ಮನೆ ಕಟ್ಟೋರು ಇವನ್ನೆಲ್ಲಾ ನೆನಪಿಟ್ಟುಕೊಳ್ರೀ
Team Udayavani, Apr 10, 2017, 11:50 AM IST
ಮನೆಯ ಮುಂಬಾಗಿಲ ವಿಷಯದಲ್ಲಿ ಎಚ್ಚರವಿರಲಿ. ನೇರ ಮುಂಬಾಗಿಲು ಎದುರಿನಲ್ಲಿ ಒಂದು ಕಟ್ಟೆಯನ್ನೋ, ಗೋಡೆಯನ್ನೋ ನಿರ್ಮಿಸಕೂಡದು. ಇದರಿಂದ ಮನೆಯ ಒಳಗೆ ಆಗಮಿಸುವ ಉತ್ತಮ ಸ್ಪಂದನಗಳು, ಸೌಭಾಗ್ಯದ ಅಂಶಗಳು ಬರುವ ಅದೃಷ್ಟಕ್ಕೆ ತಡೆ ನಿರ್ಮಿಸಿದಂತಾಗಿ ಬಿಡುತ್ತದೆ.
ಮನೆಯನ್ನು ಕಟ್ಟುವಾಗ ಅನೇಕ ಸಂಗತಿಗಳನ್ನು ನೆನಪಿನಲ್ಲಿಡಬೇಕಾದದ್ದು ಅವಶ್ಯವಾಗಿದೆ. ಮನೆಯ ಈಶಾನ್ಯ ಮೂಲೆ, ಅಗ್ನಿಮೂಲೆ, ವಾಯುವ್ಯಮೂಲೆ, ನೈಋತ್ಯ ಮೂಲೆಗಳಲ್ಲಿ ಮನೆಯ ಯಾವೆಲ್ಲ ಜಾಗಗಳು ಅಡುಗೆ ಮನೆ, ಮಲಗುವ ಕೋಣೆ, ಬಚ್ಚಲ ಮನೆ, ಪಡಸಾಲೆ ದೇವರ ಮಂಟಪ ಇತ್ಯಾದಿಗಳೆಲ್ಲ ಮೀಸಲಿಡಬೇಕೆಂಬ ಸಂಗತಿ ಬೇರೆ. ಆದರೆ ಈ ಎಲ್ಲಾ ವಿಚಾರಗಳ ಹೊರತಾಗಿ ಕೆಲವು ಅನುಸರಿಸಬೇಕಾದ ವಿಚಾರಗಳು ಕೂಡಾ ಮುಖ್ಯವಾಗಿದೆ. ಇದರಿಂದಾಗಿ ಮನೆಯೊಳಗಿನ ಶಾಂತಿ, ಸಮಾಧಾನ, ಸಮೃದ್ಧಿ, ಆರೋಗ್ಯ, ನಗು, ಕೇಕೆ, ಸುಖ, ಸಂತೋಷಗಳೆಲ್ಲ ವೃದ್ಧಿಗೊಳ್ಳುವ ಅವಕಾಶ ಒದಗಿಬರುತ್ತದೆ. ಇಲ್ಲದಿದ್ದರೆ ಅನೇಕ ಕಿರಿಕಿರಿಗಳು ಎಲ್ಲಾ ವಿಚಾರಗಳಲ್ಲು ಒಡಮೂಡಿಕೊಂಡು, ಅಶಾಂತಿ, ಅಸಮಧಾನಗಳು ಹೊಗೆಯಾಡಬಹುದು.
ಮನೆಯಲ್ಲಿ ರಸ್ತೆಯಿಂದ ಮನೆಯೊಳಗಿನ ಕಾಂಪೌಂಡ್ ಒಳಗೆ ಕಾಲಿಡಲು ಕೂಡಿಸುವ ಗೇಟು ಯಾವಾಗಲೂ ಮನೆಯ ಹೆಬ್ಟಾಗಿಲಿಗಿಂತ ಚಿಕ್ಕದಿರಬೇಕು ಹಾಗೂ ಹೆಬ್ಟಾಗಿಲು ಎತ್ತರದಲ್ಲಿರಬೇಕು. ಇತ್ತೀಚೆಗೆ ಕೇಂದ್ರ ಸರಕಾರಿ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದವರೊಬ್ಬರು ಇದ್ದ ಮನೆಯನ್ನು ಹಳೆಯ ರೀತಿಯಿಂದ ನವೀಕರಣಗಳನ್ನು ಮಾಡುವ ಸಂದರ್ಭದಲ್ಲಿ ಕಾಂಪೌಂಡ್ ಗೇಟನ್ನು ತುಸು ಎತ್ತರಿಸಿ, ಕುಸುರಿಯಲ್ಲಿ ನಿಯೋಜಿಸಿದಾಗ ಗೇಟು ಹೆಬ್ಟಾಗಿಲಿಗಿಂತ ದೊಡ್ಡದಾಯಿತು. ಆದರೆ ಕೆಲವೇ ದಿನಗಳಲ್ಲಿ ಚೆನ್ನಾಗಿದ್ದ ಅವರ ಆರೋಗ್ಯದಲ್ಲಿ ಏರುಪೇರುಗಳುಂಟಾಗಲು ಪ್ರಾರಂಭಗೊಂಡಿತು. ಈ ಅಸಮತೋಲನ ಅಳತೆಗಳು ಸರಿಗೊಂಡ ಮೇಲೆ ನಂತರ ಇವರ ಆರೋಗ್ಯದಲ್ಲಿ ಮತ್ತೆ ಲವಲವಿಕೆ ಕಂಡು ಬಂದಿತು.
ಮನೆಯ ಟೆರೇಸ್ ಅಥವಾ ಮಹಡಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಮುಖವಿರಿಸಿ ಏರುವಂತಿದ್ದರೆ ಸೂಕ್ತ. ಉತ್ತರದಿಂದ ದಕ್ಷಿಣ ದಿಕ್ಕಿಗೆ ಮುಖವಾಗುವಂತೆ ಇದ್ದರೂ ಸರಿಯೇ. ಈ ಅಂಶವನ್ನು ಪರಿಪಾಲಿಸಿದಲ್ಲಿ ಉತ್ತಮ ಅದೃಷ್ಟವು ಶೀಘ್ರವಾಗಿ ಒದಗಿ ಬರಲು ಅವಕಾಶವಾಗುತ್ತದೆ. ಮನೆಯ ಸೈಟಿನಲ್ಲಿ ಗುದ್ದಲಿ ಪೂಜೆ ಕೂಡಾ ಪ್ರಮುಖವಾದದ್ದು. ದಕ್ಷಿಣ ಹಾಗೆಯೇ ಪೂರ್ವ ದಿಕ್ಕುಗಳು ಈ ಸಂದರ್ಭದಲ್ಲಿ ಪ್ರಥಮವಾಗಿ ಅಗೆಯಬಾರದು. ಪೂರ್ವದಿಕ್ಕಿನಲ್ಲಿ ಅಗೆಯಲ್ಪಡುವ ವಿಚಾರ ಕೈಗೊಂಡಾಗ ಉತ್ತರ ದಿಕ್ಕಲ್ಲೂ ಅಗೆತ ಪ್ರಾರಂಬಗೊಳ್ಳುವುದು ಪ್ರಾಥಮಿಕ ಹಂತದಲ್ಲಿ ಸೂಕ್ತ. ಇದರಿಂದಾಗಿ ಮನೆಯ ಎಲ್ಲ ವಿಚಾರಗಳ ತೊಂದರೆ ಕಾಣದೆ ಶೀಘ್ರವಾಗಿ ಸುಸೂತ್ರವಾಗಿ ನಡೆಯಲು ಅನುಕೂಲವಾಗುತ್ತದೆ.
ದಕ್ಷಿಣದ ದಿಕ್ಕಿಗೆ ಪೂರಕವಾಗಿ ಹೊರಗಿನ ವರಾಂಡ ಕಟ್ಟುವ ನಿರ್ಣಯ ನಡೆಸಿದಲ್ಲಿ ಆಗ್ನೇಯ ದಿಕ್ಕಿನಲ್ಲಿ ಕೋಣೆ ಇದ್ದು, ಉತ್ತರ ದಿಕ್ಕಿಗೆ ಮುಖ ಮಾಡಿ ಬಾಗಿಲನ್ನು ಕೂಡಿಸಬೇಕು. ಮನೆಯ ಯಜಮಾನನ ಆರೋಗ್ಯ ಲವಲವಿಕೆ ಉತ್ಸಾಹಗಳಿಗೆ ಇದು ಉತ್ತಮ ವಿಚಾರವಾಗಿದೆ.
ಮನೆಯ ಮುಂಬಾಗಿಲ ವಿಷಯದಲ್ಲಿ ಎಚ್ಚರವಿರಲಿ. ನೇರ ಮುಂಬಾಗಿಲು ಎದುರಿನಲ್ಲಿ ಒಂದು ಕಟ್ಟೆಯನ್ನೋ, ಗೋಡೆಯನ್ನೋ ನಿರ್ಮಿಸಕೂಡದು. ಇದರಿಂದ ಮನೆಯ ಒಳಗೆ ಆಗಮಿಸುವ ಉತ್ತಮ ಸ್ಪಂದನಗಳು, ಸೌಭಾಗ್ಯದ ಅಂಶಗಳು ಬರುವ ಅದೃಷ್ಟಕ್ಕೆ ತಡೆ ನಿರ್ಮಿಸಿದಂತಾಗಿ ಬಿಡುತ್ತದೆ. ಹೀಗಾಗಿ ತಾನಾಗಿ ಬರುವ ಒಳ್ಳೆಯ ಸೌಭಾಗ್ಯದ ವಿಚಾರಗಳನ್ನು ಗೋಡೆ ಅಥವಾ ಕಟ್ಟೆ ಕಟ್ಟಿ ತಡೆಯಲು ಹೋಗಬೇಡಿ. ಕಟ್ಟೆ ಇರುವುದನ್ನು ಬಯಸಿ ಕಟ್ಟುವುದಾದಲ್ಲಿ ಮುಂಬಾಗಿಲ ಅಕ್ಕಪಕ್ಕದ ಜಾಗೆಯಲ್ಲಿರುವಂತೆ ನೋಡಿ ಮನೆಯ ಸುರಕ್ಷತೆಗಾಗಿನ ಗೋಡೆಯೂ ಕೂಡಾ ಇದ್ದರೂ ಕಟ್ಟಲ್ಪಟ್ಟರೂ, ಮುಂಬಾಗಿಲ ಉದ್ದಗಲಗಳನ್ನು ಯಾವುದೇ ರೀತಿಯಲ್ಲಿ ತಡೆದು ಅಡ್ಡವಾಗದಂತಿರಲಿ. ಈ ಕುರಿತು ಮರೆಯದೆ ಗಮನಿಸಿ.
ಮುಂದಿನ ವಾರ ಇನ್ನು ಕೆಲವು ಅವಶ್ಯವಾಗಿ ನೆನಪಿಡಲೇ ಬೇಕಾದ ವಿಚಾರಗಳನ್ನು ಈ ಅಂಕಣದಲ್ಲಿ ದಾಖಲಿಸುತ್ತೇನೆ. ಮನೆಯ ಸೊಗಸು ಅಥವಾ ಭದ್ರತೆಯ ವಿಚಾರ ಯಾವಾಗಲೂ ಪ್ರಮುಖವಾದುದು.
– ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.