ರಾಗ ರತಿಗೆ ರಂಗೇರಿಸುವ ಎಲ್‌ಇಎ ಕ್ಯಾಂಟೀನ್‌


Team Udayavani, Dec 25, 2017, 2:28 PM IST

nam-hotel-dhar.jpg

ಧಾರವಾಡದ ಜನಾ ಖಡಕ್‌ ಆಗಿರುವ ಕಡಕ್‌ ರೊಟ್ಟಿಯನ್ನ ಕೂಡ ಮೃಧುವಾಗಿರುವ ಫೇಡಾದಂತೆ ನುರಿಸಿ ನುಂಗಿ ಬಿಡುತ್ತಾರೆ ಎನ್ನುವ ಕಾರಣಕ್ಕೆ ಇವರನ್ನ ಗಂಡು ಮೆಟ್ಟಿದ ನಾಡಿನವರು ಎನ್ನಬಹುದೇನೋ. ಆದರೆ ಊಟ,ತಿಂಡಿ ವಿಚಾರದಲ್ಲಿ ಇಲ್ಲಿರುವ ವೈವಿಧ್ಯತೆ ಧಾರವಾಡದ ಇನ್ನೊಂದು ಮಗ್ಗಲನ್ನ ಪರಿಚಯಿಸುತ್ತದೆ. 

ಧಾರವಾಡಕ್ಕೆ ಬಂದವರೆಲ್ಲರೂ ಲೈನ್‌ಬಜಾರ್‌ ಪೇಡಾವನ್ನ ಹೇಗೆ ಸವಿದು ಹೋಗುತ್ತಾರೋ, ಹಾಗೆಯೇ ಇಲ್ಲಿನ ಬಸಪ್ಪ ಖಾನಾವಳಿಯಲ್ಲಿನ ರೊಟ್ಟಿಯನ್ನ ಮತ್ತು ಎಲ್‌ಇಎ ಕ್ಯಾಂಟೀನ್‌ನಲ್ಲಿನ ತುಪ್ಪದ ಅವಲಕ್ಕಿ, ಚುರುಮುರಿ,ಮಿರ್ಚಿಯನ್ನ ಕೂಡ ಸವಿದು ಸಂಭ್ರಮಿಸಿ ಹೋಗುತ್ತಾರೆ. 

ಊರ ತುಂಬಾ ಎಲ್ಲಿ ನೋಡಿದ್ರು ಲಿಂಗಾಯತ ಖಾನಾವಳಿ ಎನ್ನೋ ಫಲಕಾ  ಹಾಕಿರೋ ನೂರಾರು ಹೋಟೆಲ್‌ ಇರೋ ಈ ಊರಿನ್ಯಾಗ ತುಪ್ಪದ ಅವಲಕ್ಕಿ ಮತ್ತು ಬಳ್ಳೊಳ್ಳಿ ಚುರುಮುರಿಯನ್ನೇ ಮಾರಾಟ ಮಾಡಿ ಯಶಸ್ವಿಯಾದವರು, ಇಲ್ಲಿನ ಆರ್‌ಎಲ್‌ಎಸ್‌ ಕಂಪೌಂಡನಲ್ಲಿರುವ ಎಲ್‌ಇಎ (ಲಿಂಗಾಯತ್‌ ಎಜ್ಯೂಕೇಷನ್‌ ಅಸೋಷಿಯೇಷನ್‌ )ಕ್ಯಾಂಟೀನ್‌ ಮಾಲೀಕರು. 

ಹೌದು…, ಧಾರವಾಡದಲ್ಲಿ ಸೂರ್ಯ ಪಶ್ಚಿಮದ ಕೆಲಗೇರಿ ಕೆರೆಯ ಮೇಲಿಂದ ಗೋವಾ ಸಮುದ್ರ ತೀರದತ್ತ ಪಯಣ ಬೆಳೆಸಿದರೆ, ಧಾರವಾಡಿಗರು ಎಲ್‌ಇಎ ಕ್ಯಾಂಟೀನ್‌ನತ್ತ ತುಪ್ಪದ ಅವಲಕ್ಕಿ ಮತ್ತು ಕೆಂಪು ಚುರುಮುರಿ ತಿನ್ನುವುದಕ್ಕೆ ಹೆಜ್ಜೆ ಹಾಕುತ್ತಾರೆ. ಮಿರ್ಚಿ ಮಂಡಕ್ಕಿ, ತುಪ್ಪದ ಅವಲಕ್ಕಿ ತಿಂದು ತೃಪ್ತಿ ಪಡುತ್ತಾರೆ.  

ಹೀಗಾಗಿಯೇ ಎಲ್‌ಇಎ ಕ್ಯಾಂಟೀನ್‌ ತುಪ್ಪದ ಅವಲಕ್ಕಿ ಅಂದ್ರೆ ಸಾಕು, ಹುಬ್ಬಳ್ಳಿ-ಧಾರವಾಡದ ಜನರ ಸಂಜೆಗೆ ಇನ್ನಷ್ಟು ರಂಗೇರಿರುತ್ತದೆ.  ಹಲವು ದಶಕಗಳ ಇತಿಹಾಸವೇ ಇರುವ ಈ ಕ್ಯಾಂಟೀನ್‌ ಶುರುವಾದಾಗ ಚಹಾ ಅಂಗಡಿ ಅಂಥ ಬೋರ್ಡ್‌ ಇತ್ತು. ಆದರೆ ಕಾಲ ಕಳೆದಂತೆ ಚಹಾ ಅಂಗಡಿಯು ತಕ್ಕಂತೆ ಎಲ್‌ಇಎ ಕ್ಯಾಂಟೀನ್‌ ಆಗಿ ಬದಲಾಯಿತು.

ಹಾಗಂತ ಈ ಕ್ಯಾಂಟೀನ್‌ನಲ್ಲಿ ಹೈಟೆಕ್‌ ಖುರ್ಚಿ,ಟೇಬಲ್‌ಗ‌ಳು, ಟಿಶ್ಯುಪೇಪರ್‌ಸ್ಟ್ಯಾಂಡ್‌ಗಳು, ಮಸ್ತ್ ಬಟ್ಟೆ ಹಾಕಿಕೊಂಡು ಕೆಲಸ ಮಾಡುವ ಸರ್ವರ್‌ಗಳೇನು ಇಲ್ಲ. ಶತಮಾನಗಳ ಹಿಂದೆ ಕಟ್ಟಿದ ಮಣ್ಣಿನ ಮನೆ,ಅದರಲ್ಲಿ ಒಂದಿಷ್ಟು ಹಳೆಯದಾದ ಖುರ್ಚಿ, ಟೇಬಲ್‌ಗ‌ಳು ಮಾತ್ರ ಇವೆ. ಆದರೆ ಕ್ಯಾಂಟೀನ್‌ ಆರಂಭಗೊಂಡ ದಿನದಿಂದ ಇಂದಿನವರೆಗೂ ರುಚಿ,ಸ್ವಾದದಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. 

ಸಾಂಸ್ಕೃತಿಕ ನಂಟು: ಕ್ಯಾಂಟೀನ್‌ಗೆ ಸಾಹಿತ್ಯ,ರಾಜಕೀಯ,ಸಿನಿಮಾ ಮತ್ತು ಸಾಂಸ್ಕೃತಿಕ ಒಡನಾಟವೂ ಇದೆ. ಸಂಜೆ ಹೊತ್ತು ಕವಿಗಳೆಲ್ಲ ಸೇರಿಕೊಂಡು ಹತ್ತು ಕವಿತೆಗಳನ್ನು ವಾಚಿಸಿ ಒಂದು ಕವಿಗೋಷ್ಠಿ ಮಾಡಿ ಮೇಲಕ್ಕೆದ್ದರು ಅಂದ್ರೆ, ಅವರೆಲ್ಲ ನೇರವಾಗಿ ಎಲ್‌ಇಎ ಕ್ಯಾಂಟೀನ್‌ ಹಾದಿ ಹಿಡಿಯುತ್ತಾರೆ ಎಂದೇ ಅರ್ಥ.

ಇವರೆಲ್ಲಾ ತಿಂದಿದ್ದಾರೆ..!: ಡಾ|ಡಿ.ಸಿ.ಪಾವಟೆ,ಡಾ|ಬಸವರಾಜ ಕಟ್ಟಿಮನಿ,ಡಾ|ಸದಾಶಿವ ಒಡೆಯರ,  ಡಾ|ಹಿರೇಮಲ್ಲೂರು ಈಶ್ವರನ್‌ಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‌ ಪಡೆದುಕೊಂಡು ಉಪನ್ಯಾಸ ಮಾಡುತ್ತಿದ್ದ ಎಲ್ಲಾ ಹಿರಿಯರಿಗೂ ಆಗೊಮ್ಮೆ ಈಗೊಮ್ಮೆ ಮಂಡಕ್ಕಿ ಅವಲಕ್ಕಿ ರುಚಿ ಬೇಕಾಗಿಯೇ ಇತ್ತು. ಇನ್ನು ಡಾ|ಎಂ.ಎಂ.ಕಲಬುರ್ಗಿ ಅವರಿಗಂತೂ ಈ ಹೋಟೇಲ್‌ನ ಚುರುಮುರಿ,ಅವಲಕ್ಕಿ ಅಂದ್ರೆ ಪಂಚಪ್ರಾಣವಾಗಿತ್ತು. 

ವರಕವಿ ದ.ರಾ.ಬೇಂದ್ರೆ,ಶಂ.ಭಾ.ಜೋಷಿ, ಬಸವರಾಜ ರಾಜ ಗುರು, ಮಧುರ ಚೆನ್ನರು ಸೇರಿದಂತೆ ಅನೇಕ ದೊಡ್ಡ ಕವಿಗಳು ಇಲ್ಲಿನ ಚುರುಮುರಿ, ತುಪ್ಪದ ಅವಲಕ್ಕಿಯ ರುಚಿ  ಸವಿದಿದ್ದಾರೆ.  ಎಲ್‌ಇಎ ಕ್ಯಾಂಟೀನ್‌ ಎಂದರೆ ಒಂದರ್ಥದಲ್ಲಿ ಜಿಲ್ಲೆಯ ರಾಜಕೀಯ ವಿಚಾರಗಳ ಚರ್ಚಾಕೂಟದ ವೇದಿಕೆಯೂ ಎನ್ನಬಹುದು. ಜಿಲ್ಲೆಯ ಎಲ್ಲಾ ಪಕ್ಷಗಳ ಮುಖಂಡರು ಸಂಜೆ ಹೊತ್ತಿಗೆ ಇಲ್ಲಿಗೆ ಚಹಾ ಮತ್ತು ಚುರುಮುರಿ ಸವಿಯಲು ಬರುತ್ತಾರೆ. ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚಿಸಿ, ನಗುಮೊಗದೊಂದಿಗೆ ಬೀಳ್ಗೊಡುತ್ತ ಸಾಗುತ್ತಾರೆ. 

ಪಾಕಪ್ರವೀಣ ಶಿವಪ್ಪ ಅವರ ಕೊಡುಗೆ: 1950 ರಲ್ಲಿ ಆರಂಭಗೊಂಡ ಎಲ್‌ಇಎ ಕ್ಯಾಂಟೀನ್‌ ಮೊದಲು ಶಿವಪ್ಪ ಕ್ಯಾಂಟೀನ್‌ ಎಂದೇ ಪ್ರಸಿದ್ದಿಯಾಗಿತ್ತು. ಶಿವಪ್ಪ ಮರಳಪ್ಪನವರ ಎನ್ನುವವರೇ ಮಾಲೀಕರಾಗಿದ್ದರಿಂದ ಎಲ್ಲರೂ ಹೋಟೆಲನ್ನು ಅವರ ಹೆಸರಿನಿಂದಲೇ ಕೆರೆಯುತ್ತಿದ್ದರು. ಮಹಾರಾಷ್ಟ್ರದ ತಿಂಡಿಗಳೇ ಆಗ ಇಲ್ಲಿ ಫೇಮಸ್ಸಾಗಿದ್ದವು.

ಸಾಂಗ್ಲಿಯ ಬಡಂಗ(ಚುರುಮುರಿ)ನ್ನ ತರೆಸಿಕೊಂಡು ಇಲ್ಲಿ ಮಾರುತ್ತಿದ್ದ ಹೊಟೇಲ್‌ಗ‌ಳು ಸಾಕಷ್ಟಿದ್ದವು. ಆದರೆ ಸ್ಥಳೀಯ ತಿಂಡಿ,ತಿನಿಸಿಗೆ ಅಷ್ಟೊಂದು ಪ್ರಾಧಾನ್ಯತೆ ಇಲ್ಲದೇ ಇರುವ ಹೊತ್ತಿನಲ್ಲಿ ಶಿವಪ್ಪ ಅವರು ಸ್ವತಃ ತಮ್ಮ ಪಾಕ ಪ್ರಾವಿಣ್ಯತೆಯನ್ನು ಮೆರೆದು, ಧಾರವಾಡದ ಸುತ್ತ ಬಳೆಯುವ ದೇಶಿ ತಳಿಯ ಭತ್ತದಿಂದ ಬಂದ ಅಕ್ಕಿಯನ್ನ ಹದಗೊಳಿಸಿ ತಯಾರಿಸುತ್ತಿದ್ದ ಚುರುಮುರಿ,

ಅವಲಕ್ಕಿಯನ್ನೇ ಬಳಸಿಕೊಂಡು ಸ್ವಾದಿಷ್ಟ ರುಚಿಯಲ್ಲಿ ತುಪ್ಪದ ಅವಲಕ್ಕಿ ಮತ್ತು ಬಳ್ಳೊಳ್ಳಿ ಚುರುಮುರಿಯನ್ನ ಸಿದ್ದಗೊಳಿಸಿದ್ದೇ ಅವರ ಯಶಸ್ಸಿನ ಹಿಂದಿರುವ ಗುಟ್ಟು. ಇಂದು ನಾಲ್ಕು ಅತೀ ದೊಡ್ಡ ಹೊಟೇಲ್‌ಗ‌ಳು, ಲಾಡ್ಜ್ಗಳು ಸೇರಿದಂತೆ ಅನೇಕ ವ್ಯಾಪಾರದಲ್ಲೂ ಇವರ ಮಕ್ಕಳು ತೊಡಗಿದ್ದರೂ, ಎಲ್‌ಇಎ ಕ್ಯಾಂಟೀನ್‌ನ ಸ್ವರೂಪ ಮಾತ್ರ ಬದಲಾಗಿಲ್ಲ.

ರಾಜಕುಮಾರು ಬಂದಿದ್ರು….: ಹಿರಿಯ ರಾಜಕಾರಣಿಯಾಗಿದ್ದ ಎಸ್‌.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್‌.ಬಂಗಾರಪ್ಪ,ಯಡಿಯೂರಪ್ಪ, ಎಚ್‌.ಡಿ.ದೇವೇಗೌಡ ಅವರಿಂದ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರವರೆಗೆ, ವರನಟ ಡಾ|ರಾಜ್‌ಕುಮಾರ್‌,ಶಂಕರನಾಗ್‌, ಪ್ರಭಾಕರ್‌, ಅಶೋಕ್‌, ಮುಖ್ಯಮಂತ್ರಿ ಚಂದ್ರು, ಸುಧೀರ್‌, ಕಲ್ಪನಾ,ಮಂಜುಳಾ,ಜಯಮಾಲಾ ಸೇರಿದಂತೆ, ಇಂದಿನ ಚಿತ್ರರಂಗದ ಯುವ ನಾಯಕರ ವರೆಗೂ ಎಲ್ಲರೂ ಎಲ್‌ಇಎ ಕ್ಯಾಂಟೀನ್‌ ತುಪ್ಪದ ಅವಲಕ್ಕಿ,ಚುರುಮುರಿ ಮಿರ್ಚಿ ರುಚಿಯನ್ನು ಸವಿದಿದ್ದಾರೆ. 

ಮೊಬೈಲ್‌: 97403 19918.

* ಬಸವರಾಜ ಹೊಂಗಲ್‌ 

ಟಾಪ್ ನ್ಯೂಸ್

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.