ಕೂಪನ್ ಕೊಡುವ ನೆಪದಲ್ಲಿ ಖೆಡ್ಡಾಗೆ ಬೀಳಿಸ್ತಾರೆ, ಹುಷಾರ್..!
Team Udayavani, Mar 11, 2019, 12:30 AM IST
ಬಟ್ಟೆ ಖರೀದಿಯ ಮೇಲೆ ಭಾರೀ ರಿಯಾಯಿತಿ ಎಂಬ ಬೋರ್ಡ್‌ಗಳನ್ನು ನಾವೆಲ್ಲ ನೋಡಿರುತ್ತೇವೆ. ರಿಯಾಯಿತಿ ಘೋಷಣೆಯ ಸಂದರ್ಭದಲ್ಲಿ ಬಟ್ಟೆಗಳಿಗೆ ದುಬಾರಿ ಬೆಲೆ ನಮೂದಿಸಲಾಗಿರುತ್ತದೆ. ಈ ಆಫರ್ ಮುಗಿದ ನಂತರ ಹೋಗಿ ನೋಡಿದರೆ, ಅದೇ ಬಟ್ಟೆಗೆ ಮೊದಲಿಗಿಂತ ಅರ್ಧಕ್ಕರ್ಧ ಕಡಿಮೆ ಬೆಲೆಯ ಸ್ಟಿಕ್ಕರ್ ಅಂಟಿಸಿರುವುದೂ ಕಾಣಿಸುತ್ತದೆ !
ಮಾರ್ಕೆಟ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದೀರಿ… ಅಲ್ಲೊಂದು ದೊಡ್ಡ ಬೋರ್ಡ್. ಅದರ ಮೇಲೆ ದೊಡ್ಡದಾಗಿ 50 ಪರ್ಸೆಂಟ್ ಕಡಿತ ಎಂಬ ಬರಹ. ಅರೆ! ಇಡೀ ಮೂರು ಅಂತಸ್ತಿನ ಮಳಿಗೆಯಲ್ಲಿ ಸಣ್ಣ ಕಚೀìಫಿನಿಂದ ಹಿಡಿದು ಶರ್ಟ್‌ವರೆಗೂ ಎಲ್ಲವನ್ನೂ 50 ಪರ್ಸೆಂಟ್ ರಿಯಾಯಿತಿ ದರದಲ್ಲಿ ಕೊಡ್ತಾರಾ ಅಂತ ನೀವು ಅಂದೊRತೀರಿ. ಹಾಗೇ ಒಳಕ್ಕೆ ಕಾಲಿಟ್ಟರೆ ಅಲ್ಲೆಲ್ಲೋ ಮೂಲೆಯಲ್ಲಿ ಮೂರು ಮತ್ತೂಂದು ಬಟ್ಟೆಗಳನ್ನು ಹರಡಿಟ್ಟು ಇದಕ್ಕೆ ಮಾತ್ರ 50 ಪರ್ಸೆಂಟ್ ಆಫ್ ಸಾರ್… ಬೇರೆ ಕಲೆಕ್ಷನ್ಸ್ ಬೇಕು ಅಂದ್ರೆ ಅಲ್ಲಿದೆ ನೋಡಿ. ಅದಕ್ಕೆ ಆಫ್ ಇಲ್ಲ ಅಂತ ನಯವಾಗಿ ಹೇಳ್ತಾರೆ. 50 ಪರ್ಸೆಂಟ್ ಆಫ್ ಅಂತ ಬೋರ್ಡ್ ತಗುಲುಹಾಕಿದ ಕಡೆ ನೋಡಿದರೆ ನಿಮಗೆ ಇಷ್ಟವಾಗುವ ಯಾವುದೂ ಇರೋದಿಲ್ಲ. ಹೇಗೂ ಗಾಡಿ ಪಾರ್ಕ್ ಮಾಡಿ ಆಗಿದೆ. ಅಂಗಡಿ ಒಳಗೆ ಕಾಲಿಟ್ಟಾಗಿದೆ ಅಂದೊRಂಡು, ಅಲ್ಲಿ ನಿಮಗೆ ಇಷ್ಟವಾಗದ್ದು ಏನೂ ಸಿಗದೇ ಇದ್ದಾಗ, ಆಫರ್ ಇಲ್ಲದ ನಿಮಗೆ ತುಂಬಾ ಇಷ್ಟವಾದ ಯಾವುದನ್ನಾದರೂ ಖರೀದಿಸುತ್ತೀರಿ. ಬಹುತೇಕ ಮಾಲ್‌ಗಳಲ್ಲಿ ಇದೇ ಥರದ ಕಥೆಗಳಿರುತ್ತವೆ.
ಬಟ್ಟೆಗಳ ವಿಚಾರದಲ್ಲಿ ಆಫರ್‌ನಲ್ಲಿ ಕಣ್ಣಿಗೆ ಮಣ್ಣೆರಚಲು ಹಲವು ಅವಕಾಶಗಳಿರುತ್ತವೆ. ಕೆಲವು ಕಡೆಗಳಲ್ಲಿ ಸೇಲ್ ಆಗದೇ ಸಂಗ್ರಹವಾಗಿರುವ ಅಥವಾ ಎರಡನೇ ದರ್ಜೆಯ ಬಟ್ಟೆಗಳನ್ನು ಆಫರ್ ಮೂಲಕ ಕೊಡುವುದಿದೆ. ಅದರ ಜೊತೆಗೇ ಎಂಆರ್‌ಪಿಯ ಸ್ಕಿಕ್ಕರ್ ಬದಲಿಸುವ ವ್ಯವಸ್ಥೆಯಂತೂ ವ್ಯಾಪಕವಾಗಿದೆ. ಕೊಡುಗೆ ಇಲ್ಲದೇ ಇದ್ದಾಗಿನ ಎಂಆರ್‌ಪಿಯೇ ಬೇರೆ, ಆಫರ್ ಕೊಟ್ಟಾಗ ಹಾಕಿರುವ ಎಂಆರ್‌ಪಿಯೇ ಬೇರೆ ಇರುತ್ತದೆ. ಇದನ್ನು ಒಂದೇ ಮಾಲ್‌ಗೆ ಪದೇ ಪದೆ ಭೇಟಿ ನೀಡುತ್ತಿರುವವರು ಬಹಳಷ್ಟು ಬಾರಿ ಗಮನಿಸಿಯೂ ಇರುತ್ತಾರೆ. ಇಂಥದ್ದನ್ನೆಲ್ಲ ನಿಯಂತ್ರಿಸಲು ಎಂಆರ್‌ಪಿ ಬದಲಿಸದಂತೆ ಕ್ರಮ ಕೈಗೊಂಡರೂ ಅದೇನೂ ಯಶಸ್ವಿಯಾದಂತಿಲ್ಲ.
ಇದು ಆಫ್ಲೈನ್ ಕಥೆಯಾದರೆ, ಆನ್‌ಲೈನ್ ಮಾರಾಟದ್ದು ಇನ್ನೊಂದು ವಿಧ. ಇಲ್ಲಿ ಈ ರೀತಿಯ 50 ಪರ್ಸೆಂಟ್ ರೀತಿಯ ಆಫರ್ ಜೊತೆಗೆ ಕೂಪನ್, ಕ್ಯಾಶ್‌ಬ್ಯಾಕ್ ಎಂಬ ಮಾಯಾಂಗನೆಯರೂ ಇರುತ್ತಾರೆ. ಕೂಪನ್‌ಗಳಂತೂ ನಮ್ಮನ್ನು ಮಂಗ ಮಾಡುವಲ್ಲಿ ನಂಬರ್‌ನ ಒನ್ ಚೀಟಿಗಳು! ಒಂದು ಶರ್ಟ್ ಖರೀದಿಸಿದರೆ 500 ರೂ. ಮೌಲ್ಯದ ಕೂಪನ್ ಕೊಡುತ್ತೇವೆ ಎಂದು ಶರ್ಟ್‌ನ ಚಿತ್ರಕ್ಕಿಂತ ದೊಡ್ಡ ಗಾತ್ರದಲ್ಲಿ ಬರೆದಿರುತ್ತಾರೆ.ಆದರೆ ವಾಸ್ತವ ಅದರ ಹಿಂಬದಿಯಲ್ಲಿರುತ್ತದೆ. ಆ ಕೂಪನ್ ನಿಮ್ಮ ಮೇಲ್‌ಗೆ ಬಂದಾಗ ಅಥವಾ ಆ ಕೂಪನ್‌ನ ಟಮ್ಸ್ì ಆ್ಯಂಡ್ ಕಂಡೀಷನ್ ಓದಿದಾಗ ನಿಮ್ಮನ್ನು ದೊಡ್ಡದೊಂದು ಖೆಡ್ಡಾಗೆ ಕೆಡವಿರುವುದು ತಿಳಿಯುತ್ತದೆ. ಅಂದರೆ 5 ಸಾವಿರ ರೂ. ಖರೀದಿ ಮಾಡಿದಾಗ ಮಾತ್ರ ನಿಮಗೆ ಆ 500 ರೂ. ಕೂಪನ್ ಅಪ್ಲೆ„ ಮಾಡಬಹುದಾಗಿರುತ್ತದೆ. ( ಅಂದರೆ, 500ಊ. ಆಫರ್ ಪಡೆಯಬೇಕು ಎಂದಾದರೆ, 5,500ರೂ. ಬಿಚ್ಚಬೇಕು) ಅಷ್ಟೇ ಅಲ್ಲ, ಒಂದು ವೇಳೆ ನೀವು ಈ ಕೂಪನ್ ಅನ್ನು ನಿಮ್ಮ ಕಾರ್ಟ್‌ಗೆ ಅಪ್ಲೆ„ ಮಾಡುತ್ತೀರಿ ಎಂದುಕೊಳ್ಳಿ. ಆಗ ಅದು ಎಂಆರ್‌ಪಿ ಮೇಲೆ ಅನ್ವಯಿಸುತ್ತದೆ. ಅಂದರೆ ಅದಾಗಲೇ ಆ ಶರ್ಟ್‌ಗೆ ರಿಯಾಯಿತಿ ಇದ್ದರೆ ಅದು ಅನ್ವಯಿಸುವುದಿಲ್ಲ. ಇಂಥ ಸನ್ನಿವೇಶದಲ್ಲಿ ಕೆಲವೊಮ್ಮೆ ಕೂಪನ್ ಅಪ್ಲೆ„ ಮಾಡಿದಾಗಲೇ ಶರ್ಟ್‌ನ ಬೆಲೆ ಹೆಚ್ಚಾಗಿಬಿಡುವ ಅಪಾಯವೂ ಇರುತ್ತದೆ.
ಇನ್ನು ಕ್ಯಾಶ್‌ಬ್ಯಾಕ್ ಅಂತೂ ಜೇಬಿಗೆ ಬರದ ಮಾಯಾಂಗನೆ. ಈ ಕ್ಯಾಶ್‌ಬ್ಯಾಕ್ ನಿಮ್ಮನ್ನು ಮತ್ತೆ ಮತ್ತೆ ಖರೀದಿಸುವಂತೆ ಪ್ರೇರೇಪಿಸುತ್ತದೆ. ಅಂದರೆ 1000 ರೂ. ಮೊತ್ತದ ಐಟಂ ಖರೀದಿಸಿದರೆ 100 ರೂ. ಕ್ಯಾಶ್‌ಬ್ಯಾಕ್ ಕೊಡುವುದಾಗಿ ನಿಮಗೆ ಆಫರ್ ಮಾಡಿರುತ್ತಾರೆ. ಆದರೆ ಇದನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಾಕುವುದಿಲ್ಲ. ಬದಲಿಗೆ ಇದು ನೀವು ಯಾವ ಆ್ಯಪ್‌ನಿಂದ ಖರೀದಿ ಮಾಡಿರುತ್ತೀರೋ ಆ ಅಪ್ಲಿಕೇಶನ್‌ನ ವಾಲೆಟ್‌ಗೆ ಬಂದು ಕುಳಿತಿರುತ್ತದೆ. ಆ 100 ರೂ. ಕ್ಯಾಶ್‌ಬ್ಯಾಕ್ ಬಳಸಬೇಕು ಎಂದಾದರೆ ನೀವು ಏನನ್ನಾದರೂ ಖರೀದಿಸಲೇ ಬೇಕು. ಬಹುತೇಕ ಸಮಯದಲ್ಲಿ ಆ ವಾಲೆಟ್‌ನಿಂದ ನಿಮ್ಮ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಅವಕಾಶವೇ ಇರುವುದಿಲ್ಲ.
ಹೀಗಾಗಿ ಎಲ್ಲ ಆಫರ್‌ಗಳೂ ನಿಜ ಅರ್ಥದಲ್ಲಿ ಆಫರ್‌ಗಳಾಗಿರುವುದಿಲ್ಲ. ಬದಲಿಗೆ ಬಹುತೇಕ ಸಮಯದಲ್ಲಿ ಅವು ನಿಮ್ಮನ್ನು ಸೆಳೆಯಲು ಮಾಡುವ ತಂತ್ರಗಳಾಗಿರುತ್ತವೆ. ನೀವು ಆ ತಂತ್ರಕ್ಕೆ ಮನಸೋತು ಅವರ ವೆಬ್‌ಸೈಟಿಗೋ ಅಪ್ಲಿಕೇಶನ್‌ಗೊà ಕಾಲಿಟ್ಟರೆ ತಪ್ಪಿಲ್ಲ. ಅದು ಅವರ ಉದ್ದೇಶವೇ ಆಗಿರುತ್ತದೆ. ಆದರೆ ಆ ಕಣRಟ್ಟು ಆಫರ್ ಅನ್ನು ನಂಬಿಕ ಖರೀದಿ ಮಾಡಿದರೆ ನಿಮ್ಮ ಜೇಬಿಗೆ ಹೊರೆಯಾದೀತು.
– ಕೃಷ್ಣ ಭಟ್