ನಿಮ್ಮ ಮನೆಯ ಪೂಜಾಸ್ಥಳ ಸರಳವಾಗಿದೆಯಾ? 


Team Udayavani, Apr 24, 2017, 3:45 AM IST

pooja.jpg

ಮನೆ ಎಂದ ಮೇಲೆ ಸರಳವಾದ ಒಂದು ಪೂಜಾಸ್ಥಳ ಇರಬೇಕು. ಈ ಸ್ಥಳದಲ್ಲಿ ಹೆಚ್ಚು ಹೆಚ್ಚು ಆಡಂಬರಗಳು ಇರಲೇಬಾರದು. ಆಡಂಬರಗಳ ನಡುವೆ ನಿಮ್ಮದಾದ ಪ್ರಾರ್ಥನೆಯನ್ನು ತ್ರಿಕರಣಪೂರ್ವಕವಾಗಿ ಮಾಡಲು
ಸಾಧ್ಯವೇ ಇಲ್ಲ. ಮುಖ್ಯವಾಗಿ ಪೂಜಾಸ್ಥಳವು ಶುದ್ಧಿಯಿಂದ ಇರುವುದು ತುಂಬಾ ಮುಖ್ಯ. ಹಲವರ ಮನೆಗಳಲ್ಲಿ ಗಮನಿಸಬಹುದು. ಅರ್ಧ ಉರಿದಾದ ಎಣ್ಣೆಬತ್ತಿಗಳು, ಅರ್ಧ ಉರಿದು ಬೂದಿಯಾದ ಎಂದೋ ಹಚ್ಚಿದ್ದ ಊದಿನ ಕಡ್ಡಿಗಳ ತುಂಡುಗಳು, ದೇವರ ಪೀಠದ ಎದುರು ಹಾಗೂ ಸುತ್ತಮುತ್ತಲ ಆವರಣಗಳು ಎಲ್ಲೆಲ್ಲೋ ಹರಡಿಕೊಂಡ ಅರಿಶಿಣ
ಕುಂಕುಮಗಳು, ಹರಿದುಬಿಸಾಕಿದ ಅಗರಬತ್ತಿಯ ಪ್ಯಾಕೆಟ್‌ನ ತುಂಡಾದ ಕಾಗದದ ಚೂರು ಸುತ್ತಿದ ಜರಿ ಪ್ರಿಂಟೆಡ್‌ ಕೊಳವೆಗಳು ಇತ್ಯಾದಿ ಇತ್ಯಾದಿ ಬಿದ್ದೇ ಇರುತ್ತವೆ. ಎಂದೋ ಏರಿಸಿದ ಹೂವಿನ ದಂಡೆ ಒಣಗಿ ಉರುಳಿದ್ದು, ತುಂಡಾದ ಬಿಡಿ ಹೂಗಳ ಒಣಕಲು ತುಂಡುಗಳು, ಓದಲು ಇರಿಸಿದ ಮಂತ್ರ ಪುಸ್ತಕಗಳು, ಎಷ್ಟು ಸಾಧ್ಯವೋ ಅಷ್ಟು ಕೊಳೆಯಾಗಿ ಬಿದ್ದಿರುತ್ತದೆ. ಇದಕ್ಕೆ ಅವಕಾಶ ನೀಡಬಾರದು. ಸ್ವತ್ಛತೆ ಕಾಪಾಡಬೇಕು.

ಗುಡಿಯ ದೇವಸ್ಥಾನ ಹಾಗೂ ದೇವಮಂದಿರಗಳ ದೇವರುಗಳು ಸ್ಥಾಪಿಸಲ್ಪಟ್ಟವು. ಅಲ್ಲಿ ಆಷೇìಯವಾದ ವಿಧಿಯೊಡನೆ, ಆಗಮಶಾಸ್ತ್ರ ನಿರೂಪಿಸಿದ ಕಟ್ಟುಪಾಡಿನಲ್ಲಿ ಕಲಾವೃದ್ಧಿಯಾಗಿ ಅಷ್ಟಬಂಧ ಪೂಜೆಗಳೊಂದಿಗೆ ಗ್ರಹಗಳು ಸ್ಥಾಪಿಸಿರುತ್ತಾರೆ. ಮನೆಯಲ್ಲಿ ಹಾಗಲ್ಲ. ನಮ್ಮ ನಮ್ಮ ಮನೆಗಳಲ್ಲಿ ಸ್ಥಿತಗೊಂಡ ದೇವರ ಮೂರ್ತಿ ಫೋಟೋ, ಲಿಂಗ
ಸಾಲಿಗ್ರಾಮ ಅಥವಾ ಯಂತ್ರ ಚಕ್ರಗಳು ನಮ್ಮ ವೈಯುಕ್ತಿಕ ನೆಲೆಯಲ್ಲಿ ಅನುಷ್ಠಾನ ಹಾಗೂ ನೈವೇದ್ಯಗಳೊಡನೆ ನಮ್ಮ ನಂಬಿಕೆ ಹಾಗೂ ಭಕ್ತಿಯ ನಿಜ ನಿರೂಪಣೆಯೊಂದಿಗೆ ಕೂಡ್ರಿಸಲ್ಪಟ್ಟಿವೆ. ಮನೆ ಪ್ರಾರಂಭೋತ್ಸವದಲ್ಲಿ ಪೂರೈಸಿದ ವಾಸ್ತು ಪೂಜೆಯೊಂದಿಗೆ ಅವೆಲ್ಲ ಮನೆಯೊಳಗಿನ ಶಕ್ತಿಯಾಗಿ ಘನೀರ್ಭವಿಸುತ್ತದೆ.

ಹೀಗಾಗಿ ಸರಳತೆ ಬಹುಮುಖ್ಯವಾದ ಮೂಲಭೂತ ಅವಶ್ಯಕತೆಯಾಗಿದೆ. ಮನೆಯೊಳಗೆ ದೇವರೆದುರು, ಸುತ್ತ ಮುತ್ತ ಪ್ರಖರ ಬೆಳಕು ಕೋರೈಸಬಾರದು. ಸದಾ ಉರಿಯುವ ನಂದಾದೀಪವೊಂದು ಬೆಳಗುತ್ತಿರಲಿ. ಇಂದಿನ ಆಧುನಿಕ ಸ್ವರೂಪದಲ್ಲಿ ಪ್ರತಿದಿನ ಎಣ್ಣೆ ದೀಪವೇ ಉರಿಯಬೇಕೆಂದಿಲ್ಲ. ಸೂಕ್ಷ್ಮ, ಸರಳ ಬೆಳಕನ್ನು ಚಿಮ್ಮುವ ವಿದ್ಯುತ್‌ ಬಲುº ಇದ್ದರೂ ಅಡ್ಡಿಯಿಲ್ಲ. ಪೂಜಾ ಸ್ಥಳದಲ್ಲಿ ಬೆಳಕು, ದೇವರ ಮೂರ್ತಿಗಳ ಮುಖವನ್ನು ಹೊಳೆಯುವಂತೆ ಮಾಡುವುದರಿಂದ ಈ ಕ್ಷೀಣ ಬೆಳಕಲ್ಲಿ ದೇವರನ್ನು ಕಾಣುವ ಮಂತ್ರ ಪಠಣದ ಮುಖೇನವಾದ ಅನುಷ್ಠಾನಕ್ಕೆ ಇಂಬು ಕೊಡುವ ಪವಿತ್ರ ವಾತಾವರಣ ತುಂಬಿಕೊಂಡಿರುತ್ತದೆ. ಈ ಕಾರಣ ಬೆಳಕಿನ ಕುಡಿ, ದೇವರ ಬಗೆಗಿನ ಏಕಾಗ್ರತೆಗೆ ದಾರಿ ಮಾಡಿಕೊಡುತ್ತದೆ.

ಅನುಮಾನ ಬೇಡ ಇದು ಶಾಸ್ತ್ರ ಸಮ್ಮತ. ಹೂವು, ಊದಿನ ಕಡ್ಡಿ ಅರ್ಪಿತವಾಗಲಿ. ಅರಿಶಿಣ ಕುಂಕುಮ ಅಕ್ಷತೆಗಳೂ ಇರಲಿ. ಚಿಕ್ಕ ಗಂಟೆಯ ನಿನಾದಕ್ಕಾಗಿ ಅವಕಾಶವಿರಲಿ. ಐದೇ ನಿಮಿಷಗಳಾದರೂ ಮಂತ್ರಗಳ ಪಠಣ, ಅಕ್ಷರ ಶುದ್ಧಿಯೊಡನೆ ಸ್ಪಷ್ಟವಾಗಿರಲಿ. ದೇವರಿದ್ದಾನೆ ಎಂಬ ಆಸ್ತಿಕವಾದ ಆಕೃತಿಯ ಸ್ಪಂದನವೊಂದು ಮನೆಯಲ್ಲಿ ಉಂಟಾಗಿಯೇ ತೀರುತ್ತದೆ. ಈ ಸ್ಪಂದನ ಉಂಟಾದಾಗಲೇ ಉರಿಯುವ ದೀಪದ ಬೆಳಕಿಗೆ ಪ್ರತಿಫ‌ಲಿಸುವ ದೇವ
ಮೂರ್ತಿಗಳಲ್ಲಿ ಮನಸ್ಸನ್ನು ಕೇಂದ್ರಿಕರಿಸುವಲ್ಲಿ, ಸಾಫ‌ಲ್ಯತೆ ಉಂಟಾಗಿ ಪ್ರಾರ್ಥನೆಯನ್ನು ಪೂರೈಸುವಲ್ಲಿ, ಆಗ ನೆಲೆಸುವ ಶಾಂತಿ ವಾತಾವರಣಕ್ಕೆ ಒಂದು ದಿವ್ಯತೆ ಒದಗಿ ಓಂಕಾರವೊಂದು ಕೇಳಿಸಿಕೊಳ್ಳುತ್ತದೆ. ಈ ಓಂಕಾರವೇ ಸರ್ವಶಕ್ತನಾದ ಭಗವಂತನ ಅಥವಾ ಭಗವತಿಯ ಸಾûಾತ್ಕಾರದ ತಳಹದಿಯಾಗಿದೆ. ಹೀಗಾಗಿ ಇಂಥದೊಂದು ದಿವ್ಯದ ಮುಖ್ಯ ತಳಹದಿಯಿಂದ ಮೊದಲಾಗಿ ಪಡೆಯಬೇಕಾದ ಪ್ರತಿಯೋರ್ವನ ಯಶಸ್ಸು ಮನೆಯ ಪೂಜಾಸ್ಥಳದಿಂದಲೇ ಎಂಬುದನ್ನು ನಾವೆಲ್ಲಾ ಅರಿಯಬೇಕು.

– ಅನಂತಶಾಸ್ತ್ರಿ

ಟಾಪ್ ನ್ಯೂಸ್

Hunger Strike: ಹದಗೆಟ್ಟ ಅರೋಗ್ಯ: ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kuchuku Movie: ಟೀಸರ್‌ನಲ್ಲಿ ಕುಚುಕು

Kuchuku Movie: ಟೀಸರ್‌ನಲ್ಲಿ ಕುಚುಕು

Hunger Strike: ಹದಗೆಟ್ಟ ಅರೋಗ್ಯ: ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Sandalwood: ಫೆ.7ಕ್ಕೆ ಗಜರಾಮ ತೆರೆಗೆ

Sandalwood: ಫೆ.7ಕ್ಕೆ ಗಜರಾಮ ತೆರೆಗೆ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

10(1

Santhekatte: ಉಡುಪಿಯಿಂದ ಕುಂದಾಪುರ ಕಡೆಗೆ ಸರ್ವಿಸ್‌ ರಸ್ತೆ ಓಪನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.