ವಿಸಾ ಕೊಡಿ ಸಾ…

ಕಮರಿದ ಕನಸು

Team Udayavani, Apr 15, 2019, 10:26 AM IST

trump

ಒಂದು ಭಾರತೀಯ ಕಂಪನಿಯಿಂದ ಅಮೆರಿಕಕ್ಕೆ ಹೋಗಿ ಅಲ್ಲಿನ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ್‌, ಕಳೆದ ತಿಂಗಳಷ್ಟೇ ಅಮೆರಿಕದಿಂದ ಭಾರತಕ್ಕೆ ವಾಪಸಾಗಿರೆ. ಎರಡೇ ವಾರದಲ್ಲಿ ವಾಪಸಾಗುವಂತೆ ಅವರಿಗೆ ನೋಟಿಸ್‌ ಕಳುಹಿಸಲಾಗಿತ್ತು. ರಮೇಶ್‌ ಸಹೋದ್ಯೋಗಿಯ ಕತೆಯಂತೂ ಇನ್ನೂ ಹೀನಾಯ. ಆಕೆ ಅಮೆರಿಕದಲ್ಲಿದ್ದಾಗಲೇ ಮಗುವಾಗಿತ್ತು. ಆ ಮಗುವಿನ ಜೊತೆಗೇ ಆಕೆ ಅಮೆರಿಕವನ್ನೂ, ಗ್ರೀನ್‌ ಕಾರ್ಡ್‌ ಕನಸನ್ನೂ ಬಿಟ್ಟು ಭಾರತಕ್ಕೆ ವಾಪಸಾಗಬೇಕಾಯಿತು.

ಇಬ್ಬರಿಗೂ ಅಮೆರಿಕವು, ಎಚ್‌1 ಬಿ ವೀಸಾ ವಿಸ್ತರಿಸಲು ನಿರಾಕರಿಸಿತ್ತು.
ಇಂಥ ಸಾವಿರಾರು ಐಟಿ ಉದ್ಯೋಗಿಗಳು ತಮ್ಮ ಅಮೆರಿಕದಲ್ಲಿನ ಒಳ್ಳೆಯ ಉದ್ಯೋಗವನ್ನು ಬಿಟ್ಟು ಭಾರತಕ್ಕೆ ವಾಪಸಾಗುವ ಸ್ಥಿತಿ ಬಂದಿದೆ. ಕೆಲವರಿಗೆ ವೀಸಾ ಅವಧಿ ವಿಸ್ತರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರೆ ಇನ್ನು ಕೆಲವರಿಗೆ ಪದೇ ಪದೆ ಆರ್‌ಎಫ್ಇ ಕೇಳಲಾಗಿದೆ. ಆರ್‌ಎಫ್ಇ ಎಂದರೆ, ನೇರವಾಗಿ ವೀಸಾ ಅವಧಿ ವಿಸ್ತರಣೆಗೆ ತಿರಸ್ಕಾರವಲ್ಲದಿದ್ದರೂ ರಾಯಭಾರ ಕಚೇರಿ ಅಧಿಕಾರಿಗಳಿಗೆ ತೃಪ್ತಿಯಾಗುತ್ತಿರುವವರೆಗೂ ದಾಖಲೆ ಕೊಡುತ್ತಲೇ ಇರಬೇಕಾಗುತ್ತದೆ. ಇಷ್ಟಾಗಿಯೂ ವೀಸಾ ಅವಧಿ ಮುಂದುವರಿಯುತ್ತದೆ ಎಂದು ಹೇಳುವಂತಿಲ್ಲ.

ಕಳೆದ ಕೆಲವು ದಶಕಗಳು ಭಾರತೀಯ ಸಾಫ್ಟ್ವೇರ್‌ ಎಂಜಿನಿಯರುಗಳಿಗೆ ಅಮೆರಿಕವೊಂದು ಮುಕ್ತ ಹೃದಯದ ಅತಿಥಿಯಂತೆ ಇತ್ತು. ಡೊನಾಲ್ಡ ಟ್ರಂಪ್‌ ಅಧಿಕಾರಕ್ಕೆ ಬಂದ ನಂತರದಲ್ಲಿ ಅಮೆರಿಕದಲ್ಲಿನ ಜನರ ಉದ್ಯೋಗಗಳ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸುವುದರಿಂದಾಗಿ, ಎಚ್‌1 ಬಿ ವೀಸಾ ಪಡೆಯುವುದು ಕಷ್ಟದ ಸಂಗತಿಯಾಗಿದೆ. ಇದರ ಜೊತೆಗೆ ವೀಸಾ ಅವಧಿ ವಿಸ್ತರಣೆಯಂತೂ ಇನ್ನಷ್ಟು ಸಮಸ್ಯೆ ತಂದೊಡ್ಡಿದೆ. ವೀಸಾ ಅವಧಿ ವಿಸ್ತರಿಸದೇ ಇದ್ದುದರಿಂದ ಕಳೆದ ಎರಡು ವರ್ಷಗಳಲ್ಲಿ ಹಲವರು ವಾಪಸಾಗಿ¨ªಾರೆ ಹಾಗೂ ಇನ್ನೂ ಹಲವರು ಈಗಾಗಲೇ ಭಾರತದಅಲ್ಲೇ ಅವಕಾಶಕ್ಕೆ ಹುಡುಕಾಟ ನಡೆಸಿದ್ದಾರೆ.

ಅಲ್ಲೇ ಹುಟ್ಟಿ, ಕಲಿತ ಮಗುವನ್ನೂ ಭಾರತಕ್ಕೆ ಕರೆತರುವುದು ಸವಾಲಿನ ಸಂಗತಿ ಎಂದು ಕೆಲವೇ ತಿಂಗಳ ಹಿಂದೆ ಭಾರತಕ್ಕೆ ವಾಪಸಾದ ಇಂಜಿನಿಯರ್‌ ಒಬ್ಬರು ಹೇಳುತ್ತಾರೆ. ಅಮೆರಿಕದಲ್ಲಿ ಬೆಳೆದ ಮಕ್ಕಳು ಭಾರತದ ಜೀವನಶೈಲಿ, ಸಂಸ್ಕೃತಿ ಮತ್ತು ಶಿಕ್ಷಣದ ವಿಚಾರದಲ್ಲಿ ಹೊಂದಿಕೊಳ್ಳಲು ಕಷ್ಟಪಡುತ್ತಾರೆ.

2017ರಲ್ಲಿ ಎಚ್‌1 ಬಿ ವೀಸಾಗೆ ಅರ್ಜಿ ಸಲ್ಲಿಸಿದ 3.4 ಮಿಲಿಯನ್‌ ಜನರ ಪೈಕಿ 2.2 ಮಿಲಿಯನ್‌ ಜನರು ಭಾರತೀಯರೇ ಆಗಿದ್ದರು. 2018ರಲ್ಲಿ 30 ಕಂಪನಿಗಳ 13,177 ಐಟಿ ಉದ್ಯೋಗಿಗಳ ಎಚ್‌1 ಬಿ ವೀಸಾ ಅವಧಿ ವಿಸ್ತರಣೆಯನ್ನು ಅಮೆರಿಕ ನಿರಾಕರಿಸಿದೆ. ಈ ಪೈಕಿ ಭಾರತೀಯರೇ 8742 ಜನರಿ¨ªಾರೆ. ಬೃಹತ್‌ ಸಾಫ್ಟ್ವೇರ್‌ ಸರ್ವೀಸ್‌ ಕಂಪನಿ ಕಾಗ್ನಿಜೆಂಟ್‌ನಅಲ್ಲೇ 3548 ಉದ್ಯೋಗಿಗಳ ವೀಸಾ ಅವಧಿ ವಿಸ್ತರಣೆಗೆ ನಿರಾಕರಿಸಲಾಗಿದೆ. ಇನ್ನು ಇನ್ಫೋಸಿಸ್‌ನಲ್ಲಿ 2042, ಟಿಸಿಎಸ್‌ನಲ್ಲಿ 1744 ಉದ್ಯೋಗಿಗಳ ವೀಸಾ ಅವಧಿ ವಿಸ್ತರಣೆಗೆ ನಿರಾಕರಿಸಲಾಗಿದೆ. ಆದರೆ ಅಮೆರಿಕ ಮೂಲದ ಕಂಪನಿಗಳಲ್ಲಿ ಎಚ್‌1 ಬಿ ವೀಸಾ ಉದ್ಯೋಗಿಗಳ ಸಂಖ್ಯೆ ಹೆಚ್ಚಿದ್ದರೆ, ಭಾರತೀಯ ಮೂಲದ ಕಂಪನಿಗಳ ಮೇಲೆ ಮಿತಿ ಹೇರಲಾಗಿದೆ.

ವಿಸ್ತರಣೆ
ಎಚ್‌1 ಬಿ ವೀಸಾಗಳನ್ನು ಸಾಮಾನ್ಯವಾಗಿ 3 ವರ್ಷಗಳಿಗೆ ನೀಡಲಾಗುತ್ತದೆ. ನಂತರ ಮತ್ತೆ ಮೂರು ವರ್ಷಗಳಿಗೆ ವಿಸ್ತರಣೆ ಮಾಡಬಹುದಾಗಿದೆ. ಹಲವು ವರ್ಷಗಳಿಂದಲೂ ಅಮೆರಿಕದಅಲ್ಲೇ ಉದ್ಯೋಗದಲ್ಲಿರುವವರು ಅಂದರೆ ಅರು ವರ್ಷ ಪೂರೈಸಿರುವವರು ಪೌರತ್ವಕ್ಕೆ ಅರ್ಜಿ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಮೊದಲ ವಿಸ್ತರಣೆ ಅರ್ಜಿ ಸಲ್ಲಿಸುವಾಗ ಆರ್‌ಎಫ್ಇ ಕೇಳಲಾಗುತ್ತದೆ ಅಥವಾ ಗ್ರೀನ್‌ ಕಾಡ ಅಪ್ಲೆ„ ಮಾಡುವಾಗಲೂ ಆರ್‌ಎಫ್ಇ ಕೇಲಬಹುದು.

ಸಾಮಾನ್ಯವಾಗಿ ಭಾರತೀಯರಿಗೆ ಗ್ರೀನ್‌ ಕಾರ್ಡ್‌ ಬೇಕೆಂದರೆ 10 ವರ್ಷಗಳವರೆಗೆ ಕಾಯಬೇಕು. ಇನ್ನು ಆರ್‌ಎಫ್ಇ ಕೇಳಲಾಗಿದೆ ಎಂದರೆ ವೀಸಾ ಸಿಗುವುದಿಲ್ಲ ಎಂದೇ ಭಾವಿಸಬಹುದು. ಯಾಕೆಂದರೆ, ಒಮ್ಮೆ ಆರ್‌ಎಫ್ಇ ಕೇಳಲು ಆರಂಭಿಸಿದರು ಎಂದರೆ ಒಂದಾದ ಮೇಲೆ ಒಂದು ದಾಖಲೆಯನ್ನು ಕೊಡುತ್ತಲೇ ಇರಬೇಕು. ಇದರಿಂದಾಗಿ ಉದ್ಯೋಗದ ಮೇಲೆ ಗಮನ ಹರಿಸುವುದಕ್ಕಿಂತ ದಾಖಲೆ ಒಟ್ಟಾಗಿಸುವುದರಲ್ಲೇ ಉದ್ಯೋಗಿಗಳು ಹೆಚ್ಚು ಸಮಯವನ್ನು ಕಳೆಯಬೇಕಾಗುತ್ತದೆ. ಒಂದು ಆರ್‌ಎಫ್ಇಯಲ್ಲಿ 21 ಸ್ಪಷ್ಟನೆಯನ್ನು ನೀಡಬೇಕಾಗುತ್ತದೆ ಹಾಗೂ ಮುಂದಿನ ಎರಡೂವರೆ ವರ್ಷದ ಕೆಲಸದ ಯೋಜನೆಗಳ ವಿವರವನ್ನೂ ನಿಡಬೇಕಾಗುತ್ತದೆ.

ಈ ನರಕವನ್ನು ಹಾದು ಬಂದವರು ಹೇಳುವ ಪ್ರಕಾರ ಎಚ್‌1 ಬಿ ವೀಸಾ ಪಡೆಯುವಾಗ ಈ ಹಿಂದೆ ಇದ್ದ ನಿರಾಳ ಭಾವ ಈಗ ಮೂಡುವುದಿಲ್ಲ. ಕಂಫ‌ರ್ಟ್‌ ಲೆವೆಲ… ಎಂಬುದು ಹೊರಟು ಹೋಗಿದೆ. ಇದೆಲ್ಲದಕ್ಕೂ ಸರ್ಕಾರವೇ ಮೂಲ ಕಾರಣ. ಸರ್ಕಾರಕ್ಕೆ ಈಗ ಅಮೆರಿಕನ್ನರ ಉದ್ಯೋಗದ ಮೇಲೆ ಹೆಚ್ಚು ಗಮನವಿದೆ. ಕೇವಲ ಅತ್ಯಂತ ಉನ್ನತ ಕೌಶಲ ಹೊಂದಿರುವ ಕೆಲಸವನ್ನು ಮಾತ್ರ ಬೇರೆ ದೇಶದ ಉದ್ಯೋಗಿಗಳಿಗೆ ನೀಡಲಾಗುತ್ತದೆ.

ಕುಶಲಿಗಳಿಗೆ ಸಮಸ್ಯೆ ಇಲ್ಲ
ಇನ್ನೂ ಕೆಲವರಿಗೆ ಆರ್‌ಎಫ್ಇ ಅಡಿಯಲ್ಲಿ ಕೆಲಸ ಮುಂದುವರಿಸುವಂತೆ ಸೂಚಿಸಲಾಗಿದ್ದರೂ, ಒಮ್ಮೆ ಅವರ ಪ್ರಾಜೆಕ್ಟ್ ಮುಗಿದ ಮೇಲೆ ಮತ್ತೆ ಇದೇ ದಾಖಲೆ ಪ್ರಕ್ರಿಯೆನ್ನು ಪುನರಾವರ್ತಿಸಬೇಕಾಗುತ್ತದೆ. ಒಬ್ಬ ಐಟಿ ಇಂಜಿನಿಯರ್‌ ಹೇಳುವ ಪ್ರಕಾರ ಈ ವರ್ಷ ನಾನು ಸಲ್ಲಿಸಿದ ಎಲ್ಲ ದಾಖಲೆಗಳ ಜೊತೆಗೆ ಮುಂದಿನ ವರ್ಷ ಮತ್ತೂಂದಷ್ಟು ದಾಖಲೆಗಳನ್ನು ರಾಯಭಾರ ಕಚೇರಿಗೆ ಸಲ್ಲಿಸಿ ವೀಸಾ ಅವಧಿ ವಿಸ್ತರಣೆಗೆ ಕಾಯಬೇಕಿದೆ. ಯಾಕೆಂದರೆ ಈಗ ಮಾಡಿರುವ ವೀಸಾ ಅವಧಿ ವಿಸ್ತರಣೆ ಕೇವಲ ಒಂದು ವರ್ಷದ್ದು ಎನ್ನುತ್ತಾರೆ. ತೀರಾ ಕೆಲವರಿಗೆ ಮತ್ತು ಅತ್ಯಂತ ಹೆಚ್ಚು ಕುಶಲ ಉದ್ಯೋಗಿಗಳಿಗೆ ಮಾತ್ರವೇ ವೀಸಾ ಪ್ರಕ್ರಿಯೆ ಸರಾಗವಾಗಿ ನಡೆಯುತ್ತದೆ.

ಸಾಮಾನ್ಯವಾಗಿ, ಮೂರು ವರ್ಷಗಳವರೆಗೆ ಅಥವಾ ಆರು ವರ್ಷಗಳವರೆಗೆ ಕೆಲಸ ಮಾಡಿದ ಯುವಕರಿಗೆ ಅಥವಾ ಯುವತಿಯರಿಗೆ ಇದೊಂದು ಸಮಸ್ಯೆಯಲ್ಲ. ಆದರೆ ಅಮೆರಿಕದಲ್ಲೇ ಮಕ್ಕಳನ್ನೂ ಹೊಂದಿರುವವರಿಗೆ ಇದೊಂದು ದೊಡ್ಡ ಸವಾಲಾಗುತ್ತದೆ. ಯಾಕೆಂದರೆ, ಮಕ್ಕಳು ಒಟ್ಟು ಸಂಸ್ಕೃತಿಯಿಂದ ಸಂಸ್ಕೃತಿಗೆ ಬದಲಾಗಬೇಕಾಗುತ್ತದೆ. ಐಟಿ ಸೇವೆ ಕಂಪನಿಗಳ ಮಂಡಳಿ ನಾಸ್ಕಾಮ… ಪ್ರಕಾರ ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಪ್ಟ್ವೇರ್‌ ಸರ್ವೀಸ್‌ ಕಂಪನಿಗಳ ಉದ್ಯೋಗಿಗಳ ವೀಸಾ ತಿರಸ್ಕಾರ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ಅದರೆ ಈ ಪ್ರಮಾಣ ಉತ್ಪನ್ನ ಆಧರಿತ ಕಂಪನಿಗಳಿಗೆ ಕಡಿಮೆ ಇದೆ ಎಂದಿದೆ. ಯಾಕೆಂದರೆ, ಉತ್ಪನ್ನ ಆಧರಿತ ಉದ್ಯೋಗಗಳಲ್ಲಿ ಭಾರತೀಯರ ಕಾರ್ಯಕ್ಷ$ಮತೆ ಹೆಚ್ಚು ಎಂದು ಭಾವಿಸಲಾಗಿದ್ದು, ಅದರಲ್ಲಿ ಭಾರತೀಯರ ಕೌಶಲವೂ ಅಮೆರಿಕನ್ನರಿಗಿಂತ ಹೆಚ್ಚು ಉತ್ತಮವಾಗಿದೆ.

ಇನ್ನೂ ಇದೆ ಕನಸು
ವೀಸಾ ಸಿಗುವಲ್ಲೇ ಸಮಸ್ಯೆಯಿದೆ. ವೀಸಾ ಸಿಕ್ಕಮೇಲೂ ಯಾವತ್ತು ಬೇಕಾದರೂ ವಾಪಸು ಕಳುಹಿಸಬಹುದು ಎಂಬ ಅನಿಶ್ಚಿತತೆಯೂ ಇದೆ. ಹಾಗಿದ್ದರೂ ಅಮೆರಿಕದ ಕನಸು ಭಾರತೀಯರಲ್ಲಿ ಇನ್ನೂ ಮಾಸಿಲ್ಲ. ಈಗಲೂ, ಅಮೆರಿಕದಲ್ಲೇದು ಉದ್ಯೋಗ ಸಿಕ್ಕರೆ ಸಾಕು ಎನ್ನುವವರಿ¨ªಾರೆ.
ಹಾಗಂತ ಅಮೆರಿಕದಲ್ಲಿ ಬೇಡಿಕೆಯೂ ಇದೆ. ಆದರೆ ಪೂರೈಕೆಯ ಪ್ರಮಾಣ ಕಡಿಮೆ ಇದೆ. ಈ ಹಿಂದೆ 30-40 ಜನರಿಗೆ ವೀಸಾಗಾಗಿ ಅರ್ಜಿ ಸಲ್ಲಿಸುತ್ತಿದ್ದ ಕಂಪನಿಗಳು ಈಗ ಕೇವಲ 4-5 ಉದ್ಯೋಗಿಗಳನ್ನಷ್ಟೇ ಕರೆಸಿಕೊಳ್ಳುತ್ತಿವೆ. ಯಾಕೆಂದರೆ, ಕಂಪನಿಗಳಿಗೂ ಉದ್ಯೋಗಿಗಳ ವೀಸಾ ತಿರಸ್ಕಾರವಾದರೆ ಎಂಬ ಭೀತಿ ಮೂಡಿದೆ.

ಭಾರತಕ್ಕೆ ಬಂದರೆ ಕೆಲಸವಿದೆಯೆ?
ಬಹಳಷ್ಟು ಜನರ ಸಮಸ್ಯೆಯೆಂದರೆ ಅಮೆರಿಕ ತೊರೆದು ಭಾರತಕ್ಕೆ ಬಂದರೆ, ಅಲ್ಲಿಗೆ ಸಮಾನ ಸ್ಥಾನಮಾನದ ಕೆಲಸ ಇಲ್ಲಿ ಸಿಗದೇ ಇರುವುದು. ಅಮೆರಿಕದಿಂದ ಬಂದ ಬಹಳಷ್ಟು ಜನರನ್ನು ಇಲ್ಲಿಯ ದೊಡ್ಡ ದೊಡ್ಡ ಕಂಪನಿಗಳು ನೇಮಿಸಿಕೊಂಡಿವೆ. ಆದರೆ ಬಹುತೇಕರ ಸಮಸ್ಯೆಯೇನೆಂದರೆ ಅಮೆರಿಕದಲ್ಲಿದ್ದಷ್ಟು ಸಂಬಳ ಇಲ್ಲಿ ಸಿಗುತ್ತಿಲ್ಲ ಎಂಬುದೇ ಆಗಿದೆ. ಇದು ಅಮೆರಿಕ ತೊರೆದು ಬಂದವರ ಮನಸ್ಥಿತಿಯೂ ಆಗಿರಬಹುದು ಅಥವಾ ಭಾರತದ ಉದ್ಯೋಗ ಮಾರುಕಟ್ಟೆಯ ವ್ಯಾಪ್ತಿ ಕಿರಿದಾಗಿರುವುದೂ ಕಾರಣವಾಗಿರಬಹುದು.

ಹಲವರಿಗೆ ಗಗನ ಕುಸುಮ
ಈ ಹಿಂದೆ 90ರ ದಶಕದಲ್ಲಿ ಉತ್ತಮ ಕೌಶಲವಿದ್ದವರಿಗಷ್ಟೇ ಅಮೆರಿಕದ ವೀಸಾ ಸಿಗುತ್ತಿತ್ತು. ಹೀಗಾಗಿ ಅಮೆರಿಕದ ವೀಸಾಗೊಂದು ಉನ್ನತ ಮೌಲ್ಯವಿತ್ತು. ಆದರೆ ಬರುಬರುತ್ತಾ ಅಂದರೆ ಸಾಫ್ಟ್ವೇರ್‌ ಉದ್ಯಮ ವ್ಯಾಪಕವಾಗಿ ಬೆಳೆದಂತೆ ಸ್ವಲ್ಪ ವರ್ಷ ಅನುಭವ ಸಾಮಾನ್ಯ ಸಾಫ್ಟ್ವೇರ್‌ ಸರ್ವೀಸ್‌ ಕ್ಷೇತ್ರದಲ್ಲಿ ಇದ್ದರೂ ವೀಸಾ ಸಿಗುತ್ತಿತ್ತು. ವಿಶೇಷ ಪರಿಣಿತಿ ಬೇಕು ಎಂದೇನಿರಲಿಲ್ಲ. ಬರಾಕ್‌ ಒಬಾಮ ಅಧ್ಯಕ್ಷ$ರಾಗಿದ್ದ ಅವಧಿಯಲ್ಲಂತೂ ಈ ಪರಿಸ್ಥಿತಿ ಹೆಚ್ಚಾಗಿತ್ತು. ಇದರಿಂದ ಅಮೆರಿಕನ್ನರಲ್ಲಿ ಸಿಟ್ಟು ಹೆಚ್ಚಾಗತೊಡಗಿತು. ಇದರ ಪರಿಣಾಮವೇ ಇದೇ ವಿಷಯವನ್ನಿಟ್ಟುಕೊಂಡು ಟ್ರಂಪ ಚುನಾವಣೆಯಲ್ಲಿ ಗೆದ್ದರು. ಗೆಲ್ಲುತ್ತಿದ್ದಂತೆಯೇ ಈ ವೀಸಾ ನೀತಿಯನ್ನು ಕಟ್ಟುನಿಟ್ಟುಗೊಳಿಸಿದರು. ಸದ್ಯ ವೀಸಾ ನೀತಿಯಲ್ಲಿ ಮಹತ್ವದ ಯಾವುದೇ ಬದಲಾವಣೆ ಮಾಡದೇ ಇದ್ದರೂ, ಈಗಿರುವ ನಿಯಮವನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಅಮೆರಿಕ ಎಂಬುದು ಬಹುತೇಕರಿಗೆ ಗಗನಕುಸುಮವೂ ಆಗಿದೆ.

ಕೃಷ್ಣಭಟ್‌

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.