ಮನೆಯ ಕತ್ತಲು ಓಡಿಸಲು ಬಾ ಕರುಣಾಳು ಬೆಳಕೆ…
Team Udayavani, Apr 16, 2018, 5:04 PM IST
ಮನೆಯ ಬಾಗಿಲು ಪೂರ್ವದ ದಿಕ್ಕಿನಲ್ಲಿರಬೇಕೆಂದು ವಾಸ್ತುಶಾಸ್ತ್ರ ನಿಯಮವನ್ನು ರೂಪಿಸಿದೆ. ಇದಕ್ಕೆ ಬಹು ಮುಖ್ಯವಾದ ಕಾರಣ, ಬೆಳಗುವ ಸೂರ್ಯನ ಬಿಸಿಲು ಮನೆಯೊಳಗೆ ಬೀಳಬೇಕು ಎಂಬುದೇ ಆಗಿದೆ. ಬೆಳಗಿನ ಬಿಸಿಲು ಮನಸ್ಸನ್ನು ಆಹ್ಲಾದಗೊಳಿಸುವುದೊಂದೇ ಅಲ್ಲ. ಮನೆಯೊಳಗಿನ ವಾತಾವರಣದಲ್ಲಿನ ಮಾಲಿನ್ಯವನ್ನು ಕೆಟ್ಟ ಅಣುಜೀವಿಗಳನ್ನು ಸಾಯಿಸುವುದರ ಮೂಲಕ ಶುದ್ಧಗೊಳಿಸುತ್ತದೆ.
ಪಂಚಭೂತಗಳಲ್ಲಿ ಅಗ್ನಿ ಬಹು ಮುಖ್ಯವಾದುದು, ಅಗ್ನಿಯ ಮೂಲಕ ಬೆಳಕು ಲಭ್ಯ. ಗಗನ ಮಂಡಲದಲ್ಲಿ ಸೂರ್ಯನು ಉರಿಯುವ ಅಗ್ನಿಯೇ ಆಗಿದ್ದಾನೆ. ಅವನಿಂದಲೇ ಬೆಳಕು. ಈ ಬೆಳಕಿಗೆ ಶಕ್ತಿ ಇರುತ್ತದೆ. ಶಕ್ತಿಯ ನೆಲೆಯಲ್ಲಿ ಕಣ್ಣು ಕೋರೈಸುವ ಬೆಳಕು ಆರೋಗ್ಯಕ್ಕೆ ಸೂಕ್ತವಲ್ಲ. ಬೆಳದಿಂಗಳಿನಂಥ ಮಂದ ಬೆಳಕೂ ಎಲ್ಲಾ ಸಲವೂ ಯುಕ್ತವಲ್ಲ. ಮನಸ್ಸಿನ ಚೈತನ್ಯಕ್ಕೆ ನಮ್ಮ ಪಂಚೇಂದ್ರಿಯಗಳನ್ನು ಉದ್ದೀಪಿಸುವ ಬೆಳಕು ಸಮಯಾ ಸಮಯದ ರೀತಿ ನೀತಿಗಳನ್ನು ಅನುಸರಿಸಿಕೊಂಡು ಬೆಳಗಿಕೊಂಡಿರಬೇಕು.
ಪಂಚೇಂದ್ರಿಯಗಳಲ್ಲಿ ಕಣ್ಣು ಮಾತ್ರವೇ ಬೆಳಕನ್ನು ಸ್ವೀಕರಿಸುವಂಥದ್ದಾದರೂ, ಕಿವಿ, ಮೂಗು, ಚರ್ಮ, ನಾಲಿಗೆಗಳಿಗೂ ಬೆಳಕಿನ ಪಕ್ವತೆಯು ಒಂದು ಶಕ್ತಿಯನ್ನು ಪಡೆಯುತ್ತವೆ. ಸಸ್ಯರಾಶಿಯ ಮೇಲೆ ಬೆಳಕಿನ ಉಪಯೋಗವೇನು ಎಂಬುದು ಎಲ್ಲರಿಗೂ ಗೊತ್ತು. ದ್ಯುತಿ ಸಂಶ್ಲೇಷಣೆಗೆ ಬೆಳಕು ಅನಿವಾರ್ಯ. ಜೀವದ ಮೂಲ ಸೆಲೆಗೆ ಎಲ್ಲಾ ಜೀವ ಜಂತುಗಳಿಗೆ ಬೆಳಕಿನ ಶಾಖ ಬೇಕೇಬೇಕು.
ಮನೆಯ ಬಾಗಿಲು ಪೂರ್ವದ ದಿಕ್ಕಿನಲ್ಲಿರಬೇಕೆಂದು ವಾಸ್ತುಶಾಸ್ತ್ರ ನಿಯಮವನ್ನು ರೂಪಿಸಿದೆ. ಇದಕ್ಕೆ ಬಹು ಮುಖ್ಯವಾದ ಕಾರಣ, ಬೆಳಗುವ ಸೂರ್ಯನ ಬಿಸಿಲು ಮನೆಯೊಳಗೆ ಬೀಳಬೇಕು ಎಂಬುದೇ ಆಗಿದೆ. ಬೆಳಗಿನ ಬಿಸಿಲು ಮನಸ್ಸನ್ನು ಆಹ್ಲಾದಗೊಳಿಸುವುದೊಂದೇ ಅಲ್ಲ. ಮನೆಯೊಳಗಿನ ವಾತಾವರಣದಲ್ಲಿನ ಮಾಲಿನ್ಯವನ್ನು ಕೆಟ್ಟ ಅಣುಜೀವಿಗಳನ್ನು ಸಾಯಿಸುವುದರ ಮೂಲಕ ಶುದ್ಧಗೊಳಿಸುತ್ತದೆ.
ಹಾಗೆಯೇ ಮನೆಯ ದೈನಂದಿನ ಕೆಲಸಗಳು ಬೆಳಕಿರದ ಕತ್ತಲ ಪದರುಗಳಲ್ಲಿ ನಡೆಯುವಂತಾಗಬಾರದು. ಸೂಕ್ತ ರೀತಿಯಲ್ಲಿ ಬೆಳಕು ಮನೆಯಲ್ಲಿ ಸಂಯೋಜನೆಗೊಂಡಿರಬೇಕು. ಬೆಳಕಿನ ಪ್ರಖರತೆಯು ಕೋರೈಸುವಂತಿರಬಾರದು. ಹಲವು ಮನೆಗಳನ್ನು ಗಮನಿಸಿ. ಪೂರ್ವದ ಬಾಗಿಲೇನೋ ಇರುತ್ತದೆ. ಆದರೆ ಸೂರ್ಯನ ಬೆಳಕು ಪ್ರಖರವಾಗಿ ಕೋರೈಸುವಂತಿರುತ್ತದೆ. ಇದೂ ಕೂಡ ನಿಮ್ಮ ಮಾನಸಿಕ ಸ್ಥಿರತೆ ಹಾಗೂ ವ್ಯವಧಾನಗಳನ್ನು ಕೆಡಿಸುತ್ತಿರುತ್ತದೆ.
ದೇವರ ಮನೆಯಲ್ಲಿ ವಿಶೇಷ ಹಬ್ಬಗಳ ವಿನಾ ದೇವರನ್ನು ಕೂಡ್ರಿಸಿದ ಮಂಟಪ ಹಾಗೂ ಗೂಡುಗಳಲ್ಲಿ ಬೆಳಕು ಕೋರೈಸಕೂಡದು. ದೇವರು ಎಂಬುದು ಶಕ್ತಿ. ಅದು ಮಾನಸಿಕ ಸ್ತರದಲ್ಲಿ ನಿಮ್ಮ ನಂಬಿಗೆಯ ಮೂಲಕವಾದ ಅಸ್ತಿತ್ವವನ್ನು ಪಡೆಯುವಂಥದು. ಒಂದು ಹದವಾದ ಬೆಳಕಲ್ಲಿ ಮಂಟಪದಲ್ಲಿನ ದೈವ ಮೂರ್ತಿಗಳನ್ನು ನವಿರಾಗಿ, ಸೂಕ್ಷ್ಮವಾಗಿ ಪ್ರತಿಫಲಿಸುವಂತೆ ಇರಬೇಕು.
ದೇವರ ಮುಂದಿನ ನೀಲಾಂಜನ ಹೊತ್ತಿ ಉರಿಯುವ ಜುಂಜಿನಂತಿರದು. ನೀಲಾಂಜನದ ಕಲ್ಪನೆಯೇ ಅನಂತವನ್ನೂ, ಲೌಕಿಕವಾದ ನೆಲವನ್ನು ಸೂಕ್ಷ್ಮ ಹಾಗೂ ವಿಶಿಷ್ಟ ನೆಲೆಯಲ್ಲಿ ಬೆಸೆಯುವಂಥದು. ಇದು ಅಸಾಧ್ಯವಾದುದನ್ನು ಸಾಧ್ಯವಾಗಿಸುವ ದಿವ್ಯಕ್ಕೆ ಕೊಂಡಿ ಕೂಡಿಸುತ್ತದೆ. ದೇವರ ಮುಂದಿನ ನೀಲಾಂಜನದ ಕಿರು ಹೊಯ್ದಾಟಕ್ಕೂ ಮನಸ್ಸನ್ನು ಪ್ರೇರೇಪಿಸುವ ಶಕ್ತಿ ಇದೆ.
ಜೊತೆಗೆ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಅವಶ್ಯವಾದ ಬಲವನ್ನು ಗಟ್ಟಿಗೊಳಿಸುತ್ತದೆ. ಮುಖ್ಯವಾಗಿ ಏಕಾಗ್ರತೆಯನ್ನು ಒದಗಿಸುತ್ತದೆ. ಯಾವುದೇ ಕೆಲಸ ಫಲಪ್ರದವಾಗುವಲ್ಲಿ ಏಕಾಗ್ರತೆ ಬೇಕು. ಶಾಂತಿ, ಸಮಾಧಾನಗಳಿರಬೇಕು. ಮನೆಯ ಕತ್ತಲು ತುಂಬಿದ ಮೂಲೆಗಳನ್ನು ಯುಕ್ತವಾದ ಬೆಳಕಿಂದ ಶುಭ್ರಗೊಳಿಸಿರಿ. ಮನೆಯು ಬರೀ ಶುಭ್ರವಾಗಿದ್ದರೆ ಸಾಲದು. ಮುಸುಕಿದ ಮಬ್ಬನ್ನು ಕಳೆಯುವ ಬೆಳಕಿಗೆ ಅಲ್ಲಿ ಸ್ಥಾನ ಇರಬೇಕು. ಮನೆಯಲ್ಲಿ ಕಿಟಕಿಗಳಿಗೆ ಅವಕಾಶವಿರಲಿ.
ಇಲ್ಲಿಯೂ ಕೋರೈಸುವ ಬಿಸಿಲ ಬೇಗೆಗೆ ಅವಕಾಶ ಇರದಂತೆ ಕಿಟಕಿಗಳಿರಲಿ. ಅತಿಯಾದರೆ ಬೆಳಕು ಕತ್ತಲ ರೂಪದಷ್ಟೇ ಅಪಾಯಕಾರಿ. ಆಫೀಸಿನಲ್ಲೂ ಕೂಡ ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು. ಅದು ಕಚೇರಿಗೆ ಬರುವ ಗ್ರಾಹಕರ ಮೇಲೂ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಕವಿ ಮನಸ್ಸು ಕೂಡ, ಬೆಳಕನ್ನು ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸನ್ನನು ಎಂದು ಪ್ರಾರ್ಥಿಸುತ್ತದೆ. ಬೆಳಕನ್ನು ಕರುಣಾಳು ಎಂದು ಹೊಗಳುತ್ತದೆ. ಬೆಳಕಿನ ಪ್ರಚೋದನೆಯಿಂದ ಹೆಸರು, ಕೀರ್ತಿ, ಶಾಂತಿ, ಸಮಾಧಾನಗಳಿಗೆ ಅರ್ಥವಿರುತ್ತದೆ.
* ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.