ನೋಟಾದತ್ತ ನೋಟ ಹರಿಸಲು ಇದು ಸಕಾಲ


Team Udayavani, Apr 2, 2018, 5:41 PM IST

NOTAa.jpg

ಚುನಾವಣೆ ದಿನಾಂಕ ಘೋಷಣೆಯಾಗಿದೆ. ಶಾಸಕನಾಗಲು ಮುಖಂಡರು ಹಾತೊರೆಯುತ್ತಿದ್ದಾರೆ. ಯಾವ ಅಭ್ಯರ್ಥಿಯೂ ಇಷ್ಟವಾಗದಿದ್ದರೆ “ನೋಟಾ’ಕ್ಕೆ ಮುದ್ರೆಯೊತ್ತುವ ಅವಕಾಶವೂ ಮತದಾರನಿಗೆ ಇದೆ. ಆದರೆ, ರಾಜಕಾರಣದ ಎಲ್ಲ ಅನೀತಿಗಳಿಗೂ ಬ್ರೇಕ್‌ ಹಾಕಲು ಅದರಿಂದ ಸಾಧ್ಯವಾಗುತ್ತಿಲ್ಲ…

ಮೇ. 12ರಂದು ಕರ್ನಾಟಕದ ವಿಧಾನಸಭೆಯ ಚುನಾವಣೆ ಎಂದು ಈಗಾಗಲೇ ಘೋಷಣೆ ಹೊರಬಿದ್ದಿದೆ. ಶಾಸಕ ಪಟ್ಟ ತಮ್ಮದಾಗಿಸಿಕೊಳ್ಳುವ ಒಂದು ಯುದ್ಧ ಆರಂಭವಾಗಿದೆ. ಬಂಡವಾಳ ಹೂಡಿ ಮುಂದಿನ ಐದು ವರ್ಷಕ್ಕೆ ಅದರ ಪರಿಣಾಮದ ಉತ್ಪನ್ನಗಳನ್ನು ಸಂಪಾದಿಸುವ ಈ ಆರ್ಥಿಕ ವ್ಯವಹಾರದಲ್ಲಿ ಸಾಮಾನ್ಯರು ಅಭ್ಯರ್ಥಿಯಾಗಿ ಪಾಲ್ಗೊಳ್ಳುವುದು ಸಾಧ್ಯವೇ ಇಲ್ಲ. ಕೋಟಿ ಕೋಟಿ ರೂ.ಗಿಂತ ಜಾಸ್ತಿ ಆಸ್ತಿದಾತರೇ ಸ್ಪರ್ಧಾಳುಗಳು. ಅವರಲ್ಲಿ ವಿನಯವಂತರು, ಪ್ರಾಮಾಣಿಕರ ಸಂಖ್ಯೆ ಕಡಿಮೆ ಎಂತಾದರೆ ದೂರಬೇಕಾದುದು ಯಾರನ್ನು?

ಈ ರೀತಿಯ ಸ್ಪರ್ಧಾಕಣದಲ್ಲಿರುವ ವ್ಯಕ್ತಿಗಳೆಲ್ಲ ಅಪ್ರಯೋಜಕರು ಎನ್ನಿಸಿದರೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸುವವರು ಮತ ಚಲಾಯಿಸಲೇಬೇಕು. ಭಾರತದಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕುಸಿಯಲು ಇದೇ ಕಾರಣವಾಯಿತೆ? ದೇಶದ ಸುಪ್ರೀಂಕೋರ್ಟ್‌ ಮುಂದೆ ಈ ಪ್ರಶ್ನೆಯನ್ನು ಇರಿಸಿದ್ದು ಪೀಪಲ್ಸ್‌ ಯೂನಿಯನ್‌ ಫಾರ್‌ ಲಿಬರ್ಟೀಸ್‌. ಪಿಯುಸಿಎಲ್‌ ವಾದವನ್ನು ಮನ್ನಿಸಿ ನ್ಯಾಯಾಲಯವು ದೇಶದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿ, ಇನ್ನು ಮುಂದೆ ಉಮೇದುವಾರರ ಜೊತೆಗೆ

“ನನ್‌ ಆಫ್ ದ ಎಬೋವ್‌- ಎನ್‌ಓಟಿಎ-ನೋಟಾ ಎಂಬ ಅವಕಾಶವನ್ನು ಕಲ್ಪಿಸಿ ಮತದಾರರಿಗೆ ಅಭ್ಯರ್ಥಿಗಳ ಬಗ್ಗೆ ಇರುವ ಅತೃಪ್ತಿಯನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡಬೇಕು ಎಂದು ಆದೇಶಿದ್ದರಿಂದ ನೋಟಾ ಬಟನ್‌ ಇಎಂಗಳಲ್ಲಿ ಜಾರಿಗೆ ಬಂದಿತು. ಒಂದೊಮ್ಮೆ ಚುನಾವಣೆ ಮತಪತ್ರದ ಮೂಲಕ ನಡೆದರೂ ಅದರಲ್ಲೂ ಕೊನೆಯದಾಗಿ, ಮೇಲಿನ ಯಾರೂ ಅಲ್ಲ ಎಂಬ ನೋಟಾ ಅವಕಾಶ ಕಲ್ಪಿಸಲಾಗುತ್ತಿದೆ.

ನೋಟಿಗೆ ನೋ, ನೋಟಾಗೆ ಎಸ್‌!: ಕಳೆದ ಗುಜರಾತ್‌ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶೇ. 1.8ರಷ್ಟು ಮತದಾರರು ನೋಟಾಗೆ ಮುದ್ರೆ ಒತ್ತಿದ್ದರು. ಇದು 2015ರ ನಂತರದ ಎರಡನೇ ಗರಿಷ್ಠ ನೋಟಾ ಎಂಬುದು ಚುನಾವಣೆಯಲ್ಲಿ ಪಾಲ್ಗೊಂಡವರಿಗೆಲ್ಲ ಎಚ್ಚರಿಕೆಯ ಘಂಟೆ. ಪಾಂಡಿಚೆರಿಯಲ್ಲಿ 2016ರ ಚುನಾವಣೆಯಲ್ಲಿ ಎಂಟು ಲಕ್ಷ ಮತದಾರರಲ್ಲಿ ಶೇ. 1.67 ಮಂದಿ ನೋಟಾಗೆ ಜೈ ಎಂದಿದ್ದರು. ಪಶ್ಚಿಮ ಬಂಗಾಳದಲ್ಲಿ 2016ರ ಮತದಾನದಲ್ಲಿ 5.4 ಕೋಟಿ ಮತದಾರರಲ್ಲಿ ಶೇ. 1.53 ಜನರ ಮತ ನೋಟಾ ಪಾಲಾಗಿತ್ತು.

ಕಳೆದ ವರ್ಷ ತಮಿಳುನಾಡಿನಲ್ಲಿ ನೋಟಾ ಶೇ. 1.3ರ ಪಾಲು ಪಡೆದಿತ್ತು. ಗೋವಾ, ಉತ್ತರಾಖಂಡ, ಅಸ್ಸಾಂಗಳಲ್ಲೆಲ್ಲ ನೋಟಾ ಮತದಾನ ಶೇ. ಒಂದಕ್ಕಿಂತ ಹೆಚ್ಚೇ ಇತ್ತು. ಭಾರತದ ಮತದಾರರಲ್ಲಿ ಒಂದು ನಂಬಿಕೆಯಿದೆ. ತಾವು ಮತ ಹಾಕಿದ ಅಭ್ಯರ್ಥಿ ಗೆದ್ದರೆ ಮಾತ್ರ ತಮ್ಮ ಮತ ಸಫ‌ಲವಾದಂತೆ! ಇದೇ ಕಾರಣಕ್ಕೆ ಹಲವು ಚುನಾವಣೆಗಳಲ್ಲಿ ತ್ರಿಕೋನ ಅಥವಾ ಬಹುಮುಖ ಸ್ಪರ್ಧೆ ಏರ್ಪಟ್ಟಾಗ ಮತದಾರ ತಮ್ಮ ಆಯ್ಕೆಯ ಮೂರು ಅಥವಾ ನಾಲ್ಕನೆ ಸ್ಥಾನ ಪಡೆಯಬಹುದು ಎಂಬ ಅಭ್ಯರ್ಥಿಯ ಬದಲು ಮೊದಲಿನೆರಡು ಜನರಲ್ಲಿ ಒಬ್ಬರಿಗೆ ಅಂಕಿತ ಹಾಕುವುದು ರೂಢಿ.

ಇದೇ ಕಾರಣಕ್ಕೆ ನೋಟಾ ಮತ ಚಲಾಯಿಸುವುದು ವ್ಯರ್ಥ ಎಂಬ ಪ್ರತಿಪಾದನೆಯನ್ನೂ ಕೇಳುತ್ತೇವೆ. ವಾಸ್ತವ ಅದಲ್ಲ. ಗುಜರಾತ್‌ನಲ್ಲಿ 5.5 ಲಕ್ಷಕ್ಕೂ ಹೆಚ್ಚು ಜನರು ನೋಟಾಗೆ ಮತ ಚಲಾಯಿಸಿದರು ಎಂಬುದು ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವು ಸೋಲನ್ನು ಪ್ರಭಾವಿಸಿತ್ತು. 182 ಕ್ಷೇತ್ರಗಳ ಪೈಕಿ 115 ಮತಕ್ಷೇತ್ರಗಳಲ್ಲಿ ನೋಟಾ ಮೂರನೇ ಸ್ಥಾನ ಅಲಂಕರಿಸಿತ್ತು. ಅಷ್ಟೇಕೆ, 30 ಕ್ಷೇತ್ರಗಳಲ್ಲಿ ಗೆದ್ದ ಸೋತ ಅಭ್ಯರ್ಥಿಗಳ ಅಂತರಕ್ಕಿಂತ ನೋಟಾ ಗಳಿಕೆ ಹೆಚ್ಚಾಗಿತ್ತು. ಜನ ಅಭ್ಯರ್ಥಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಲು ಮತದಾನದಿಂದ ದೂರ ಉಳಿಯುವ ತಂತ್ರ ನಕಾರಾತ್ಮಕವಾದುದು.

ಇದನ್ನು ಒಂದು ಉದಾಹರಣೆಯ ಮೂಲಕ ವಿವರಿಸಿದರೆ ಅರ್ಥಪೂರ್ಣ ಅನಿಸೀತು. ಒಂದು ಕ್ಷೇತ್ರದಲ್ಲಿ ಐವರು ಸ್ಪರ್ಧಿಸಿದ್ದಾರೆ. ಅವರೆಲ್ಲ ಕ್ರಿಮಿನಲ್‌ಗ‌ಳು, ಅಪ್ರಾಮಾಣಿಕರು. ಅವರನ್ನು ಜನಪ್ರತಿನಿಧಿ, ನಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಾಮಾನ್ಯ ಮತದಾರನಿಗೆ ಸಾಧ್ಯವಿಲ್ಲ. ಮತದಾನದಿಂದ ನಾವು ಹಿಂದೆ ಉಳಿದರೆ, ಕ್ಷೇತ್ರದಲ್ಲಿ ಶೇ. 30ರಷ್ಟೇ ಮತದಾನವಾಗಿರಲಿ, ಪಡೆದ ಮತಗಳಲ್ಲಿ ಹೆಚ್ಚು ಮತ ಪಡೆದ ಅಭ್ಯರ್ಥಿ ನಮ್ಮ ಜನಪ್ರತಿನಿಧಿಯಾಗಿಬಿಡುತ್ತಾನೆ. ಆದರೆ ಶೇ. 70ರಷ್ಟು ಮತದಾರ ಈ ಐವರ ಹೊರತು ನೋಟಾಗೆ ಮತ ಚಲಾುಸಿದರೆ ಅಕ್ಷರಶಃ ಭಾರತದ ಪ್ರಜಾಪ್ರಭುತ್ವದಲ್ಲಿ ಕ್ರಾಂತಿಯಾಗುತ್ತದೆ.

ನಕಾರಾತ್ಮಕ ಚುನಾವಣಾ ಆಯೋಗ!: ನಿಜ, ಈವರೆಗೆ ಅಂತಹ ಪ್ರಕರಣ ಘಟಿಸಿಲ್ಲ.  2015ರ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆದ ಬಿಹಾರದ 243 ವಿಧಾನಸಭಾ ಕ್ಷೇತ್ರಗಳ 3,450 ಅಭ್ಯರ್ಥಿಗಳ ಬದಲು ಶೇ. 2.48 ಮತಗಳು ನೋಟಾವನ್ನು ಅನುಸರಿಸಿದ್ದು ಗಮನಾರ್ಹ ಅಂಶ. ಬಿಹಾರದ ಪ್ರಜಾnವಂತ ಮತದಾರ ಅಲ್ಲಿನ ಕ್ರಿಮಿನಲ್‌ ಜನನಾಯಕರಿಗೆ ಒಂದು ಉತ್ತರವನ್ನಂತೂ ಕೊಟ್ಟಿರುವಂತೆ ಭಾಸವಾಗುತ್ತದೆ. ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ, ಒಂದೊಮ್ಮೆ ಎಲ್ಲ ಅಭ್ಯರ್ಥಿಗಳಿಗಿಂತ ನೋಟಾ ಮತಗಳೇ ಪ್ರಥಮ ಸ್ಥಾನ ಪಡೆದಾಗಲೂ ಆ ಮತಕ್ಷೇತ್ರದ ಚುನಾವಣೆ ಫ‌ಲಿತಾಂಶ ರದ್ದಾಗುವುದಿಲ್ಲ.

ಅಲ್ಲಿ ನೋಟಾ ನಂತರ ಗರಿಷ್ಠ ಮತ ಪಡೆದ ಅಭ್ಯರ್ಥಿ ವಿಜೇತನೆಂದು ಘೋಷಿಸಲ್ಪಡುತ್ತಾನೆ. ಆದರೆ ಇಂತಹ ಘಟನೆಗಳು ನಡೆದಾಗಲೇ ಅಥವಾ ಮರುಕಳಿಸಿದಾಗಲೇ ಒಂದು ಪ್ರಜಾnವಂತಿಕೆಯ ಆಂದೋಲನ ರೂಪುಗೊಳ್ಳುತ್ತದೆ. ಭ್ರಷ್ಟಾಚಾರದ ವಿರೋಧಿ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ಈಗಿನ ವ್ಯವಸ್ಥೆ, ಅಭ್ಯರ್ಥಿಗಳನ್ನು ನಿರಾಕರಿಸಲು ನೋಟಾ ಕುರಿತ ಜಾಗೃತಿಯನ್ನು ಹೆಚ್ಚಿಸಬೇಕಾಗಿದೆ. ನೋಟಾ ನಕಾರಾತ್ಮಕ ಮತದಾನ ಎಂಬ ಪ್ರತಿಪಾದನೆಯೇ ಖಂಡನೀಯ. ಖುದ್ದು ಚುನಾವಣಾ ಆಯೋಗಕ್ಕೆ ನೋಟಾ ಬಗ್ಗೆ ಅಂತಹ ಒಲವಿಲ್ಲ.

ನೋಟಾ ಗರಿಷ್ಠ ಮತ ಪಡೆದ ಸಂದರ್ಭದಲ್ಲೂ ಅದು ಅಭ್ಯರ್ಥಿಗಳ ಠೇವಣಿ ಮೊತ್ತಕ್ಕೆ ಸಂಚಕಾರ ತರುವ ಮಾನದಂಡವಾಗುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟೀಕರಣ ನೀಡಿದೆ. 2014ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿಯೂ ನೋಟಾಕ್ಕೆ ಅವಕಾಶ ಕಲ್ಪಿಸಿರುವುದು ಮಹತ್ವದ ಬೆಳವಣಿಗೆ. ಚುನಾವಣೆಗಳ ಮಾದರಿಯಲ್ಲಿ ಆಮೂಲಾಗ್ರ ಬದಲಾವಣೆ ಬೇಕು ಎಂದು ಚುನಾವಣಾ ಆಯೋಗ ಕೂಡ ಪ್ರತಿಪಾದಿಸಿದರೂ ಮೊದಲು ನೋಟಾಗೆ ಅದು ಮೀಸಲಿರಿಸಿದ ಚಿನ್ಹೆ ಕತ್ತೆಯನ್ನು!

ಇತ್ತೀಚೆಗೆ 2015ರಲ್ಲಿ ಅಹ್ಮದಾಬಾದ್‌ನ ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್ ಡಿಸೈನ್‌ ಎನ್‌ಐಡಿ ಸಹಾಯದಲ್ಲಿ ಹೊಸದೊಂದು ನೋಟಾ ಚಿನ್ಹೆಯನ್ನು ರೂಪಿಸಿ ಅಳವಡಿಸಲಾಗಿದೆ. ಚುನಾವಣಾ ಆಯೋಗ ಯುವ ಜನರಿಗೆ ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿ ಚುನಾವಣೆಗೆ ಮುನ್ನ ನಡೆಸುತ್ತದೆ. ಆದರೆ ಪ್ರಜಾnಪೂರ್ವಕವಾಗಿ ನೋಟಾ ಮತಗಳ ಅವಕಾಶ, ಸಾಧ್ಯತೆ ಮತ್ತು ಅದರ ದೂರಗಾಮಿ ಪರಿಣಾಮಗಳ ಬಗ್ಗೆ ಹೇಳದೆ ಅದನ್ನು ಆದಷ್ಟೂ ಗುಟ್ಟಾಗಿಡುವ ಪ್ರಯತ್ನ ನಡೆಯುತ್ತಲೇ ಇದೆ.

ಪ್ರಜಾಪ್ರಭುತ್ವ ಆಟದ ಅಂಕಣವಲ್ಲ!: ನೋಟಾ ಪ್ರಭಾವಶಾಲಿಯಾಗಲು ದೇಶದ ಶಾಸನ ವ್ಯವಸ್ಥೆ ಹಲವು ಮಾರ್ಪಾಡುಗಳನ್ನು ಮಾಡಬೇಕು. ಒಂದು ಮತಕ್ಷೇತ್ರದಲ್ಲಿ ನೋಟಾ ಅಗ್ರಸ್ಥಾನ ಪಡೆದರೆ ಅದರ ಕೆಳಗೆ ಬರುವ ಅಭ್ಯರ್ಥಿಗಳನ್ನು ಆರು ವರ್ಷಗಳ ಕಾಲ ಮತ್ತೂಂದು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂಬುದು ಒಂದು ಸಲಹೆ. ನೋಟಾ ಬಹುಮತದ ಸಂದರ್ಭದಲ್ಲಿ ಮರುಚುನಾವಣೆ ನಡೆಯಬೇಕು ಹಾಗೂ ಆ ಚುನಾವಣೆಯ ಸಂಪೂರ್ಣ ವೆಚ್ಚವನ್ನು ರಾಜಕೀಯ ಪಕ್ಷಗಳು ಭರಿಸಬೇಕು ಎಂಬುದು ಮತ್ತೂಂದು ಅಭಿಪ್ರಾಯ. 

ಒಂದು ಮತಕ್ಷೇತ್ರದಲ್ಲಿ ವಿಜೇತರು ಬೇರೆಯವರಿದ್ದರೂ, ನೋಟಾಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳು ಮತ್ತೂಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂಬ ಸಲಹೆಯೂ ಇದೆ. ಮೇಲ್ನೋಟಕ್ಕೆ ಈ ಸಲಹೆ ಅತಿರೇಕದ್ದು ಎನ್ನಿಸಬಹುದಾದರೂ ಮತದಾನ ವ್ಯವಸ್ಥೆಯಂಥ ಪತ್ರ ಕ್ಷೇತ್ರದಲ್ಲಿ ಎದುರಾಳಿಯನ್ನು ಸೋಲಿಸಲು ಹೆಣೆಯುವ ನಕಾರಾತ್ಮಕ ತಂತ್ರಗಳನ್ನು ತಡೆಯಲು ಈ ನಿಯಮ ಅನುಕೂಲ.

ನಿರ್ದಿಷ್ಟ ಅಭ್ಯರ್ಥಿಯ ಮತಗಳನ್ನು ಒಡೆದು ಗೆಲುವು ಸಾಧಿಸಲು ಡಮ್ಮಿ ಅಭ್ಯರ್ಥಿಗಳನ್ನು ಹೂಡಲಾಗುವುದನ್ನು ನಾವು ಕಂಡಿದ್ದೇವೆ. ಕೇವಲ ಹೆಸರಿನ ಕಾರಣ ಮತದಾರರಿಗೆ ಗೊಂದಲ ಆಗಲಿ ಎಂಬ ಕಾರಣಕ್ಕೆ ಅದೇ ಹೆಸರಿನ ಅನಾಮಿಕರನ್ನು ಚುನಾವಣಾ ಕಣಕ್ಕೆ ರಾಜಕೀಯ ಪಕ್ಷಗಳು ಠೇವಣಿ, ಖರ್ಚು ಕೊಟ್ಟು ನಿಲ್ಲಿಸುವುದು ಕೂಡ ನಡೆದಿದೆ. ಈ ರೀತಿಯಲ್ಲಿ ಗೆಲುವು ಸಂಪಾದಿಸಲು ಪ್ರಜಾಪ್ರಭುತ್ವ ಎಂಬುದು ಘನತೆ ಇಲ್ಲದ ಆಟವೇ? ಇಂತಹ ಪ್ರವೃತ್ತಿಯನ್ನು ನಾವು ಬುದ್ಧಿವಂತಿಕೆ ಎಂದು ಆಸ್ವಾದಿಸುವ ಮನೋಭಾವ ಹೊಂದಿದ್ದೇವೆ. ಅದಕ್ಕೊಂದು ಬ್ರೇಕ್‌ ಹಾಕಲು ಸುಧಾರಿತ ನೋಟಾ ಬೇಕೇ ಬೇಕು. 

* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.