ಹೂಡ್ರಪ್ಪಾ ಹೂಡ್ರೀ , ಅದಕ್ಕೂ ಮೊದಲು ಇಲ್ಲಿ ಸ್ವಲ್ಪ ನೋಡ್ರೀ..


Team Udayavani, Apr 10, 2017, 1:09 PM IST

hoodi.jpg

ಯುಗಾದಿ ಮುಗಿಯಿತು. ಹೊಸ ವರ್ಷ ಬಂತು. ಹೂಡಿಕೆ ಮಾಡಲು ಶುಭದಿನಗಳು ಕೂಡಿ ಬಂದಿವೆ.  ಆರ್ಥಿಕ ಹೂಡಿಕೆ, ಉಳಿತಾಯದ ಕುರಿತಾಗಿ ಏನೇನು ಮಾಡಬಹುದು? ಇದಕ್ಕೂ ಮೊದಲು ಕಳೆದ ವರ್ಷ ಮಾಡಿರಬಹುದಾದ ತಪ್ಪುಗಳನ್ನು ತಿದ್ದುಕೊಳ್ಳುವುದು ಜಾಣತನದ ಲಕ್ಷಣ. 

ಮಾರುಕಟ್ಟೆ ನೋಡಿ
ನಾವು ನೀವೆಲ್ಲರೂ ಗಮನಿಸಿರುವಂತೆ ಶೇರುಮಾರುಕಟ್ಟೆ ಉತ್ತುಂಗದಲ್ಲಿದೆ. ಈಕ್ವಿಟಿ ಮಾರುಕಟ್ಟೆ ಈ ವರ್ಷ ಶೇ.18.5ರ ಏರಿಕೆಯನ್ನು ದಾಖಲಿಸಿದೆ. ಅದೇ ವೇಳೆಗೆ ಡೆತ್‌ ಮಾರ್ಕೆಟ್‌ ಶೇ. 9ರ ಏರಿಕೆಯನ್ನು ಸಾಧಿಸಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಚಿನ್ನದ ಮಾರುಕಟ್ಟೆ ಕಳೆದ ಸಾಲಿನಲ್ಲಿ ಇಳಿಮುಖದ ಸಾಧನೆಯನ್ನು ತೋರಿರುವುದು.  ಈ ಹಂತದಲ್ಲಿ ನಿಮ್ಮ ಹೂಡಿಕೆಯ ಪೋರ್ಟ್‌ಫೋಲಿಯೋ ಪುನರ್‌ ನಿರ್ಮಾಣ ಮಾಡುವುದು ಸೂಕ್ತ.  ಈಗಾಗಲೇ ಶೇರುಮಾರುಕಟ್ಟೆ ತನ್ನ ಉತ್ತುಂಗ ತಲುಪಿರುವ ಕಾರಣ ಲಾಭದಲ್ಲಿರುವ ಕೆಲವು ಶೇರುಗಳನ್ನು ಮಾರಾಟ ಮಾಡಿ ಬರುವ ಮೊತ್ತವನ್ನು  ಡೆಬ್‌r ಮತ್ತು ಗೋಲ್ಡ್‌ ನಲ್ಲಿ ಹೂಡಿಕೆ ಮಾಡುವುದು ಒಳಿತು. ೆ.

ಇಲ್ಲಿ ಹೂಡಿ
ಟ್ಯಾಕ್ಸ್‌ ಪ್ಲಾನಿಂಗ್‌ ಗೋಸ್ಕರ ಹೂಡಿಕೆ ಮಾಡುವುದರ ಬದಲು ಏಪ್ರಿಲ್‌ ನಿಂದಲೇ ಎಸ್‌.ಐ.ಪಿ.ಅಡಿಯಲ್ಲಿ ಪ್ರತಿತಿಂಗಳೂ ಇಂತಿಷ್ಟು ಎಂದು ಮೊತ್ತ ನಿಗದಿ ಪಡಿಸಿಕೊಂಡು ಈ.ಎಲ್‌.ಎಸ್‌.ಎಸ್‌. ನಲ್ಲಿ ಹೂಡುವುದು ಜಾಣ ನಿರ್ಧಾರ. 2014ರ ಎಪ್ರಿಲ್‌ನಿಂದ ಆರಂಭಿಸಿ 2017ರ ಮಾರ್ಚ್‌ ತನಕ ಪ್ರತಿತಿಂಗಳೂ ಐದುಸಾವಿರ ಎಸ್‌.ಐ.ಪಿ.ಯಡಿಯಲ್ಲಿ ಹೂಡಿಕೆ ಮಾಡುತ್ತಾ ರೂ:1.80 ಲಕ್ಷ ಮೊತ್ತ ಜಮೆ ಮಾಡಿರುವವರು ಈಗ ರೂ:2.15 ಲಕ್ಷದ ಮೊತ್ತದ ಯಜಮಾನರಾಗಿದ್ದಾರೆ. ಇದು ಉತ್ತಮ ಹೂಡಿಕೆಯಲ್ಲವೇ? ತೆರಿಗೆ ವಿನಾಯಿತಿ ಜೊತೆಗೆ ಲಾಭವನ್ನೂ ನೀಡುವ ಇಂತಹ ಹೂಡಿಕೆ ಬಗ್ಗೆ ಗಮನಿಸುವುದು ಸೂಕ್ತ.

15 ಎಚ್‌ ಮತ್ತು 15-ಜಿ ನಮೂನೆಗಳನ್ನು ಸಲ್ಲಿಸಿ
ನೀವು ಹಿರಿಯ ನಾಗರಿಕರಾಗಿದ್ದು ನಿಮ್ಮ ಒಟ್ಟಾರೆ ಆದಾಯ ತೆರಿಗೆ ಮಿತಿಯ ಒಳಗಡೆ ಬರುವುದಿಲ್ಲವೆಂದಾದಲ್ಲಿ 15-ಜಿ ಅಥವಾ 15.ಎಚ್‌ ಸಲ್ಲಿಕೆ ಮಾಡಬೇಕಾಗುತ್ತದೆ. ಇದರ ಸಲ್ಲಿಕೆ ಮಾಡುವುದರಿಂದ ಮೂಲದಲ್ಲಿ ತೆರಿಗೆ ಕಟಾವಣೆ (ಟಿಡಿ.ಎಸ್‌) ತಪ್ಪಿಸಬಹುದು. ಕೆಲವು ಬ್ಯಾಂಕುಗಳಲ್ಲಿ ಅನ್‌ ಲೈನ್‌ ಮೂಲಕವೂ ಇಂಥ ಫಾರಂ ಸಲ್ಲಿಕೆಗೆ ಅವಕಾಶವಿದೆ. ಬ್ಯಾಂಕಿಗೆ ಹೋಗಿ ಬರುವ ಶ್ರಮ ಮತ್ತು ಖರ್ಚನ್ನೂ ಉಳಿಸಬಹುದು. 

ಈ ಕಡೆ ಗಮನಹರಿಸಿ
ನಿಮ್ಮ ಇದುವರೆಗಿನ ಕೆಲವು ಹೂಡಿಕೆಗಳಲ್ಲಿ ನಿರಾಶಾದಾಯಕ ಇಳುವರಿ ಸಿಕ್ಕಿರಬಹುದು. ಅವು ನಿಮ್ಮ ನಿರೀಕ್ಷಿತ ಗುರಿಯನ್ನು ತಲುಪದೇ ಇರಬಹುದು. ಹಾಗಾಗಿ ನಿಮ್ಮ ಗುರಿತಲುಪಲು ಬೇಕಾದ ಹೆಚ್ಚುವರಿ ಮೊತ್ತವನ್ನು ಸೂಕ್ತವಾದ ಯೋಜನೆಯಲ್ಲಿ ಈ ಬಾರಿ ಹೂಡಿಕೆ ಮಾಡಿ.  ನೀವು ಖರೀದಿ ಮಾಡಬೇಕೆಂದಿದ್ದ ಮನೆಯ ಬೆಲೆ ಈಗ ಏರಿರಬಹುದು. ಏರಿಕೆಯಾಗಿರುವ ಮೌಲ್ಯವನ್ನು  ಹೇಗೆ ಸರಿದೂಗಿಸುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು.  ಹಾಗಾಗಿ ಹೆಚ್ಚಿನ ಉಳಿತಾಯ ಮತ್ತು ಜಾಣ ಹೂಡಿಕೆ  ನಿರ್ಧಾರಗಳನ್ನು ತೆಗೆದುಕೊಳ್ಳಿ, ಪ್ರಾವಿಡೆಂಟ್‌ ಫ‌ಂಡೂ ಇದೆ ನೀವೂ ಗಮನಿಸಿರಬಹುದು. ಪಬ್ಲಿಕ್‌ ಪ್ರಾಡೆಂಟ್‌ ಫ‌ಂಡ್‌ ಶೇ:7.9ರ ಇಳುವರಿಯನ್ನು ಕೊಟ್ಟಿದೆ. ಆದರೆ ನೀವು ವಾಲಂಟರಿ ಪ್ರಾಡೆಂಟ್‌ ಫ‌ಂಡ್‌ ಯೋಜನೆಗೆ ಹೂಡಿಕೆ ಮಾಡಿದ್ದರೆ ಅಲ್ಲಿ ನೀವು ಶೇ:.8.65ರ ಇಳುವರಿ ಪಡೆಯುತ್ತಿದ್ದಿರಿ. ಈ ಹೂಡಿಕೆಗಳಿಂದ ಬರುವ ವರಮಾನವೆಲ್ಲವೂ ತೆರಿಗೆರಹಿತವಾದದ್ದು . ಈ ಆರ್ಥಿಕ ವರುಷದ ಆರಂಭದಿಂದಲೇ .ಪಿ.ಎಫ್. ಹೂಡಿಕೆ ಶುರು ಮಾಡುವುದು ಒಳಿತು.

ಎನ್‌.ಪಿ.ಎಸ್‌.ಖಾತೆ ತೆರೆಯಿರಿ
ಒಂದೊಮ್ಮೆ ನೀವು ನ್ಯಾಶನಲ್‌ ಪೆನ್‌ಶನ್‌ ಸ್ಕೀಮ್‌ ಖಾತೆಯನ್ನು ಇದುವರೆಗೆ ಹೊಂದಿಲ್ಲದೇ ಇದ್ದಲ್ಲಿ ತಡ ಮಾಡಬೇಡಿ. ತ್ವರಿತವಾಗಿ ಒಂದು ಎನ್‌.ಪಿ.ಎಸ್‌. ಖಾತೆಯನ್ನು ತೆರೆದು ಉಳಿತಾಯವನ್ನು ಅದರಲ್ಲಿ ಹೂಡಿಕೆ ಮಾಡಿ. 80-ಸಿಸಿ ಅಡಿಯಲ್ಲಿ ಸಿಗುವ ಗರಿಷ್ಠ ವಿನಾಯಿತಿಗಳಲ್ಲದೇ ಹೆಚ್ಚುವರಿಯಾಗಿ ಐವತ್ತುಸಾವಿರ ರೂ.ಗಳನ್ನು ಎನ್‌.ಪಿ.ಎಸ್‌.ನಲ್ಲಿ ಹೂಡಿಕೆ ಮಾಡಿದ್ದರೆ ಅದು ಸೆಕ್ಷನ್‌ 80ಸಿಸಿಡಿ(1ಬಿ) ಅನ್ವಯ ವಿನಾಯಿತಿ ಇದೆ.  ಆಧಾರ್‌ ಕಾರ್ಡು ಹೊಂದಿರುವವರಿಗೆ ಎನ್‌.ಪಿ.ಎಸ್‌.ಖಾತೆ ತೆರೆಯುವುದು ಅತ್ಯಂತ ಸುಲಭ. 15-20 ನಿುಷಗಳಲ್ಲಿ ಆನ್‌ ಲೈನ್‌ನಲ್ಲಿ ಖಾತೆ ತೆರೆಯಬಹುದು.

ಎಸ್‌.ಐ.ಪಿ. ಹೂಡಿಕೆ ಹೆಚ್ಚಿಸಿ
ಉಳಿತಾಯವೆನ್ನುವುದು ಸಣ್ಣ ಸಣ್ಣ ಮೊತ್ತಗಳಿಂದಲೇ ಸಾಧ್ಯವಾಗುವ ಸಂಗತಿ. ಪ್ರತಿ ತಿಂಗಳೂ ನಿಮ್ಮ ಹೂಡಿಕೆಯನ್ನು ಸಿಸ್ಟಮ್ಯಾಟಿಕ್‌ ಇನ್ವೆಸ್ಟಮೆಂಟ್‌ ಪ್ಲಾನ್‌ (ಎಸ್‌.ಐ.ಪಿ) ಮೂಲಕ ಮಾಡುತ್ತಿದ್ದೀರಿ ಎಂದಾದರೆ ನಿಮ್ಮದು ಜಾಣತನದ ನಿರ್ಧಾರವೇ ಸರಿ. ಆದರೆ ಈ ಬಾರಿ ಅದನ್ನು ಕೊಂಚ ಹೆಚ್ಚಿಸುವುದು ಸಾಧ್ಯವಿದ್ದಲ್ಲಿ ನೀವು ಇನ್ನಷ್ಟು ಜಾಣರಾಗುತ್ತೀರಿ. ಖರ್ಚನ್ನು ಕಡಿಮೆ ಮಾಡಿ ಉಳಿತಾಯದತ್ತ ಇನ್ನೂ ಸ್ವಲ್ಪ ಹೆಚ್ಚಿನ ಮೊತ್ತವನ್ನು ಕೂಡಿಡುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ.

– ನಿರಂಜನ

ಟಾಪ್ ನ್ಯೂಸ್

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.