ಕ್ರೇಜಿಗಳ ಸಖೀ ಕವಾಸಕಿ
Team Udayavani, Oct 22, 2018, 12:48 PM IST
ಜಪಾನ್, ಅಮೆರಿಕ, ಫಿಲಿಪ್ಪೀನ್ಸ್, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಥಾಯ್ಲೆಂಡ್‌ಗಳಲ್ಲಿ ತನ್ನ ಪ್ರಮುಖ ಉತ್ಪಾದನಾ ಪ್ಲಾಂಟ್‌ಗಳನ್ನು ಹೊಂದಿರುವ ಕವಾಸಕಿ ಇದೀಗ ಭಾರತೀಯ ಮಾರುಕಟ್ಟೆಗೆ ಮಗದೊಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ “ಝಡ್- 650′ ಬೈಕನ್ನು ಪರಿಚಯಿಸಿದೆ. ರೇಸ್ ಬೈಕ್ ಕ್ರೇಜ್ ಉಳ್ಳವರನ್ನು ಗಮನದಲ್ಲಿರಿಸಿಕೊಂಡು ರೂಪುಗೊಂಡಿರುವ ಈ ಬೈಕ್‌ನಲ್ಲಿ ಹಲವು ವೈಶಿಷ್ಟಗಳಿವೆ.
ಭಾರತದ ಆಟೋಮೊಬೈಲ್ ಕ್ಷೇತ್ರ ವಿಶೇಷವಾದ ಇತಿಹಾಸ ಹೊಂದಿದೆ. ದೇಶ- ವಿದೇಶಗಳ ಬಹುತೇಕ ವಾಹನ ತಯಾರಿಕಾ ಕಂಪನಿಗಳು ಭಾರತದ ಆಟೋಮೊಬೈಲ್ ಮಾರುಕಟ್ಟೆಯನ್ನು ಒಂದಲ್ಲಾ ಒಂದು ರೀತಿಯಿಂದ ಬಳಸಿಕೊಂಡಿವೆ. ನೂರಾರು ಕಂಪನಿಗಳು, ಬಿಡಿಭಾಗಗಳನ್ನು ಪೂರೈಕೆ ಮಾಡುತ್ತಿವೆ. ಈ ಕ್ಷೇತ್ರದ ಯಶಸ್ಸಿನ ಪಯಣದಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನಾ ಕಂಪನಿಗಳು ಪ್ರಮುಖ ಪಾತ್ರ ವಹಿಸಿವೆ. ಜಪಾನ್, ಜರ್ಮನಿ, ಅಮೆರಿಕ, ಕೊರಿಯಾಗಳ ಅನೇಕ ಆಟೋಮೊಬೈಲ್ ಕಂಪನಿಗಳು, ಇಂದಿಗೂ ಭಾರತದ ಆಟೋಮೊಬೈಲ್ ಕ್ಷೇತ್ರವನ್ನು ವ್ಯಾಪಿಸಿಕೊಂಡಿವೆ. ಇವುಗಳ ಸಾಲಿನಲ್ಲಿರುವ ಮತ್ತೂಂದು ಪ್ರತಿಷ್ಠಿತ ಕಂಪನಿ ಕವಾಸಕಿ ಹತ್ತಾ¤ರು ಸೆಗೆ¾ಂಟ್‌ನ ಬೈಕ್‌ಗಳನ್ನು ಪರಿಚಯಿಸಿ ಭಾರತೀಯ ಗ್ರಾಹಕರನ್ನು ಆಕರ್ಷಿಸಿದೆ.
ಜಪಾನ್, ಅಮೆರಿಕ, ಫಿಲಿಪ್ಪೀನ್ಸ್, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಥಾಯ್ಲೆಂಡ್‌ಗಳಲ್ಲಿ ತನ್ನ ಪ್ರಮುಖ ಉತ್ಪಾದನಾ ಪ್ಲಾಂಟ್‌ಗಳನ್ನು ಹೊಂದಿರುವ ಕವಾಸಕಿ, ಇದೀಗ ಭಾರತೀಯ ಮಾರುಕಟ್ಟೆಗೆ ಮಗದೊಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಬೈಕ್ ಪರಿಚಯಿಸಿದೆ. ಅದೇ “ಝಡ್- 650′. ಈ ಬೈಕನ್ನು 2017ರಲ್ಲೇ ಪರಿಚಯಿಸಲಾಗಿತ್ತಾದರೂ ನಿರೀಕ್ಷೆಯ ಮಟ್ಟದಲ್ಲಿ ಅದು ಗ್ರಾಹಕರ ಗಮನ ಸೆಳೆದಿರಲಿಲ್ಲ. ಈಗ ಮತ್ತೂಂದಿಷ್ಟು ಬದಲಾವಣೆಯೊಂದಿಗೆ ಅದೇ ಬೈಕನ್ನು ಕೊಂಚ ಮಾರ್ಪಾಡುಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ವೆರಿಸ್ 650 ಮತ್ತು ಝಡ್ 900 ಮಾಡೆಲ್‌ಗಳ ಸಾಲಿಗೆ ಸೇರುವ ಬೈಕ್‌ಗಳಲ್ಲಿ ಇದೂ ಒಂದಾಗಿದೆ.
ಮಾಡರ್ನ್ ವಿನ್ಯಾಸ
ಸಾಮಾನ್ಯವಾಗಿ ಕವಾಸಕಿ ಕಂಪನಿ, ಬೈಕ್ ಕ್ರೇಜ್ ಉಳ್ಳವರು ಹಾಗೂ ಸಾಮಾನ್ಯರನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ವಿನ್ಯಾಸಗೊಳಿಸಿರುತ್ತದೆ. ಇದೀಗ ಪರಿಚಯಿಸಲಾದ ಝಡ್- 650 ಬೈಕ್‌ನ ವಿನ್ಯಾಸ ಚಿರತೆಯಂತೆ ಅಗ್ರೆಸಿವ್ ಆಗಿದೆ. ವಿನ್ಯಾಸದಲ್ಲಿ ಈ ಹಿಂದಿನ ಝಡ್- 650ಗಿಂತಲೂ ಅನೇಕ ಬದಲಾವಣೆಗಳನ್ನು ಕಾಣಬಹುದಾಗಿದೆ. 42 ಮಿ.ಮೀ. ಟೆಲಿಸ್ಕೋಪಿಕ್ ಫೋರ್ಕ್ಸ್ ಅಳವಡಿಸಲಾಗಿದೆ. ಹಿಂಭಾಗದ ವೀಲ್‌ನಲ್ಲಿ ಅಡ್ಜಸ್ಟೆಬಲ್ ಮೋನೋಶಾಕ್ ಸಸ್ಪೆನÒನ್ ಬಳಸಲಾಗಿದೆ. ಮುಂಭಾಗದ ವೀಲ್‌ನಲ್ಲಿ 300 ಮಿ.ಮೀ. ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ 220 ಮಿ.ಮೀ. ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಡ್ಯುಯಲ್ ಚಾನೆಲ್ ಎಬಿಎಸ್ ವ್ಯವಸ್ಥೆ ಕೂಡ ಇರುವುದು ಸುರಕ್ಷತೆ ದೃಷ್ಟಿಯಿಂದ ಉತ್ತಮ ಎನ್ನಲಡ್ಡಿಯಿಲ್ಲ.
ಎಂಜಿನ್ ವಿಶೇಷ
ಕ್ರೇಜಿ ರೈಡರ್‌ಗಳನ್ನು ಆಕರ್ಷಿಸುವ ಬೈಕ್‌ಗಳ ಸಾಲಿಗೆ ಕವಾಸಕಿ 2019 ಝಡ್- 650 ಹೊಸ ಸೇರ್ಪಡೆ. 649ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಹೊಂದಿರುವ ಭಲೇ ಸಾಮರ್ಥ್ಯದ ಬೈಕ್ ಇದು. 67 ಬಿಎಚ್‌ಪಿ ಮತ್ತು 66 ಎನ್‌ಎಂ ಶಕ್ತಿಯನ್ನು ಉತ್ಪಾದಿಸುವುದರೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯಲ್ಲಿ ಎಂಥದೇ ಆಫ್ರೋಡ್‌ನಲ್ಲೂ ಮುನ್ನುಗ್ಗಬಲ್ಲದು. ಎಂಜಿನ್ ಸಾಮರ್ಥ್ಯದಲ್ಲಿ ಈ ಹಿಂದಿನ ವೇರಿಯಂಟ್‌ಗೂ ಹೊಸ ವೇರಿಯಂಟ್‌ಗೂ ಬಹಳ ವ್ಯತ್ಯಾಸವೇನಿಲ್ಲ. ಆದರೆ, ಇನ್ನಷ್ಟು ಸ್ಮಾರ್ಟ್‌ಗೊಳಿಸುವ ಪ್ರಯತ್ನ ನಡೆಸಲಾಗಿದೆ.
ಎಕ್ಸ್ ಶೋ ರೂಂ ಬೆಲೆ: 5.29 ಲಕ್ಷ ರೂ.
ಹೈಲೈಟ್ಸ್
– 2 ಸಿಲಿಂಡರ್ 649ಸಿಸಿ ಎಂಜಿನ್
– 6 ಸ್ಪೀಡ್ ಗೇರ್ ಬಾಕ್ಸ್
– ಕರ್ಬ್ ಭಾರ 186 ಕಿಲೋಗ್ರಾಂ
– 2,065 ಮಿ.ಮೀ. ಉದ್ದ/1,080 ಮಿ.ಮೀ. ಎತ್ತರ/ 775 ಮಿ.ಮೀ. ಅಗಲ
– ಗ್ರೌಂಡ್ ಕ್ಲಿಯರೆನ್ಸ್ 130 ಮಿ.ಮೀ.
ಅಗ್ನಿಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.