ಕಾರ್ನಿವಲ್ ಮಿಂಚು; ಕಿಯಾ “ಕಾರ್ನಿವಲ್’ ಕೀ ಬಾತ್
Team Udayavani, Mar 2, 2020, 4:20 AM IST
ಕಿಯಾ ಕಂಪನಿ ಈ ತಿಂಗಳ ಆರಂಭದಲ್ಲೇ ಮತ್ತೂಂದು ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದೇ ಕಿಯಾ ಕಾರ್ನಿವಲ್. ಇದು ಒಂದು ರೀತಿಯಲ್ಲಿ ಎಂಪಿವಿ (ಮಲ್ಟಿ ಪರ್ಪಸ್ ವೆಹಿಕಲ್). ಅಂದರೆ, ಎಸ್‌ಯುವಿಗಿಂತ ಒಂದಷ್ಟು ದೊಡ್ಡದು…
ಕಿಯಾ… ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವ ಕಾರಿನ ಬ್ರಾಂಡ್. ದಕ್ಷಿಣ ಕೊರಿಯಾ ಮೂಲದ ಈ ಕಂಪನಿ, ಭಾರತದಲ್ಲಿ ಮೊದಲಿಗೆ ತಂದ ಕಾರು ಸೆಲ್ಟೋಸ್. ಈಗಾಗಲೇ ಈ ಕಾರು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇದೇ ಕಿಯಾ ಕಂಪನಿ ಈ ತಿಂಗಳ ಆರಂಭದಲ್ಲಿ ಮತ್ತೂಂದು ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದು ಕಿಯಾ ಕಾರ್ನಿವಲ್. ಇದು ಒಂದು ರೀತಿಯಲ್ಲಿ ಎಂಪಿವಿ (ಮಲ್ಟಿ ಪರ್ಪಸ್ ವೆಹಿಕಲ್). ಅಂದರೆ, ಎಸ್‌ಯುವಿಗಿಂತ ಒಂದಷ್ಟು ದೊಡ್ಡದು. ನೇರವಾಗಿ, ಟೋಯೋಟಾ ಕ್ರಿಸ್ಟಾಗೆ ಪ್ರತಿಸ್ಪರ್ಧಿಯಾಗಿಯೇ ಮಾರುಕಟ್ಟೆಗೆ ಪ್ರವೇಶಿಸಿದೆ.
ಗರಿಷ್ಠ ಸ್ಪೇಸ್
ಇದರ ಸೀಟಿಂಗ್ ಸಾಮರ್ಥ್ಯ ಭಿನ್ನವಾಗಿದೆ. ಅಂದರೆ, 7 ಸೀಟರ್ (ವಿಐಪಿ ಸೀಟ್ಸ್), 8 ಸೀಟರ್ ಮತ್ತು 9 ಸೀಟರ್‌ನಲ್ಲಿ (6+3) ಈ ಕಾರು ಲಭ್ಯವಿದೆ.
ಸೀಟಿನ ಜತೆಯಲ್ಲೇ ಕಾಲಿಗೆ ಸಪೋರ್ಟ್ ಮಾಡುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಟ್ರಿಝೊàನ್ ಆಟೋ ಕ್ಲೈಮ್ಯಾಟ್ ನಿಯಂತ್ರಣವಿದೆ. ಇದರ ಡೋರ್‌ಗಳು ಇನ್ನೊಂದು ರೀತಿಯ ವಿಶೇಷವಾಗಿವೆ. ಈ ಕಾರಿನ ಹಿಂಬದಿ ಸೀಟನ್ನು ತೆರೆಯುವುದಲ್ಲ, ಎಳೆಯುವುದು. ಅದೂ ಆಟೋಮ್ಯಾಟಿಕ್. ಜತೆಗೆ ಹಿಂದಿನ ಸೀಟಿನಲ್ಲಿ ಕುಳಿತವರ ಮನರಂಜಿಸಲು ಟಚ್ ಸ್ಕ್ರೀನ್ ಎಂಟರ್‌ಟೈನ್‌ಮೆಂಟ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಸಾಮರ್ಥ್ಯ
ಈ ಕಾರು 2.2 ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಸಿಗುತ್ತಿದೆ. 200 ಪಿಎಸ್ ಗರಿಷ್ಠ ಶಕ್ತಿ ಮತ್ತು 440 ಎನ್‌ಎಂ ಗರಿಷ್ಠ ಟೋರ್ಕ್ ಸಾಮರ್ಥ್ಯವಿದೆ. ಅಂದಹಾಗೆ, ಇದು ಬಿಎಸ್6 ಎಂಜಿನ್. ಅತ್ಯುತ್ಕೃಷ್ಟ ದರ್ಜೆಯ ಡ್ರೈವಿಂಗ್ ಅನುಭವ ನೀಡುವ ಈ ಕಾರಿನಲ್ಲಿ ಎಂಟು ಸ್ಪೀಡ್ ನ್ಪೋರ್ಟ್ ಮ್ಯಾಟಿಕ್ ಟ್ರಾನ್ಸ್ ಮಿಷನ್ ಉಂಟು.
37 ಫೀಚರ್
ಈ ಕಾರಿನಲ್ಲಿ 37 ವಿವಿಧ ರೀತಿಯ ಫೀಚರ್‌ಗಳನ್ನು ನೀಡಲಾಗಿದೆ. ಯುವಿಒ ಎಂಬ ಹೊಸ ಮಾದರಿಯ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ನಿಮ್ಮ ಧ್ವನಿಯಲ್ಲೇ ಕಾರಿನ ಇನ್ಫೋಟೈನ್‌ಮೆಂಟ್ ಅನ್ನು ನಿರ್ವಹಿಸಬಹುದು. ಜತೆಗೆ ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ವಾಚ್ ಅನ್ನು ಕನೆಕ್ಟ್ ಮಾಡುವುದೂ ಸುಲಭ.
8 ಇಂಚಿನ ಇನ್ಫೋಟೈನ್‌ಮೆಂಟ್
ಕಿಯಾ ಕಾರ್ನಿವಲ್‌ನ ಎಲ್ಲಾ ಮಾದರಿಯ ಕಾರುಗಳಲ್ಲೂ 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಇದೆ. ಆಂಡ್ರಾಯx… ಆಟೋ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುತ್ತದೆ. ಬ್ಲೂಟೂಥ್, ವಾಯ್ಸ ರೆಕಗ್ನಿಷನ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ ವ್ಯವಸ್ಥೆ ಇದೆ.
ಸುರಕ್ಷತೆ
ಇದರಲ್ಲಿ 6 ಏರ್‌ಬ್ಯಾಗ್‌ಗಳಿವೆ. ಎಲೆಕ್ಟ್ರಿಕ್ ಸ್ಟೆಬಿಲಿಟಿ ನಿಯಂತ್ರಣವಿದ್ದು, ಡ್ರೈವಿಂಗ್‌ಗೆ ಸಹಕಾರಿಯಾಗಿದೆ. ಕಾರಿನ ಮುಂದೆ ಮತ್ತು ಹಿಂಬದಿಯಲ್ಲಿ ಪಾರ್ಕಿಂಗ್ ಸೆನ್ಸರ್‌ಗಳನ್ನು ನೀಡಲಾಗಿದೆ. ಬೆಟ್ಟ ಗುಡ್ಡಗಳಲ್ಲಿ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ವ್ಯವಸ್ಥೆಯನ್ನೂ ನೀಡಲಾಗಿದೆ.
ಕಾರಿನ ಮಾದರಿಗಳು (ಎಲ್ಲ ಎಕ್ಸ್ ಶೋರೂಂ ದರ)
1. ಪ್ರೀಮಿಯಂ 7 ಸೀಟರ್- 24,95,000 ರೂ.
2. ಪ್ರೀಮಿಯಂ 8 ಸೀಟರ್- 25,15,000 ರೂ.
3. ಪ್ರಸ್ಟೀಜ್ 7 ಸೀಟರ್- 28,95,000 ರೂ.
4. ಪ್ರಸ್ಟೀಜ್ 9 ಸೀಟರ್- 29,95,000 ರೂ.
5. ಲೈಮೋಸಿನ್ 7ವಿಐಪಿ ಸೀಟರ್- 33,95,000 ರೂ.
ಗ್ರಾಂಡ್ ಐ10 ನಿಯೋಸ್- ನ್ಪೋರ್ಟ್ಸ್ ಕಾರು ಬಿಡುಗಡೆ
ಗ್ರಾಂಡ್ ಐ10 ನಿಯೋಸ್- ನ್ಪೋರ್ಟ್ಸ್ ವೇರಿಯಂಟ್ ನ 1.0 ಲೀಟರ್ ಟಬೋì ಚಾಜ್xì ಪೆಟ್ರೋಲ್ ಎಂಜಿನ್ ಕಾರನ್ನು ಹುಂಡೈ, ಬುಧವಾರ ಅನಾವರಣ ಮಾಡಿದೆ. ಇದು ಬಿಎಸ್6 ಎಂಜಿನ್ ಆಗಿದ್ದು, ಎಕ್ಸ್ ಶೋರೂಂ ದರ 7.68 ಲಕ್ಷ ರೂ.ಗಳಾಗಿದೆ. ಇದರ ಜತೆಗೆ ಗ್ರಾಂಡ್ ಐ10 ನಿಯೋಸ್- ನ್ಪೋರ್ಟ್ಸ್ (ಡ್ಯುಯಲ್ ಟೋನ್) ವೇರಿಯಂಟ್ ಕಾರನ್ನೂ ಅನಾವರಣ ಮಾಡಲಾಗಿದ್ದು, ಇದು 7.73.350 ರೂ.ಗಳಿಗೆ (ಎಕ್ಸ್ ಶೋ ರೂಂ ದರ) ಸಿಗಲಿದೆ. ಈ ಎರಡೂ ವೇರಿಯಂಟ್‌ನ ಕಾರುಗಳು 1 ಲೀಟರ್ ಎಂಜಿನ್ ಸಾಮರ್ಥ್ಯದ್ದಾಗಿವೆ. ಪ್ರತಿ ಲೀ. ಪೆಟ್ರೋಲ್‌ಗೆ 20 ಕಿ.ಮೀ. ಮೈಲೇಜ್ ಕೊಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
-ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.