ಉಳಿತಾಯದ 5 ಮೆಟ್ಟಿಲು
Team Udayavani, May 1, 2017, 10:00 PM IST
ನಿಮ್ಮ ಆಸೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ಕಡಿಮೆ ಆಸೆಯೇ ಹೂಡಿಕೆಗೆ ಮೂಲಕ ಕಾರಣ. ಉಳಿತಾಯದ ವಿಚಾರವಾಗಿ ಗುರಿ ಇರಲೇಬೇಕು. ಗುರಿ ಇಲ್ಲದೇ ಉಳಿತಾಯ ಮಾಡಲು ಆಗದು.
ವಿಮೆಗೆ ಎತ್ತಿಡಿ
ಉಳಿತಾಯದ ಇನ್ನೊಂದು ಮುಖ ವಿಮೆ. ಆರೋಗ್ಯವಿಮೆ, ಜೀವವಿಮೆ. ಒಂದು ಪಕ್ಷ ಜೀವ ವಿಮೆ ಇಲ್ಲದೇ ಹೋದರೂ ಪರವಾಗಿಲ್ಲ. ಆರೋಗ್ಯ ವಿಮೆ, ಅಪಘಾತವಿಮೆ ಇರಲಿ. ಮನೆಯ ಸದಸ್ಯರ ವಯಸ್ಸಿನ ಆಧಾರದ ಮೇಲೆ ಆರೋಗ್ಯವಿಮೆಯ ಪಾಲಿಸಿಗಳನ್ನು ಮಾಡಿಸಬೇಕಾಗುತ್ತದೆ. ನಿಮ್ಮ ಉಳಿತಾಯದ ಹುಂಡಿಯಲ್ಲಿ ಇದಕ್ಕೆ ಜಾಗ ಬೇಕೇಬೇಕು. ಏಕೆಂದರೆ ಒಂದು ಸಲದ ಅನಾರೋಗ್ಯ, ಮೂರು ನಾಲ್ಕು ವರ್ಷದ ಉಳಿತಾಯವನ್ನು ಕೊಚ್ಚಿಹೋಗುವಂತೆ ಮಾಡುತ್ತದೆ ಎಚ್ಚರ.
ಪುಟ್ಟ ಬಜೆಟ್
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ವರ್ಷಕ್ಕೆ ಒಂದಾವರ್ತಿ ಮಂಡಿಸುವ ಬಜೆಟ್‌ನಂತೆ ಮನೆಯಲ್ಲಿ ನೀವು ಪುಟ್ಟ ಬಜೆಟ್ ಫಿಕ್ಸ್ ಮಾಡಿ. ತಿಂಗಳ ಖರ್ಚುಗಳನ್ನು ಲೆಕ್ಕ ಹಾಕಿ. ಸಂಪಾದನೆ ಎಷ್ಟಿದೆ, ಎಷ್ಟು ಖರ್ಚಾಗುತ್ತಿದೆ, ಎಷ್ಟು ಉಳಿತಾಯವಾಗುತ್ತಿದೆ ಎನ್ನುವ ನಿಖರ ಚಿತ್ರಣ ನಿಮ್ಮ ಮುಂದೆ ಸಿಗುತ್ತದೆ. ಅನಗತ್ಯ ಖರ್ಚು, ಸೋರುವಿಕೆ ಎಲ್ಲವೂ ತಿಳಿಯುತ್ತದೆ. ಇದರಿಂದ ನಿಮ್ಮ ಗುರಿಗಳನ್ನು ನಿಗದಿ ಪಡಿಸಿಕೊಳ್ಳಲು ಸುಲಭವಾಗುತ್ತದೆ. ಆದರೆ ನಿಮ್ಮ ಆಸೆ, ಕನಸು ಬಜೆಟ್ ಅನ್ನು ದಾಟಿ ಓಡದಂತೆ ನೋಡಿಕೊಳ್ಳಿ.
ನಿಮಗೆ ನೀವೇ
ಮೊದಲು ನಿಮ್ಮ ಆಸೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ಕಡಿಮೆ ಆಸೆಯೇ ಉಳಿತಾಯಕ್ಕೆ ಮೂಲ ಕಾರಣ. ಹೇಗೆಂದರೆ ವ್ಯಾಪಾರ, ಕೊಳ್ಳುವಿಕೆ ನೀವು ನಿಗದಿ ಮಾಡಿದ ತಿಂಗಳ ಖರ್ಚು, ಉಳಿತಾಯಕ್ಕೆ ತೊಂದರೆ ಆಗಬಾರದು. ನಿಮ್ಮ ಶಾಪಿಂಗ್ ನೀವು ಉಳಿಸಿದ ಹಣದಿಂದ ಆಗಿರಲಿ. ಮುಖ್ಯವಾಗಿ ಅನಿವಾರ್ಯ ಅನ್ನಿಸಿದಾಗಷ್ಟೇ ಶಾಪಿಂಗ್ ಮಾಡಿ. ಆದರೆ ಜಾಹೀರಾತಿಗೆ ಟೆಮ್r ಆಗಿ ಶಾಪಿಂಗ್ ಮಾಡುವುದು ಮೂರ್ಖತನ. ಕ್ರೆಡಿಟ್ ಕಾರ್ಡ್‌ಗಳನ್ನು ಇಟ್ಟುಕೊಂಡು ಶಾಪಿಂಗ್‌ಗೆ ಹೋಗಲೇಬೇಡಿ. ಕಾರ್ಡುಗಳಲ್ಲಿ ವ್ಯವಹಾರ ಮಾಡಲೇಬೇಕು ಎಂದಾದರೆ, ಅಷ್ಟಕ್ಕೆ ಹೊಂದುವ ನಗದು ಹಣ ನಿಮ್ಮ ಬಳಿ ಇರಬೇಕು. ಕಾರ್ಡ್ ಬಳಕೆ ಕೇವಲ ಹಣದ ಹೊಂದಾಣಿಕೆ ಮಾತ್ರ ಆಗಿರಲಿ.
ಉಳಿತಾಯ
ಹಣ ಉಳಿತಾಯದ ವಿಚಾರವಾಗಿ ಗುರಿ ಇರಲೇಬೇಕು. ಗುರಿ ಇಲ್ಲದೇ ಉಳಿತಾಯ ಮಾಡಲು ಆಗದು. ಗುರಿ ಏನೆಂದರೆ ಅದು ಶಾರ್ಟ ಟರ್ಮ್, ಮಿಡ್ ಟರ್ಮ್, ಲಾಂಗ್ ಟರ್ಮ್ – ಈ ರೀತಿ ವಿಂಗಡಣೆ ಮಾಡಿ. ಶಾರ್ಟ ಟರ್ಮ್ ಗುರಿಯಿಂದ ತುರ್ತು ಅವಶ್ಯಕತೆ ಪೂರೈಸಿಕೊಳ್ಳಬಹುದು. ಲಾಂಗ್ ಟರ್ಮ್ ಅಂದರೆ ಸೈಟು, ಮನೆ, ವಾಹನ ಖರೀದಿ ಮಾಡುವ ದೊಡ್ಡ ಮೊತ್ತದ ಗುರಿಗಳನ್ನು ಲಾಂಗ್ ಟರ್ಮ್ ಹಾಕಿ ಕೊಳ್ಳಿ. ಏಕಾಏಕಿ ಸಾವಿರಾರೂ. ಸಾಲ ಮಾಡುವುದು ತಪ್ಪುತ್ತದೆ. ಇದರಿಂದ ಆರ್ಥಿಕ ಒತ್ತಡ ಹೆಚ್ಚುವುದಿಲ್ಲ. ನಿಧಾನವಾದರೂ ಕಾಲ, ಕಾಲಕ್ಕೆ ಸೌಲಭ್ಯಗಳನ್ನು ಪಡೆದಂತಾಗುತ್ತದೆ.
ವಿಂಗಡಿಸಿ
ತಿಂಗಳ ಬಜೆಟ್ ಏನೋ ಮಂಡಿಸಿದ್ದೀರಿ. ಇದರಲ್ಲಿ ಕೆಲವು ಟೆಕ್ನಿಕ್‌ಗಳಿವೆ. ಏನೆಂದರೆ ಹಣವನ್ನು ವಿಂಗಡಣೆ ಮಾಡುವುದು. ದಿನದ ಖರ್ಚಿಗೆ ರೆಗ್ಯುಲರ್ ಸೇವಿಂಗ್ಸ್ ಅಂತ, ತುರ್ತಾಗಿ ಹಣ ಬೇಕು ಎಂದರೆ ಶಾರ್ಟ್ ಟರ್ಮ್ ಸೇವಿಂಗ್ಸ್, ಮಕ್ಕಳ ಫೀ, ಶಾಪಿಂಗ್ ಇವಕ್ಕೆಲ್ಲಾ ಲಾಂಗ್ ಟರ್ಮ್ ಸೇವಿಂಗ್ಸ್. ಇವೆಲ್ಲದ ಜೊತೆಗೆ ಇತರೆ ಖರ್ಚು ಹಾಗೂ ಮನರಂಜನೆಗಾಗಿ ಹಣ ಎತ್ತಿಡುವುದನ್ನು ಮರೆಯಬೇಡಿ.
– ಚಿನ್ನಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.