ರಸ್ತೆಗಿಳಿದ ಕೋನ; ಕರೆಂಟ್‌ನಿಂದ ಓಡುವ suv ಕಾರು
Team Udayavani, Jul 22, 2019, 5:00 AM IST
ವಿದ್ಯುತ್‌ಚಾಲಿತ ಕಾರುಗಳು ಭಾರತದಲ್ಲಿ ಹಿಂದಿನಿಂದಲೂ ಕಾರ್ಯಾಚರಿಸುತ್ತಿವೆಯಾದರೂ ಪೂರ್ಣಪ್ರಮಾಣದ, ಅದರಲ್ಲೂ ಎಸ್‌ಯುವಿ ವಿಭಾಗದಲ್ಲಿ ಒಂದೂ ಇರಲಿಲ್ಲ. ಈ ನಿಟ್ಟಿನಲ್ಲಿ ದಕ್ಷಿಣ ಕೊರಿಯಾದ ದೈತ್ಯ ಕಾರು ಕಂಪನಿಯಾದ ಹುಂಡೈ ಈ ಸ್ಪರ್ಧೆಗೆ ಕೈ ಹಾಕಿದ್ದು, ಇತ್ತೀಚೆಗೆ, ಕೋನ ಎಂಬ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಿದೆ. ಭಾರತದ ಮೊಟ್ಟ ಮೊದಲ, ಸಂಪೂರ್ಣ ವಿದ್ಯುತ್ ಚಾಲಿತ ಎಸ್‌ಯುವಿ ಕಾರು ಆಗಿರುವ ಇದು, ತನ್ನಲ್ಲಿನ ತಾಂತ್ರಿಕತೆ, ವಿನ್ಯಾಸ ಮುಂತಾದ ಸವಲತ್ತುಗಳನ್ನು ನೀಡುವಲ್ಲಿ ರಾಜಿ ಮಾಡಿಕೊಂಡಿಲ್ಲ. ಕಾರು ಎರಡು ಮಾದರಿಗಳಲ್ಲಿ ಲಭ್ಯವಿದೆ. ಒಂದು ಮಾದರಿ, ಫುಲ್ ಚಾರ್ಜ್‌ನಲ್ಲಿ 449ಕಿ.ಮೀ ಕ್ರಮಿಸಿದರೆ ಇನ್ನೊಂದು 289 ಕಿ.ಮೀ ಕ್ರಮಿಸುವ ಮಾದರಿಗಳಲ್ಲಿ ಒಂದನ್ನು ಗ್ರಾಹಕರು ಆರಿಸಿಕೊಳ್ಳಬಹುದು.
ಸೂಪರ್ ಇಂಟೀರಿಯರ್
ಒಂದು ಪ್ರೀಮಿಯಂ ಎಸ್‌ಯುವಿ ಕಾರಿಗೆ ಏನೇನು ಬೇಕೋ ಅವಲ್ಲವೂ ಈ ಕಾರಿನಲ್ಲಿದೆ. ಉತ್ತಮ ದರ್ಜೆಯ ಪ್ಲಾಸ್ಟಿಕ್ ಬಳಸಲಾಗಿರುವ ಡ್ಯಾಶ್‌ಬೋರ್ಡ್, ಲೆದರ್ ಫಿನಿಶ್x ಸೀಟುಗಳು, ಮುಂದುಗಡೆ ಕೂರುವವರಿಗೆ ಕಾಲಿಡಲು ಸಾಕಷ್ಟು ಜಾಗ ಅಲ್ಲದೆ ಬಾಗಿಲುಗಳಲ್ಲಿ, ನೀರಿನ ಬಾಟಲಿ ಇಡುವ ಜಾಗದಲ್ಲಿ, ಗ್ಲೌಸ್ ಬಾಕ್ಸ್‌ನಲ್ಲಿ, ಮುಂಭಾಗದ ಎರಡು ಸೀಟುಗಳ ನಡುವಿನ ಪ್ಯಾನೆಲ್ ಅನೇಕ ಗ್ಯಾಜೆಟ್‌ಗಳನ್ನಿಡಲು ವ್ಯವಸ್ಥೆ ರೂಪಿಸಲಾಗಿದೆ. ಮುಂಭಾಗದಲ್ಲಿ ಟಚ್‌ಸ್ಕ್ರೀನ್ ಪ್ಯಾನೆಲ್, ಮ್ಯೂಸಿಕ್ ಸಿಸ್ಟಂ, ಟಿಲ್ಟ್ ಆ್ಯಂಡ್ ಟೆಲಿಸ್ಕೋಪಿಕ್- ಪವರ್ ಸ್ಟೇರಿಂಗ್, ಮೊಬೈಲ್ ಚಾರ್ಜರ್, ಕ್ಲೈಮೇಟ್ ಕಂಟ್ರೋಲ್ಡ್ ಹವಾ ನಿಯಂತ್ರಣ ವ್ಯವಸ್ಥೆ, ಪ್ಯಾಸೆಂಜರ್ ಏರ್‌ಬ್ಯಾಗ್‌ಗಳು ಇತ್ಯಾದಿ ಇವೆ.
ಕೂಲಾದ ಬೇಸಗೆಯ ಡ್ರೈವಿಂಗ್
ತೈಲಾಧಾರಿತ ಇಂಜಿನ್ ಇದರಲ್ಲಿಲ್ಲವಾದ್ದರಿಂದ ಬಹುತೇಕ ನಿಶ್ಯಬ್ದವಾಗಿಯೇ ಚಲಿಸುತ್ತದೆ. ಉತ್ತಮ ಸಸ್ಪೆನÒನ್, ಸೂ¾ತ್ ಚಾಲನೆ, ಸುಲಭ ಗೇರ್ ಶಿಫ್ಟ್, ಡ್ರೈವಿಂಗ್‌ಗೆ ಹೊಸ ಮಜಾ ಕೊಡುತ್ತವೆ. ಮುಂಭಾಗದಲ್ಲಿನ ಎರಡೂ ಸೀಟುಗಳು ವೆಂಟಿಲೇಟೆಡ್ ಆಸನಗಳಾಗಿದ್ದು, ಅವುಗಳಲ್ಲಿನ ಸಣ್ಣ ರಂಧ್ರಗಳಿಂದ ಎ.ಸಿ. ಗಾಳಿಯು ಹೊರಬರುತ್ತದೆ. ಬೇಸಿಗೆಯಲ್ಲಿನ ಈ ಕಾರು ಚಾಲನೆ ಸವಾರರಿಗೆ ಖುಷಿ ಕೊಡಬಹುದು. ಹಿಂಬದಿ ಲಗೇಜು ಇಡಲು ವಿಶಾಲವಾದ ಬೂಟ್ ಸ್ಪೇಸ್(361 ಲೀಟರ್) ನೀಡಲಾಗಿದೆ.
ನಾಲ್ಕು ಡ್ರೈವಿಂಗ್ ಮೋಡ್‌ಗಳು
ನಾಲ್ಕು ಮಾದರಿಯ ಚಾಲನೆಗೆ ಅವಕಾಶವಿದ್ದು, ಎಕೋ, ಎಕೋ ಪ್ಲಸ್, ಕಂಫರ್ಟ್ ಹಾಗೂ ನ್ಪೋರ್ಟ್ ಮೋಡ್‌ಗಳಲ್ಲಿ ಕಾರನ್ನು ಚಲಾಯಿಸಬಹುದು. ಎಕೋ ಮೋಡ್‌ನಲ್ಲಿ ಗರಿಷ್ಠ ವೇಗ 90 ಕಿ.ಮೀ. ಹಾಗೂ ಬ್ಯಾಟರಿಯಲ್ಲಿನ ಚಾರ್ಜ್ ದೀರ್ಘ ಕಾಲ ಬರಲು ಸಹಕಾರಿ. ಅದೇ ರೀತಿ ಎಕೋ ಪ್ಲಸ್, ಕಂಫರ್ಟ್ ಮೋಡ್‌ಗಳಲ್ಲಿ ಗರಿಷ್ಠ ವೇಗ ಹೆಚ್ಚಾಗುತ್ತದೆ. ವೇಗವನ್ನು ಇಷ್ಟಪಡುವವರು ನ್ಪೋರ್ಟ್ಸ್ ಮೋಡ್ ಬಳಸಬಹುದು. ಗೇರ್ ಪ್ಯಾನಲ್‌ನಲ್ಲಿ ಗೆಯರ್ ಬದಲಾವಣೆಗೆ ಬಟನ್ ಸಿಸ್ಟಂ ಅಳವಡಿಸಲಾಗಿದೆ. ಇದರಲ್ಲಿ ನ್ಯೂಟ್ರಲ್, ಟಾಪ್, ರಿವರ್ಸ್ ಗೇರ್‌ಗಳನ್ನು ಕೇವಲ ಬಟನ್ ಅದುಮುವ ಮೂಲಕ ನೀವು ಬದಲಾಯಿಸಬಹುದು.
ಚಾರ್ಜ್ ಎಲ್ಲಿ ಮಾಡೋದು?
ಸಂಪೂರ್ಣ ಎಲೆಕ್ಟ್ರಿಕಲ್ ವಾಹನವಾಗಿರುವುದರಿಂದ ಕಾರಿನ ಮುಂಭಾಗದಲ್ಲಿ ಗ್ರಿಲ್ ಅಳವಡಿಸಲಾಗಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಅದರ ಜಾಗದಲ್ಲಿ ಚಾರ್ಜಿಂಗ್ ಪಾಯಿಂಟ್‌ಅನ್ನು ನೀಡಲಾಗಿದೆ. ಅಂದ ಹಾಗೆ ಕಾರನ್ನು ಮನೆಯಲ್ಲಿ ಹಾಗೂ ಅದಕ್ಕೆಂದೇ ಮೀಸಲಾದ ಹುಂಡೈ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ನುಗಳಲ್ಲಿಯೂ ಚಾರ್ಜ್ ಮಾಡಬಹುದಾಗಿದೆ. ಮನೆಯಲ್ಲಿ ಫುಲ್ ಚಾರ್ಜ್ ಮಾಡುವುದಾದರೆ 6- 9 ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಅದೇ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ನುಗಳಲ್ಲಾದರೆ 1 ಗಂಟೆ ಸಾಕಾಗುತ್ತದೆ.
ಅಂಕಿ ಅಂಶ
449 ಕಿ.ಮೀ.- ಒಂದು ಬಾರಿ ಚಾರ್ಜ್‌ಗೆ ಕ್ರಮಿಸುವ ಗರಿಷ್ಠ ದೂರ
6- 9 ಗಂಟೆ- ಫುಲ್ ಚಾರ್ಜಿಂಗ್‌ಗೆ ತಗುಲುವ ಸಮಯ
1 ಗಂಟೆ- ಫಾಸ್ಟ್ ಚಾರ್ಜಿಂಗ್
ಫೋಟೋ ಫೀಚರ್
– ಗೇರ್ ಬಾಕ್ಸ್ ಬದಲು ಬಟನ್ ಸಿಸ್ಟಮ್
– ಎ.ಸಿ ಗಾಳಿ ಸೂಸುವ ಸೀಟುಗಳು
-ಫ್ರಂಟ್ ಗ್ರಿಲ್‌ನಲ್ಲಿ ಚಾರ್ಜಿಂಗ್ ಪಾಯಿಂಟ್
– ಸನ್ ರೂಫ್
-ಚೇತನ್ ಓ .ಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.