ನವಣೆ ಸಿರಿವಂತರಾಗಲು ಇದು ಸರಿಧಾನ್ಯ
Team Udayavani, Feb 6, 2017, 3:45 AM IST
ಬಸವನಬಾಗೇವಾಡಿ ಪಟ್ಟಣದ ರೈತ ಸದಾನಂದ ಯಳಮೇಲಿ ಆರೋಗ್ಯವಾಗಿದ್ದಾರೆ. ಇದಕ್ಕೆ ಎರಡು
ಕಾರಣ. ಅವರ ಆರ್ಥಿಕ ಸ್ಥಿತಿ ಚೆನ್ನಾಗಿರೋದು ಮತ್ತು ಹೆಚ್ಚು ಲಾಭ ಬರುತ್ತಿರುವುದು. ಎಲ್ಲದಕ್ಕೂ ಮೂಲ ನವಣೆ ಬೆಳೆ.
ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಬರಗಾಲಕ್ಕೆ ತುತ್ತಾಗುವ ಪ್ರದೇಶದಲ್ಲಿ ಅನೇಕ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆಯಲು ಮುಂದಾಗಿ, ಸಾಲ ಮಾಡಿ ಆತ್ಮಹತ್ಯೆಗೆ ಶರಣಾಗುವುದೆ ಹೆಚ್ಚಾಗುತ್ತಿದೆ. ಆದರೆ ಇವರು ಕಡಿಮೆ ಖರ್ಚಿನಲ್ಲಿ ಯಾವುದೇ ರೋಗ ರುಜಿನವಿಲ್ಲದೇ ಮತ್ತು ರಾಸಾಯನಿಕ ಗೊಬ್ಬರವನ್ನು ಬಳಸದೇ ಬಂಪರ್ ಬೆಳೆಯನ್ನು ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಬೆಳೆಯೋದು ಹೀಗೆ
ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಅಲ್ಪ ಸ್ವಲ್ಪ ಮಳೆಯಾದರು ಕೂಡಾ ಈ ಬೆಳೆಗಳನ್ನು ಬೆಳೆಯಲು ಸಾಧ್ಯ. ಈ ಬೆಳೆಗಳನ್ನು ಕೆಲವು ರೈತರು ತೊಗರಿ, ಎಳ್ಳು, ಹೆಸರು, ಮಡಿಕೆ ಬೆಳೆಗಳಲ್ಲಿ 4/ 2 ರಷ್ಟು ಪ್ರಮಾಣದಲ್ಲಿ ಮಿಶ್ರ ಬೆಳೆಗಳನ್ನಾಗಿ ಬೆಳೆಯಬಹುದು.
ಬಿತ್ತನೆ ಮಾಡುವ ಎರಡು ಮೂರು ವಾರದಲ್ಲಿ ಸಾವಯವ ಗೊಬ್ಬರ ಮಣ್ಣಿನಲ್ಲಿ ಬೇರಸಬೇಕು. ಬಿತ್ತನೆ ಬೀಜ ಸಾಲಿನಿಂದ ಸಾಲಿಗೆ 22.5 ಸೆಂ.ಮೀ ನಿಂದ 30 ಸೆಂ.ಮೀ. 9 ಇಂಚಿನಿಂದ 1 ಅಡಿ ಬೀಜದಿಂದ ಬೀಜಕ್ಕೆ 2-3 ಅಂತರದಲ್ಲಿ ಬಿತ್ತನೆ ಮಾಡಬೇಕು. ಬಿತ್ತುವಾಗ ಶೇ. 50 ರಷ್ಟು ಸಾರಜನಿಕ, ರಂಜಕ, ಪೋಟಾಲಿಪ್ ಗೊಬ್ಬರವನ್ನು ಪ್ರತಿ ಹೆಕ್ಟೇರಿಗೆ ಬಳಸಬೇಕು. ಕೂರಿಗೆಯಿಂದ ಬಿತ್ತುವುದು ಸೂಕ್ತ. ಹೀಗೆ ಬಿತ್ತನೆ ಮಾಡುವುದರಿಂದ ಪ್ರತಿ ಹೆಕ್ಟರಿಗೆ 12 ರಿಂದ 20 ಕ್ವಿಂಟಲ್ ಬೆಳೆಯನ್ನು ಪಡೆಯಬಹುದು ಮತ್ತು ದನ ಕರುಗಳಿಗೆ ಕೂಡಾ 40 ರಿಂದ 45 ಕ್ವಿಂಟಲ್ ಮೇವು ಕೂಡಾಸಿಗುತ್ತದೆ. ಈ ಬೆಳೆ ಮಳೆ ಕಡಿಮೆ ಬೀಳುವ ಪ್ರದೇಶದಗಳಲ್ಲಿ ಬರಗಾಲ ಏದರಿಸುವ ಹೆಗ್ಗಳಿಕೆ ಬೆಳೆಗಳಾಗಿವೆ. ಹೀಗಾಗಿ ಬರಗಾಲದಲ್ಲಿ ಕೂಡಾ ಬಂಪರ್ ಬೆಳೆಗಳನ್ನು ರೈತರು ಬೆಳೆಯಲು ಸಾಧ್ಯ.
ಮಾರ್ಕೆಟ್ ಹೇಗೆ?
ನವಣೆ ಎಂಬ ಸಿರಿಧಾನ್ಯವು ಆರೋಗ್ಯದ ಜೊತೆಗೆ ಬೆಸೆದು ಕೊಂಡಿರುವುದರಿಂದ ಎಲ್ಲ ಕಡೆ ಇದರ ಬಳಕೆ ಹೆಚ್ಚಿದೆ. ಆಗಾಗ ಮಾರುಕಟ್ಟೆ ಭಯ ಇರುವುದಿಲ್ಲ. ಪುರ್ವಜರು ಆರೋಗ್ಯ ದೃಷ್ಟಿಯಿಂದ ತಮ್ಮ ಹೊಲ ಗದ್ದೆಗಳಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕಿಟನಾಶಕ ಜೌಷಧಗಳನ್ನು ಉಪಯೋಗಿಸದೆ ನವಣೆ, ರಾಗಿ, ಸಾವೆ, ಸಜ್ಜೆ, ಹಾರಕ್ಕ, ಕೊರಳು,
ಬರಗು, ಬಿಳಿಜೋಳ ಬೆಳೆಗಳನ್ನು ಬೆಳೆಯುತ್ತಿದ್ದರು. ಅದನ್ನೇ ಸದಾನಂದ ಮುಂದವರಿಸಿದ್ದಾರೆ.
ಎರಡು ಎಕರೆ ಬೆಳೆಯಲ್ಲಿ ವರ್ಷಕ್ಕೆ ಏನಿಲ್ಲವೆಂದರೆ 30-40 ಕ್ವಿಂಟಾಲ್ ಬೆಳೆಯುತ್ತಾರೆ. ಕ್ವಿಂಟಾಲ್‌ಗೆ ಮೂರು, ನಾಲ್ಕು ಸಾವಿರ ರೂ. ಸಿಗುವುದು ಊಂಟು. ವಿಜಯಪುರ ಇವರ ಮುಖ್ಯವಾದ ಮಾರ್ಕೆಟ್. ಭತ್ತದ ಅಕ್ಕಿಗಿಂತ ನವಣೆಯಲ್ಲಿ ವಿಶೇಷ ಪೌಷ್ಟಿಕಾಂಶ ಗುಣಗಳಿದೆ. ಸುಲಭ ಜೀರ್ಣವಾಗುವ ಆಹಾರವಾಗಿರುವುದರಿಂದ ಎಲ್ಲ ವಯೋಮಾನದವರು ಬಳಸುತ್ತಾರೆ. ಹಾಗಾಗಿ ಮಾರ್ಕೆಟ್ ಬೀಳುವ ಯೋಚನೆ ಇಲ್ಲ ಎನ್ನುತ್ತಾರೆ ಸದಾನಂದ.
– ಪ್ರಕಾಶ.ಜಿ. ಬೆಣ್ಣೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.