್ರೀಂಕೋರ್ಟ್‌ ಆದೇಶಿಸಿತ್ತು.

ಇನ್ನೂ ಸ್ವಾರಸ್ಯವೆಂದರೆ, 1989ರಲ್ಲಿಯೇ ಇಂತದೊಂದು ಯೋಚನೆ ಕೇಂದ್ರ ಸರ್ಕಾರಕ್ಕೆ ಬಂದಿತ್ತು. ಅದೇ ವರ್ಷ ಕೇಂದ್ರ ಮೋಟಾರ್‌ ವೆಹಿಕಲ್‌ ನಿಯಮದ 50ನೇ ವಿಧಿಯನ್ನು ತಿದ್ದುಪಡಿ ಮಾಡಿ ದೇಶದಾದ್ಯಂತ ಒಂದೇ ಮಾದರಿಯ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಬೇಕು. ನಕಲು ಮಾಡಲು ಬಾರದಂತಹ ಕ್ರೋಮಿಯಂ ಲೇಪನದ ಹಾಲೋಗ್ರಾಮ್‌ ಅನ್ನು ಅದು ಹೊಂದಿರಬೇಕು ಎಂದು ಸೂಚಿಸಿತ್ತು. ಸರ್ಕಾರಗಳ ಆದ್ಯತೆಗಳೇ ಬೇರೆಯಾಗಿರುವುದರಿಂದ ಈ ಯೋಜನೆ ಜಾರಿಗೆ ಬರಲೇ ಇಲ್ಲ. 2005ರ ಜೂನ್‌ ಒಂದರಂದು ದೇಶದ ಉಚ್ಚ ನ್ಯಾಯಾಲಯ ಒಂದು ತೀರ್ಪು ನೀಡಿ, 2007ರ ಅಕ್ಟೋಬರ್‌ 31ರಿಂದ ಎಲ್ಲ ಹೊಸ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಜೋಡಿಸಲೇಬೇಕು. 2009ರಿಂದ ಹಳೆಯ ವಾಹನಗಳಿಗೆ ಹಂತಾನುಹಂತವಾಗಿ ಜಾರಿ ಮಾಡಿ ಎಂದು ತಾಕೀತು ಮಾಡಿದ್ದೂ ಆಯ್ತು. 
ಸರ್ಕಾರ ಮಾತ್ರ ಜಪ್ಪಯ್ಯ ಎನ್ನಲಿಲ್ಲ.

2012 ಬಂತು. ಮತ್ತೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಗಳಿಗೆ ಚಾಟಿಯೇಟು ಬೀಸಿತು. 2012ರ ಫೆಬ್ರವರಿ ಏಳರಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ವಿಲೇವಾರಿ ಮಾಡಿದ ನ್ಯಾಯಾಲಯ, ಏಪ್ರಿಲ್‌ 30ರಿಂದ ಅಷ್ಟೂ ಹೊಸ ವಾಹನಗಳು ಹೆಚ್‌ಎಸ್‌ಆರ್‌ಪಿ ಜೋಡಿಸಿಕೊಂಡೇ ರಸ್ತೆಗಿಳಿಯಬೇಕು ಎಂದಿತು. ಜೂನ್‌ 15ರಿಂದ ಹಳೆ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಶೃಂಗಾರಕ್ಕೆ ಎರಡು ವರ್ಷ ಸಮಯಾವಕಾಶ ಎಂದಿತ್ತು. 

ಊಹೂn, ಜಾರಿಯಂತೂ ಆಗಲಿಲ್ಲ. 2005ರ ಪ್ರಕರಣವನ್ನಿಟ್ಟುಕೊಂಡು ಮತ್ತೆ 2015ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಇನ್ನೊಂದು ರಿಟ್‌ ಪಿಟಿಷನ್‌ ದಾಖಲಾಗಿತ್ತು. ಅದನ್ನಿಟ್ಟುಕೊಂಡು ಕೋರ್ಟ್‌ ತನ್ನದೇ ತೀರ್ಪಿನ ಜಾರಿಗೆ ಸಾಕಷ್ಟು ಪ್ರಾಯೋಗಿಕ ಎನ್ನಬಹುದಾದ ಸಲಹೆಗಳ ಜೊತೆಗೆ 2016ರಲ್ಲಿ  ಸರ್ಕಾರವನ್ನು ಎಚ್ಚರಿಸಿತ್ತು. ನ್ಯಾಯಾಂಗ ನಿಂದನೆಯ ಅಂಶದ ಕುರಿತು ಅದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕುರಿತಾಗಿ ಒಂದು ಮಟ್ಟಿನ ಕನಿಕರವನ್ನು ತೋರಿತ್ತು. ಈಗ 2017. ಅರ್ಥವಾಗಿರುವುದು ಒಂದು ಅಂಶ ಮಾತ್ರ. ಈ ದೇಶದಲ್ಲಿ ಸುಪ್ರೀಂಕೋರ್ಟ್‌ ಆದೇಶಕ್ಕೂ ಕಿಮ್ಮತ್ತಿಲ್ಲ!

ಹಾಗೆಂದು ಇಡೀ ದೇಶದಲ್ಲಿ ಎಲ್ಲಿಯೂ ಹೆಚ್‌ಎಸ್‌ಆರ್‌ಪಿ ಅಳವಡಿಕೆಯಾಗಿಲ್ಲ ಎಂಬ ತೀರ್ಮಾನಕ್ಕೆ ಬರುವುದು ಬೇಡ. ಮೇಘಾಲಯ, ಸಿಕ್ಕಿಂ, ಗೋವಾದಲ್ಲಿ ಅಳವಡಿಕೆ ಶೇ. 100ರ ಪ್ರಮಾಣದಲ್ಲಿ ಆಗಿದೆ. ತ್ರಿಪುರ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳಗಳಲ್ಲಿ ಟೆಂಡರ್‌ ಪ್ರಕ್ರಿಯೆಯ ಹಂತವನ್ನೇ ದಾಟಿಲ್ಲ.  ಸುಪ್ರೀಂ ಕೋರ್ಟ್‌ ಹೇಳಿರುವ ಪ್ರಕಾರ, ದೆಹಲಿ, ಕೇರಳ, ಮಣಿಪುರಗಳಲ್ಲಿ ಮೊದಲ ಹಂತದಲ್ಲಿಯೇ ಆದ್ಯತೆಯ ಮೇಲೆ ಈ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಜಾರಿ ಆಗಬೇಕಾಗಿದೆ. 

ಈ ಪ್ಲೇಟ್‌ ಹಾಕಿಸಿಕೊಳ್ಳಲು ನಿರ್ದಿಷ್ಟ ವೆಚ್ಚವನ್ನು ವಾಹನ ಮಾಲೀಕರೆ ಮಾಡಬೇಕಾಗಿದೆ. ಈ ಹಿಂದೆ ಸಿಕ್ಕ ಮಾಹಿತಿಗಳ ಪ್ರಕಾರ, ನಾಲ್ಕು ಚಕ್ರದ ವಾಹನಗಳಿಗೆ 334 ರೂ., ದ್ವಿಚಕ್ರ ವಾಹನಕ್ಕೆ 111 ರೂ. ನಿಗದಿಪಡಿಸಲಾಗಿದೆ. ಕಮರ್ಷಿಯಲ್‌ ವಾಹನಗಳಿಗೆ 134 ರೂ. ಹಾಗೂ ದೊಡ್ಡ ಗಾತ್ರದ ವ್ಯಾಪಾರೀ ವಾಹನಗಳಿಗೆ 258 ರೂ. ಬೆಲೆ ನಿಶ್ಚಯಿಸಲಾಗಿದೆ. ಈ ದರ ನಿಗದಿಯಲ್ಲಿಯೇ  ನಿಯಮ ಜಾರಿಯ ಬೀಜವೂ ಇದೆ. ಹಲವು ರಾಜ್ಯಗಳಲ್ಲಿ ಬೋರ್ಡ್‌ ಗುತ್ತಿಗೆ ಹಿಡಿಯಲು ಮೇಲಿನ ದರ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಬಾರಿ ಟೆಂಡರ್‌ ಕರೆದರೂ ಯಾವುದೇ ಕಂಪನಿ ಮುಂದೆ ಬಂದಿಲ್ಲ. ನಾಗಾಲ್ಯಾಂಡ್‌ನ‌ಲ್ಲಿ 1,250 ರೂ. ವಸೂಲಿಸಲಾಗುತ್ತಿದ್ದರೆ. ಮಿಜೋರಾಂನಲ್ಲಿ 900 ರೂ. ಪಡೆಯಲಾಗುತ್ತಿದೆ ಎಂದು ಅಲ್ಲಿನ ವಾಹನ ಮಾಲೀಕರು ಗುರುಗುಟ್ಟುತ್ತಿದ್ದಾರೆ.

ಒಂದೊಮ್ಮೆ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಆರಂಭವಾದರೆ ವಾಹನ ಚಾಲಕರು ಸಂಬಂಧಿಸಿದ ಆರ್‌ಟಿಓ ಕಚೇರಿಯಲ್ಲಿ ಅಥವಾ ಮಾನ್ಯತೆ ಪಡೆದ ಗುತ್ತಿಗೆದಾರ ಕಂಪನಿಯಲ್ಲಿ ಹೆಚ್‌ಎಸ್‌ಆರ್‌ಪಿ ಹಾಕಿಸಿಕೊಳ್ಳಬಹುದು. ನಮ್ಮ ಸ್ಮಾರ್ಟ್‌ ರಿಜಿಸ್ಟ್ರೇಷನ್‌ ಕಾರ್ಡ್‌ನ್ನು ಕೊಟ್ಟ 48 ಘಂಟೆಗಳಲ್ಲಿ ಆರ್‌ಟಿಓ ನಮಗೆ ಹೆಚ್‌ಎಸ್‌ಆರ್‌ಪಿ ಮಂಜೂರು ಮಾಡುತ್ತಾರೆ. ಒಂದೊಮ್ಮೆ ಅಪಘಾತದ ಸಂದರ್ಭದಲ್ಲಿ ಹೆಚ್‌ಎಸ್‌ಆರ್‌ಪಿ ಹಾನಿಯಾದಲ್ಲಿ ಅಥವಾ ಇನ್ನಾವುದೇ ಕಾರಣಕ್ಕೆ ಬದಲಿಸಬೇಕಾದರೂ ಆರ್‌ಟಿಓನಿಂದಲೇ ಬದಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಒಂದು ಬೋರ್ಡ್‌ಗೆ ಐದು ವರ್ಷಗಳ ಗ್ಯಾರಂಟಿಯನ್ನು ತಯಾರಕ ನೀಡಬೇಕಾಗುತ್ತದೆ. 

ಸುಪ್ರೀಂಕೋರ್ಟ್‌ ಈಗಾಗಲೇ ಹರ್ಯಾಣ ಸರ್ಕಾರಕ್ಕೆ 50 ಸಾವಿರ ರೂ. ದಂಡ ವಿಧಿಸಿ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದೆ. ಆದರೆ ಭಂಡ ಸರ್ಕಾರಗಳಿಗೆ ವಾಹನ ಕಳ್ಳತನ ತಪ್ಪಿಸುವ ಸಂಕಲ್ಪಶಕ್ತಿಯೂ ಕಾಣಿಸುತ್ತಿಲ್ಲ. 
ಹೆಚ್‌ಎಸ್‌ಆರ್‌ಪಿ ಬಳಸಿ ದೇಶದ ವಾಹನಗಳ ಸಂಪೂರ್ಣ ಮಾಹಿತಿಯನ್ನು ಒಂದೆಡೆ ಸಂಗ್ರಹಿಸಿಡಬೇಕು ಎಂಬುದು ಸಾರಿಗೆ ಸಚಿವಾಲಯದ ಕನಸು. ದೇಶದ ಭದ್ರತೆಯಿಂದ ಈ ಕೆಲಸ ತುರ್ತಾಗಿ ಆಗಬೇಕಿತ್ತು. ಆದರೆ  ಈ ನಿಟ್ಟಿನಲ್ಲಿ ಯಾವುದೇ ತರಾತುರಿ ಮಾತ್ರ ಕಾಣುತ್ತಿಲ್ಲ.

ಹೆಚ್‌ಎಸ್‌ಆರ್‌ಪಿ ಲಾಭ ಏನು?
ಸಾರಿಗೆ ಇಲಾಖೆ ಹೆಚ್ಚು ಭದ್ರತೆಯ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಅದರ ಲಾಭಗಳತ್ತ ಕೂಡ ಬೆರಳು ಮಾಡಿ ತೋರಿಸಲಾಗುತ್ತಿದೆ.

– ಯಾವುದೇ ವಾಹನ ಚಾಲಕ ಟ್ರಾಫಿಕ್‌ ನಿಯಮ ಉಲ್ಲಂಘನೆ ಅಪರಾಧದಲ್ಲಿ ಭಾಗಿಯಾದರೆ ಸುಲಭವಾಗಿ ಗುರುತಿಸಲು ಸಾಧ್ಯ.

– ವಾಹನ ಮಾರಾಟದಲ್ಲಿ ವಿಶ್ವಾಸಾರ್ಹತೆ ಮೂಡುತ್ತದೆ. ಕದ್ದ ವಾಹನವನ್ನು ಯಾಮಾರಿ ಖರೀದಿಸುವ ಅಪಾಯ ಕಡಿಮೆ. ಏಕೆಂದರೆ ಹೆಚ್‌ಎಸ್‌ಆರ್‌ಪಿ ವಾಹನದ ಪೂರ್ಣ ಮಾಹಿತಿ ಒದಗಿಸುತ್ತದೆ. ಹೆಚ್‌ಎಸ್‌ಆರ್‌ಪಿಯಲ್ಲಿ ವಾಹನದ ಚಾರ್ಸಿ ನಂಬರ್‌, ಎಂಜಿನ್‌ ನಂಬರ್‌ ಕೂಡ ದಾಖಲಾಗಿರುತ್ತದೆ. 

– ಕದ್ದ ವಾಹನವನ್ನು ದಕ್ಕಿಸಿಕೊಳ್ಳುವುದು ಕಷ್ಟ ಕಷ್ಟ. ನಂಬರ್‌ಪ್ಲೇಟ್‌ ಅನ್ನು ನಕಲು ಮಾಡುವುದು ಕಠಿಣ. ಇದು ಕಳ್ಳರ ತಾಪ್ರತ್ರಯವನ್ನು ಹೆಚ್ಚಿಸಿ ಮಾಲೀಕರ ನೆಮ್ಮದಿಯ ನಿಟ್ಟುಸಿರಿಗೆ ಕಾರಣವಾಗಬಹುದು!

– ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಕೂಡಲೇ ವಾಹನದ ಗುರುತು ಲಭ್ಯವಾಗುವುದರಿಂದ ಪತ್ತೆ ಸಲೀಸು. ವಾಸ್ತವವಾಗಿ, ನಂಬರ್‌ ಪ್ಲೇಟ್‌ನಲ್ಲಿ ಲೇಸರ್‌ ಆಧಾರಿತವಾಗಿ ನೋಂದಣಿ ಸಂಖ್ಯೆಯನ್ನು ನಮೂದಿಸಿರುವುದರಿಂದ ಲೇಸರ್‌ ಡಿಟೆಕ್ಟರ್‌ ಕ್ಯಾಮರಾಗಳಿಂದ ವಾಹನದ ಪೂರ್ಣ ಮಾಹಿತಿಯನ್ನು ಕ್ಷಿಪ್ರ ವೇಗದಲ್ಲಿ ಪಡೆಯಬಹುದು. ಜೊತೆಜೊತೆಗೆ ಹೇಳಬೇಕಾದುದೆಂದರೆ, ಸಧ್ಯ ಭಾರತದಲ್ಲಿ ಲೇಸರ್‌ ಡಿಟೆಕ್ಟರ್‌ ಕ್ಯಾಮರಾಗಳೇ ದೊರಕುತ್ತಿಲ್ಲ. ಇದರ ಆಮದು ಮಾಡಿಕೊಳ್ಳಲೂ ಒಂದು ಡೀಲ್‌ ಕುದುರಿದರೆ ಅಚ್ಚರಿ ಇಲ್ಲ!

ಹೆಚ್‌ಎಸ್‌ಆರ್‌ಪಿ ಹ್ಯಾಗಿರುತ್ತೆ ಗೊತ್ತಾ?
ಈ ನಂಬರ್‌ಪ್ಲೇಟ್‌ಗೆ ಸ್ಪಷ್ಟ ಅಳತೆ ಇರುತ್ತದೆ. ದ್ವಿಚಕ್ರ ವಾಹನದ ಹಿಂಭಾಗದ ಪ್ಲೇಟ್‌ 200-100 ಮಿ.ಮೀ ಅಳತೆಯಾಗಿದ್ದರೆ ಮುಂಭಾಗದ್ದು 285-45 ಆಕಾರದಲ್ಲಿರುತ್ತದೆ. ಕಾರು ಮಾದರಿಯ ವಾಹನಕ್ಕೆ 500-120, ಭಾರದ ವಾಹನಗಳಲ್ಲಿ 340-200ರ ಅಳತೆ.

ಈ ಹೆಚ್‌ಎಸ್‌ಆರ್‌ಪಿಯಲ್ಲಿ ತಿಳಿ ನೀಲಿ ಬಣ್ಣದ IND ಎಂಬ ನಮೂದು ಇರುತ್ತದೆ. ಹಾಲೋಗ್ರಾಮ್‌ನಲ್ಲಿ ಚಕ್ರದ ಗುರುತನ್ನು ಅಳವಡಿಸಿರಲಾಗುತ್ತದೆ. ಹೆಚ್‌ಎಸ್‌ಆರ್‌ಪಿಯನ್ನು ಒಂದು ಮೀ ದಪ್ಪದ ಅಲ್ಯುಮಿನಿಯಂ ಪ್ಲೇಟ್‌ನಲ್ಲಿ ತಯಾರಿಸಲಾಗಿರುತ್ತದೆ. ಪ್ಲೇಟ್‌ನ ಮೊನೆಯನ್ನು ಕತ್ತರಿಸಿ ವೃತ್ತಾಕಾರ ಕೊಡಲಾಗುತ್ತದೆ. ನಂಬರ್‌ಪ್ಲೇಟ್‌ನಲ್ಲಿ ನೋಂದಣಿಯನ್ನು ಇಂಗ್ಲೀಷ್‌ ಅಕ್ಷರ ಹಾಗೂ ಅರೇಬಿಕ್‌ ಸಂಖ್ಯೆಗಳಲ್ಲಿ ಮಾತ್ರ ದಾಖಲಿಸಲಾಗಿರುತ್ತದೆ. ಒಟ್ಟು 7 ಅಂಕಿಯನ್ನು ಲೇಸರ್‌ನಲ್ಲಿ ಮುದ್ರಿಸಿರಲಾಗುತ್ತದೆ.

ಈ ನಂಬರ್‌ ಪ್ಲೇಟ್‌ ಅನ್ನು ಸ್ನಾಪ್‌ ಲಾಕ್‌ ಎಂಬ ನೂತನ ತಂತ್ರಜಾnನದ ಆಧಾರದಲ್ಲಿ ವಾಹನಕ್ಕೆ ಜೋಡಿಸಲಾಗಿರುತ್ತದೆ. ಒಂದೊಮ್ಮೆ ಇದನ್ನು ತೆಗೆಯಲು ಪ್ರಯತ್ನಿಸಿದರೆ ಮತ್ತೆ ಅದನ್ನು ಜೋಡಿಸಲು ಬರುವುದಿಲ್ಲ.

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

BPL-CARD

Food Department Operation: ಬಿಪಿಎಲ್‌ ಚೀಟಿದಾರರಿಗೆ ಎಪಿಎಲ್‌ ಕಾವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.