ಇದು ನಿಮ್ಮದೇ ಸೆಕ್ಷನ್: ಆದಾಯ ತೆರಿಗೆಯ ಹೊಸ ಕಾಯ್ದೆ 269
Team Udayavani, Apr 17, 2017, 2:55 PM IST
ಇದು ತೆರಿಗೆ ಕಾಲ. ತಪ್ಪಿಸಿಕೊಳ್ಳುವ ಹಾಗಿಲ್ಲ. ಕಾನೂನು ಕೂಡ ಬದಲಾಗಿದೆ. ಈಗ ಆದಾಯ ತೆರಿಗೆಯ ಹೊಸ ಕಾಯ್ದೆ ಸೆಕ್ಷನ್ 269ರ ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯ. ಆದಾಯ ತೆರಿಗೆಯ ವಿಚಾರ ಎಂದರೆ ಬರೀ ದೊಡ್ಡ ಮೊತ್ತದ ವ್ಯವಹಾರ ನಡೆಸುವವರಿಗೆ ಮಾತ್ರ ಅನ್ವಯವಾಗುವುದೆಂದು ತಿಳಿಯಬೇಡಿ. ಈ ಹೊಸ ಸೆಕ್ಷನ್ ಬಗ್ಗೆ ಜನಸಾಮಾನ್ಯರು ಅವಶ್ಯವಾಗಿ ತಿಳಿಯಲೇ ಬೇಕಾದ ಮಾಹಿತಿ.
ನಮ್ಮ ದೇಶದಲ್ಲಿ ನಗದು ವ್ಯವಹಾರವನ್ನು ಕಡಿಮೆ ಮಾಡುವ ಹಾಗೂ ತೆರಿಗೆಯು ಸರಿಯಾಗಿ ಸಂಗ್ರಹವಾಗುವ ಉದ್ದೇಶದಿಂದ, ಇತ್ತೀಚೆಗೆ ಆರ್ಥಿಕ ರಂಗದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು ತಮಗೆಲ್ಲಾ ತಿಳಿದ ವಿಚಾರ. ಸರ್ಕಾರ ಚಾಪೆ ಕೆಳಗೆ ನುಸುಳಿದರೆ, ಜನರು ರಂಗೋಲಿ ಕೆಳಗೆ ನುಸುಳಿ ಪಾರಾಗುವವರೇ ಜಾಸ್ತಿ. ಈಗ ಇಂತಹ ವ್ಯವಹಾರವನ್ನು ತೆರಿಗೆಯ ವ್ಯಾಪ್ತಿಗೆ ತರುವ ಉದ್ದೇಶದಿಂದ ಈ ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
2017ರ ಹಣಕಾಸು ಮಸೂದೆಯಲ್ಲಿ ಆದಾಯ ತೆರಿಗೆಯ ಸೆಕ್ಷನ್ 269 ಖಖ ಎಂಬ ಹೊಸ ಕಾಯ್ದೆಯನ್ನು ಈ ತಿಂಗಳ 1ನೇ ತಾರೀಖೀನಿಂದಲೇ ಜಾರಿಗೊಳಿಸಲಾಗಿದೆ. ಈ ಕಾಯ್ದೆ ಏನು ಹೇಳುತ್ತದೆಂದರೆ, ಯಾವುದೇ ವ್ಯಕ್ತಿ ರೂ.2ಲಕ್ಷಕ್ಕೂ ಮೇಲ್ಪಟ್ಟ ಹಣವನ್ನು ನಗದಾಗಿ ಸ್ವೀಕರಿಸಿದರೆ ದಂಡ ವಿಧಿಸುತ್ತದೆ ಎಂದು.
ಹಾಗಾದರೆ ಮುಂದೇನು? ಇಲ್ಲಿದೆ ಮಾಹಿತಿ.
* ಒಟ್ಟುಗೂಡಿಸಿ ಒಬ್ಬ ವ್ಯಕ್ತಿಯಿಂದ ಒಂದು ದಿನದಲ್ಲಿ ರೂ. 2.25ಲಕ್ಷ ಹಣವನ್ನು ನಗದು ರೂಪದಲ್ಲಿ 2ಬೇರೆ ಬೇರೆ ಬಿಲ್ಲಗಳಿಗೆ ,ರೂ.1ಲಕ್ಷಕ್ಕೆ ಒಂದು ಬಿಲ್ ಹಾಗೂ ರೂ.1.25ಲಕ್ಷಕ್ಕೆ ಇನ್ನೊಂದು ಬಿಲ್ಲಗೆ. ಹೀಗೆ ಎಲ್ಲವನ್ನೂ ಒಟ್ಟುಗೂಡಿಸಿ ರೂ.2ಲಕ್ಷ ಮೇಲ್ಪಟ್ಟರೆ ಈ ಕಾನೂನು ಜಾರಿಯಾಗುತ್ತದೆ.
* ಒಂದೇ ವ್ಯವಹಾರ(ಲೇವಾದೇವಿಗೆ) ಸಂಬಂಧಪಟ್ಟಂತೆ: ಉದಾ: ರೂ.3.10ಲಕ್ಷದ ಒಂದೇ ಬಿಲ್ಲಗೆ, ನಗದು ಹಣ ಬೇರೆ ಬೇರೆ ದಿನಗಳಲ್ಲಿ ಪಡೆದರೆ, ಒಂದು ದಿನ ರೂ.1.6ಲಕ್ಷ, ಮಗದೊಂದು ದಿನ ರೂ.1.5ಲಕ್ಷ ಸ್ವೀಕರಿಸಿದರೆ.
* ಒಂದು ಲೇವಾದೇವಿ ಅಥವಾ ವ್ಯವಹಾರಕ್ಕಾಗಿ ನಗದು ವ್ಯವಹಾರ ಮಾಡಿದಲ್ಲಿ:
ಉದಾ: ಒಂದು ಮದುವೆಯ ಸಂದರ್ಭದ ಸಮಯದಲ್ಲಿ ಯಾವುದೇ ಬಿಲ್ ಮೊತ್ತ ರೂ.3ಲಕ್ಷ ದಾಟಿದರೆ.
* ಒಬ್ಬ ವ್ಯಕ್ತಿ ಬ್ಯಾಂಕ್ ಖಾತೆಯಿಂದ ಒಂದೇ ದಿನದಲ್ಲಿ ರೂ.2ಲಕ್ಷಕ್ಕಿಂತ ಹೆಚ್ಚು ಹಣ ಪಡೆದಾಗ
* ಯಾರಿಗೆ ಅನ್ವಯವಾಗುವುದೆಂದು ಎಂದರೆ ಯಾವುದೇ ವ್ಯಕ್ತಿ ರೂ.2 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ನಗದಾಗಿ ಸ್ವೀಕರಿಸಿದರೆ ದಂಡ ವಿಧಿಸಲಾಗುವುದು.
* ಆದಾಯ ತೆರಿಗೆಯಿಂದ ವಿನಾಯಿತಿ ಅಥವಾ ರಿಯಾಯಿತಿ ಪಡೆದ ಮೊತ್ತವೂ ನಗದಾಗಿ ಲೇವಾದೇವಿ ಮಾಡಿದರೂ ದಂಡ ವಿಧಿಸಲಾಗುವುದು.
* ವೈಯುಕ್ತಿಕ ಕಾರಣಕ್ಕಾಗಿ, ವ್ಯವಹಾರಕ್ಕಾಗಿ, ಟ್ರಸ್ಟಿಯಾಗಿ ಅಥವಾ ಪಾರುಪತ್ಯಕ್ಕಾಗಿ ನಗದು ಸ್ವೀಕರಿಸಿದರೆ.
ಈ ನಿಯಮಗಳನ್ನು ಉಲ್ಲಂ ಸಿದರೆ ಎಷ್ಟು ದಂಡ ವಿಧಿಸುತ್ತಾರೆಂದರೆ ಶೇ.100ರಷ್ಟು ದಂಡ ವಿಧಿಸಲಾಗುವುದು.
ಹಾಗಾಗಿ ರೂ.2ಲಕ್ಷಕ್ಕೂ ಮೇಲ್ಪಟ್ಟ ವ್ಯವಹಾರಗಳಿಗೆ ಅಕೌಂಟ್ ಪೇಯಿ ಚೆಕ್ ಮುಖಾಂತರ, ಡ್ರಾಫ್ಟ… ಮುಖಾಂತರ ಬ್ಯಾಂಕ ಖಾತೆಯಿಂದ ಎಲೆಕ್ಟ್ರಾನಿಕ್ ವರ್ಗಾವಣೆ ಮುಖಾಂತರ ವ್ಯವಹಾರ ಮಾಡಿದರೆ ಕ್ಷೇಮ.
ದಿನಕ್ಕೆ 2ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಹಿವಾಟಿನ ಮೇಲೆ ವಿಧಿಸಲಾಗಿರುವ ನಿಷೇಧವು ಬ್ಯಾಂಕ…, ಅಂಚೆ ಕಚೇರಿ ಉಳಿತಾಯ ಖಾತೆಗಳಿಂದ ಮತ್ತು ಸಹಕಾರ ಬ್ಯಾಂಕುಗಳಿಂದ ವಿತ್ ಡ್ರಾ ಮಾಡಿಕೊಳ್ಳುವ ಹಣಕ್ಕೆ ಅನ್ವಯಿಸುವುದಿಲ್ಲವಂತೆ.
ಹಣಕಾಸು ಕಾಯ್ದೆ 2017ರ ಪ್ರಕಾರ ಯಾವುದೇ ವ್ಯಕ್ತಿ ಒಂದೇ ದಿನ ರೂ.2ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ನಡೆಸುವಂತಿಲ್ಲ. ಈ ನಗದು ವ್ಯವಹಾಟಿನ ನಿಯಮ ಉಲ್ಲಂ ಸಿದವರಿಗೆ ವಹಿವಾಟು ನಡೆಸಿದಷ್ಟೇ ಮೊತ್ತದ ದಂಡ ವಿಧಿಸುವುದಕ್ಕೆ ಕಾಯ್ದೆಯಲ್ಲಿ ಅವಕಾಶವಿದೆ. ಆದರೆ ಸರ್ಕಾರದಿಂದ ಬ್ಯಾಂಕಿಂಗ್ ಕಂಪನಿಯಿಂದ, ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕಗಳಿಂದ ಪಡೆಯುವ ಯಾವುದೇ ಹಣಕ್ಕೆ ಈ ನಿಯಂತ್ರಣ ಅನ್ವಯಿಸುವುದಿಲ್ಲ.
ದೊಡ್ಡ ಮೊತ್ತದ ನಗದು ವಹಿವಾಟಿಗೆ ತಡೆಹಾಕಲು ಮತ್ತು ಕಾಳಧನಿಕರ ವಹಿವಾಟು ನಿಯಂತ್ರಿಸಲು ವಿತ್ತ ಸಚಿವ ಅರುಣ ಜೇಟ್ಲಿ ಅವರು 2017-18ರ ಮುಂಗಡ ಪತ್ರದಲ್ಲಿ ದಿನವೊಂದಕ್ಕೆ ರೂ.3ಲಕ್ಷ ಮೀರಿದ ನಗದು ವಹಿವಾಟನ್ನು ನಿಷೇಧಿಸಲು ಪ್ರಸ್ತಾಪಿಸಿದ್ದರು. ಬಳಿಕ ಹಣಕಾಸು ಮಸೂದೆ 2017ಕ್ಕೆ ತಿದ್ದುಪಡಿ ತರುವ ಮೂಲಕ ಈ ಮೊತ್ತವನ್ನು ರೂ.2ಲಕ್ಷಗಳಿಗೆ ಇಳಿಸಲಾಗಿದೆ. ತಿದ್ದುಪಡಿಯಾದ ಮಸೂದೆಗೆ ಸಂಸತ್ತು ತನ್ನ ಅನುಮೋದನೆ ನೀಡಿದೆ.
ಜೆ.ಸಿ. ಜಾದವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.