ಜ್ಯಾಕ್‌ ಆರ್ಚ್‌ ಜಾದೂ


Team Udayavani, Jan 8, 2018, 3:36 PM IST

08-25.jpg

ಈ ಹಿಂದೆ ಇದ್ದ “ಮದ್ರಾಸ್‌ ತಾರಸಿ’ ಸೂರುಗಳಲ್ಲಿ ಜ್ಯಾಕ್‌ ಆರ್ಚ್‌ಗಳ ಬಳಕೆ ಅತಿ ಹೆಚ್ಚಿದ್ದು, ನೂರು ವರ್ಷ ಕಳೆದರೂ ಹೀಗೆ ಕಟ್ಟಿರುವ ಮನೆಗಳು ಇಂದಿಗೂ ಗಟ್ಟಿಮುಟ್ಟಾಗಿವೆ. ಅದರಂತೆ, ಪಾಯದಲ್ಲೂ ಜ್ಯಾಕ್‌ ಆರ್ಚ್‌ ಬಳಸಬಹುದು. ಕಾಲಂಗೆ ಒಂದು, ಭಾರ ಹೊರದ ಗೋಡೆಗಳಿಗೆ ಮತ್ತೂಂದು ಪಾಯ ಎಂದಾಗದೆ, ಈ ಎರಡೂ ಬೆಸೆಯುವ ರೀತಿಯಲ್ಲಿ ಜ್ಯಾಕ್‌ ಆರ್ಚ್‌ಗಳು ಕಾರ್ಯನಿರ್ವಹಿಸುತ್ತವೆ…

ಕೆಲಮೊಮ್ಮೆ ಮನೆ ಕಟ್ಟಬೇಕಾದರೆ ಆದಷ್ಟು ಲಘುವಾಗಿ ಕಟ್ಟುವ ಅನಿವಾರ್ಯತೆ ಎದುರಾಗಿರುತ್ತದೆ. ಸಾಮಾನ್ಯವಾಗಿ ಪಾಯದ ಕೆಳಗಿನ ಮಣ್ಣು ಗಟ್ಟಿಯಾಗಿಲ್ಲದಿದ್ದರೆ, ಇಲ್ಲ ಜೇಡಿಮಣ್ಣಿನಿಂದ ಕೂಡಿದ್ದು ತೇವವಿದ್ದಾಗ ಹೆಚ್ಚು ಭಾರ ಹೊರುವ ಸಾಮಥ್ಯ ಇಲ್ಲದಿದ್ದರೆ, ಆಗ ನಾವು ಎಲ್ಲೆಲ್ಲಿ ಭಾರವನ್ನು ಕಡಿಮೆ ಮಾಡಬಹುದೋ, ಅಲ್ಲೆಲ್ಲ ಲೋಡ್‌ ಕಡಿಮೆ ಮಾಡಬೇಕಾಗುತ್ತದೆ. ಮಣ್ಣು ಮೆದುವಾಗಿದ್ದಾಗ ಕಾಲಂ ಬೀಮ್‌ ಬಳಸಿದರೂ ಗೋಡೆಗಳ ಕೆಳಗೆ ಮಾಮೂಲಿ ಪಾಯ ಹಾಕಿದರೆ, ಅದರ ಭಾರವೇ ಸುಮಾರು ಹತ್ತು ಅಡಿ ಎತ್ತರದ ಗೋಡೆಯದರಷ್ಟಾಗುತ್ತದೆ. ಕಾಲಂ ಕೆಳಗೆ ಬರುವ ಫುಟಿಂಗ್‌ ಭೂಮಿಯ ಭಾರ ಹೊರುವ ಸಾಮರ್ಥಯವನ್ನು ಆಧರಿಸಿ ವಿನ್ಯಾಸ ಮಾಡಿದ ನಂತರ ಇತರೆ ಅಂದರೆ ಹೊರಗಿನ ಹಾಗೂ ಮನೆಯ ಒಳಗೆ ಬರುವ ಪಾರ್ಟಿಷನ್‌ ಗೋಡೆಗಳ ಪಾಯವನ್ನು ಲಘುವಾಗಿ ಮಾಡಲಾಗುತ್ತದೆ. 

ಜ್ಯಾಕ್‌ ಆರ್ಚ್‌ ಉಪಯೋಗ
ಮನೆಯ ಭಾರ ಹೊರುವ ಕಾಲಂಗಳಿಗೆ ಸೂಕ್ತ ಫುಟಿಂಗ್‌ ಹಾಕಿ ನಂತರ ಭಾರಹೊರದ ಗೋಡೆಗಳಿಗೆ ಮಾಮೂಲಿ ಕಲ್ಲಿನ ಪಾಯ ಹಾಕಲು ಹೋದರೆ ಅದು ದುಬಾರಿ ಆಗುವುದರ ಜೊತೆಗೆ ತನ್ನ ಸ್ವಂತ ಭಾರವನ್ನೂ ಹೆಚ್ಚುವರಿಯಾಗಿ ಪಾಯದ ಮೇಲೆ ಹಾಕಲು ತೊಡಗುತ್ತದೆ. ಇದನ್ನು ತಪ್ಪಿಸಲು ನಾವು ಕಾಲಂನಿಂದ ಕಾಲಂಗೆ, ಈಗಾಗಲೇ ಹಾಕಿರುವ ಫುಟಿಂಗ್‌ ಬಳಸಿಕೊಂಡು, ಹೆಚ್ಚು ಎತ್ತರವಿರದ ಆದರೆ ಸಾಕಷ್ಟು “ಆರ್ಚ್‌ ಆ್ಯಕ್ಷನ್‌’ ಇರುವ ಅಂದರೆ ಹೆಚ್ಚಾ ಕಡಿಮೆ ಮಟ್ಟಸವೇನೋ ಎಂಬಂತಿರುವ ಕಮಾನುಗಳನ್ನು ಬಳಸಿ, ಮೇಲಿನ ಗೋಡೆಯ ಭಾರ ಕಾಲಂ ಫುಟಿಂಗ್‌ಗಳ ಮೇಲೆಯೇ ಬರುತ್ತ, ಅದರೊಂದಿಗೆ ಬೆಸೆಯುತ್ತಲೇ ಸ್ವತಃ ಒಂದಷ್ಟು ಭಾರವನ್ನು ಮಣ್ಣಿಗೂ ಸ್ಥಳಾಂತರಿಸುವಂತೆಯೂ ಮಾಡಬಹುದು.

ಜ್ಯಾಕ್‌ ಆರ್ಚ್‌ ಪರಂಪರೆ
ಈ ಹಿಂದೆ ಇದ್ದ “ಮದ್ರಾಸ್‌ ತಾರಸಿ’ ಸೂರುಗಳಲ್ಲಿ ಜ್ಯಾಕ್‌ ಆರ್ಚ್‌ಗಳ ಬಳಕೆ ಅತಿ ಹೆಚ್ಚಿದ್ದು, ನೂರು ವರ್ಷ ಕಳೆದರೂ ಹೀಗೆ ಕಟ್ಟಿರುವ ಮನೆಗಳು ಇಂದಿಗೂ ಗಟ್ಟಿಮುಟ್ಟಾಗಿವೆ. ರೂಫಿನಲ್ಲಿ ಸ್ಟೀಲ್‌ ಗರ್ಡರ್‌ಗಳನ್ನು ಬೀಮು- ತೊಲೆಗಳನ್ನಾಗಿ ಬಳಸಿ, ಇವುಗಳ ಮಧ್ಯೆ ಹೆಚ್ಚು ಎತ್ತರವಿರದ ಕಮಾನುಗಳನ್ನು ಕಟ್ಟಲಾಗುತ್ತಿತ್ತು. ಜ್ಯಾಕ್‌ ಆರ್ಚ್‌ಗಳಿಗೆ ಸಾಮಾನ್ಯವಾಗಿ ಮಾಮೂಲಿ ಇಟ್ಟಿಗೆಗಳನ್ನು ಇಲ್ಲ ಇವಕ್ಕೆಂದೇ ತಯಾರಿಸಿದ ಸುಟ್ಟ ಜೇಡಿ ಮಣ್ಣಿನ ಬಿಲ್ಲೆಗಳನ್ನು ಸುಣ್ಣದ ಗಾರೆಯೊಂದಿಗೆ ಬಳಸಲಾಗುತ್ತಿತ್ತು. ಈ ಕಮಾನುಗಳು ಸುಮಾರು ಎರಡರಿಂದ ನಾಲ್ಕು ಅಡಿಗಳಷ್ಟು ಮಾತ್ರ ಅಗಲ ಇರುತ್ತಿದ್ದು, ಉದ್ದಕ್ಕೆ ಗರ್ಡರ್‌ಗಳನ್ನು ಹಾಕಲಾಗುತ್ತಿತ್ತು. ಕಮಾನು ಮತ್ತೂ ಅಗಲ ಬೇಕೆಂದಾಗ, ಹೆಚ್ಚುವರಿಯಾಗಿ ಮೂರು ಇಲ್ಲ ನಾಲ್ಕು ಅಡಿಗೆ ಒಂದು ಸರಳುಗಳನ್ನು ಅಡ್ಡಡ್ಡಕ್ಕೆ ಬಳಸಲಾಗುತ್ತಿತ್ತು. ಹೀಗೆ ಮಾಡುವುದರಿಂದ, ಕಮಾನುಗಳು ಸ್ವಾಭಾವಿಕವಾಗೇ ಅಕ್ಕಪಕ್ಕಕ್ಕೆ ತಳ್ಳುವ ಗುಣ ಹೊಂದಿದ್ದು, ಇದನ್ನು ತಪ್ಪಿಸಲು ಸರಳುಗಳ ಬಂಧನ- ಟೈ ರಾಡುಗಳನ್ನು ಬಳಸಲಾಗುತ್ತಿತ್ತು.

ಜ್ಯಾಕ್‌ ಆರ್ಚ್‌ ಪ್ರಯೋಗ
ಸಾಮಾನ್ಯವಾಗಿ ಕಾಲಂಗಳಿಗೆ ಆಳವಾದ ಅಂದರೆ ಸುಮಾರು ಐದು ಅಡಿಗೂ ಹೆಚ್ಚು ಪಾಯವನ್ನು ಹಾಕಲಾಗುತ್ತದೆ, ಆದರೆ ಭಾರ ಹೊರದ ಗೋಡೆಗಳಿಗೆ ಸುಮಾರು ಮೂರು ಅಡಿ ಆಳವನ್ನು ಮಾತ್ರ ತೊಡಲಾಗುತ್ತದೆ. ಅಲ್ಲಿಗೆ ಈ ಎರಡೂ ಪಾಯಗಳ ಮಧ್ಯದ ವ್ಯತ್ಯಾಸ ಸುಮಾರು ಎರಡು ಅಡಿಗಳಷ್ಟಿದ್ದು, ಇದನ್ನು ಸರಿದೂಗಿಸಲು ಕಾಲಂ ಫುಟಿಂಗ್‌ನ ಮೇಲು ಮಟ್ಟದಿಂದ ಗೋಡೆಯ ಪಾಯವನ್ನು ಶುರುಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಹೆಚ್ಚುವರಿ ಬ್ಲಾಕ್ಸ್‌ ಹಾಗೂ ಭಾರ ಪಾಯದ ಮೇಲೆ ಬೀಳುತ್ತದೆ. ಆದುದರಿಂದ ನಾವು ಗೋಡೆಗೆ ಪಾಯ ಅಗಿಯಬೇಕಾದರೇನೇ ಕಮಾನಾಗಿ ಅಗೆದು, ಅದರ ಮೇಲೆ ಮಾಮೂಲಿ ಹಾಕುವಂತೆ ಐದು ಇಂಚು ಬೆಡ್‌ ಕಾಂಕ್ರಿಟ್‌ ಹಾಕಬೇಕು. ನಂತರ ಒಂದು ವರಸೆ ಕಾಂಕ್ರಿಟ್‌ ಬ್ಲಾಕ್‌ಗಳನ್ನು ಅಡ್ಡಡ್ಡಲಾಗಿ ಕಮಾನು ಆಕಾರದಲ್ಲಿ ಮೂಡಿಬಂದಿರುವ ಕಾಂಕ್ರಿಟ್‌ ಮೇಲೆ ಇರಿಸಿ, ಅದರ ಮೇಲೆ ಯಥಾಪ್ರಕಾರ 8 ಇಂಚಿನ ಕಾಂಕ್ರಿಟ್‌ ಬ್ಲಾಕ್‌ ಗೋಡೆಯನ್ನು ಕಟ್ಟಿಕೊಂಡು ಹೋಗಬಹುದು.

ಜ್ಯಾಕ್‌ ಆರ್ಚ್‌ ಲಾಭಗಳು
ಕಾಲಂಗೆ ಒಂದು, ಭಾರ ಹೊರದ ಗೋಡೆಗಳಿಗೆ ಮತ್ತೂಂದು ಪಾಯ ಎಂದಾಗದೆ, ಈ ಎರಡೂ ಬೆಸೆಯುವ ರೀತಿಯಲ್ಲಿ ಜ್ಯಾಕ್‌ ಆರ್ಚ್‌ಗಳು ಕಾರ್ಯನಿರ್ವಹಿಸುತ್ತವೆ. ಕೆಲಮೊಮ್ಮೆ “ಪಾರ್ಟಿಷನ್‌ ಗೋಡೆಗಳು ತಾನೆ, ಪ್ರತ್ಯೇಕ ಪಾಯ ಬೇಡ’ ಎಂದು ಮನೆಯ ಹೊರಗಿನ ಗೋಡೆಗಳಿಗೆ ಮಾತ್ರ ಸೂಕ್ತ ಪಾಯ ಹಾಕಿ ನಂತರ ಮಣ್ಣು ಭರ್ತಿಮಾಡಿ, 6 ಇಂಚು ಬೆಡ್‌ ಕಾಂಕ್ರಿಟ್‌ ಹಾಕಿ, ಅದರ ಮೇಲೆ ಒಳಗೋಡೆಗಳನ್ನು ಕಟ್ಟಿದರೆ, ಕೆಲಮೊಮ್ಮೆ ಬಿರುಕು ಬಿಡುವುದು ಇತ್ಯಾದಿ ಆಗಬಹುದು. ಜೊತೆಗೆ ನೆಲಹಾಸಿಗೆ ಹಾಕುವ ಬೆಡ್‌ ಕಾಂಕ್ರಿಟ್‌ ಮೇಲೆ ಹೆಚ್ಚು ಭಾರ ಬಿದ್ದರೆ, ಫ್ಲೋರ್ ಸಿಂಕ್‌ ಆಗುವುದು ಇತ್ಯಾದಿ ಆಗಬಹುದು. ಇದೆಲ್ಲವನ್ನೂ ತಪ್ಪಿಸಲು ನಾವು ಕಾಲಂನಿಂದ ಕಾಲಂಗೆ ಜ್ಯಾಕ್‌ ಆರ್ಚ್‌ ಬಳಸಬಹುದು

ಜ್ಯಾಕ್‌ ಆರ್ಚ್‌ ಬಳಕೆಯಿಂದ ಕಡೇಪಕ್ಷ 2 ಅಡಿಗಳಷ್ಟು ಎತ್ತರದ ಪಾಯವನ್ನು ಹೆಚ್ಚುವರಿಯಾಗಿ ಹಾಕುವುದನ್ನು ಸರಾಸರಿ ಲೆಕ್ಕದಲ್ಲಿ ಉಳಿಸಬಹುದು. ಯಾವುದೇ ಹೊಸ ಪ್ರಯೋಗ ಮಾಡುವ ಮೊದಲು ನುರಿತ ಆರ್ಕಿಟೆಕ್ಟ್ ಎಂಜಿನಿಯರ್‌ಗಳ ಸಲಹೆ ಪಡೆಯುವುದು ಅನಿವಾರ್ಯ.
ಹೆಚ್ಚುವರಿ ಮಾಹಿತಿಗೆ: 98441 32826

ಜ್ಯಾಕ್‌ ಆರ್ಚ್‌ ಕಟ್ಟೋದು ಹೇಗೆ?
ಕಿಟಕಿ ಬಾಗಿಲು ಇಲ್ಲ ಸೂರಿಗೆ ಜ್ಯಾಕ್‌ ಆರ್ಚ್‌ ಬಳಸಬೇಕು ಎಂದರೆ ಅದಕ್ಕೆ ವಿಶೇಷ ತಯಾರಿ- ಕಡೇಪಕ್ಷ ಕಮಾನು ಮಾಲು ಒಂದನ್ನು ತಯಾರು ಮಾಡಿಕೊಳ್ಳಬೇಕಾಗುತ್ತದೆ. ಆದರೆ, ನಾವು ಪಾಯದಲ್ಲಿ ಕಮಾನನ್ನು ಮಾಡುವುದರಿಂದ, ಗೋಡೆಯ ಕೆಳಗಿರುವ ಮಣ್ಣನ್ನೇ ಆರ್ಚ್‌ನಂತೆ ಸವರಿ, ಮಟ್ಟಸ ಮಾಡಿಕೊಂಡು, ಅದರ ಮೇಲೆ ಬೆಡ್‌ ಕಾಂಕ್ರಿಟ್‌ ಅನ್ನು ಸಹ ಕಮಾನಿನಂತೆಯೇ ಸುರಿದು ಗಟ್ಟಿಯಾಗಿ ದಿಮ್ಮಸ್ಸು ಮಾಡಿ ಕಾಂಕ್ರಿಟ್‌ ಬ್ಲಾಕ್‌ ಕಮಾನುಗಳನ್ನು ಶುರುಮಾಡಬಹುದು. ಮನೆಯ ಹೊರಗಿನ ಗೋಡೆಗಳು ಅನಿವಾರ್ಯವಾಗಿ ಮಣ್ಣಿನ ಕೆಳಗೆ ಕಡೇಪಕ್ಷ ಒಂದು ಇಲ್ಲ ಎರಡು ಅಡಿ ಹೋಗಬೇಕಾಗಿದ್ದರೂ ಮನೆಯ ಒಳಗಿನ ಗೋಡೆಗಳನ್ನು ಹೆಚ್ಚಾ ಕಡಿಮೆ ಮಣ್ಣಿನ ಮಟ್ಟದಿಂದ ಶುರುಮಾಡಿದರೂ ನಡೆಯುತ್ತದೆ. ಆದರೆ, ಈ ಕಮಾನುಗಳಿಗೆ ಆಧಾರವನ್ನು ಕಡ್ಡಾಯವಾಗಿ ಫುಟಿಂಗ್‌ಗಳ ಮೇಲಿಂದ ಇರುವಂತೆ ನೋಡಿಕೊಳ್ಳಬೇಕು.

ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.