ನಿಮ್ಮ ಹೊಟ್ಟೆಗೂ ಸೇರಲಿ ಹೊಟ್ಟೆನಂಜಪ್ಪನ ಮೈಸೂರು ಪಾಕ್‌-ಖಾರ 


Team Udayavani, Apr 2, 2018, 5:41 PM IST

nimma.jpg

ಮೈಸೂರು ಪಾಕ್‌, ಖಾರ ಮಂಡಕ್ಕಿ ತಿಂದರೆ ದಾವಣಗೆರೆಯ ವಿಜಯಲಕ್ಷ್ಮಿ ರಸ್ತೆಯಲ್ಲಿರುವ ಹೊಟ್ಟೆ ನಂಜಪ್ಪನ ಅಂಗಡಿಯಲ್ಲೇ ತಿನ್ಬೇಕು… ಎಂಬ ಮಾತು ದಾವಣಗೆರೆ ಸುತ್ತಮುತ್ತಲಿನ ಭಾಗದಲ್ಲಿ ಜನಜನಿತ.  ಹೊಟ್ಟೆ ನಂಜಪ್ಪ ಅಂಗಡಿ ಖಾರ, ಮಂಡಕ್ಕಿ, ಹತ್ತಿಕಾಯಿ, ಮೈಸೂರು ಪಾಕ್‌, ಬೂಂದಿಗೆ ಅನ್ವರ್ಥ ನಾಮ. ಆ ಅಂಗಡಿಯ ಮೈಸೂರು ಪಾಕ್‌, ಖಾರದ ರುಚಿಯ ಸವಿದವರೇ ಬಲ್ಲರು.

ಹೊಸದಾಗಿ ನೆಂಟಸ್ತನ ಬೆಳೆಸಿದವರು, ದಾವಣಗೆರೆಯ ಹುಡುಗಿಯನ್ನ ಮದುವೆ ಮಾಡಿಕೊಂಡವರು, ಮನೆಗೆ ಬರುವಾಗ ಹೊಟ್ಟೆ ನಂಜಪ್ಪನ ಅಂಗಡಿಯ ಮೈಸೂರು ಪಾಕ್‌, ಖಾರ ತರೋದನ್ನ ಮಾತ್ರ ಮರಿಬೇಡಿ ಎಂದು ಯಾವುದೇ ಮುಲಾಜಿಲ್ಲದೆ ಮನವಿ ಮಾಡಿಕೊಂಡಿರುವ ಉದಾಹರಣೆಗಳಿವೆ. ಅಂದರೆ, ದಾವಣಗೆರೆಯಲ್ಲಿ ತಯಾರಾಗುವ ಮೈಸೂರ್‌ ಪಾಕ್‌ ಖಾರದ ರುಚಿ ಹೇಗಿರಬಹುದೂ ಲೆಕ್ಕ ಹಾಕಿ. 

ದಾವಣಗೆರೆಯಿಂದ ಯಾರಾದರೂ ಅಮೆರಿಕಾ, ದುಬೈ, ಇಂಗ್ಲೆಂಡ್‌ಗೆ ಹೊರಟರು ಎಂದರೆ ಅವರು ಹೊಟ್ಟೆ ನಂಜಪ್ಪನ ಅಂಗಡಿಯ ತಿನಿಸುಗಳ ಜೊತೆಯಲ್ಲೇ ಫ್ಲೆ$çಟ್‌ ಹತ್ತುತ್ತಾರೆ.  ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್‌ಗೂ ಈ ಊರಿನ ತಿಂಡಿಗಳು ರವಾನೆ ಆಗುತ್ತವೆ.  ಒಂದರ್ಥದಲ್ಲಿ ಹೊಟ್ಟೆ ನಂಜಪ್ಪನ ಅಂಗಡಿಯ ಮೈಸೂರು ಪಾಕ್‌, ಖಾರದ ರುಚಿ ಸೀಮಾತೀತ. 

ಮೈಸೂರು ಪಾಕ್‌ ಬಾಯಲ್ಲಿಟ್ಟುಕೊಂಡ ತಕ್ಷಣಕ್ಕೆ ಕರಗಿಯೇ ಹೋಗುತ್ತದೆ. 20-25 ದಿನ ಇಟ್ಟರೂ ಕೆಡುವುದಿಲ್ಲ. ಜೊತೆಗೆ ರುಚಿಯಲ್ಲಿ ಯಾವುದೇ ವ್ಯತ್ಯಾಸವೂ ಆಗೊಲ್ಲ. ಅನೇಕರು ಮೈಸೂರು ಪಾಕ್‌ನ್ನು ಬಿಸಿ ಮಾಡಿಕೊಂಡು, ತುಪ್ಪ ಹಾಕಿಕೊಂಡು ಚಪ್ಪರಿಸುತ್ತಾರೆ.  

ಇವರೆಲ್ಲಾ ಬಂದಿದ್ದರು: ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ, ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಎಚ್‌. ಆಂಜನೇಯ, ಶಾಸಕ ಶಾಮನೂರು ಶಿವಶಂಕರಪ್ಪ… ಒಳಗೊಂಡಂತೆ ಅನೇಕರು ಹೊಟ್ಟೆ ನಂಜಪ್ಪನ ಅಂಗಡಿಯ ಖಾರ, ಮಂಡಕ್ಕಿ, ಹತ್ತಿಕಾಯಿ, ಮೈಸೂರು ಪಾಕ್‌, ಬೂಂದಿಯ ರುಚಿಗೆ ಮನ ಸೋತವರು.

ಹೊಟ್ಟೆ ನಂಜಪ್ಪನ ತಿಂಡಿ ಅಂಗಡಿ ಪ್ರಾರಂಭವಾಗಿದ್ದು ಸ್ವಾತಂತ್ರ ಪೂರ್ವದಲ್ಲಿ 1941ರಲ್ಲಿ. ಅಜ್ಜಂಪುರ ಮೂಲದ ನಂಜಪ್ಪ ಶೆಟ್ಟರು ತಿಂಡಿ ಅಂಗಡಿ ಪ್ರಾರಂಭಿದರು.  ಅವರಿಗೆ ಹೊಟ್ಟೆ ಇದ್ದ ಕಾರಣಕ್ಕಾಗಿಯೇ ಹೊಟ್ಟೆ ನಂಜಪ್ಪನ ಅಂಗಡಿ ಎಂದು ಕರೆಯಲಾಗುತ್ತಿತ್ತು. ನಂಜಪ್ಪಶೆಟ್ಟರು ಮರಣ ಹೊಂದಿ 56 ವರ್ಷಗಳೇ ಕಳೆದಿವೆ. ಈ ಕ್ಷಣಕ್ಕೂ ಹೊಟ್ಟೆ ನಂಜಪ್ಪ ಅಂಗಡಿ ಎಂದರಷ್ಟೇ ಜನರಿಗೆ ಗೊತ್ತಾಗೋದು. ನಂಜಪ್ಪಶೆಟ್ಟರ ನಂತರ ಅವರ ಮಗ ಪರಮೇಶ್ವರಶೆಟ್ಟಿ, ಈಗ ಪರಮೇಶ್ವರಶೆಟ್ಟರ ಮಗ ಎ.ಪಿ. ಕಾಶೀನಾಥ್‌ಶೆಟ್ಟಿ ಅಂಗಡಿ ನಡೆಸುತ್ತಿದ್ದಾರೆ. 

ಹೊಟ್ಟೆ ನಂಜಪ್ಪನ ಅಂಗಡಿಯ ವಿಶೇಷ ಎಂದರೆ ತೂಕದ ಲೆಕ್ಕದಲ್ಲೇ ಮಂಡಕ್ಕಿ, ಹತ್ತಿಕಾಯಿ, ಮೈಸೂರು ಪಾಕ್‌, ಬೂಂದಿ ಕೊಡುವುದು. 5 ರೂಪಾಯಿ ಕೊಟ್ಟು ಮಂಡಕ್ಕಿ, ಹತ್ತಿಕಾಯಿ, ಬೂಂದಿ ತೆಗೆದುಕೊಂಡರೂ ತೂಕ. ಕೆಜಿಗಟ್ಟಲೆ ತೆಗೆದುಕೊಂಡರೂ ತೂಕದ ಲೆಕ್ಕಾಚಾರದಲ್ಲೇ ಕೊಡುತ್ತಾರೆ. ಅಂತಿಮ ವರ್ಷದ ಬಿ.ಕಾಂ ವರೆಗೆ ಓದಿರುವ ಕಾಶೀನಾಥ್‌ಶೆಟ್ಟಿಯವರೇ ಈಗಲೂ ಮೈಸೂರುಪಾಕ್‌, ಖಾರ, ಹತ್ತಿಕಾಯಿ, ಬೂಂದಿ ತಯಾರಿಸುತ್ತಾರೆ.

ಅವರು ಈ ತಿನಿಸುಗಳನ್ನು ತಯಾರಿಸುವಾಗ ಅವರ ಅಂಗಡಿಯ ಕೆಲಸಗಾರರಿಗೂ ನೋ ಎಂಟ್ರಿ. ತಂದೆ ಪರಮೇಶ್ವರ ಶೆಟ್ಟಿ ಹೇಳಿಕೊಟ್ಟಿರುವ ರುಚಿಯ ಟ್ರಿಕ್‌ ಬೇರೆ ಯಾರಿಗೂ ಗೊತ್ತಾಗದಂತೆ ಸೀಕ್ರೇಟ್‌ ಮೆಂಟೈನ್‌ ಮಾಡ್ತೀನಿ’. “ನಮ್‌ ಅಂಗಡಿಯ ತಿಂಡಿಗಳ ಟೇಸ್ಟ್‌ ಪ್ರಾರಂಭವಾದಾಗನಿಂದ ಈತನಕ ಚೇಂಜ್‌ ಮಾಡಿಲ್ಲ. ಹಂಗಾಗಿಯೇ ನಮ್‌ ಅಂಗಡಿಗೆ ಜನ ಬಹಳ ವಿಶ್ವಾಸ ಇಟ್ಟುಕೊಂಡು ಬರುತ್ತಾರೆ. ನಮಗೆ ದುಡ್ಡು ಮುಖ್ಯ ಅಲ್ಲ. ಟೇಸ್ಟ್‌. ಜನರ ಪೀತಿ, ನಂಬಿಕೆ ಮುಖ್ಯ ಎನ್ನುತ್ತಾರೆ. 58 ವರ್ಷದ ಕಾಶೀನಾಥಶೆಟ್ಟಿ.

ಇಂದಿನ ವ್ಯಾಪಾರಿ ಮನೋಭಾವದ ದಿನದಲ್ಲೂ ಹೊಟ್ಟೆ ನಂಜಪ್ಪನ ಅಂಗಡಿಗೆ ಹೋಗುವ ಚಿಕ್ಕ ಮಕ್ಕಳಿಗೆ ಫೀಯಾಗಿ ಒಂದು ಹಿಡಿ ಮಂಡಕ್ಕಿ, ಖಾರ, ಸ್ವಲ್ಪ ಮೈಸೂರುಪಾಕ್‌, ಬೂಂದಿ ಸಿಕ್ಕುತ್ತದೆ. ಅಂದ ಹಾಗೆ, ಅಂಗಡಿ ಓಪನ್‌ ಆಗೋದು ಮಧ್ಯಾಹ್ನ 3.30 ರಿಂದ ಸಂಜೆ 4.30ರವರೆಗೆ. ಸಂಜೆ 6.30ರಿಂದ 7.30ರ ವರೆಗೆ ಮಾತ್ರ. ಮಂಗಳವಾರ ರಜಾ.

* ರಾ.ರವಿಬಾಬು

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.