ಉಫ್.. ಇದು ಪಿಪಿಎಫ್
Team Udayavani, Jun 24, 2019, 5:00 AM IST
ಪಿಪಿಎಫ್ ಗೆ ಹಣ ಹಾಕಿ ಹದಿನೈದು ವರ್ಷ ಕೈಕಟ್ಟಿ ಕುಳಿತುಕೊಳ್ಳಬೇಕು ಅನ್ನೋದೇನೋ ನಿಜ. ಆದರೆ, ಹೆಚ್ಚಿನ ಬಡ್ಡಿ ಜೊತೆಗೆ ಇದರಿಂದ ಹಲವು ಲಾಭಗಳಿವೆ.
ಇವತ್ತು ದೀರ್ಘಾವಧಿ ಹೂಡಿಕೆಯಲ್ಲಿ ಅತಿ ಹೆಚ್ಚು ಬಡ್ಡಿ ಕೊಡುವ ಯೋಜನೆ ಯಾವುದು ಅಂದರೆ ಅದುವೇ ಪಿಪಿಎಫ್. ಆದರೆ ಪಿಪಿಎಫ್ ಅಕೌಂಟ್ ತೆರೆದು 15 ವರ್ಷ ಸುಖಾ ಸುಮ್ಮನೆ ದುಡ್ಡು ತುಂಬಿಸುತ್ತಿರಬೇಕು ಅನ್ನೋದು ನಿಯಮ. ಸಕಾರಣವಿಲ್ಲದೆ ಮಧ್ಯೆ ಹಣವನ್ನು ಮುಟ್ಟಲು ಸಹ ಆಗದು. ನಿಮಗೆ ಗೊತ್ತಿಲ್ಲದೇ ಒಂದಷ್ಟು ಉಳಿತಾಯ ದೊಡ್ಡದಾಗಾಬೇಕು ಅನ್ನುವುದಾದರೆ ಪಿಪಿಎಫ್ ಮಾಡಿಸಬಹುದು. ಪ್ರಸ್ತುತ ಶೇ.8ರಷ್ಟು ಬಡ್ಡಿ ಕೊಡುವ ಉಳಿತಾಯ ಯೋಜನೆ ಇದೊಂದೇ ಇರುವುದು. ಈ ಬಡ್ಡಿ ಮೂರು ತಿಂಗಳಿಗೊಂದು ಬಾರಿ ನಿಗಧಿಯಾಗುತ್ತಿದೆ. ಪ್ರತಿ ತಿಂಗಳ ಐದನೇ ತಾರೀಖೀನ ಒಳಗೆ ಖಾತೆಗೆ ಹಣ ಪಾವತಿಸಿದರೆ ನೀವು ಕೊನೆಗೆ ಕಟ್ಟಿದ ಮೊತ್ತಕ್ಕೂ ಬಡ್ಡಿ ಸಿಗುತ್ತದೆ. ಐದನೇ ತಾರೀಖೀನ ನಂತರ ಆದರೆ ಬಡ್ಡಿ ಲೆಕ್ಕಾಚಾರ ಮುಂದಿನ ತಿಂಗಳಿಗೆ ಹೋಗುತ್ತದೆ.
ಪಿಪಿಎಫ್ಗೆ ತೆರಿಗೆ ವಿನಾಯಿತಿ ಉಂಟು. ಪ್ರತಿ ಐದು ವರ್ಷಕ್ಕೊಮ್ಮೆ ರಿನಿವಲ್ ಮಾಡಬಹುದು. ಆದರೆ, ಕಟ್ಟಿದ ಮೊತ್ತದ ಮೇಲೆ ಸಾಲ ಪಡೆಯುವ ಅವಕಾಶವೂ ಉಂಟಂತೆ. ಮದುವೆ, ಓದು, ವಿದೇಶಿ ಪ್ರವಾಸ, ಅಕಾಲಿಕ ಮರಣದಂಥ ಸಮಯ ಎದುರಾದರೆ ಆಗ ನಿಮ್ಮ ಪಿಪಿಎಫ್ ಅಕೌಂಟ್‌ನಿಂದ ಹಣವನ್ನು ಸರಾಗವಾಗಿ ತೆಗೆಯಬಹುದು. ಇದಕ್ಕೆ ಸೂಕ್ತ ದಾಖಲೆ ಒದಗಿಸಬೇಕಾಗುತ್ತದೆ ಅನ್ನೋದು ಗೊತ್ತಿರಬೇಕಾದ ವಿಷಯ.
ಎನ್‌ಆರ್‌ಐಗೆ ಇಲ್ಲ
ಎನ್‌ಆರ್‌ಐಗಳು ಈ ಪಿಪಿಎಫ್ಗಳನ್ನು ಶುರು ಮಾಡಲು ಅವಕಾಶವಿಲ್ಲ. ಈ ಉಳಿತಾಯ ಯೋಜನೆ ಇರುವುದು ಬರೀ ದೇಶಿಗರಿಗೆ. ಆದರೆ, ನೀವು ವಿದೇಶಕ್ಕೆ ಹೋಗುವ ಮೊದಲೇ ಇಲ್ಲಿನ ಬ್ಯಾಂಕ್‌ಗಳಲ್ಲಿ ಪಿಪಿಎಫ್ ಖಾತೆ ತೆರೆದಿದ್ದರೆ ಚಿಂತೆ ಇಲ್ಲ. ಅದನ್ನು ಮುಂದುವರಿಸಲು ಯಾವ ಕಾನೂನೂ ಅಡ್ಡಿ ಮಾಡುವುದಿಲ್ಲ. ಪಿಪಿಎಫ್ ಖಾತೆ ತೆರೆದು, ಅದರೊಳಗೆ ಇದ್ದ ಬಂದ ಹಣವನ್ನೆಲ್ಲಾ ಅದರೊಳಗೆ ಸುರಿಯುವ ಯೋಜನೆ ಇದ್ದರೆ ಸ್ವಲ್ಪ ನಿಲ್ಲಿ. ವರ್ಷಕ್ಕೆ 500ರೂ ನಿಂದ 1,50,00 ಲಕ್ಷ ಹಣ ಮಾತ್ರ ಖಾತೆಯಲ್ಲಿರಬೇಕು ಅನ್ನೋ ನಿರ್ಬಂಧವಿದೆ. ಅದಕ್ಕಿಂತ ಹೆಚ್ಚು ಹಣ ಜಮೆ ಮಾಡಲು ಅವಕಾಶವಿಲ್ಲ. ಅದೂ ಜಮೆ ಮಾಡುವುದು ಅಂದರೆ ಹೇಗೆ, ಎಣಿಸಿ, ಎಣಿಸಿ ವರ್ಷಕ್ಕೆ 12 ಸಲ ಹಣ ತುಂಬಬಹುದು ಅಷ್ಟೇ. ಈಗಾಗಲೇ ಹೇಳಿದಂತೆ ವಿಶೇಷ ಕಾರಣಗಳಿದ್ದಲ್ಲಿ ಅವಧಿಗಿಂತ ಮೊದಲೇ ಖಾತೆಯನ್ನು ಕ್ಲೋಸ್ ಮಾಡಬಹುದು. ಅದಕ್ಕೂ ಕೆಲ ನಿಯಮಗಳಿವೆ. ಅದೇನೆಂದರೆ, ನಿಮಗೆ ಸಿಗುವ ಬಡ್ಡಿಯಲ್ಲಿ ಶೇ.1ರಷ್ಟು ಕಟಾವು ಮಾಡಿ ಕೊಡುತ್ತಾರೆ. ಇದನ್ನು ದಂಡ ಅಂತಲಾದರೂ ಅಂದುಕೊಳ್ಳಬಹುದು ಅಥವಾ ಅವಧಿಗೂ ಮೊದಲೇ ತೆಗೆದದ್ದಕ್ಕೆ ಹೀಗೆ ಅಂತಲೂ ಊಹಿಸಬಹುದು. ಪಿಪಿಎಫ್ ಮಾಡಿದರೆ ಇನ್ನೊಂದು ಲಾಭ ಇದೆ. ಅದೇನೆಂದರೆ, ನೀವು ಒಂದು ಪಕ್ಷ ಸಾಲ ಮಾಡಿ, ನ್ಯಾಯಾಲಯ ಆಸ್ತಿಯನ್ನು ಡಿಕ್ರಿ ಮಾಡಿದರೆ, ಪಿಪಿಎಫ್ ಅನ್ನೂ ಆ ಮೊಕದ್ದಮೆಗೆ ಅಟ್ಯಾಚ್ ಮಾಡಿದ್ದರೆ ನಿಮ್ಮ ಪಿಪಿಎಫ್ ಹಣ ಆ ಸಾಲದ ವ್ಯಾಪ್ತಿಗೆ ಬರುವುದಿಲ್ಲ.
ವಾಪಸ್ಸು ಪಡೆಯೋದು ಹೇಗೆ?
ಪಿಪಿಎಫ್ ಹಣ ಹಾಕಿದ ನಂತರ ನೀವು ಏಳು ವರ್ಷ ಕಾಯಲೇಬೇಕು. ಆ ನಂತರ ನಾಲ್ಕನೇ ವರ್ಷದ ಕೊನೆಯಲ್ಲಿ ಖಾತೆಯೊಳಗೆ ಉಳಿದು ಕೊಂಡಿರುವ ಮೊತ್ತದಲ್ಲಿ ಶೇ.50ರಷ್ಟು ಹೊರ ತೆಗೆಯಬಹುದು. ಹೀಗೆ ತೆಗೆದ ಹಣಕ್ಕೆ ಯಾವುದೇ ತೆರಿಗೆ ಬೀಳುವುದಿಲ್ಲ. ಆನಂತರ 15 ವರ್ಷದ ಟರ್ಮ್ ಅನ್ನು ಪ್ರತಿ ತಿಂಗಳು ಅಥವಾ ವರ್ಷದಲ್ಲಿ 12 ಸಲ ದಂತೆ ಹಣ ಜಮೆ ಮಾಡುತ್ತಾ ಮುಂದುವರಿಸಬಹುದು.
ಹದಿನೈದು ವರ್ಷದ ನಂತರ ಪಿಪಿಎಫ್ ಮೆಚೂÂರ್ ಆಗುತ್ತದೆ. ಆ ಹಣವನ್ನು ಹಾಗೇ ಬಿಟ್ಟರೆ ತೊಂದರೆ ಇಲ್ಲವೇ? ಸಸ್ಪೆನ್ಸ್ ಖಾತೆಗೆ ಏನಾದರೂ ತಳ್ಳಬಹುದೇ? ಅನ್ನೋ ಅನುಮಾನ ಇರಬಹುದು. ಅದಕ್ಕೆ ಹೀಗೂ ಮಾಡಬಹುದು. ನೀವು ಪಿಪಿಎಫ್ ಖಾತೆಯಲ್ಲಿ ಮೆಚೂÂರ್ ಆಗಿರುವ ಮೊತ್ತ ಹಾಗೇ ಬಿಟ್ಟರೆ, ಬಡ್ಡಿಯಿಂದ ಬೆಳೆಯುತ್ತಲೇ ಇರುತ್ತದೆ. ನಿಮಗೆ ಯಾವಾಗ ಬೇಡ ಎನಿಸುತ್ತದೋ ಆಗ ಪಿಪಿಎಫ್ ಖಾತೆಯನ್ನು ಮುಚ್ಚಿ ಹಣ ಹಿಂಪಡೆಯಬಹುದು. ಆದರೆ ಒಂದು ವಿಚಾರ ನೆನಪಿರಲಿ. ಹದಿನೈದು ವರ್ಷದ ನಂತರವೂ ನೀವು ಪಿಪಿಎಫ್ ಖಾತೆಯನ್ನು ಮುಂದುವರಿಸಬೇಕು ಅನ್ನೋ ಇಚ್ಚೆ ಹೊಂದಿದ್ದರೆ, ಮೆಚ್ಯುರಿಟಿ ಆದ ಒಂದು ವರ್ಷದ ಒಳಗೆ ಫಾರ್ಮ್ ಎಚ್ ಅನ್ನು ತುಂಬಿ ಕೊಡಬೇಕು. ಹೀಗೆ ಮಾಡಿದರೆ ಪ್ರತಿ ಐದು ವರ್ಷಕ್ಕೊಮ್ಮೆ ನಿಮ್ಮ ಖಾತೆಯನ್ನು ರಿನಿವಲ್ ಮಾಡುವ ಮೂಲಕ ಹಾಗೇ ಮುಂದುವರಿಸಬಹುದು. ಹೀಗೆ ಎಷ್ಟು ಸಲ ಬೇಕಾದರೂ ಕೂಡ ವಿಸ್ತರಿಸುವ ಅವಕಾಶ ಕಾನೂನು ನೀಡಿದೆ.
ಪಿಪಿಎಫ್ ವರ್ಗಾವಣೆ ಮಾಡಬಹುದಾ?
ನಿಮದು ಒಂದು ಪಿಪಿಎಫ್ ಖಾತೆ ಇದೆ. ಇದನ್ನು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಅಥವಾ ಒಂದು ಬ್ಯಾಂಕಿನ ಬ್ರಾಂಚಿನಿಂದ ಇನ್ನೊಂದು ಬ್ಯಾಂಕಿನ ಬ್ರಾಂಚಿಗೆ ಪಿಪಿಎಫ್ ವರ್ಗಾವಣೆ ಮಾಡಲು ಸಾಧ್ಯವಿದೆ. ಹೇಗೆಂದರೆ, ಅದಕ್ಕೆ ಹಾಲಿ ಪಿಪಿಎಫ್ ಖಾತೆ ಹೊಂದಿರುವ ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕು. ಜೊತೆಗೆ, ಪಿಪಿಎಫ್ ಅಕೌಂಟಿನ ಪಾಸ್ ಬುಕ್ ಅಪ್‌ಡೇಟ್ ಮಾಡಿಸಿರಬೇಕು. ಅಸಲು ಎಷ್ಟು, ಬಡ್ಡಿ ಎಷ್ಟು ಕ್ರೂಡೀಕರಣವಾಗಿದೆ, ಕೊನೆ ಡಿಪಾಸಿಟ್ ಯಾವಾಗ ಮಾಡಿದ್ದು ಎಂಬುದರ ವಿವರವನ್ನು ನಮೂದು ಮಾಡಿಸಿರಬೇಕು. ಏಕೆಂದರೆ, ಅರ್ಜಿ ಸಲ್ಲಿಸಿದ ನಂತರ ವರ್ಗಾವಣೆ ಆಗಬೇಕಿರುವ ಬ್ಯಾಂಕ್‌ನವರು ಈ ಎಲ್ಲವನ್ನೂ ಪರಿಶೀಲಿಸುತ್ತಾರೆ. ನಿಮ್ಮ ಸಹಿ ಸರಿ ಇದೆಯೋ ಇಲ್ಲವೋ ಎನ್ನುವ ಹೊಂದಾಣಿಕೆಯನ್ನೂ ಗಮನಿಸುತ್ತಾರೆ. ಕೆ.ವೈಸಿ( ನೋ ಯುವರ್ ಕಸ್ಟಮರ್) ನಾಮಿನೇಷನ್ ಎಲ್ಲವೂ ಆಗ ಪರಿಶೀಲನೆಯಾಗುತ್ತದೆ. ಆನಂತರವೇ, ಹೊಸ ಬ್ಯಾಂಕಿನಲ್ಲಿ ಹೊಸ ಪಿಪಿಎಫ್ ಖಾತೆ ಪ್ರಾರಂಭವಾಗುವುದು. ನೀವು ಅರೆ, ಹೊಸೆ ಖಾತೆಯೇ, ಹಾಗಾದರೆ ಹಳೆ ಖಾತೆಯ ಕತೆ ಏನು? ಅನ್ನಬಹುದು. ನಿಜ, ಹೊಸ ಖಾತೆ ಅಂದರೆ ಹಳೆ ಖಾತೆಯ ವಿಸ್ತರಣೆ ಅಷ್ಟೇ. ಹಳೆ ಬ್ಯಾಂಕಿನ ಪಿಪಿಎಫ್ ಖಾತೆಯಲ್ಲಿ ನೀವಿಟ್ಟ ಮೊತ್ತ, ಅದರಿಂದ ದೊರೆತ ಬಡ್ಡಿ ಇಲ್ಲಿ ನೇರವಾಗಿ ಹೊಸ ಬ್ಯಾಂಕಿನ ಖಾತೆಗೆ ಬಂದು ಬೀಳುತ್ತದೆ. ಬ್ಯಾಂಕಿಗೆ ಹೊಸ ಖಾತೆ. ನಿಮಗೆ ಹಳೆಯದ್ದೇ.
-ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.