ಹಣವನ್ನೂ ಹೂಡಿ; ಕೆಲಸವನ್ನೂ ಮಾಡಿ.

Team Udayavani, Jul 9, 2018, 5:52 PM IST

hana.jpg

ಯಾವುದೇ ಒಂದು ಯೋಜನೆಯಲ್ಲಿ ನಾವು ಬಂಡವಾಳ ತೊಡಗಿಸಿದರೆ ಆಗ “ಹೂಡಿಕೆದಾರ’ರಷ್ಟೇ ಆಗಿರುತ್ತೇವೆ. ಅದರ ಬದಲು, ಹೂಡಿಕೆಯ ಹಿಂದೆಯೇ ಕೆಲಸ ಮಾಡಲು ತೊಡಗಿದರೆ, ಉದ್ಯಮಿಗಳಾಗಿ ರೂಪುಗೊಳ್ಳುತ್ತೇವೆ !

“ಹೂಡಿಕೆ’ ಎಂದ ತಕ್ಷಣ ಹೆಚ್ಚಿನವರಿಗೆ ಕೇವಲ ಷೇರು ಪೇಟೆಯ ಬಗೆಗೆ ಮಾತ್ರವೇ ಮನಸ್ಸು ಹೋಗುತ್ತದೆ. ಈಗ ಅದಕ್ಕೆ ಮ್ಯೂಚುವಲ್‌ ಫ‌ಂಡ್‌ ಕೂಡ ಸೇರಿಕೊಂಡಿದೆ. ಆದರೆ ಹೂಡಿಕೆ ಎಂದಾಗ ನಮ್ಮ ಹಣವನ್ನು ತೊಡಗಿಸಿ ಅದನ್ನು ಇನ್ನುಷ್ಟು ಹೆಚ್ಚಿಸಿಕೊಳ್ಳುವುದು ಹಾಗೂ ಲಾಭದಾಯಕವಾಗಿ ಮಾಡಿಕೊಳ್ಳುವುದು ಎಂದಷ್ಟೇ ಎಲ್ಲರೂ ಲೆಕ್ಕ ಹಾಕುತ್ತಾರೆ.

ಯಾವಾಗಲೂ ಹೂಡಿಕೆಯನ್ನು ಹೀಗೆ ನೋಡಬಹುದು. ಮೊದಲನೆಯದು ಹಣ ಹೂಡಿದಾಗ ಅಲ್ಲಿ ನಮ್ಮ ಕೆಲಸ ಇಲ್ಲ. ಉದಾಹರಣೆಗೆ ಒಂದು ನಿವೇಶನವನ್ನು ಹೂಡಿಕೆಯ ಕಾರಣಕ್ಕೆ ಕೊಂಡರೆ, ಒಮ್ಮೆ ಹಣ ಹೂಡಿ, ಆ ಜಾಗದಲ್ಲಿ ಬೇಲಿ ಹಾಕಿ ಬಿಟ್ಟರೆ ನಮ್ಮ ಕೆಲಸ ಅರ್ಧ ಮುಗಿದಂತೆ. ಆನಂತರದ ದಿನಗಳಲ್ಲಿ, ಅಗೀಗ ಹೋಗಿ ಏನಾದರೂ ಒತ್ತುವರಿ ಆಯಿತಾ? ಏನಾದರೂ ಮಾಡಿದರಾ ಎಂದು ನೋಡಿಕೊಂಡು ಬಂದರೆ ಸಾಕು. ಹಾಗೆಯೇ ಬ್ಯಾಂಕಿನ ಭದ್ರತಾ ಠೇವಣಿಯಲ್ಲಿ ಇಟ್ಟರೂ, ಬಾಂಡ್‌ಗಳಲ್ಲಿ ಹಾಕಿದರೂ, ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಾಕಿದರೂ, ಷೇರಿನಲ್ಲಿ ತೊಡಗಿಸಿದರೂ ಎಲ್ಲರಿಗೂ ಹೂಡಿಕೆಯಲ್ಲಿ ಹಣ ತೊಡಗಿಸಿದೆನೆಂಬ ಸಮಾಧಾನ ಇದ್ದೇ ಇರುತ್ತದೆ. ಹೀಗೆ ಹೂಡಿಕೆ ಮಾಡಿದ ಹಣ ಬೆಳೆಯಲೇ ಬೇಕು. ಅದು ಬೆಳೆದೇ ತೀರುತ್ತದೆ ಎಂಬ ನಂಬಿಕೆಯೂ ಇರುತ್ತದೆ.  

ಇನ್ನೊಂದು ರೀತಿಯ ಹೂಡಿಕೆ ಇರುತ್ತದೆ. ಇಲ್ಲಿ ಹಣ ತೊಡಗಿಸಿ ನಾವು ಕೆಲಸವನ್ನು ಮಾಡಬೇಕು. ಇಂತಹ ಹಣ ತೊಡಗಿಸುವಿಕೆ ಸ್ವಂತ ಉದ್ಯಮವಾಗಿ, ಉದ್ಯೋಗವಾಗಿ ರೂಪಗೊಳ್ಳುತ್ತದೆ. ಇಂತಹ ಹಣ ಹೂಡಿಕೆಯ ಜಾಣ ತನಕ್ಕೆ ಒಬ್ಬ ಮಹಿಳೆ ಕೊಟ್ಟ ಉದಾಹರಣೆ ಹಂಚಿಕೊಳ್ಳುವೆ.

ಕನಕಪುರ ಸಮೀಪದ ಆ ಮಹಿಳೆ ತಾನು ಹಾಲು ಮಾರಿ ಬಂದ ಹಣವನ್ನು ಹಾಗೇ ಇಟ್ಟುಕೊಳ್ಳುತ್ತಾಳೆ. ಒಂದು ನಿರ್ದಿಷ್ಟ ಹಬ್ಬದ ಸಂದರ್ಭ, ಕೆಲವು ವಿಶೇಷ ಸನ್ನಿವೇಷಗಳಲ್ಲಿ ಕುರಿಗಳು, ಅದರಲ್ಲೂ ಎಳೆಯ ಕುರಿ ಮರಿಗಳು ಕಡಿಮೆ ಬೆಲೆಗೆ ಸಿಗುತ್ತವಂತೆ. ಹಾಗೆ ಸಿಕ್ಕ ಕುರಿ ಮರಿಗಳು ಹಾಗೂ ಮರಿ ಹಾಕಬಹುದಾದ ಕುರಿಗಳನ್ನು ಕೊಂಡು ತಂದು, ಬೆಳೆಸಿ ಆ ನಂತರ ಅದನ್ನು ಹೆಚ್ಚಿನ ದರಕ್ಕೆ ಮಾರುತ್ತಾಳೆ.  ಕುರಿಗಳು ಹಾಗೂ ಮರಿಗಳನ್ನು ಹೀಗೆ ನಾಲ್ಕೈದು ತಿಂಗಳು ಸಾಕಿ ಮಾರುವುದರಿಂದ ಹಾಕಿದ ಹಣ ಅಧಿಕ ಲಾಭ ತರುವುದಂತೆ. 

ಎಷ್ಟೋ ಸಾರಿ ಹೀಗೆ ಕೊಂಡು ಮಾರಿ ಮಾಡುತ್ತ ಅವಳು ವರ್ಷಕ್ಕೆ ಲಕ್ಷಾಂತರ ರೂಪಾಯಿ ಸಂಪಾದಿಸುವುದಿದೆ. ಒಂದೆಡೆ ಬಂದ ಹಣ ಮತ್ತೆ ಇನ್ನೊಂದೆಡೆ ಬೆಳೆಯುತ್ತಿದೆ. ಅದೂ ಆ ಬೆಳವಣಿಗೆ ಅವರ ಕೈಯಲ್ಲಿಯೇ ಇದೆ. ಇಲ್ಲಿ ಇವಳು ಕೇವಲ ಹಣ ಮಾತ್ರ ತೊಡಗಿಸಲಿಲ್ಲ. ಕೆಲಸವನ್ನೂ ಮಾಡುತ್ತಾಳೆ. ನಾವು ಕೇವಲ ಹಣ ತೊಡಗಿಸಿದರೆ ಹೂಡಿಕೆದಾರರು ಆಗಬಹುದು. ಆದರೆ ಹಣ ತೊಡಗಿಸಿ ಕೆಲಸವನ್ನೂ ಮಾಡಿದರೆ ಉದ್ಯಮಿಗಳಾಗಿ ರೂಪಗೊಳ್ಳುತ್ತೇವೆ. ಹೀಗೆ ಸಣ್ಣ ಸಣ್ಣ ಉಳಿತಾಯ, ಸಣ್ಣ ಸಣ್ಣ ಕೆಲಸದಿಂದ ಆರಂಭವಾದ ಎಷ್ಟೋ ಉದ್ಯಮಗಳೇ ಈಗ ಎತ್ತರಕ್ಕೆ ಬೆಳೆದಿದೆ.

ಎತ್ತರಕ್ಕೆ ಏರಬೇಕು ಎಂಬ ಆಸೆ ಮತ್ತು ಎತ್ತರೆತ್ತರ ಬೆಳೆಯ ಬಲ್ಲೆ ಎಂಬ ಭರವಸೆಯೇ ಎಲ್ಲ ಹಣ ಹೂಡಿಕೆಯ ಹಿಂದಿರುವ ಆಶಯ.

– ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.