ಜಾವಾ ಜಾಲಿ ರೈಡ್
Team Udayavani, Nov 25, 2019, 5:05 AM IST
ಹಳೆಯ ಕಾಲದಲ್ಲಿ ಜನಪ್ರಿಯವಾಗಿದ್ದ “ಜಾವಾ’ ಬೈಕು ಮತ್ತೆ ಮರುಹುಟ್ಟು ಪಡೆದುಕೊಂಡಿದೆ. ಆಟೋಮೊಬೈಲ್ ಸಂಸ್ಥೆ, “ಮಹೀಂದ್ರಾ ಅಂಡ್ ಮಹೀಂದ್ರಾ’, “ಜಾವಾ’ ಸಂಸ್ಥೆಯ ಮಾಲೀಕತ್ವ ವಹಿಸಿಕೊಂಡ ನಂತರ ಬಿಡುಗಡೆಯಾಗುತ್ತಿರುವ ಮೊದಲ ಬೈಕಿದು!
ಹಿಂದೊಂದು ಕಾಲವಿತ್ತು… ಅಲ್ಲೆಲ್ಲೋ ದೂರದಲ್ಲಿ ಯಾವುದೇ ಯಂತ್ರದ ಭರ್ಜರಿ ಸೌಂಡು ಕೇಳ್ತಿದೆ ಅಂದ್ರೆ, ಜನ ಓ ಅದಾ ಜಾವಾನೇ ಇರಬೇಕು ಅಂತಿದ್ರು. ಜಾವಾ ಸವಾರಿ ಅಂದ್ರೆನೇ ಹಾಗೆ, ಹಿಂದೆ ಅದೊಂದು ರೀತಿ ಪ್ರಸ್ಟೀಜ್ ಗೆ ಸಮನಾದದ್ದಾಗಿತ್ತು… ಜನಮಾನಸದಲ್ಲಿ ಉಳಿದಿದ್ದ ಇಂಥ ಜಾವಾ ಬೈಕು ನಂತರದಲ್ಲಿ ಅವರ ಮನಸ್ಸಿಂದ ದೂರ ಸರಿದಿತ್ತು. ಮಹೀಂದ್ರ ಕಂಪನಿ ಈ ಜಾವಾ ಕಂಪನಿಯನ್ನು ಖರೀದಿಸಿ ಕಳೆದ ವರ್ಷ ನ.15ರಂದೇ ಎರಡು ಹೊಸ ಜಾವಾ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈಗ, ಜಾವಾದ ಮೂರನೇ ಬೈಕ್ ಅನ್ನು ಇತ್ತೀಚೆಗಷ್ಟೇ ಮಹೀಂದ್ರಾ ಅಂಡ್ ಮಹೀಂದ್ರಾದ ಎಂ.ಡಿ ಆನಂದ್ ಮಹೀಂದ್ರಾ ಅನಾವರಣ ಮಾಡಿದ್ದಾರೆ.
ಇದರ ಹೆಸರು ಜಾವಾ ಪೇರಕ್
ಜಾವಾ, ತನ್ನ ಹೆಸರಿನ ಮುಂದೆ ಪೇರಕ್ ಎಂಬ ಪದವನ್ನು ಸೇರಿಕೊಂಡು ಮಾರುಕಟ್ಟೆಗೆ ಬರ್ತಿದೆ. 2020ರ ಜನವರಿ 1ರಿಂದ ಈ ಬೈಕಿನ ಬುಕ್ಕಿಂಗ್ ಆರಂಭವಾಗಲಿದೆ. ಆದರೆ, ಇದು ಜನರಿಗೆ ಸಿಗೋದು 2020ರ ಏಪ್ರಿಲ್ 2ರಂದು. ಸದ್ಯ ಬಿಎಸ್6ನೊಂದಿಗೆ ಬರುತ್ತಿರುವ ಈ ಬೈಕಿನಲ್ಲಿ ಆರು ಗೇರ್‌ಗಳಿವೆ.
ಬಾಬ್ಬರ್ ಶೈಲಿಯ ಬೈಕು
ಯುವಕರನ್ನೇ ದೃಷ್ಟಿಯಲ್ಲಿರಿಸಿಕೊಂಡು ಇದನ್ನು ರೂಪಿಸಲಾಗಿರು ಈ ಹೊಚ್ಚ ಹೊಸ ಜಾವಾ ಬೈಕು ಇದು ಬಾಬ್ಬರ್ ಶೈಲಿಯ ಬೈಕ್. ಬಾಬ್ಬರ್ ಶೈಲಿ ಎಂದರೆ, ಬೈಕ್ ಉದ್ದವಾಗಿದ್ದರೂ, ಎತ್ತರದಲ್ಲಿ ಮಾತ್ರ ಕಡಿಮೆ ಇರುವುದು. ಸದ್ಯ ರಸ್ತೆ ಮೇಲೆ ಓಡುತ್ತಿರುವ ಬುಲೆಟ್ ಬೈಕುಗಳೂ ಇದೇ ಮಾದರಿಯವು. ಇನ್ನೊಂದು ಚಾಪ್ಪರ್ ಶೈಲಿಯ ಬೈಕು. ಇವು ಸಾಂಪ್ರದಾಯಿಕವಾಗಿ ರೂಪಿತವಾಗಿರುವಂಥವು. ಅಂದರೆ, ಇದರಲ್ಲಿ ಸ್ಟೈಲಿಶ್ ಡಿಸೈನ್ ಸೇರಿದಂತೆ ಇನ್ನಿತರ ಎಲ್ಲಾ ಆಕರ್ಷಕ ಸಂಗತಿಗಳೂ ಇರುತ್ತವೆ. ಆದರೆ, ಬಾಬ್ಬರ್‌ನಲ್ಲಿ ಅಂಥ ಯಾವುದೇ ಆಕರ್ಷಣೆಯಾಗಲಿ, ಅತ್ಯಾಕರ್ಷಕ ವಿನ್ಯಾಸವಾಗಲಿ ಇರುವುದಿಲ್ಲ. ಸರಳವಾದ ವಿನ್ಯಾಸವೇ ಇದರ ವಿಶೇಷ. ಪೇರಕ್‌ನ ದರ – 2,20,000 ರೂ. (ಆನ್ ರೋಡ್ ಬೆಲೆ ಬದಲಾಗಬಹುದು). ಸದ್ಯ ಈ ಬೈಕ್ ಮಾರುಕಟ್ಟೆಗೆ ಬಿಡುಗಡೆಯಾಗದೇ ಇರುವ ಕಾರಣ. ಮೈಲೇಜ್ ಸೇರಿದಂತೆ ಇತರೆ ಯಾವುದೇ ವಿಷಯ ಬಯಲಾಗಿಲ್ಲ.
ಏನಿದು ಪೇರಕ್?
ಪೇರಕ್ ಎಂದರೇನು ಎಂಬ ಪ್ರಶ್ನೆಗೆ ಮಹೀಂದ್ರಾ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರಾ ಅವರೇ ಉತ್ತರ ನೀಡಿದ್ದಾರೆ. ಪೇರಕ್ ಎನ್ನುವುದು ಒಬ್ಬ ಸೂಪರ್ ಮ್ಯಾನ್ ಹೆಸರು. 1939ರಲ್ಲಿ ಜರ್ಮನಿಯ ನಾಝಿಗಳು ಚೆಕ್ ಗಣರಾಜ್ಯದ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡಾಗ, ಆ ದೇಶದ ರಾಜಧಾನಿ ಪ್ರಾಗ್‌ನಲ್ಲಿದ್ದ ಜನರನ್ನು ಕಾಪಾಡಿದ್ದು ಈ ಪೇರಕ್ ಅಂತೆ. ಆದರೆ, 1945ರಲ್ಲಿ ಕದನ ವಿರಾಮ ಘೋಷಣೆಯಾದ ಮೇಲೆ ಆತ ದಿಢೀರನೇ ನಾಪತ್ತೆಯಾಗಿದ್ದ. ಇಲ್ಲಿವರೆಗೂ ಅವನ್ಯಾರು, ಏನಾದ ಎಂಬ ವಿಷಯ ಯಾರಿಗೂ ಗೊತ್ತಿಲ್ಲ. ದಂತಕಥೆಯಾದ ಅವನ ಹೆಸರನ್ನೇ ಮೂಲವಾಗಿಟ್ಟುಕೊಂಡು ಇದಕ್ಕೆ ಪೇರಕ್ ಎಂಬ ಹೆಸರಿಲಾಗಿದೆ ಎಂದಿದ್ದಾರೆ ಆನಂದ್ ಮಹೀಂದ್ರಾ.
ಬೈಕಿನ ವಿಶೇಷಗಳು
ಎಮಿಷನ್ ಕಂಟ್ರೋಲ್ – ಬಿಎಸ್6
ತೈಲ ಸಂಗ್ರಹ ಸಾಮರ್ಥ್ಯ – 14 ಲೀ.
ಸಾಮರ್ಥ್ಯ – 334ಸಿಸಿ
ಸಿಲಿಂಡರ್- 1
ಬ್ರೇಕ್- ಡ್ನೂಯಲ್ ಚಾನೆಲ್ ಎಬಿಎಸ್
ಮಾರುತಿ ವ್ಯಾಗನಾರ್ ಹೊಸ ಮಾಡೆಲ್ ಬಿಡುಗಡೆ
ಕಳೆದ ಜೂನ್‌ನಲ್ಲಷ್ಟೇ ಮಾರುತಿ ವ್ಯಾಗನಾರ್ 1.2 ಲೀ. ಸಾಮರ್ಥ್ಯದ ಕಾರನ್ನು ಬಿಡುಗಡೆ ಮಾಡಿದ್ದ ಮಾರುತಿ ಸಂಸ್ಥೆ, ಈಗ 1 ಲೀ. ಸಾಮರ್ಥ್ಯದ ವ್ಯಾಗನಾರ್ ಕಾರನ್ನು ಬಿಡುಗಡೆ ಮಾಡಿದೆ. ಎರಡೂ ಕಾರುಗಳು ಬಿಎಸ್6 ಶ್ರೇಣಿಯದಾಗಿದ್ದು, ಮೂರನೇ ಪೀಳಿಗೆಯ ಕಾರುಗಳಾಗಿವೆ. ಇದರ ಬೆಲೆ 4.42 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.
ಈ ಕಾರು, ಪ್ರತಿ ಲೀ. ಪೆಟ್ರೋಲ್ ಗೆ 21.79 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಉಳಿದಂತೆ ಹಿಂದೆ ಇದ್ದ ಸುರಕ್ಷತಾ ಫೀಚರ್‌ಗಳಾದ ಇಬಿಡಿ ಜತೆಗೆ ಎಬಿಎಸ್, ಡ್ರೈವರ್ ಏರ್ ಬ್ಯಾಗ್, ಸ್ಪೀಡ್ ಅಲರ್ಟ್ ಸಿಸ್ಟಮ್, ರೇರ್ ಪಾರ್ಕಿಂಗ್ ಸೆನ್ಸರ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಡ್ರೈವರ್ ಮತ್ತು ಕೋ ಡ್ರೈವರ್ ಸೀಟ್ ಬೆಲ್ಟ… ರಿಮೈಂಡರ್‌ಗಳು ಇದರಲ್ಲೂ ಇವೆ.
-ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.