ಇದು ಸ್ಮಾರ್ಟ್‌ ಬ್ಯಾಂಡ್‌ ಸ್ವಾ”ಮಿ’!


Team Udayavani, Oct 21, 2019, 4:30 AM IST

anchor-mobile-seeme-(2)

ಮೊಬೈಲ್‌ ಫೋನ್‌ನೊಂದಿಗೇ ಬೆಸೆದುಕೊಂಡಿರುವ ಸಾಧನಗಳಲ್ಲಿ ಸ್ಮಾರ್ಟ್‌ಬ್ಯಾಂಡ್‌ಗಳು ಪ್ರಮುಖವಾದುವು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಾಧನಗಳಲ್ಲಿ ಸ್ಮಾರ್ಟ್‌ ಬ್ಯಾಂಡ್‌ ಮತ್ತು ಸ್ಮಾರ್ಟ್‌ ವಾಚ್‌ಗಳು ಜನಪ್ರಿಯವಾಗುತ್ತಿವೆ.ಇಂಥ ಸ್ಮಾರ್ಟ್‌ ಬ್ಯಾಂಡ್‌ಗಳನ್ನು ಮಿತವ್ಯಯದ ದರಕ್ಕೆಗುಣಮಟ್ಟದ ಉತ್ಪನ್ನ ನೀಡಿ ಜನಪ್ರಿಯಗೊಳಿಸಿದ್ದು ಶಿಯೋಮಿ. ಇತ್ತೀಚೆಗೆಅದು ಭಾರತದಲ್ಲಿ “ಮಿ ಸ್ಮಾರ್ಟ್‌ ಬ್ಯಾಂಡ್‌ 4′ ಬಿಡುಗಡೆ ಮಾಡಿದೆ.

ನಾವು ಕೈಗೆಕಟ್ಟಿಕೊಳ್ಳುವ ವಾಚುಗಳು ಸಮಯ, ದಿನಾಂಕ ತೋರಿಸಿದರೆ, ಸ್ಮಾರ್ಟ್‌ ಬ್ಯಾಂಡುಗಳು, ಸಮಯ, ದಿನಾಂಕದಜೊತೆ ನಮ್ಮ ದೇಹದ ಆರೋಗ್ಯಸೂಚ್ಯಂಕವನ್ನು ಅಳೆಯುತ್ತವೆ. ನಿಮಿಷಕ್ಕೆ ನಮ್ಮ ಹೃದಯದ ಬಡಿತ ಎಷ್ಟಿದೆ? ನಡೆದಾಗ, ಓಡಿದಾಗ, ವ್ಯಾಯಾಮ ಮಾಡಿದಾಗ ದೇಹದಲ್ಲಿ ಎಷ್ಟು ಕ್ಯಾಲೋರಿ ಖರ್ಚಾಗಿದೆ? ರಾತ್ರಿ ಮಲಗಿದಾಗಎಷ್ಟುಹೊತ್ತು ನಿದ್ದೆ ಮಾಡಿದಿರಿ? ಆ ನಿದ್ದೆಯ ಸಮಯದಲ್ಲಿ, ನೀವು ಎಷ್ಟು ಹೊತ್ತು ಉತ್ತಮ ನಿದ್ದೆ (ಸೌಂಡ್‌ ಸ್ಲಿàಪ್‌) ಮಾಡಿದಿರಿ? ಎಷ್ಟು ಹೊತ್ತು ಸಾಧಾರಣ ನಿದ್ದೆ ಮಾಡಿದಿರಿ? ಹಲವು ನಿಮಿಷಗಳಿಂದ ನೀವು ಒಂದೇ ಕಡೆ ಕುಳಿತಿದ್ದೀರಿ.. ಇತ್ಯಾದಿ ಮಾಹಿತಿಗಳನ್ನೆಲ್ಲ ಸ್ಮಾರ್ಟ್‌ ಬ್ಯಾಂಡ್‌ಗಳು ನೀಡುತ್ತವೆ. ಭಾರತದಲ್ಲಿ ಇದೀಗ ಬಿಡುಗಡೆಯಾಗಿರುವ ಮಿ ಸ್ಮಾರ್ಟ್‌ ಬ್ಯಾಂಡ್‌ 4ನ ಗುಣವಿಶೇಷಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಹೃದಯಬಡಿತದ ಮಾಪನ
ಬಳಿಕ ಸ್ಟೇಟಸ್‌ ಆಯ್ಕೆ ಇದ್ದು ಅದರಲ್ಲಿ ಇಟ್ಟ ಹೆಜ್ಜೆಗಳ ಸಂಖ್ಯೆ, ದೂರ, ನಿಮ್ಮ ದೇಹದಲ್ಲಿ ಈ ದಿನ ಖರ್ಚಾದ ಕ್ಯಾಲೋರಿ ಪ್ರದರ್ಶಿಸುತ್ತದೆ. ಬಳಿಕ ಪರದೆಯನ್ನು ಮೇಲ್ಮುಖವಾಗಿ ಉಜ್ಜಿದರೆ (ಸ್ವೆ„ಪ್‌) ಹೃದಯದ ಬಡಿತದ ಆಯ್ಕೆ ಬರುತ್ತದೆ. ಅದನ್ನು ಸ್ಪರ್ಶಿಸಿ, ಮೂವತ್ತು ಸೆಕೆಂಡ್‌ ಕಾದರೆ, ಒಂದು ನಿಮಿಷಕ್ಕೆ ನಿಮ್ಮ ಹೃದಯದ ಬಡಿತಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಈ ಬಡಿತ ವಿವಿಧ ಸಮಯದಲ್ಲಿ ಬೇರೆ ಬೇರೆ ಪ್ರಮಾಣ ಇರುತ್ತದೆ.

ವ್ಯಾಯಾಮ, ಕ್ಯಾಲೋರಿ ನಷ್ಟದ ಮಾಹಿತಿ
ಬಳಿಕ ಟ್ರೆಡ್‌ಮಿಲ್‌, ಸೈಕ್ಲಿಂಗ್‌, ವಾಕಿಂಗ್‌, ವ್ಯಾಯಾಮ, ಈಜಿನ ಚಿಹ್ನೆಗಳಿವೆ. ನೀವು ಇದರಲ್ಲಿ ಯಾವುದಾದರೊಂದು ಚಟುವಟಿಕೆ ಮಾಡುವಾಗ ಆ ನಿರ್ದಿಷ್ಟ ಚಿಹ್ನೆಯ ಮೇಲೆ ಸ್ಪರ್ಶಿಸಿದರೆ ಅದರ ಸೂಚ್ಯಂಕ ಕಾರ್ಯಾಚರಣೆ ಶುರುಮಾಡುತ್ತದೆ. ನೀವು ವ್ಯಾಯಾಮ ಮಾಡಿದಾಗ ಹೃದಯದಬಡಿತ ಎಷ್ಟಿರುತ್ತದೆ? ಎಷ್ಟು ಕ್ಯಾಲೋರಿ ನಷ್ಟವಾಯಿತು ಎಂಬುದನ್ನು ದಾಖಲಿಸುತ್ತದೆ. ಇದನ್ನು ಧರಿಸಿ ಈಜಬಹುದು, ಈಜಿನಿಂದ ನಷ್ಟವಾದ ಕ್ಯಾಲೋರಿ ಮಾಹಿತಿ ಪಡೆಯಬಹುದು. ನೀರಿನಲ್ಲಿ ಬಿದ್ದರೂ ನೀರು ಒಳ ಸೇರದಂಥ ರಕ್ಷಣೆಯಿದೆ.

ಆ್ಯಪ್‌ನಿಂದ ಕಾರ್ಯಾಚರಣೆ
ಈ ಸ್ಮಾರ್ಟ್‌ ಬ್ಯಾಂಡಿನ ದರ 2,300 ರೂ. ಈ ಸ್ಮಾರ್ಟ್‌ ಬ್ಯಾಂಡ್‌ 22.1 ಗ್ರಾಂ ತೂಕವಿದೆ. 0.95 ಇಂಚಿನ ಪರದೆ ಹೊಂದಿದೆ. ಇದಕ್ಕೆ ಅಮೋಲೆಡ್‌ ಬಣ್ಣದ ಡಿಸ್‌ಪ್ಲೇ ಇದೆ. ಪರದೆಯ ರಕ್ಷಣೆಗೆ ಟೆಂಪರ್ಡ್‌ ಗಾಜಿನ ರಕ್ಷಣೆಯಿದ್ದು ಇದು ಬೆರಳ ಸ್ಪರ್ಶದಿಂದ (ಟಚ್‌ ಸ್ಕ್ರೀನ್‌) ಕೆಲಸ ಮಾಡುವುದರಿಂದ, ಬೆರಳಚ್ಚು ಮೆತ್ತದ ಆ್ಯಂಟಿ ಫಿಂಗರ್‌ಪ್ರಿಂಟ್‌ ಕೋಟಿಂಗ್‌ ನೀಡಲಾಗಿದೆ. ಸ್ಮಾರ್ಟ್‌ ಬ್ಯಾಂಡನ್ನು ಕೈಗೆ ಕಟ್ಟಿಕೊಳ್ಳುವ ಬೆಲ್ಟ್ (ಸ್ಟ್ರಾéಪ್‌) ಪ್ಲಾಸ್ಟಿಕ್‌ ಆಗಿದೆ.

ನಿಮ್ಮ ಮೊಬೈಲ್‌ ಫೋನ್‌ ಸಂಪರ್ಕ ಇಲ್ಲದಿದ್ದರೆ ಈ ಡಿಜಿಟಲ್‌ ಬ್ಯಾಂಡ್‌ ಯಾವ ಮಾಹಿತಿಯನ್ನೂ ನೀಡುವುದಿಲ್ಲ. ಹಾಗಾಗಿ ಬ್ಯಾಂಡ್‌ ಬಳಸುವ ಮುನ್ನ ನಿಮ್ಮ ಮೊಬೈಲ್‌ ಫೋನಿನಲ್ಲಿ “ಮಿ ಫಿಟ್‌’ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅದರಲ್ಲಿ ನಿಮ್ಮ ಮೇಲ್‌ ಐಡಿ ಅಥವಾ ಫೇಸ್‌ಬುಕ್‌ ಮಾಹಿತಿ ಮೂಲಕ ಶಿಯೋಮಿ ಅಕೌಂಟನ್ನು ತೆರೆಯಬೇಕು. ಇಷ್ಟಾದರೆ ನಿಮ್ಮ ಸ್ಮಾರ್ಟ್‌ ಬ್ಯಾಂಡ್‌ ಬಳಕೆಗೆಸಿದ್ಧ.ಬಳಿಕ ಮೊಬೈಲ್‌ನ ಬ್ಲೂಟೂತ್‌ ಜೊತೆ ಪೇರ್‌ ಮಾಡಿಕೊಳ್ಳಬೇಕು. ಒಮ್ಮೆ ಪೇರ್‌ ಮಾಡಿಕೊಂಡರೆ ನಂತರ, ಈ ಸ್ಮಾರ್ಟ್‌ ಬ್ಯಾಂಡ್‌, ಬ್ಲೂಟೂತ್‌ ಆನ್‌ ಮಾಡಿದ್ದರೆ ಸ್ವಯಂಚಾಲಿತವಾಗಿ ಮೊಬೈಲ್‌ ಜೊತೆ ಸಂಪರ್ಕ ಕಲ್ಪಿಸಿಕೊಳ್ಳುತ್ತದೆ.

ಅಮೋಲೆಡ್‌ ಪರದೆ ಬಣ್ಣದ್ದಾಗಿದ್ದು, ಪರದೆಯಲ್ಲಿ ಸದಾ ಸಮಯ, ದಿನಾಂಕ, ವಾರ ಮತ್ತು ಆ ದಿನ ನೀವು ನಡೆದ ಹೆಜ್ಜೆಗಳ ಸಂಖ್ಯೆ ತೋರಿಸುತ್ತದೆ. ಹೀಗೆ ನೋಡಲು ಸ್ಮಾರ್ಟ್‌ ಬ್ಯಾಂಡಿನ ಪರದೆಯ ಮೇಲೆ ನಿಮ್ಮ ಬೆರಳನ್ನು ಸ್ಪರ್ಶಿಸಬೇಕು. ಆಗ ಸ್ಮಾರ್ಟ್‌ ಬ್ಯಾಂಡ್‌ನ‌ ಪರದೆ ಕಾಣುತ್ತದೆ. ಇದರಲ್ಲಿ 135 ಎಂಎಎಚ್‌ ಬ್ಯಾಟರಿ ಇದ್ದು, ಇದು 20 ದಿನದಷ್ಟು ಸುದೀರ್ಘ‌ ಕಾಲ ಬಾಳಿಕೆ ಬರುತ್ತದೆ ಎಂದು ಕಂಪೆನಿ ಹೇಳುತ್ತದೆ.
ದರ - 2,300 ರೂ. amazon.in ಮತ್ತು ಮಿ ಸ್ಟೋರ್‌ನಲ್ಲಿ ಲಭ್ಯ.

ಇನ್ನಷ್ಟು ಅನುಕೂಲಗಳು
ಮೆನು ಆಯ್ಕೆಯಲ್ಲಿ ಹವಾಮಾನ ವಿವರ ದೊರಕುತ್ತದೆ. ನೀವಿರುವ ಊರಿನ ಈಗಿನ ಉಷ್ಣಾಂಶ, ಗರಿಷ್ಠ, ಕನಿಷ್ಟ ಉಷ್ಣಾಂಶ, ಮಳೆಯ ಲಕ್ಷಣ, ಮುಂದಿನ ಐದು ದಿನಗಳ ಹವಾಮಾನ ವಿವರಗಳನ್ನು ಪ್ರದರ್ಶಿಸುತ್ತದೆ. ಸಂಗೀತ ಇದಲ್ಲದೇ, ಈ ಬ್ಯಾಂಡನ್ನು ನೀವು ಅಲಾರಾಂ, ಸ್ಟಾಪ್‌ ವಾಚ್‌, ಟೈಮರ್‌ ಆಗಿ ಕೂಡ ಬಳಸಬಹುದು. ನಿಮ್ಮ ಮೊಬೈಲ್‌ ಫೋನಿನಲ್ಲಿ ಇಯರ್‌ಫೋನ್‌ ಮೂಲಕ ಸಂಗೀತ ಆಲಿಸುತ್ತಿದ್ದರೆ, ನಿಮ್ಮ ಸ್ಮಾರ್ಟ್‌ ಬ್ಯಾಂಡಿನಲ್ಲೇ ಹಾಡನ್ನು ನಿಲ್ಲಿಸುವ, ಮುಂದಿನ ಅಥವಾ ಹಿಂದಿನ ಹಾಡಿಗೆ ಹೋಗುವ, ಸೌಂಡನ್ನು ನಿಯಂತ್ರಿಸುವ ಆಯ್ಕೆಯಿದೆ. ನಿಮ್ಮ ಮೊಬೈಲ್‌ ಫೋನ್‌ಗೆ ಕರೆ ಬಂದಾಗಲೆಲ್ಲ ವೈಬ್ರೇಟ್‌ ಮೂಲಕ ಕರೆ ಬಂದ ಸೂಚನೆ ನೀಡುತ್ತದೆ. ಆಗ ನೀವು ಕರೆಯನ್ನು ಬ್ಯಾಂಡ್‌ ಮೂಲಕವೇ ಸೈಲೆಂಟ್‌ ಮಾಡಬಹುದು. ಅಥವಾ ತಿರಸ್ಕರಿಸಬಹುದು. ಆದರೆ ಕರೆಯನ್ನು ಬ್ಯಾಂಡ್‌ ಮೂಲಕ ಸ್ವೀಕರಿಸಲಾಗುವುದಿಲ್ಲ.

 -ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.