ಹೂಡಿಕೆ ಮಾಡುವ ಮುನ್ನ ಈ 6 ಅನ್ನು ಮರೆಯದಿರಿ
Team Udayavani, Mar 20, 2017, 5:22 PM IST
ಹೂಡಿಕೆ ಮಾಡಬೇಕು, ಹಣ ಉಳಿಸಬೇಕು ಎನ್ನುವುದು ಎಲ್ಲರ ಬದುಕಿನ ಮುಖ್ಯ ಗುರಿ. ಆದರೆ ಹೂಡಿಕೆ ಮಾಡುವುದು ಹೇಗೆ? ಅದಕ್ಕು ಮೊದಲು ಹೇಗೆ ಸಿದ್ಧಗೊಂಡಿರಬೇಕು? ಇಲ್ಲಿದೆ ಟಿಪ್ಸ್.
1. ತೊಂದರೆ ಏನು ತಿಳಿಯಿರಿ
ನೀವು ಷೇರಿನಲ್ಲಿ ಹೂಡುತ್ತೇನೆ ಎಂದಾದರೆ ನಿಮಗೆ ಹೆಚ್ಚಿನ ಆದಾಯ ಬೇಕು ಅಂದರೆ ರಿಸ್ಕ್ ಹೆಚ್ಚಿರುತ್ತದೆ. ಇದಕ್ಕೆ ಮಾನಸಿಕವಾಗಿ ಸಿದ್ಧವಾಗಿರಬೇಕು. ರಿಸ್ಕ್ ಕಡಿಮೆ ಇರಬೇಕು ಎಂದರೆ ಹೆಚ್ಚಿನ ಆದಾಯ ಇರುವುದಿಲ್ಲ. ರಿಸ್ಕ್ ಅಥವಾ ನಿಗದಿತ ಆದಾಯ ಕಡಿಮೆ ರಿಸ್ಕ್ ಇಲ್ಲದ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ನೀವು ರಿಸ್ಕ್ ಹೆಚ್ಚಾಗಿರಬಾರದು ಎಂದರೆ ನಾನಾ ರೀತಿಯ ಹೂಡಿಕೆಗಳಿಗೆ ಕೈ ಹಾಕುವುದು ಒಳಿತು. ಆದಾಯ ಕೂಡ ಹೀಗೆ ಹಂಚಿಕೆಯಾಗಿ ಹೆಚ್ಚಿನ ಲಾಸು ಆಗುವುದಿಲ್ಲ. ಸಾಲ ಮಾಡುವ ಮೊದಲು ಇಂಥ ಹೂಡಿಕೆ ಮಾಡಿದ್ದರೆ ಒಳಿತು.
2. ಬೇರೆಯವರ ಸಲಹೆ ಬೇಡ
ಹೂಡಿಕೆ ಅನ್ನೋದು ಯಾವುದೋ ವಸ್ತುವನ್ನು ಕೊಂಡುಕೊಂಡಂತೆ ಅಲ್ಲ. ರೀ ಆ ವಸ್ತು ಹೇಗಿದೆ ಅಂತ ಕೇಳಿದಂತಲ್ಲ. ಹೂಡಿಕೆ ಮಾಡುವ ಮೊದಲು ನೀವು ಹೂಡಿಕೆ ಮಾಡುವ ಪ್ಲಾನ್‌ನ ಹೇಗೆ ಲಾಭ ತಂದು ಕೊಟ್ಟಿದೆ ಅನ್ನೋದನ್ನು ತಿಳಿದುಕೊಳ್ಳಬೇಕು.
ಹೂಡಿಕೆ ಅನ್ನೋದು ನಮ್ಮ ಬದುಕಿನ ಕಷ್ಟಗಳಿಗಾಗುವ ಇಡುಂಗಟು. ಆದ್ದರಿಂದ ಹೂಡಿಕೆಯ ಬಗ್ಗೆ ಸ್ವಜ್ಞಾನ ಇರಬೇಕು. ಹೂಡಿಕೆ ಎಂದರೆ ಯಾರೋ ಏಜೆಂಟ್ ಹೇಳಿದ ದಾರಿಯಲ್ಲಿ ಹಣ ಹಾಕುವುದಲ್ಲ. ಬಿಡಿ, ಬಿಡಿಯಾಗಿ ಹೂಡಿಕೆ ಮಾಡಬಹುದಾದ ಮ್ಯುಚುವಲ್ ಫಂಡ್, ಇಟಿಎಫ್, ಇಟಿಎನ್ ಮುಂತಾದವುಗಳ ಬಗ್ಗೆ ಹೂಡಿಕೆ ಮಾಡುವವರಿಗೆ ತಿಳಿದಿರಬೇಕು. ಬೇರೆಯವರು ಹೇಳಿದ್ದನ್ನು ಕೇಳಿ ತಿಳಿಯುವುದಕ್ಕಿಂತ ಸ್ವ ಅನುಭವ ಆಗಿದ್ದರೆ ಹೂಡಿಕೆಯ ನಡೆಯೇ ವಿಭಿನ್ನ.
3 . ನಿಮ್ಮ ಏಜ್ ಮುಖ್ಯ
ನಿಮ್ಮ ವಯಸ್ಸು ಕಡಿಮೆ ಇದ್ದರೆ ರಿಸ್ಕ್ ತೆಗೆದು ಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ವಯಸ್ಸು ಹೆಚ್ಚಿದಷ್ಟು ನಿಗದಿತ ಆದಾಯ ಬರುವ ಹೂಡಿಕೆ ಕಡೆಗಳಿಗೆ ಹೊರಳುವುದು ಸೂಕ್ತ. ಹೂಡಿಕೆ ಎಲ್ಲಿ ಮಾಡಬೇಕು? ಇದನ್ನು ಯಾವ ಏಜೆಂಟು ಹೇಳಿ ಕೊಡಬಾರದು. ಹೂಡಿಕೆ ಮಾಡವವರಿಗೆ ಗೊತ್ತಿರಬೇಕು. ಗೊತ್ತಿರಬೇಕು ಎಂದರೆ ಹೂಡಿಕೆಯ ತಂತ್ರಗಳು ತಿಳಿದುಕೊಂಡಿರಬೇಕು. ಹೂಡಿಕೆಯಿಂದ ಆಗುವ ಲಾಸನ್ನು ತಡೆದು ಕೊಳ್ಳುವ ಸಾಮರ್ಥಯ ಎಷ್ಟಿದೆ ಎನ್ನುವುದರ ಮೇಲೆ ಹೂಡಿಕೆ ನಡೆ ನಿರ್ಧಾರವಾಗುತ್ತದೆ. ಅದಕ್ಕೆ ನಿಮ್ಮ ಕಂಫರ್ಟ್ ಜೋನ್ ಯಾವುದು ಎಂದು ನಿರ್ಧರಿಸುವುದು ಏಜಂಟಲ್ಲ. ನೀವೇ!
4. ತುರ್ತುಹಣ ಎತ್ತಿಡಿ
ಇರುವ ಹಣ, ಬರುವ ಹಣ ಎಲ್ಲವನ್ನೂ ಹೂಡಿಕೆ ಮಾಡುವುದರಲ್ಲಿ ಅರ್ಥವಿಲ್ಲ. ನೀವು ಹೂಡಿಕೆ ಮಾಡುವ ಮುನ್ನ ತುರ್ತು ಹಣ ಎತ್ತಿಡಬೇಕು. ಇದು 6-9ತಿಂಗಳ ನಿಮ್ಮ ಖರ್ಚನ್ನು ಸರಿದೂಗಿಸುವಷ್ಟಿರಬೇಕು. ತುರ್ತು ನಿಧಿ ಏತಕ್ಕೆ ಎಂದರೆ ಒಂದು ಕಡೆ ನೀವು ಹೂಡಿಕೆ ಮಾಡಿ ತುರ್ತಾಗಿ ಹಣ ಬೇಕಾದರೆ ಹೂಡಿಕೆಯನ್ನು ಹಿಂತೆಗೆಯುವುದು ತ್ರಾಸದಾಯಕ. ಲಿಕ್ವಿಡಿಟಿ ಅನ್ನೋ ಪದ ಕೇಳಿರುತ್ತೀರಿ. ನಿಮಗೆ ಬೇಕಾದಾಗ ನಿಮ್ಮ ಜೇಬಲ್ಲಿ ಹಣ ಇರುವುದನ್ನು ಲಿಕ್ವಿಡಿಟಿ ಅಥವಾ ಹಾರ್ಡ ಕ್ಯಾಷ್ ಎನ್ನುತ್ತೇವೆ. ನಿಮಗೆ 3 ವರ್ಷದ ನಂತರ ಯಾವುದೋ ಮನೆ ಕೊಂಡು ಕೊಳ್ಳಬೇಕು. ಈಗಲೇ ಆ ಮೊತ್ತವನ್ನು ತೆಗೆದಿಟ್ಟೋ ಅಥವಾ ಷೇರಿಗೆ ಹಾಕಿ ಮೂರು ವರ್ಷದ ನಂತರೆ ತೆಗೆದರೆ ಲಿಕ್ವಿಡಿಟಿಯ ಮೊತ್ತ ಹೆಚ್ಚುತ್ತದೆ.
5. ಅವಧಿ ಮುಖ್ಯ
ನೀವು ಏನು ಹೂಡಿಕೆ ಮಾಡುತ್ತಿದ್ದೀರಾ? ಉಳಿಸಿದ ಹಣವೋ ಅಥವಾ ಹೂಡಿಕೆಯಿಂದ ಬಂದ ಲಾಭದ ಹಣವೋ? ನೀವು ಹೂಡಿಕೆ ಮಾಡುತ್ತಿರುವುದು 20-30ವರ್ಷದ ನಂತರದ ನಿಮ್ಮ ನಿವೃತ್ತ ಜೀವನಕ್ಕಾಗಿಯೋ, ಮಕ್ಕಳ ಭವಿಷ್ಯಕ್ಕಾಗಿಯೋ, ಅಲ್ಪಾವಧಿ ಹೂಡಿಕೆಯೋ? ಹೀಗೆ ಹಲವಾರು ಸಮಯಮಿತಿಯನ್ನು ಒಳಗೊಂಡಿರುತ್ತದೆ. ಹೂಡಿಕೆ ಮಾಡುವ ಮುನ್ನ ಇವೆಲ್ಲವನ್ನೂ ಯೋಚಿಸುವುದು ಒಳಿತು. ನಿಮಗೆ 2-3 ವರ್ಷಗಳಲ್ಲಿ ಹಣ ಬೇಕು ಎಂದಾದರೆ ಬಾಂಡ್, ನಿಗದಿತ ಆದಾಯ ಬರುವ ಠೇವಣಿಗಳಲ್ಲಿ ಹಣ ಹಾಕಿ. 5 ವರ್ಷಕ್ಕಿಂತ ಹೆಚ್ಚಿನ ಅವಧಿ ಇದ್ದರೆ ಸ್ಟಾಕ್‌ವೆುàಲೆ ಹೂಡಿಕೆ ಮಾಡಿ.
6. ಹಳೇ ಸಾಲ ತೀರಿಸಿ
ಹೂಡಿಕೆ ಮಾಡುವ ಮುನ್ನ ನೀವು ಮಾಡಬೇಕಾದ ಮೊದಲ ಕೆಲಸ ಹಳೆ ಸಾಲ ತೀರಿಸುವುದು. ಏಕೆಂದರೆ ಹೂಡಿಕೆ ಮಾಡುವುದಕ್ಕಿಂತ ಮೊದಲು ಹೆಚ್ಚಿನ ಬಡ್ಡಿಯ ಸಾಲಗಳನ್ನು ತೀರಿಸಿಕೊಂಡು ಬಿಟ್ಟರು ಒಳಿತು. ಒಂದು ಕೈಯಲ್ಲಿ ಸಾಲ ಇಟ್ಟುಕೊಂಡು ಮತ್ತೂಂದು ಕೈಯಲ್ಲಿ ಹೂಡಿಕೆ ಮಾಡಲು ಆಗದು. ನೀವು ಕೂಡಿಟ್ಟ, ಹೂಡಿಕೆಯಿಂದ ಬಂದ ಲಾಭದ ಮೊತ್ತ ಈ ಸಾಲಕ್ಕೆ ಸಮವಾಗುತ್ತದೆ. ಇದರಿಂದ ಹೂಡಿಕೆ ಮಾಡಿ ಪ್ರಯೋಜನ ಏನು? ಕಾರ್ಡುಗಳ ಸಾಲವನ್ನು ಮೊದಲು ನಿಲ್ಲಿಸಿ. ಏಕೆಂದರೆ ಇದರ ಬಡ್ಡಿ ಶೇ. 24ರಷ್ಟು. ಅಂದರೆ ಹೂಡಿಕೆ ಮಾಡಿ ಬಂದ ಲಾಭಕ್ಕ ಇದು ಸಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.