ಚಂದ್ರಪ್ಪಗೆ ಲಾಭ ಬಂತಪ್ಪ
Team Udayavani, May 16, 2017, 12:41 AM IST
ಸಮತಳ ಗ್ರಾಮದ ರೈತ ಬಿ.ಎಸ್.ಚಂದ್ರಪ್ಪ ಮನೆ ಎದುರಿನ ಹೊಲದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ರಾಗಿ ಕೃಷಿ ನಡೆಸಿ ಬಂಪರ್ ಫಸಲು ಪಡೆಯುತ್ತಿದ್ದಾರೆ. ಇವರದು ಕೇವಲ ಅರ್ಧ ಎಕರೆ ಜಮೀನು. ಇದೇ ಹೊಲದಲ್ಲಿ ಮಳೆಗಾಲದಲ್ಲಿ ಭತ್ತ ಬೆಳೆದಿದ್ದರು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳ ಗ್ರಾಮದ ರೈತ ಬಿ.ಎಸ್.ಚಂದ್ರಪ್ಪ ಮನೆ ಎದುರಿನ ಹೊಲದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ರಾಗಿ ಕೃಷಿ ನಡೆಸಿ ಬಂಪರ್ ಫಸಲು ಪಡೆಯುತ್ತಿದ್ದಾರೆ. ಇವರದು ಕೇವಲ ಅರ್ಧ ಎಕರೆ ಜಮೀನು. ಇದೇ ಹೊಲದಲ್ಲಿ ಮಳೆಗಾಲದಲ್ಲಿ ಭತ್ತ ಬೆಳೆದಿದ್ದರು. ಭತ್ತದ ಕಟಾವಿನ ನಂತರ ಹೊಲವನ್ನು ಟ್ರ್ಯಾಕ್ಟರ್‌ನಿಂದ ಹದಗೊಳಿಸಿ ನೀರುಣಿಸಿ 6 ಕಿ.ಗ್ರಾಂ.ನಷ್ಟು ರಾಗಿ ಸಸಿಗಳನ್ನು ನಾಟಿ ಮಾಡಿದ್ದರು. ಸಗಣಿ ಗೊಬ್ಬರ ಮತ್ತು 19:19 ಕಾಂಪ್ಲೆಕ್ಸ್ ಗೊಬ್ಬರ ಮಿಶ್ರಣ ಮಾಡಿ ಹೊಲವನ್ನು ಹೂಟಿ ಮಾಡುವಾಗ ಭೂಮಿ ಫಲವತ್ತತೆ ಇರುವಂತೆ ನೋಡಿಕೊಂಡರು. ಇವರು 5 ಕಿ.ಗ್ರಾಂ.ನಷ್ಟು ರಾಗಿ ಬೀಜ ಬಿತ್ತಿ ನಾಟಿ ಸಸಿ ತಯಾರಿಸಿಕೊಂಡಿದ್ದರು. ಕೊಳವೆ ಬಾವಿಯ ನೀರನ್ನು ಹಾಯ್ ನೀರಿನ ಮೂಲಕ 10 ದಿನಕೊಮ್ಮೆ ಒದಗಿಸಿದ್ದಾರೆ. ನಾಟಿ ಮಾಡಿದ 15 ದಿನಕ್ಕೆ ಸಗಣಿ ಗೊಬ್ಬರ ಮತ್ತು ಡಿ.ಎ.ಪಿ. ಹಾಗೂ 20:20 ಕಾಂಪ್ಲೆಕ್ಸ್ ಗೊಬ್ಬರವನ್ನು ದ್ರವ ರೂಪದಲ್ಲಿ ನೀಡಿದರು. ರಾಗಿ ಸಸಿಗಳು ಚೆನ್ನಾಗಿ ಬೆಳೆದು ಏಪ್ರಿಲ್ 2 ನೇ ವಾರದಿಂದ ಫಸಲು ಆರಂಭವಾಗಿತ್ತು. ಒಟ್ಟು 3 ಸಲ ದ್ರವರೂಪದ ಗೊಬ್ಬರ ನೀಡಿದ್ದಾರೆ ಚಂದ್ರಪ್ಪ.
ಈಗ ಅರ್ಧ ಎಕರೆಯಲ್ಲಿ 13 ಕ್ವಿಂಟಾಲ್ ನಷ್ಟು ಫಸಲು ಪಡೆದಿದ್ದಾರೆ. ಮೇ ಮೊದಲವಾರ ಕಟಾವು ಮಾಡಿ, ಕ್ವಿಂಟಾಲ್ ಒಂದಕ್ಕೆ 2,500ರೂ.ಗೆ ಮಾರಾಟಮಾಡಿದ್ದಾರೆ. ಸಗಣಿ ಗೊಬ್ಬರವನ್ನು ಸ್ವಲ್ಪ ಹೆಚ್ಚಾಗಿ ಬಳಸಿ ರಾಗಿ ಬೆಳೆದ ಕಾರಣ ನೆರೆ ಗ್ರಾಮದವರೇ ಖರೀದಿಸಿದ್ದಾರೆ. ಮನೆ ಬಳಕೆಗೆ ಮೂರು ಕ್ವಿಂಟಾಲ್ ಇರಿಸಿಕೊಂಡು 10 ಕ್ವಿಂಟಾಲ್ ರಾಗಿ ಮಾರಿ ಇವರಿಗೆ ರೂ.25 ಸಾವಿರ ಆದಾಯ ದೊರೆತಿದೆ. ರಾಗಿ ಬೀಜ ಖರೀದಿ, ಬಿತ್ತನೆ,ನಾಟಿ ಕೆಲಸ ಕೂಲಿ ನಿರ್ವಹಣೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ರೂ.8000 ಖರ್ಚು ತಗುಲಿದೆ. ಮನೆಬಳಕೆಗೆ ರಾಗಿ ಉಳಿಸಿಕೊಂಡರೂ ರೂ.17 ಸಾವಿರ ಲಾಭ ದೊರೆತಿದೆ. ಮನೆ ಎದುರಿನ ಖಾಲಿ ಸ್ಥಳದಲ್ಲಿ ನಡೆಸಿದ ಕೃಷಿಯಿಂದ ದೊರೆತ ಲಾಭ ಇದಾಗಿದೆ. ಇದರ ಜೊತೆಗೆ ಮನೆ ಹಿಂಭಾಗದ ಖಾಲಿ ಸ್ಥಳದಲ್ಲಿ ಕಸಿ ಮಾವಿನ ಮರಗಳನ್ನು ಬೆಳೆಸಿದ್ದಾರೆ. ಒಟ್ಟು 20 ಮಾವಿನ ಮರಗಳಿದ್ದು, ಇದರ ಫಸಲನ್ನು ಹಣ್ಣಿನ ವ್ಯಾಪಾರಿಗೆ ಗುತ್ತಿಗೆ ಮೂಲಕ ಮಾರಾಟ ಮಾಡಿದ್ದಾರೆ. ತೋಟಕ್ಕೆ ಬಂದು ಮಾವು ಕೊಳ್ಳುವುದರಿಂದ ತಲೆ ಬೇನೆ ಇಲ್ಲ.
– ಎನ್.ಡಿ.ಹೆಗಡೆ ಆನಂದಪುರಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.