ಮಾಹಿತಿ ಅತಂತ್ರಜ್ಞಾನ
Team Udayavani, Jun 12, 2017, 1:54 PM IST
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎಲ್ಲವೂ ಸರಿ ಇಲ್ಲ. ಹಿಂದೆ ಕೋರಮಂಗಲದಲ್ಲಿ ಎರಡು, ಮೂರು ಸಾವಿರ ಇದ್ದ ಮನೆ ಬಾಡಿಗೆ 30-40ಸಾವಿರಕ್ಕೆ ಏರಲು ಐ.ಟಿಯೇ ಕಾರಣ. ತರಕಾರಿ ಮಾರುವವರ ಆರ್ಥಿಕ ಸ್ಥಿತಿಗೆ ಚೇತರಿಕೆ ನೀಡಿದ್ದು ಇದೇ ಐ.ಟಿ. ಒಬ್ಬ ಐಟಿ ಉದ್ಯೋಗಿ ಇದ್ದಾನೆಂದರೆ, ಅವನಿಂದ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ 10ಜನಕ್ಕೆ ಕೆಲಸ ಸಿಗುತ್ತದೆ. ಇವತ್ತು ಐಟಿಯಲ್ಲಿ ತಲ್ಲಣ ಶುರುವಾಗಿದೆ. ಇದರ ಪರಿಣಾಮ ಏನಾಗಬಹುದು?
ಅಜೀಜ್ ಪ್ರೇಮ್‌ಜಿ ತಮ್ಮ ವೈಯುಕ್ತಿಕ ಸಂಬಳದಲ್ಲಿ ಶೇ.70ರಷ್ಟು ಕಡಿತ ಮಾಡಿಕೊಂಡಿದ್ದಾರೆ. ಮೊನ್ನೆ, ಮೊನ್ನೆ ಇನ್‌ಫೋಸಿಸ್ ನಾರಾಯಣ ಮೂರ್ತಿಗಳು- ದೊಡ್ಡ ಸ್ಯಾಲರಿ ತೆಗೆದು ಕೊಳ್ಳುವವರು ಸಹಕರಿಸಿದರೆ, ಹೊಸ ಪ್ರತಿಭೆಗಳನ್ನು ಕೆಲಸಕ್ಕೆ ತೆಗೆದು ಕೊಳ್ಳಬಹುದು ಅಂದಿದ್ದರು. ದೊಡ್ಡ ಸ್ಯಾಲರಿ ಪಡೆಯುವವರು ಅಂದರೆ ಯಾರು? ತಿಂಗಳಿಗೆ 10-20ಲಕ್ಷ ಪಗಾರ ಪಡೆಯುವ ಮಧ್ಯಮ ಸಂಬಳದ ಕೆಲಸಗಾರರು.
ಇದರ ಅರ್ಥ ಏನೆಂದರೆ, ಐಟಿ ಕ್ಷೇತ್ರ ಕನಲುತ್ತಿದೆ. ಬದಲಾವಣೆಯ ಸಮಯ ಶುರುವಾಗಿದೆ ಅಂತ. ಇಷ್ಟು ದಿನ ಅನುಭವ ಇರುವ ಉದ್ಯೋಗಿಗಳು ಐಟಿ ಕಂಪೆನಿಯ ಆಸ್ತಿಯಾಗಿದ್ದರು. ಈಗ ಲಕ್ಷ, ಲಕ್ಷ ಸಂಬಳ ಕೊಡಬೇಕಲ್ಲಪ್ಪಾ ಅಂತ ಬರ್ಡನ್ ಆಗಿದ್ದಾರೆ.
ಇವೆಲ್ಲದರ ಜೊತೆಗೆ..
ಇತ್ತೀಚೆಗೆ ಮಾಹಿತಿ ತಂತ್ರಜಾnನದ ನೌಕರರು ಸಂಘಟಿತರಾಗಲು ಹೊರಟಿರುವುದು ಹೊಸ ಬೆಳವಣಿಗೆ. ಇದುವರೆಗೆ ಮಾಹಿತಿ ತಂತ್ರಜಾnನ ಕ್ಷೇತ್ರಕ್ಕೂ ಕಾರ್ಮಿಕ ಸಂಘಟನೆಗೂ ಯಾವುದೇ ಸಂಬಂಧವಿಲ್ಲದಂತೆ ನಡೆಯುತ್ತಿತ್ತು. ತಮ್ಮ ತಮ್ಮ ಕೆಲಸಗಳು ಭದ್ರ ಬುನಾದಿಯ ಮೇಲಿವೆ, ಒಂದೊಂದು ಮೆಟ್ಟಿಲು ಮೇಲೇರುವುದೇ ವೃತ್ತಿಯಲ್ಲಿ ಕಾಣುವ ಭರವಸೆ ಎನ್ನುವಂತಾಗಿತ್ತು. ಯಾವುದೇ ವಿದ್ಯಾರ್ಥಿಗಳನ್ನು ತಮ್ಮ ಜೀವನದ ಧ್ಯೇಯೋದ್ದೇಶಗಳನ್ನು ಕೇಳಿದಾಗ ಕಳೆದ ಎರಡು ದಶಕಗಳಲ್ಲಿ ತಕ್ಷಣ ಕೊಡುವ ಉತ್ತರ ಮಾಹಿತಿ ತಂತ್ರಜಾnನವನ್ನು ಸೇರುವುದು ಎನ್ನುವುದಾಗಿತ್ತು. ಆದರೆ ಈಗ ಮಾಹಿತಿ ತಂತ್ರಜಾnನದ ನೌಕರರು ತಮ್ಮ ಕೆಲಸಗಳನ್ನು ಉಳಿಸಿಕೊಳ್ಳಲು, ರಾತ್ರೋರಾತ್ರಿ ಕೆಲಸದಿಂದ ಹೊರದಬ್ಬಿಸಿಕೊಳ್ಳುವ ಭಯದಿಂದ ಕಾರ್ಮಿಕ ಸಂಘಟನೆಯತ್ತ ಹೊರಟಿದ್ದಾರೆ.
2008ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಮಹತ್ತರವಾದ ತಲ್ಲಣ ಉಂಟಾದಾಗ ಇದೇ ರೀತಿ ಐ.ಟಿ ನೌಕರರು ಸಂಘಟಿತರಾಗುವ ಮಾತುಗಳು ಕೇಳಿಬರುತ್ತಿತ್ತು. ಈ ಸಂಘಟಿತರು ಇತ್ತೀಚೆಗೆ ಮಾಹಿತಿ ತಂತ್ರಜಾnನದ ಮಂತ್ರಿಗಳನ್ನು ಭೇಟಿಯಾಗಿ ಕೆಲಸ ಕಳೆದುಕೊಳ್ಳುವ ಭೀತಿಯನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರದಿಂದಲೂ ಸಂಘಟನೆಗೆ ಪ್ರೋತ್ಸಾಹ ಕೊಡುವ ಸೂಚನೆ ಹೋಗಿದೆ.
ಅಮೆರಿಕಾದ ಅಧ್ಯಕ್ಷಗಿರಿಗೆ ಡೊನಾಲ್ಡ್ ಟ್ರಂಪ್ ಬಂದ ಮೇಲೆ ನಮ್ಮ ಮಾಹಿತಿ ತಂತ್ರಜಾnನದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿರುವುದು ನಿಜ. ಅದು ಹೆಚ್1ವೀಸಾ ನೌಕರರಿಗೆ 60 ಸಾವಿರದಿಂದ 1 ಲಕ್ಷ 30 ಸಾವಿರ ಡಾಲರ್ ವಾರ್ಷಿಕ ಸಂಬಳ ಏರಿಸಿರುವುದು ಪಿ ಹೆಚ್ ಡಿ ಇಲ್ಲದೆ ಮತ್ತು ವೈಜಾnನಿಕ ಸಂಶೋಧನೆಗಲ್ಲದೆ ಸುಮ್ಮನೆ ಅಮೇರಿಕನ್ನರ ಕೆಲಸ ಕಸಿದುಕೊಳ್ಳಕೂಡದು ಎಂಬ ನಿರ್ಬಂಧಗಳು ನಮ್ಮ ಮಾಹಿತಿ ತಂತ್ರಜಾnನದ ಮೇಲೆ ದೊಡ್ಡ ಪೆಟ್ಟು ಕೊಟ್ಟಿದೆ.
ಟ್ರಂಪ್ಸ್‌ನ ನಡೆಗಳು ಭಾರತದ ಮಾಹಿತಿ ತಂತ್ರಜಾnನದ ಮೇಲೆ ಪರಿಣಾಮ ಬೀರಲು ಪ್ರಮುಖ ಕಾರಣ ನಮ್ಮ ಸುಮಾರು 10 ಲಕ್ಷ ಕೋಟಿ ಐ.ಟಿ ಉದ್ಯಮದ ಶೇ. 40ರಷ್ಟು ಅಂದರೆ ಸುಮಾರು 4 ಲಕ್ಷ ಕೋಟಿಯಷ್ಟು ಅಮೇರಿಕ ದೇಶವೊಂದರಿಂದಲೇ ಆಗಿದೆ. ಈ ಕಾರಣಕ್ಕಾಗಿ ಕಳೆದ ತಿಂಗಳಲ್ಲೇ ಅನೇಕ ಐಟಿ ದಿಗ್ಗಜ ಕಂಪನಿಗಳು ನೌಕರರನ್ನು ಕೆಲಸದಿಂದ ರಾತ್ರೋರಾತ್ರಿ ಕಿತ್ತೂಗೆಯುವ ಸುದ್ದಿ ಹೊರಬರುತ್ತಿದೆ. ಇದಾಗಲೇ ಒಟ್ಟು ಸುಮಾರು 1 ಲಕ್ಷ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆಯಂತೆ. ಜೊತೆಗೆ ಹಿರಿಯ ನೌಕರರು ಹೆಚ್ಚು ಸಂಬಳ ಪಡೆಯುತ್ತಿರುವವರನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತು ಕೇಳುತ್ತಿದೆ.
ಏಕೆ ಹೀಗೆ? ಅನುಭವಕ್ಕೆ ಬೆಲೆ ಇಲ್ಲವೇ? ಅನ್ನೋ ಅನುಮಾನಕ್ಕೆ ಕೆಲವು ಐಟಿ ಉದ್ಯಮಿಗಳು ಉತ್ತರಿಸುತ್ತಾರೆ. ಅವರ ಪ್ರಕಾರ 50-60 ಲಕ್ಷ ಸಂಬಳ ಪಡೆಯುತ್ತಿರುವ ಹಿರಿಯ ನೌಕರರು ಮತ್ತು ಉನ್ನತ ಹುದ್ದೆಯಲ್ಲಿರುವ ನೌಕರರು ತಮ್ಮ ಸಂಬಳ ಕಡಿಮೆ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಕಂಪನಿಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕುವುದು ಮತ್ತು ಹೊಸ ಪೀಳಿಗೆಗೆ ಕೆಲಸ ಕೊಡುವುದು ಅಸಾಧ್ಯ!.
ಈ ನಡುವೆ ಯಂತ್ರ ಮಾನವರು ನಮ್ಮ ಕೆಲಸ ಕದಿಯುತ್ತಿದ್ದಾರೆ ಎನ್ನುವುದು ಕೇವಲ ಊಹಾಪೋಹವಾಗದೆ ವಾಸ್ತವ ವಿಷಯವಾಗಿ ಕಂಡುಬರುತ್ತಿದೆ. ಇಂದಿನ ಐ.ಟಿ ಉದ್ಯಮದ ಮುಕ್ಕಾಲು ಭಾಗ ಕೆಲಸವನ್ನು ರಾತ್ರಿ ಹಗಲು ದುಡಿಯುವ ಯಂತ್ರಗಳೇ ನಿರ್ವಹಿಸಬಹುದು ಎಂದು ಅಂದಾಜು ಮಾಡುತ್ತಿದ್ದಾರೆ.
ಇಂತಹ ಮುಗ್ಗಟ್ಟಿಗೆ ಸಿಲುಕಿರುವ ಮಾಹಿತಿ ತಂತ್ರಜಾnನದ ನೇರ ಹೊಡೆತ ಕರ್ನಾಟಕ ರಾಜ್ಯಕ್ಕೆ ಎಂದರೆ ತಪ್ಪಾಗಲಾರದು. ಕಾರಣ ಸುಮಾರು 4 ಲಕ್ಷ ಕೋಟಿಯ ಐ.ಟಿ ವ್ಯವಹಾರ ಕರ್ನಾಟಕದಲ್ಲಿಯೇ ನಡೆಯುವುದು. ಐ.ಟಿ ಕ್ಷೇತ್ರದಲ್ಲಿ ಕರ್ನಾಟಕದ್ದು ಸಿಂಹ ಪಾಲು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹಿಂದೊಮ್ಮೆ ಹೈದರಾಬಾದ್ ಬೆಂಗಳೂರಿಗೆ ಸೆಡ್ಡು ಹೊಡೆಯುತ್ತಿದೆ ಎಂದು ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್‌ರಿಗೆ ಕೇಳಿದಾಗ ಅವರು ‘ಹೈದರಾಬಾದ್ ಅನ್ನು ನೋಡಿಕೊಳ್ಳಲು ನಮ್ಮ ಬೆಂಗಳೂರು ಏಕೆ? ನಮ್ಮ ಮೈಸೂರೇ ಇದೆಯಲ್ಲ’ ಎಂದಿದ್ದರು. 2 ದಶಕಗಳ ಹಿಂದೆ ಬೆಂಗಳೂರಿನ ಕೋರಮಂಗಲದಂತಹ ವಾಸಸ್ಥಳಗಳಲ್ಲಿ, ಮನೆಮನೆಗಳಲ್ಲಿ, ಗ್ಯಾರೇಜ್‌ಗಳಲ್ಲಿ ಉಂಟಾದ ಐಟಿ ಕ್ರಾಂತಿ ಇಂದು ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಮಾನ್ಯತಾ ಟೆಕ್ ಪಾರ್ಕ್, ಅಷ್ಟೇಕೆ? ಮೈಸೂರು, ಹುಬ್ಬಳ್ಳಿ ಹೀಗೆ ಇಡೀ ಬೆಂಗಳೂರು ಕರ್ನಾಟಕದ ಆಯ್ದ ಭಾಗಗಳಲ್ಲಿ ಹೊಸ ಬದುಕು, ಹೊಸ ಊರುಗಳನ್ನೇ ಸೃಷ್ಟಿಸಿದ ಕೀರ್ತಿ ಐಟಿ ಉದ್ಯಮಕ್ಕೆ ಸಲ್ಲುತ್ತದೆ. ಹಾಗೆಯೇ ಅಲ್ಲಿ ದುಡಿಯುವ ನೌಕರರು ತಮಗೆ ಸಿಗುವ ಕೈತುಂಬ ಸಂಬಳದಿಂದ ನಗರದಲ್ಲಿ ಖರ್ಚು ಮಾಡುವುದರಿಂದ ಇಲ್ಲಿನ ಮಾಲ್‌ಗಳು, ಹೋಟೆಲ್‌ಗಳು, ಟ್ರಾನ್ಸ್‌ಪೊàರ್ಟ್ ಉದ್ಯಮ, ಮನೆ ಬಾಡಿಗೆ ದರ, ಭೂಮಿ ಬೆಲೆ, ಆಧುನಿಕ ಏರ್‌ಪೋರ್ಟ್ ಎಲ್ಲಕ್ಕೂ ಉತ್ತೇಜನಕಾರಿಯಾಗಿ ನಿಂತಿರುವುದು ಸತ್ಯ.
ಹಾಗೆ ನೋಡಿದರೆ ಬೆಂಗಳೂರು ಅತಿ ವೃದ್ಧಿಗೆ ಐಟಿ ಕೊಡುಗೆಯೇ ಕಾರಣ. ಇವತ್ತು ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಬೆಂಗಳೂರು ವಿಶ್ವಮಾನ್ಯಗಳಿಸುವುದರಲ್ಲಿ ಐಟಿಯದ್ದೇ ಪ್ರಮುಖ ಪಾತ್ರ. ಸರ್ಜಾಪುರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿಗಳಲ್ಲಿ ಉದ್ಯಮವಿದ್ದರೂ, ದೇವನಹಳ್ಳಿ, ಹೊಸಕೋಟೆಯಲ್ಲಿನ ಭೂಮಿ ಬೆಲೆ ಏರಲು ಕಾರಣವಾಗಿದೆ. ಇವಿಷ್ಟೇ ಅಲ್ಲ, ಶಿರಸಿ, ಸಿದ್ದಾಪುರ, ಚಿಕ್ಕಮಗಳೂರು, ಸಕಲೇಶಪುರ, ತುಮಕೂರು ಇಲ್ಲೆಲ್ಲಾ ಜಮೀನುಗಳ ಬೆಲೆ ಲಕ್ಷಾಂತರ ರೂ. ಏರಲು ಐ.ಟಿ ಆದಾಯವೇ ಕಾರಣ ಅನ್ನೋದನ್ನು ತಳ್ಳಿ ಹಾಕುವಂತೆಯೇ ಇಲ್ಲ.
ಹೂಡಿಕೆ ವಿಚಾರಕ್ಕೆ ಬಂದರೆ ಎಷ್ಟೋ ಐಟಿ ಮಂದಿ ಸೈಟು, ಮನೆ ಜೊತೆಗೆ ಜಮೀನುಗಳನ್ನು ಕೊಂಡು ಕೃಷಿಯಲ್ಲಿ ತೊಡಗಿ ಕೊಂಡಿರುವ ಉದಾಹರಣೆ ಇದೆ.
ಅಂದರೆ ಐ.ಟಿ ಉದ್ಯೋಗಿಗಳು ತಮ್ಮ ಆರ್ಥಿಕ ಅಂತಸ್ತನ್ನು ದಿಢೀರನೆ ಬದಲಾಯಿಸಿಕೊಂಡಿದ್ದು ಇನುÒರೆನ್ಸ್, ಷೇರುಮಾರುಕಟ್ಟೆ, ಮ್ಯುಚುವಲ್ ಫಂಡ್‌ಗಳ ವ್ಯವಹಾರಗಳಿಗೆ ಬಹುಲಾಭವಾಗಿದೆ. ಹೂಡಿಕೆಯ ಒಳಹರಿವು ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ ಷೇರು ಮಾರುಕಟ್ಟೆಯ ವಹಿವಾಟಿನ ಓಟ ಹೆಚ್ಚಾ ಕಡಿಮೆ ಶೇ. 50-60ರಷ್ಟು ಹೆಚ್ಚಾಗಿದೆ ಎಂದು ಹೇಳುವುದರ ಹಿಂದೆ ಐ.ಟಿ ಕೂಡ ಕಾರಣ.
ಇತ್ತೀಚಿಗೆ ಉಂಟಾಗಿರುವ ಆರ್ಥಿಕ ಹೊಡೆತದ ಪರಿಣಾಮ ಮನೆ ಬಾಡಿಗೆಯಲ್ಲಿ 5 ರಿಂದ 10 ಸಾವಿರ ಇಳಿಮುಖವಾಗಿರುವುದರ ವರದಿಯಾಗಿದೆ. ಖಾಲಿ ಇರುವ ಕಚೇರಿ ಕಟ್ಟಡಗಳು ಹೆಚ್ಚು ಕಂಡುಬರುತ್ತಿದೆ.
ಕಡಿಮೆ ಸಂಬಳಕ್ಕೆ ಐ.ಟಿಯೇತರ ಉದ್ಯಮಗಳಿಗೆ ಐ.ಟಿ ನೌಕರರು ಹೊರಬರುತ್ತಿರುವುದು ಕಾಣುವುದಾಗಿದೆ. ಹೀಗಾಗಿ ಕರ್ನಾಟಕ ಮತ್ತು ಬೆಂಗಳೂರಿನ ಮಟ್ಟಿಗೆ ಇದೊಂದು ದೊಡ್ಡ ಹೊಡೆತವೇ ಸರಿ ಎನ್ನಬಹುದು. ಕರ್ನಾಟಕದ ಆರ್ಥಿಕ ವ್ಯವಸ್ಥೆಯ ಮುಕ್ಕಾಲು ಭಾಗ ಸೇವಾ ವಲಯದಿಂದ ಬರುವುದಾಗಿದ್ದು ಅದರಲ್ಲಿ ಸಿಂಹ ಪಾಲು ಮಾತಿ ತಂತ್ರಜಾnನದ್ದಾಗಿದ್ದು ಸಾಧಾರವಾಗಿಯೇ ಅಲ್ಲಿ ಕಂಡ ಬದಲಾವಣೆ ನಗರದ ಎಲ್ಲ ಆರ್ಥಿಕ ವಲಯಗಳಲ್ಲೂ ಪ್ರತಿಬಿಂಬಿಸುತ್ತಿರುವುದನ್ನು ಕಾಣಬಹುದು. ಕೆಳೆದ ಎರಡು ದಶಕಗಳಿಂದ ಮದುವೆಗೆ ಹುಡುಗ ಅಥವ ಹುಡುಗಿಯನ್ನು ಹುಡುಕಲು ಐಟಿ ಕ್ಷೇತ್ರದಲ್ಲಿದ್ದಾರೆಂದರೆ ಮುಗಿಬೀಳುತ್ತಿದ್ದರು ಮತ್ತು ಹೆಮ್ಮೆ ಪಡುತ್ತಿದ್ದರು. ಅದು ಬದಲಾಗುವ ಸಾಧ್ಯತೆ ಕಾಣುತ್ತಿದೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಭಾರತದ ಐಟಿ ಉದ್ಯಮ ಇದನ್ನೂ ಸದ್ಬಳಕೆ ಮಾಡಿಕೊಂಡು ಹೊಸ ಆವಿಷ್ಕಾರಗಳಿಂದ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವ ಭರವಸೆ ಅನೇಕರಿಂದ ವ್ಯಕ್ತವಾಗುತ್ತಿದೆ. ಇದಾಗಲೇ ಈ ಕ್ಷೇತ್ರದಲ್ಲಿ ಪಳಗಿರುವ ಐಟಿ ಉದ್ಯಮ ಮತ್ತು ನೌಕರರು ಸುಲಭವಾಗಿ ಸೋಲು ಒಪ್ಪಿಕೊಳ್ಳಲಾರರು ಎನ್ನುವರ ಅಭಿಪ್ರಾಯವೂ ಇದೆ. ತಂತ್ರಜಾnನಕ್ಕೆ ವಿರೋಧಿಗಳಾಗದೆ ಅವುಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ತೆಕ್ಕೆಯಲ್ಲಿಟ್ಟು ವ್ಯವಹರಿಸುವ ರೀತಿಯಲ್ಲಿ ಹೊಸತನವನ್ನು ಕಂಡುಕೊಂಡು ಆರ್ಥಿಕ ಪ್ರಗತಿಯತ್ತ ಮುನ್ನಡೆಯುವ ಸಾಧ್ಯತೆಗಳು ಕಮ್ಮಿಯೇನಿಲ್ಲ.
ಜೆಡಿಎಸ್ ಥರ
ಇಡೀ ವಿಶ್ವದಲ್ಲಿ 1,700ಬಿಲಿಯನ್ ಐಟಿ ವಹಿವಾಟಿದೆ. ಇದರಲ್ಲಿ ಶೇ. 6ರಷ್ಟು ಮಾತ್ರ ನಮ್ಮ ಪಾಲು ಇರುವುದು. ಆದರೆ ನಾವೇ ಐಟಿ ಕ್ಷೇತ್ರದ ಪ್ರಮುಖ ಎಂಜಿನ್ ಆಗಿದ್ದೇವೆ. ನಮ್ಮಲ್ಲಿರುವ ಪ್ರತಿಭೆ, ಯೋಜನೆ ಜಾರಿ, ಶುದ್ಧ ಇಂಗ್ಲೀಷ್ ಭಾಷೆ, ಪರಿಶ್ರಮ ಹೀಗೆ ಹಲವಾರು ಅಂಶಗಳಿಂದ ಐಟಿ ಕ್ಷೇತ್ರದಲ್ಲಿ ನಮ್ಮವರಿಗೆ ಅದರಲ್ಲೂ ಬೆಂಗಳೂರ ಮಂದಿಗೆ ಮೊದಲ ಮಣೆ. ಇದು ಹೇಗೆ ಎಂದರೆ ಕರ್ನಾಟಕದ ರಾಜಕೀಯದಲ್ಲಿ ಸೀಟು ಕಡಿಮೆ ಬಂದರೂ ಕಿಂಗ್‌ಮೇಕರ್ ಆಗುವ ಜೆಡಿಎಸ್ ಪಕ್ಷದಂತೆ, ಐಟಿಯಲ್ಲಿ ನಮ್ಮ ಸಂಖ್ಯೆ ಕಡಿಮೆ ಇದ್ದರೂ ಮುಂಚೂಣಿಯಲ್ಲಿ ನಾವೇ.
ಐಟಿಯಿಂದ ಬಳಕೆ ಜಾಸ್ತಿ
ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಹಳ ಕಮ್ಮಿ. ಆದರೆ ಅವರ ಸಂಬಳ ಜಾಸ್ತಿ. ಅದರಲ್ಲೂ ಯುವಕರು ಹೆಚ್ಚಿರುವುದರಿಂದ ಅವರು ಉಳಿತಾಯದ ಕಡೆ ಗಮನ ಹರಿಸೋಲ್ಲ. ಇದೇ ಆರ್ಥಿಕತೆಯ ಪ್ಲಸ್ ಪಾಯಿಂಟ್. ಉಳಿತಾಯ ಮಾಡಿ, ಹೂಡಿಕೆ ಮಾಡಿ ಅಂತೆಲ್ಲ ಹೇಳ್ಳೋದು ಒಂದು ವಿಧವಾದರೆ ಉಳಿತಾಯ ಮಾಡದೇ ಹಣ ಖರ್ಚು ಮಾಡಿದರೆ ಹಣದ ಓಡಾಟ ಜಾಸ್ತಿಯಾಗುತ್ತದೆ. ಈ ರೀತಿ ಬಳಕೆ ಜಾಸ್ತಿಯಾದರೆ ಪ್ರೊಡಕ್ಷನ್ ಹೆಚ್ಚುತ್ತದೆ. ಪ್ರೊಡಕ್ಷನ್‌ನಿಂದ ಉದ್ಯೋಗ ಅವಕಾಶಗಳೂ ಜಾಸ್ತಿ.
ಒಬ್ಬ ವ್ಯಕ್ತಿ ಐಟಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದರೆ ಅವನಿಂದ ಪ್ರತ್ಯಕ್ಷ, ಪರೋಕ್ಷವಾಗಿ ಸುಮಾರು 8-10 ಮಂದಿಗೆ ಕೆಲಸ ಸಿಗುತ್ತಿರುತ್ತದೆ. ಐಟಿಯ ಪೊರೆ ಕಳಚುತ್ತಿರುವುದರಿಂದ ನಮ್ಮ ರಿಯಲ್ ಎಸ್ಟೇಟ್ ಶೇ. 25ರಷ್ಟು ಬಿದ್ದು ಹೋಗಿದೆ. ಬಾಡಿಗೆಯಲ್ಲಿ ಶೇ.20-30ರಷ್ಟು ಇಳಿದಿದೆ. ಬೆಂಗಳೂರು ನಗರದಲ್ಲಿ ಶೇ. 40ರಷ್ಟು ಆಫೀಸ್ ಸ್ಪೇಸ್ ಖಾಲಿಯಾಗಿದೆ. ಪರಿಣಾಮ ಇಷ್ಟಕ್ಕೆ ಅಲ್ಲ, ರಾಯಚೂರು, ಕಲುಬುರ್ಗಿಯಿಂದ ಉದ್ಯೋಗ ಅರಸಿ ಬರುತ್ತಿದ್ದ ಕಟ್ಟಡ ಕಾರ್ಮಿಕರಲ್ಲಿ ಈಗಾಗಲೇ ತಳಮಳ ಶುರುವಾಗಿದೆ.
– ಡಾ. ಕೆ.ಸಿ. ರಘು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.