ಆಭರಣದ ಅರಮನೆ 


Team Udayavani, Apr 3, 2017, 4:40 PM IST

02-ISIRI-6.jpg

ಸಮಾಜದಲ್ಲಿ ವ್ಯಕ್ತಿಗೆ ಅಸ್ಮಿತೆಯನ್ನು, ಸ್ಥಾನ-ಮಾನ, ಭದ್ರತೆ, ಭಾವವನ್ನು ತಂದುಕೊಡುವುದು ವೃತ್ತಿ ಹಾಗೂ ಸಾಮಾಜಿಕ ವ್ಯವಸ್ಥೆ. ಅದರಡಿ ಕೋಟ್ಯಂತರ ಜೀವಿ ಪ್ರಭೇದಗಳ ನಡುವೆ ಎಲ್ಲ ಜೀವಿಗಳು ಬಾಳಿ ಬದುಕಲು, ತಮ್ಮ ಜೀವನದ ರಕ್ಷಣೆಗಾಗಿ ಒಂದಲ್ಲ ಒಂದು ರೀತಿ ಹೋರಾಟ ನಡೆಸುತ್ತಿರಬೇಕು. ಅಂತಹ ಹೋರಾಟ ನಡೆಸಿ ಬಂದವರಲ್ಲೊಬ್ಬ ಶ್ರೀ ಸಾಯಿ ಜ್ಯುವೆಲ್ಸ್‌ ಪ್ಯಾಲೇಸ್‌ ಮಾಲೀಕ 
ಟಿ.ಎ. ಸೆಂಥಿಲ್‌. 

“ಈಸಬೇಕು ಇದ್ದು ಜೈಸಬೇಕು’ ಎಂಬ ಮಂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಟಿ.ಎ. ಸೆಂಥಿಲ್‌ ಅವರು ಕುಗ್ರಾಮದಲ್ಲಿ ಹುಟ್ಟಿ ಬೆಂಗಳೂರಿನ ಚಿನ್ನಾಭರಣ ಕ್ಷೇತ್ರದ ಮಹಾಸಾಗರದಲ್ಲಿ ಈಜಿ ದಡ ಸೇರಿರುವ ಉತ್ಸಾಹಿ ಯುವ ವರ್ತಕ. ನಮಗೆ ಏನು ಸಿಗಬೇಕೋ ಅದನ್ನು ಭಗವಂತ ಕೊಟ್ಟೇ ಕೊಡುತ್ತಾನೆ. ‘ಭಗವಾನ್‌ ಕಿ ಘರ್‌ ಮೇ ದೇರ್‌ ಹೈ; ಮಘರ್‌ ಅಂಧೇರ್‌ ನಹಿ’ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇದನ್ನು ನಂಬಿಕೊಂಡು ನಾವು ಸರಿದಾರಿಯಲ್ಲಿ ಹೋಗಬೇಕಷ್ಟೇ. ಈ ನನ್ನ ವೃತ್ತಿ ಬದುಕು ನನಗೆ ಬಯಸದೆ ಬಂದಂಥ ಭಾಗ್ಯ. ಅದು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಚಿನ್ನಾಭರಣ ವ್ಯಾಪಾರಿ ಟಿ.ಎ. ಸೆಂಥಿಲ್‌.

ದೇವರು, ಗುರು, ಹಿರಿಯರಲ್ಲಿ ಭಕ್ತಿ, ಗೌರವ ಇರಿಸಿಕೊಂಡು ಬೆಳೆದಿರುವ ಸೆಂಥಿಲ್‌ ಅವರು ಒಬ್ಬ ಅಪ್ಪಟ ವ್ಯಾಪಾರಿಯೆಂಬುದೇನೋ ನಿಜ. ಆದರೆ, ಇವೆಲ್ಲದರ ನಡುವೆ ಅವರೊಬ್ಬ ಸಹೃದಯಿ, ನಿಗರ್ವಿ, ಪರೋಪಕಾರಿ, ಸಿನಿಮಾ, ಸಾಹಿತ್ಯ, ಸಂಸ್ಕೃತಿ, ಅಧ್ಯಾತ್ಮ
ಇವುಗಳನ್ನು ಮೈಗೂಡಿಸಿಕೊಂಡು ಬೆಳೆದವರು. ಸಕಲವೂ ಅವನಿಂದ, ಎಲ್ಲದಕ್ಕೂ ಅವನೇ ಕಾರಣ, ಸರ್ವಸ್ವವೂ ಅವನಿಗೇ ಸಮರ್ಪಿತವೆಂದು ಸದಾ ಶ್ರೀ ಸಾಯಿನಾಥನನ್ನು ಸ್ಮರಿಸುತ್ತಾ ಕಾಯಕದಲ್ಲಿ ನಿರತರಾಗಿದ್ದಾರೆ. 

ಪ್ರಾಥಮಿಕ ಶಿಕ್ಷಣಕ್ಕೆ ನಾಸ್ತಿ ಹೇಳಿದ ಸೆಂಥಿಲ್‌…
ನೆರೆಯ ತಮಿಳುನಾಡಿನ ಕುಗ್ರಾಮದ ದಿವಂಗತ ಅಮೃತ ಕಂಠೇಶಯ್ಯ ಶೆಟ್ಟಿ ಹಾಗೂ ಶ್ರೀಮತಿ ಧನಲಕ್ಷ್ಮೀಯವರ ಎರಡನೇ ಪುತ್ರ ಟಿ.ಎ. ಸೆಂಥಿಲ್‌ ಅವರಿಗೆ ಅಷ್ಟಾಗಿ ವಿದ್ಯೆ ತಲೆಗೆ ಹತ್ತದಿದ್ದರೂ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣಮುಗಿಸಿ, ಎಂಟನೇ ವರ್ಷದಲ್ಲೇ ಊರನ್ನು ಬಿಟ್ಟು ಬೆಂಗಳೂರಿಗೆ ಬಂದರು. ತಂದೆಯವರು ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದರಿಂದ ಸೆಂಥಿಲ್‌ ಅವರಿಗೆ ಬಾಲ್ಯದಿಂದಲೇ ವ್ಯವಹಾರ ಜ್ಞಾನ ಬೆಳೆದಿತ್ತು. ಅಂದಿನ ಕುಟುಂಬದ ಆರ್ಥಿಕ ಸ್ಥಿತಿಯೂ ಸರಿಯಿರಲಿಲ್ಲ ಹಾಗೂ ಶಾಲೆಗೆ ಹೋಗಲು ಇಷ್ಟವಿಲ್ಲದ ಸೆಂಥಿಲ್‌ ವಿದ್ಯೆ ನಾಸ್ತಿ ಹೇಳಿ ಸಹೋದರಿಯರ ನೆರವಿನೊಂದಿಗೆ ಬೆಂಗಳೂರು ಸೇರಿದರು. ಬೆಂಗಳೂರು ನಗರಕ್ಕೆ ಕಾಲಿಟ್ಟಾಗ ಬೆಂಕಿಯಿಂದ ತೆಗೆದು ಬಾಣಲೆಗೆ ಹಾಕಿದಂತಾಯ್ತು.

ಹೊಸ ಊರು, ಹೊಸ ವಾತಾವರಣದ ನಡುವೆ ಸಹೋದರಿಯರೊಟ್ಟಿಗೆ ಬೆಂಗಳೂರಲ್ಲಿ ನೆಲಸಲು ಶುರು ಮಾಡಿದರು. ಜೀವನ ದಾರಿ ಕಂಡುಕೊಳ್ಳಬೇಕಾಗಿದ್ದರಿಂದ ಅವೆನ್ಯೂ ರಸ್ತೆಯ ಚಿನಿವಾರಪೇಟೆ ದಾರಿ ಹಿಡಿಯಬೇಕಾಯಿತು. ದೊಡ್ಡ ಚಿನ್ನದ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿದ ಸೆಂಥಿಲ್‌ ಅವರಿಗೆ ಅಂದಿನ ಸಂಬಳ ಏನೇನಕ್ಕೂ ಸಾಲುತ್ತಲೇ ಇರಲಿಲ್ಲ. ಆದರೂ ಕಷ್ಟಪಟ್ಟು ಅದರಲ್ಲೇ ಸ್ವಲ್ಪ ಹಣ ಉಳಿಸುತ್ತಾ ಬಂದರು. ಪ್ರತಿ ದಿನ ಬೆಳಗ್ಗೆ ಎದ್ದು ತಾನು ವಾಸವಿದ್ದ ಸಹೋದರಿಯ ಮನೆಯ ಸಣ್ಣ ಪುಟ್ಟ ಕೆಲಸ, ಕಾರ್ಯಗಳನ್ನು ಮುಗಿಸಿ ಸಮಯಕ್ಕೆ ಸರಿಯಾಗಿ ಅವೆನ್ಯೂ ರಸ್ತೆ ಅಂಗಡಿ ಸೇರಿಕೊಳ್ಳುತ್ತಿದ್ದರು.

ಸತತ ಐದಾರು ವರ್ಷಗಳು ಆ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿದ ಅವರು ಕಾರ್ಯ ನಿರ್ವಹಿಸುತ್ತಿದ್ದ ಚಿನ್ನದಂಗಡಿ ಮಾಲೀಕರ
ಸಹಕಾರ, ಪ್ರೀತಿಯಿಂದ ಕೆಲಸ ಕಲಿಯಲು ಅನುಕೂಲವಾಯಿತು. ಒಬ್ಬ ಗುರುವಾಗಿ ವ್ಯಾಪಾರದ ಜ್ಞಾನವನ್ನು ತಿಳಿಸಿಕೊಟ್ಟರು.
ಚಿನ್ನಾಭರಣ ಪೂರೈಕೆಯಿಂದ ಅಂಗಡಿವರೆಗೆ: ಅಂದಿನ ದಿನಗಳಲ್ಲಿ ಅಂಗಡಿ ಮಾಲೀಕರು ಚಿನ್ನಾಭರಣಗಳನ್ನು ಅಕ್ಕಸಾಲಿಗರಿಗೆ ಕೊಟ್ಟು ಮಾಡಿಸುತ್ತಿದ್ದರು. ಇದನ್ನು ಮನಗಂಡ ಸೆಂಥಿಲ್‌ ಅವರು ಮಾಲೀಕರ ಅನುಮತಿ ಪಡೆದು ತಾನೇ ಚಿನ್ನಾಭರಣಗಳನ್ನು ತಯಾರು ಮಾಡಿಸಿ ಅಂಗಡಿಗೆ ಪೂರೈಸಲು ಶುರು ಮಾಡಿದರು. ಹಂತ ಹಂತವಾಗಿ ಚಿನ್ನಾಭರಣ ಪೂರೈಕೆ ವ್ಯಾಪಾರ ಕುದುರಿದ್ದಲ್ಲದೆ, ಹಣ ಸೇರುತ್ತಾ ಬಂತು. ಇದರಿಂದ ಪ್ರೇರಿತರಾದ ಸೆಂಥಿಲ್‌ ಒಂದು ಮೊತ್ತ ಒಟ್ಟುಗೂಡಿದ ಮೇಲೆ ಸಂಬಂಧಿಕರು, ಗೆಳೆಯರ ಸಹಾಯ ಪಡೆದು ಹಾಗೂ ತಮ್ಮನ್ನ ಬೆಳೆಸಿದ ಗುರುಗಳ ಅಪ್ಪಣೆ ಪಡೆದು ಸ್ವಂತಕ್ಕೆ ಒಂದು ಸಣ್ಣ ಚಿನ್ನದ ಅಂಗಡಿ ಮಾಡಿದರು. ಚಿನ್ನಾಭರಣ ಮಾರುಕಟ್ಟೆಯ ಜ್ಞಾನವನ್ನು ಪಡೆದ ಸೆಂಥಿಲ್‌ ಅವರು ಅಣ್ಣನ ಜೊತೆಗೂಡಿ ಬಸವನಗುಡಿ ಭಾಗದ ಡಿ.ವಿ.ಗುಂಡಪ್ಪ ರಸ್ತೆಯಲ್ಲಿ 20 ಅಡಿ ಉದ್ದ, 10 ಅಡಿ ಅಗಲದ ಸಣ್ಣ ಅಂಗಡಿಯೊಂದನ್ನು ತೆರೆದರು. ಅದಕ್ಕೆ ಶ್ರೀ ಸಾಯಿ ಜ್ಯುವೆಲರ್ ಎಂದು ನಾಮಕರಣವನ್ನು ಮಾಡಿದರು.

ಬಸವನಗುಡಿ, ಡಿವಿಜಿ ರಸ್ತೆ, ಗಾಂಧಿಬಜಾರ್‌ ಹಾಗೂ ಸುತ್ತಮುತ್ತಲಿನ ಗ್ರಾಹಕರ ಒಲವನ್ನು, ವಿಶ್ವಾಸವನ್ನು ಗಳಿಸಿದ ಸೆಂಥಿಲ್‌ 
ಅವರು ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದರು. ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಯ್ತು. ವ್ಯಾಪಾರ ಉತ್ತಮ 
ಮಟ್ಟ ತಲುಪಿತು. ಆದರೆ, ಅಂಗಡಿಯ ವಿಸ್ತೀರ್ಣದಲ್ಲಿ ಕೊರತೆ ಕಂಡುಬಂತು. ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಜಾಗ ಸಾಕಾಗದಿದ್ದಾಗ ಇದೇ ಬೀದಿಯಲ್ಲಿ ಬೃಹತ್‌ ಮಳಿಗೆ ತೆರೆದರು. ಅಲ್ಲಿಂದ ಮುಂದುವರಿದು ಪದ್ಮನಾಭನಗರದ ಮುಖ್ಯ ರಸ್ತೆಯಲ್ಲಿ ಬೃಹತ್‌ ಮಳಿಗೆ ಆರಂಭಿಸಿ ತಮ್ಮ ಕಾಯಕ ಮುಂದುವರಿಸಿದ್ದಾರೆ. 

ಶ್ರೀ ಸಾಯಿ ಜ್ಯುವೆಲ್ಸ್‌ ಪ್ಯಾಲೇಸ್‌ ಸ್ಥಾಪನೆ:
ಬೆಂಗಳೂರು ದಕ್ಷಿಣ ಭಾಗದ ಪ್ರಮುಖ ಬಡಾವಣೆ ಪದ್ಮನಾಭನಗರದ ಸುತ್ತಮುತ್ತಲ ಜನತೆಗೆ ಅನುಕೂಲವಾಗಲೆಂದು ಅತ್ಯಾಧುನಿಕ ಬೃಹತ್‌ ಕಟ್ಟದಲ್ಲಿ ಶ್ರೀ ಸಾಯಿ ಜ್ಯುವೆಲ್ಸ್‌ ಪ್ಯಾಲೇಸ್‌ ಹಾಗೂ ಪಾರ್ಟಿ ಹಾಲ್‌ ಆರಂಭಿಸಿದರು. ಚಿನ್ನಾಭರಣ ಕ್ಷೇತ್ರದಲ್ಲಿ ಅಪಾರ ಅನುಭವ ಗಳಿಸಿರುವ ಸೆಂಥಿಲ್‌ ಅವರು ಗ್ರಾಹಕರ ಹಾಗೂ ಮಾರುಕಟ್ಟೆಯ ಏರಿಳಿತಕ್ಕೆ ತಕ್ಕಂತೆ ಆಭರಣಗಳನ್ನು ಮಾರಾಟ
ಮಾಡುತ್ತಿದ್ದಾರೆ. ಗ್ರಾಹಕರ ಆಕರ್ಷಣೆಗಾಗಿ ವಿಶೇಷ ರಿಯಾಯಿತಿ, ಹಬ್ಬ ಹರಿದಿನಗಳಲ್ಲಿ ವಿಶೇಷ ಕೊಡುಗೆಗಳು, ಯೋಜನೆಗಳನ್ನು ರೂಪಿಸಿ ಗ್ರಾಹಕರ ನಂಬಿಕೆ, ವಿಶ್ವಾಸವೇ ಬಂಡವಾಳವಾಗಿಸಿಕೊಂಡಿದ್ದಾರೆ.

ವ್ಯಾಪಾರಂ ದ್ರೋಹ ಚಿಂತನಂ ತತ್ವಕ್ಕೆ ವಿರುದ್ಧವಾಗಿ ದೈನಂದಿನ ಚಿನ್ನದ ಬೆಲೆಯಲ್ಲಿ ಉಂಟಾಗುವ ಏರಿಳಿತವನ್ನು ಗ್ರಾಹಕರಿಗೆ ತಿಳಿಯುವಂತೆ ಪ್ರದರ್ಶಿಸುತ್ತಾ, ಪಾರದರ್ಶಕ ವ್ಯವಹಾರ ನಡೆಸುತ್ತಿದ್ದಾರೆ. ಅದೇ ರೀತಿ ಹಾಲ್‌ಮಾರ್ಕ್‌ ಚಿನ್ನದೊಡವೆಗಳು, ಪ್ರಮಾಣೀಕೃತ ವಜ್ರದೊಡವೆಗಳು, ಪ್ಲಾಟಿನಂ ಹಾಗೂ ಉತ್ತಮ ಬೆಳ್ಳಿ ವಸ್ತುಗಳ ಮೇಲೆ ಗ್ಯಾರಂಟಿ ನೀಡುವ ಮೂಲಕ ಗ್ರಾಹಕರ ನಂಬಿಕೆಗೆ ಪಾತ್ರರಾಗಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂಥ ಗುಣಮಟ್ಟದ ಲೈಟ್‌ ವೆಯಿಟ್‌ ಜ್ಯುವೆಲ್ಸ್‌, ಫ್ಯಾಷನ್‌ ಜ್ಯುವೆಲರಿ, ಟ್ರೆಡಿಷನಲ್‌ ಜ್ಯುವೆಲರಿ, ಎತ್ನಿಕ್‌ ಜ್ಯುವೆಲರಿ ಮುಂತಾದ ಚಿನ್ನಾಭರಣಗಳು, ಪ್ಲಾಟಿನಂ, ವಜ್ರದ ಒಡವೆಗಳು, ಬೆಳ್ಳಿ ಆಭರಣ ಹಾಗೂ ವಸ್ತುಗಳ ಬೃಹತ್‌ ಖಜಾನೆ ಹೊಂದಿದ್ದಾರೆ.

ಪಾರ್ಟಿ ಹಾಲ್‌ ಪ್ರಾರಂಭ
ಬಂಗಾರದ ಮಾರಾಟದ ಜೊತೆ, ಇದೇ ಕಟ್ಟಡದಲ್ಲಿ ಸಣ್ಣ ಪಾರ್ಟಿ ಹಾಲ್‌ ಕೂಡ ಮಾಡಿದ್ದಾರೆ. ವಿವಾಹ ನಿಶ್ಚಿತಾರ್ಥ, ಹುಟ್ಟಿದಬ್ಬ,
ನಾಮಕರಣ ಮುಂತಾದ ಕಾರ್ಯಕ್ರಮಗಳನ್ನು ಆಚರಿಸಲು ಅನುಕೂಲವಾಗುವಂತ ಐಷಾರಾಮಿ ಪಾರ್ಟಿ ಹಾಲ್‌ ಅನ್ನು 
ಆರಂಭಿಸಿದ್ದಾರೆ.

ಶ್ರೀ ಸಾಯಿ ಸಿನಿಮಾ
ಸೆಂಥಿಲ್‌ ಅವರಿಗೆ ಬಾಲ್ಯದಿಂದಲೇ ಭಕ್ತಿ ಚಿತ್ರ ನೋಡುವುದು, ಭಕ್ತಿಗೀತೆಗಳನ್ನು ಕೇಳುವುದೆಂದರೆ ಬಹಳ ಇಷ್ಟ. ಇನ್ನೂ ಶಿರ್ದಿ
ಸಾಯಿಬಾಬಾರ ಪರಮ ಭಕ್ತ. ಆದ್ದರಿಂದ ಅವರ ನೆನಪಿಗಾಗಿ ಶ್ರೀ ಸಾಯಿ ಎಂಬ ಭಕ್ತಿ ಪ್ರಧಾನ ಸಿನಿಮಾ ನಿರ್ಮಾಣ ಮಾಡಿದ್ದಲ್ಲದೆ, ಆ
ಚಿತ್ರದಲ್ಲಿ ನಟನೆಯನ್ನೂ ಮಾಡಿದ್ದಾರೆ. ಜೊತೆಯಲ್ಲಿ ಓಂಕಾರ ಸ್ವರೂಪ ಶ್ರೀ ಅಯ್ಯಪ್ಪನೆಂದರೂ ಕೂಡ ಇಷ್ಟ ಅವರಿಗೆ. ಇದರ ಜೊತೆಯಲ್ಲಿ ತಾಯಿ- ತಂದೆ, ಗೆಳೆತನ, ರೈತರ, ಕನ್ನಡನಾಡಿನ ಬಗ್ಗೆ ಹಾಡನ್ನು ರಚನೆ ಮಾಡಿಸಿದ್ದಾರೆ. ಸದ್ಯದಲ್ಲಿ ಅದನ್ನು ಬಿಡುಗಡೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸಮಾಜ ಸೇವೆ ಸಮಾಜಸೇವೆ ಎಂಬುದು ಒಂದು ಕೈಯಿಂದ ಕೊಟ್ಟದ್ದು, ಮತ್ತೂಂದು ಕೈಗೂ ತಿಳಿಯಬಾರದು ಎನ್ನುವ ಸೆಂಥಿಲ್‌ ಅವರಿಗೆ ಸಹಾಯ ಮಾಡಿದ್ದನ್ನು ಪ್ರಚಾರ ಪಡೆಯುವ ಇಷ್ಟವಿಲ್ಲ. ತಮ್ಮದೇ  ವ್ಯವಸ್ಥೆಯಡಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. 

ಗೋಪಾಲ್‌ ತಿಮ್ಮಯ್ಯ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.