ಜೊತೆಯಾಗಿ, ಮಿತವಾಗಿ…


Team Udayavani, Apr 16, 2018, 5:04 PM IST

jotheyagi.jpg

ಒಮ್ಮೆ ಒಂದು ಮನೆಗೆ ಚದುರಕ್ಕೆ  ಇಷ್ಟಾಗಬಹುದು ಎಂದು ನಿರ್ಧರಿಸಿದ ಮೇಲೆ ವಿಸ್ತಾರ ಇಷ್ಟೇ ಇರಲಿ ಎಂದು ಮನಸ್ಸು ಗಟ್ಟಿಮಾಡಿಕೊಂಡು ಮುಂದುವರೆಯುವುದು ಒಳ್ಳೆಯದು. ಸಾಮಾನ್ಯವಾಗಿ ಮನೆ ಕಟ್ಟುತ್ತಾ ಹೋದಂತೆ ಮನೆಯ ವಿಸ್ತಾರವೂ ಹೆಚ್ಚುತ್ತಾ ಹೋಗಿ, ಕಡೆಗೆ ನಾವು ಅಂದುಕೊಂಡದ್ದಕ್ಕಿಂತ ಕಾಲು ಭಾಗ ಇಲ್ಲವೇ ಅರ್ಧ ಭಾಗದಷ್ಟು ಹೆಚ್ಚುವರಿಯಾಗಿ ಕಟ್ಟಿಬಿಡುತ್ತೇವೆ.  

ಎಸ್ಟಿಮೇಟ್‌ ಮಾಡಿದಷ್ಟು ಹಣದಲ್ಲಿ ಮನೆ ನಿರ್ಮಾಣದ ಕೆಲಸವನ್ನೆಲ್ಲ ಮುಗಿಸಿ, ಗೃಹಪ್ರವೇಶ ಮಾಡಿಕೊಂಡವರು ವಿರಳ. ಎಷ್ಟೇ ಎಚ್ಚರ ವಹಿಸಿದರೂ, ಹೇಗಾದರೂ ಒಂದಷ್ಟು ಹಣ ಹೆಚ್ಚಿಗೇನೇ ಖರ್ಚಾಗಿ, ಕೊನೆಗೆ ಕಾಲಿ ಕೈಯಲ್ಲಿ ಉಳಿಯುವುದು ಇದ್ದದ್ದೇ. ಶುರುವಿನಲ್ಲಿ ಇಲ್ಲದ ಆಸೆ ಆಕಾಂಕ್ಷೆಗಳು ಹಂತಹಂತವಾಗಿ ನಮ್ಮನ್ನು ಆವರಿಸಿ ಕೊಳ್ಳುತ್ತವೆ. “ಜೀವನದಲ್ಲಿ ಮನೆ ಕಟ್ಟುವುದು ಒಮ್ಮೆ ತಾನೆ! ಸ್ವಲ್ಪ ಅದ್ದೂರಿಯಾಗೇ ಕಟ್ಟಿಸೋಣ.

ಒಂದಷ್ಟು ಜಾಸ್ತಿ ಖರ್ಚು ಮಾಡೋಣ’ ಎಂದು ಆಸೆ ಶುರುವಾಗಿ ಜೇಬು ಪೂರ್ತಿ ಬರಿದಾಗಿಸುತ್ತದೆ.  ಪೇಂಟ್‌, ಟೈಲ್ಸ್‌, ಫಿಟ್ಟಿಂಗ್ಸ್‌ ಇತ್ಯಾದಿಯಲ್ಲಿ ದುಬಾರಿ ಆಯ್ಕೆ ಮಾಡಿಕೊಂಡರಂತೂ ಖರ್ಚು ಆಕಾಶ ಮುಟ್ಟುತ್ತದೆ. ಹಾಗಾಗಿ ನಾವು ಮನೆ ಕಟ್ಟುವಾಗ ಯಾವ ಯಾವ ಅಂಶಗಳಲ್ಲಿ ಹೆಚ್ಚು ವ್ಯತ್ಯಾಸ ಬರುತ್ತದೆ ಎಂದು ಗಮನಿಸಿ, ಅವುಗಳ ಬಗ್ಗೆ ಹೆಚ್ಚು ನಿಗಾ ವಹಿಸಿದರೆ, ಮನೆ ನಿರ್ಮಾಣವನ್ನು ಹೆಚ್ಚಾ ಕಡಿಮೆ ನಾವು ಅಂದುಕೊಂಡಷ್ಟೇ ಹಣದಲ್ಲಿ ಮುಗಿಸಬಹುದು.  ಮನೆ ನಿರ್ಮಾಣದ ಕೆಲಸ ದುಬಾರಿ ಆಗಲು ಮುಖ್ಯ ಕಾರಣ,

ಅನಗತ್ಯವಾಗಿ ಅದರ ವಿಸ್ತೀರ್ಣವನ್ನು ಹೆಚ್ಚಿಸುವುದೇ ಆಗಿರುತ್ತದೆ. ನಾವು ಒಮ್ಮೆ ಒಂದು ಮನೆಗೆ ಚದುರಕ್ಕೆ  ಇಷ್ಟಾಗಬಹುದು ಎಂದು ನಿರ್ಧರಿಸಿದ ಮೇಲೆ ವಿಸ್ತಾರ ಇಷ್ಟೇ ಇರಲಿ ಎಂದು ಮನಸ್ಸು ಗಟ್ಟಿಮಾಡಿಕೊಂಡು ಮುಂದುವರೆಯುವುದು ಒಳ್ಳೆಯದು. ಸಾಮಾನ್ಯವಾಗಿ ಮನೆ ಕಟ್ಟುತ್ತಾ ಹೋದಂತೆ ಮನೆಯ ವಿಸ್ತಾರವೂ ಹೆಚ್ಚುತ್ತಾ ಹೋಗಿ, ಕಡೆಗೆ ನಾವು ಅಂದುಕೊಂಡದ್ದಕ್ಕಿಂತ ಕಾಲು ಭಾಗ ಇಲ್ಲವೇ ಅರ್ಧ ಭಾಗದಷ್ಟು ಹೆಚ್ಚುವರಿಯಾಗಿ ಕಟ್ಟಿಬಿಡುತ್ತೇವೆ.  

ಆಯ್ಕೆಯ ಖರ್ಚುಗಳು: ಮನೆ ಕಟ್ಟುವಾಗ ಪ್ರತಿ ಹಂತದಲ್ಲೂ ನಮಗೆ ವಿವಿಧ ರೀತಿಯ ವಸ್ತುಗಳು ಹಾಗೂ ವಿಧಾನಗಳು ಮುಂದಿರುತ್ತವೆ.  ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದನ್ನು ಆಧರಿಸಿ ಕಡೆಗೆ ನಮ್ಮ ಮನೆಯ ಒಟ್ಟಾರೆ ಖರ್ಚು ನಿರ್ಧಾರವಾಗುತ್ತದೆ. ಇದು ನಿಮ್ಮನ್ನು ಪಾಯದ ಹಂತದಿಂದಲೇ ಕಾಡಲು ತೊಡಗುತ್ತದೆ. ನಿಮ್ಮ ನಿವೇಶನ ದೊಡ್ಡ ನಗರದಲ್ಲಿ ಇರದಿದ್ದರೆ, ನೀವು ಮೂರು ನಾಲ್ಕು ಮಹಡಿ ಕಟ್ಟುವ ಆಲೋಚನೆ ಹೊಂದಿರದಿದ್ದರೆ, ಆರ್‌ ಸಿ ಸಿ ಕಾಲಂ ಬೀಮ್‌ ಹಾಗೂ ಫ‌ುಟಿಂಗ್‌ಗೆ ಮೊರೆ ಹೋಗಬೇಕಾಗಿಲ್ಲ.

ಮಾಮೂಲಿ ಬಾರ ಹೊರುವ ಗೋಡೆಗಳಿಗೆ ಹೋಲಿಸಿದರೆ, ಆರ್‌ ಸಿ ಸಿ ಕಾಲಂ ಸ್ಟ್ರಕ್ಚರ್ ದುಬಾರಿ. ಒಂದು ಬೀಮ್‌ ಹಾಗೂ ಫ‌ುಟಿಂಗ್‌ ಆಗುವ ಖರ್ಚಿನಲ್ಲಿ ಹತ್ತು ಅಡಿ ಇಟ್ಟಿಗೆ ಗೋಡೆ ಕಟ್ಟಬಹುದು. ನೀವು ಒಮ್ಮೆ ಕಾಲಂ ಹಾಕಿದರೂ ಅದರ ಮಧ್ಯೆ ಯಥಾಪ್ರಕಾರ ಇಟ್ಟಿಗೆ ಇಲ್ಲವೇ ಕಾಂಕ್ರಿಟ್‌ ಬ್ಲಾಕ್‌ ಗೊಡೆ ಕಟ್ಟಲೇ ಬೇಕಾಗುತ್ತದೆ. ಹಾಗಾಗಿ ಗೋಡೆಗಳ ಲೆಕ್ಕದಲ್ಲಿ, ಆರ್‌ ಸಿ ಸಿ ಕಾಲಂಗಳಿಗೆ ಮೊರೆ ಹೋದರೆ ನಾವು ಶುರುವಿನಲ್ಲೇ ಒಂದಕ್ಕೆ ಎರಡರಷ್ಟು ಬೆಲೆ ತೆರೆಬೇಕಾದೀತು.

ಆದರೆ ಇತ್ತೀಚಿನ ದಿನಗಳಲ್ಲಿ ನೆಲದ ದರ ಗಗನಕ್ಕೆ ಏರಿರುವುದರಿಂದ, ಇಂದಲ್ಲ ನಾಳೆ ಮೂರು ನಾಲ್ಕು ಮಹಡಿ ಕಟ್ಟುವಂತೆ ಇರಲಿ ಎಂದು ಕಾಲಂಗಳನ್ನು ಏರಿಸಿಯೇ ಬಿಡುತ್ತಾರೆ! ಮಣ್ಣು ದುರ್ಭಲವಾಗಿದ್ದರೆ, ಭೂಕಂಪ  ಆಗುವ ಪ್ರದೇಶದಲ್ಲಿದ್ದರೆ ಆರ್‌ಸಿಸಿಗೆ ಮೊರೆ ಹೋಗುವುದು ಅನಿವಾರ್ಯ. ಆದರೆ ಭೂಮಿ ಗಟ್ಟಿಮುಟ್ಟಾಗಿರುವ ಪ್ರದೇಶದಲ್ಲಿ ಭಾರ ಹೊರುವ ಗೋಡೆಗಳನ್ನು ನುರಿತ ಆರ್ಕಿಟೆಕ್ಟ್ ಎಂಜಿನಿಯರ್‌ಗಳ ಸಹಾಯದಿಂದ ವಿನ್ಯಾಸ ಮಾಡಿಸಿಕೊಂಡರ, ಸಾಕಷ್ಟು ಹಣವನ್ನು ಉಳಿಸಬಹುದು.

ಗೋಡೆ ದಪ್ಪ ಕಡಿಮೆ ಮಾಡಿ: ಒಮ್ಮೆ  ಅನಿವಾರ್ಯ ಕಾರಣಗಳಿಂದ ದುಬಾರಿ ಆರ್‌ಸಿಸಿ ಕಾಲಂ ಹಾಕಲು ನಿರ್ಧರಿಸಿದ ಮೇಲೆ, ಗೋಡೆಗಳನ್ನೂ ದಪ್ಪ ದಪ್ಪನಾಗಿ, ಭಾರ ಹೊರುವ ರೀತಿಯಲ್ಲಿ ಹಾಕುವ ಅಗತ್ಯ ಇರುವುದಿಲ್ಲ.  ಇತ್ತೀಚಿನ ದಿನಗಳಲ್ಲಿ ಒಂಭತ್ತು ಇಂಚಿನ ಇಟ್ಟಿಗೆಯ ಹೊರಗಿನ ಗೋಡೆಗಳಿಗೆ ಬದಲಾಗಿ ಆರು ಇಂಚಿನ ಕಾಂಕ್ರಿಟ್‌ ಬ್ಲಾಕ್‌ ಗೋಡೆಗಳು ಜನಪ್ರಿಯವಾಗುತ್ತಿವೆ. ಇವು ಇಟ್ಟಿಗೆ ಗೋಡೆಗಳಿಗಿಂತ ಅಗ್ಗವಾಗಿದ್ದು, ಸರಿಯಾಗಿ ಗುಣ ಮಟ್ಟ ಕಾಯ್ದುಕೊಂಡರೆ ನಮಗೆ ಉತ್ತಮ ಉಳಿತಾಯವನ್ನು ನೀಡಬಲ್ಲವು.

ಆದರೆ ಕಾಂಕ್ರಿಟ್‌ ಬ್ಲಾಕ್‌ಗಳನ್ನು ಹೊರಗಿನ ಗೋಡೆಗಳಿಗೆ ಬಳಸುವಾಗ ಅವು ಉತ್ತಮ ಗುಣಮಟ್ಟ ಹೊಂದಿದೆಯೇ ಎಂದು ಪರಿಶೀಲಿಸುವುದು ಅತ್ಯಗತ್ಯ. ಇಟ್ಟಿಗೆ ಗೋಡೆಗಳನ್ನು ಕಟ್ಟುವಾಗ ಅವುಗಳನ್ನು ನೆನೆಸಿಯೇ ಕಟ್ಟುವುದರಿಂದ ಅವುಗಳ ಕ್ಯೂರಿಂಗ್‌ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಆದರೆ ಕಾಂಕ್ರಿಟ್‌ ಬ್ಲಾಕ್‌ಗಳನ್ನು ಸಾಮಾನ್ಯವಾಗಿ ನೀರಿನಲ್ಲಿ ನೆನೆಸದೆ ಕಟ್ಟುವುದರಿಂದ, ಅದಕ್ಕೆ ಬಳಸುವ ಸಿಮೆಂಟ್‌ ಗಾರೆಯಲ್ಲಿನ ನೀರನ್ನೆಲ್ಲ ಬ್ಲಾಕ್‌ ಕುಡಿದು ಒಣಗಿದರೆ,

ವರಸೆಗೆ ಬಳಸುವ ಗಾರೆ ಕ್ಯೂರಿಂಗ್‌ ಕಡಿಮೆಯಾಗಿ ಮಳೆಗಾಲದಲ್ಲಿ ಮನೆಯೊಳಗೆ ತೇವ ಬರುವಂತೆ ಆಗಬಹುದು. ಆದುದರಿಂದ ನಾವು ಕಾಂಕ್ರಿಟ್‌ ಬ್ಲಾಕ್‌ ಗೋಡೆಗಳನ್ನೂ ಕೂಡ ವಿಶೇಷ ಕಾಳಜಿ ವಹಿಸಿ ಕ್ಯೂರಿಂಗ್‌ ಮಾಡಬೇಕು. ಹಾಗೆಯೇ ಈ ಗೋಡೆಗಳು ಚೆನ್ನಾಗಿ ಕ್ಯೂರ್‌ ಆದಮೇಲೆಯೇ ಅವುಗಳ ಮೇಲೆ ಪ್ಲಾಸ್ಟರ್‌ ಮಾಡಬೇಕು. ಇಲ್ಲದಿದ್ದರೆ, ಗೋಡೆಗಳಿಗೂ ಸರಿಯಾಗಿ ಕ್ಯೂರಿಂಗ್‌ ಆಗುವುದಿಲ್ಲ. ಪ್ಲಾಸ್ಟರ್‌ ಕೂಡ ದುರ್ಬಲ ಆಗುವ ಸಾಧ್ಯತೆ ಇರುತ್ತದೆ.      

ಸ್ಟೀಲ್‌ ಹೆಚ್ಚು ಬಳಸಬೇಕೋ ಕಾಂಕ್ರೆಟ್‌ ಬಳಸಬೇಕೋ…: ಸಾಮಾನ್ಯವಾಗಿ ನಾನಾ ಕಾರಣಗಳಿಂದಾಗಿ ಸ್ಟೀಲ್‌ ಹಾಗೂ ಸಿಮೆಂಟ್‌ ಹೆಚ್ಚಾ ಕಡಿಮೆ ಸಮಭಾರ ಹೊರುವಂತೆ ಮಾಡಲಾಗುತ್ತದೆ. ಅನೇಕ ಬಾರಿ ಹೆಚ್ಚು ಉಕ್ಕು ಬಳಸಿದ ಮಾತ್ರಕ್ಕೆ ನಮ್ಮ ಮನೆ ಹೆಚ್ಚು ಸಧೃಢ ಎಂದೇನೂ ಇಲ್ಲ. ಹಾಗಾಗಿ ಸರಿಯಾಗಿ ಭಾರದ ಲೆಕ್ಕಾಚಾರ ಮಾಡಿ, ಎಷ್ಟು ಉಕ್ಕು ಹಾಗೂ ಸಿಮೆಂಟ್‌ ಇರಬೇಕು ಎಂದು ನಿರ್ಧರಿಸಿದರೆ, ಅನಗತ್ಯವಾಗಿ ದುಬಾರಿ ವಸ್ತು ಹಾಳಾಗುವುದನ್ನು ತಪ್ಪಿಸಬಹುದು. ಬ್ಯಾಲನ್ಸ್‌ಡ್‌ ಡಿಸೈನ್‌ ನಿಂದ ಮನೆ ಹೆಚ್ಚು ಗಟ್ಟಿಮುಟ್ಟಾಗಿರುವುದರ ಜೊತೆಗೆ ಬಿರುಕು ಮೂಡುವ ಕಿರಿಕಿರಿ ಕಡಿಮೆ ಆಗುತ್ತದೆ. ಈ ಲೆಕ್ಕಾಚಾರ ಸೂರಿನಲ್ಲಿ ಹೆಚ್ಚು ರುತ್ತದೆ. ಕಾಂಕ್ರಿಟ್‌ ದಪ್ಪ ಹೆಚ್ಚಿರಬೇಕೋ ಇಲ್ಲವೇ ಹೆಚ್ಚು ಉಕ್ಕು ಹಾಕಿ ಸಣ್ಣನೆಯ ಸ್ಲಾಬ್‌ ಹಾಕಬೇಕೋ ಎಂಬುದನ್ನೂ ಇದೇ ನಿರ್ಧರಿಸುತ್ತದೆ.

ಹೆಚ್ಚಿನ ಮಾತಿಗೆ ಫೋನ್‌ 98441 32826

* ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್

Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್

Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್

5(1

Mangaluru: 7 ಕೆರೆ, ಪಾರ್ಕ್‌ ಅಭಿವೃದ್ಧಿಗೆ ಅಮೃತ 2.0

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.