ಬದುಕಲು ಕಲಿಯಿರಿ, ಹಿಂಗೂ…!


Team Udayavani, Nov 20, 2017, 1:19 PM IST

20-28.jpg

ಗ್ರಾಹಕ ಜಾಗೃತಿ ಎಂದ ಕೂಡಲೇ ಬಹುಸಂಖ್ಯಾತ ಜನ ಕಾಯ್ದೆ ಕಾನೂನುಗಳ ಅರಿವು ಎಂದು ಕೊಂಡುಬಿಡುತ್ತಾರೆ. ಕಾನೂನು ಉಲ್ಲಂಘನೆಗಳನ್ನು ಪ್ರಶ್ನಿಸುವುದು ಮತ್ತು ಕಾನೂನು ಪಾಲನೆಗೆ ಆಗ್ರಹಿಸುವುದು ಮಾತ್ರ ಗ್ರಾಹಕ ತಿಳುವಳಿಕೆ ಆಗಬೇಕಿಲ್ಲ. ನಮ್ಮ ಸುತ್ತಮುತ್ತಲ ಪ್ರಪಂಚದಲ್ಲಿರುವ ಅವಕಾಶಗಳ ಉಪಯೋಗ ಕೂಡ ಪ್ರಜ್ಞಾವಂತ ಗ್ರಾಹಕನ ಲಕ್ಷಣ! 

ಒಂದು ಮಟ್ಟಿಗೆ, ಕಾನೂನಿನಲ್ಲಿರುವ ಪ್ರಾಧಾನ್ಯತೆಗಳನ್ನೇ ಬಳಸಿಕೊಂಡು ಅನುಕೂಲ ಪಡೆಯುವುದು ಕೂಡ ಗ್ರಾಹಕ ಜಾಣ್ಮೆಯೇ. ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿ ಪಡೆಯಲು ಮುನ್ನೂರು, ನಾಲ್ಕು ನೂರು ರೂಪಾಯಿ ಕೊಡುವ ಬದಲು ಮಾಹಿತಿ ಹಕ್ಕಿನ ಕಾಯ್ದೆಯಡಿ ಎ4 ಪುಟವೊಂದಕ್ಕೆ ಎರಡು ರೂಪಾಯಿಯಂತೆ ಪಾವತಿಸಿ ಪಡೆಯುವುದು ಜೀವನ ಯುದ್ಧದಲ್ಲಿ ಯುಕ್ತವೇಕಾಗುವುದಿಲ್ಲ?! ಪ್ರತಿ ಬಾರಿ ಕಾನೂನುಗಳ ಬಗ್ಗೆ ಮಾತನಾಡುತ್ತಿದ್ದ ಈ ಅಂಕಣ ಈ ಬಾರಿ ಬದುಕುವ ದಾರಿಗಳ ಕುರಿತಾಗಿ ತನ್ನ ಚಿಂತನೆ ಹರಿಸಿದೆ. 

ಟಾಕ್‌ಟೈಮ್‌ ಟ್ರಾನ್ಸ್‌ಫ‌ರ್‌?
ನಮ್ಮ ದೇಶದಲ್ಲಿ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತರುವ ಹತ್ತುಹಲವು ಗ್ರಾಹಕ ಪರ ನಿರ್ದೇಶನಗಳನ್ನು ಖಾಸಗಿ ದೂರವಾಣಿ ಸೇವಾದಾತರಿಗಿಂತ ಸಮರ್ಪಕವಾಗಿ ಜಾರಿಗೆ ತರುವುದು ಬಿಎಸ್‌ಎನ್‌ಎಲ್‌. ಹಾಗೆಯೇ ಅವರ ಹಲವು ಯೋಜನೆಗಳು ಗ್ರಾಹಕರಿಗೆ ಅನುಕೂಲವಾಗುವಂತಿರುತ್ತದೆ. ದುರಂತ ಎಂದರೆ, ಖುದ್ದು ಬಿಎಸ್‌ಎನ್‌ಎಲ್‌ ಈ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಎಡವುತ್ತದೆ. ಅಂಶದೊಂದು ಮಾಹಿತಿ ಇಲ್ಲಿದೆ.

ಬಿಎಸ್‌ಎನ್‌ಎಲ್‌ನಲ್ಲಿ ನಮ್ಮ ಟಾಕ್‌ಟೈಮ್‌ನಿಂದ ಮತ್ತೂಂದು ಬಿಎಸ್‌ಎನ್‌ಎಲ್‌ ನಂಬರ್‌ಗೆ ಟಾಕ್‌ಟೈಮ್‌ ವರ್ಗಾವಣೆ ಸಾಧ್ಯ. ಇದಕ್ಕಾಗಿ REGISTER PTOP ಎಂದು ನಮ್ಮ ಮೊಬೈಲ್‌ನಿಂದ ಎಸ್‌ಎಂಎಸ್‌ ಸಂದೇಶವನ್ನು ಉಚಿತವಾಗಿ 54455ಕ್ಕೆ ಕಳುಹಿಸಬೇಕು. ಈ ನೋಂದಣಿ ಯಶಸ್ವಿಯಾಗಿದ್ದಕ್ಕೆ ಸಂದೇಶ ಬರುತ್ತದೆ. ಈ ವಹಿವಾಟಿನ ಸಾಮಾನ್ಯ ಪಾಸ್‌ವರ್ಡ್‌ ಅಆಇಈಉಊ, ಇದನ್ನು ಬದಲಿಸಲು ಕೂಡ ಅವಕಾಶ ನೀಡಲಾಗಿದೆ. ಈ ನಂತರದಲ್ಲಿ ನಾವು ಇತರ ಬಿಎಸ್‌ಎನ್‌ಎಲ್‌ ನಂಬರ್‌ಗೆ ಟಾಕ್‌ಟೈಮ್‌ ಟ್ರಾನ್ಸ್‌ಫ‌ರ್‌ ಮಾಡಬಹುದು. ಕೆಲವು ಷರತ್ತುಗಳಿವೆ. ಈ ಸೇವೆಗೆ ಟ್ರಾನ್ಸ್‌ಫ‌ರ್‌ ಮೊತ್ತ ಆಧರಿಸಿ ಕನಿಷ್ಠ 3 ರೂ. ನಿಂದ ಶೇ. 10ರ ಶುಲ್ಕ ಮತ್ತೆ ಟಾಕ್‌ಟೈಮ್‌ನಿಂದಲೇ ಕತ್ತರಿಸಲ್ಪಡುತ್ತದೆ. 10ರ ಗುಣಕದಲ್ಲಿ ಗರಿಷ್ಠ 200 ರೂ. ಕಳುಹಿಸಬಹುದು. ತಿಂಗಳಿಗೆ ಇಂತಹ ಅವಕಾಶ 5 ಬಾರಿ ಮಾತ್ರ.

ಟಾಕ್‌ಟೈಮ್‌ ವರ್ಗಾವಣೆಗೆ ನಾವು ಕಳುಸುವ ಸಂದೇಶ ಈ ಮಾದರಿಯಲ್ಲಿರಬೇಕು. GIFT> MOBILE NO> AMOUNT> PASSWORD[>   ಎಂದರೆ sಟಚcಛಿ ಇದನ್ನು 54456ಕ್ಕೆ ಕಳುಹಿಸಿದರೆ ಆಯಿತು. ಈ ಸಂದೇಶಕ್ಕೆ ಎರಡು ರೂ. ವೆಚ್ಚವಿದೆ. ಉದಾಹರಣೆಗೆ ನೀವು ನೋಂದಣಿ ಮಾಡಿಸಿಕೊಂಡ ನಂತರ ಟಾಕ್‌ಟೈಮ್‌ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು ಪರೀಕ್ಷಿಸಲು  GIFT>9886407592>100>ABCDEF ಎಂದು ಟೈಪ್‌ ಮಾಡಿ 54456ಕ್ಕೆ ಕಳುಹಿಸಿ. ಇದರಿಂದ ಈ 100 ರೂ.ಗಳ ಜೊತೆಗೆ ಶುಲ್ಕ 10 ರೂ. ಹಾಗೂ ಎಸ್‌ಎಂಎಸ್‌ ವೆಚ್ಚ ನಿಮ್ಮ ಟಾಕ್‌ಟೈಮ್‌ನಲ್ಲಿ ಕಡಿತಗೊಳ್ಳುತ್ತದೆ.

ಇದನ್ನೂ ಲಾಭಕರವಾಗಿ ಪರಿವರ್ತಿಸಿಕೊಳ್ಳಬಹುದು. ಬಿಎಸ್‌ಎನ್‌ಎಲ್‌ ಹಬ್ಬಗಳ ಸಂದರ್ಭಗಳಲ್ಲಿ ಪೂರ್ತಿ ಟಾಕ್‌ಟೈಮ್‌ ಅಲ್ಲದೆ ಅಧಿಕ ಟಾಕ್‌ಟೈಮ್‌ ಕೊಡುಗೆಯನ್ನೂ ನೀಡುತ್ತದೆ. ಕೆಲ ದಿನಗಳ ಹಿಂದೆ 290 ರೂ.ಗೆ 435 ರೂ.ಗಳ ಟಾಕ್‌ಟೈಮ್‌ ನೀಡಲಾಗಿತ್ತು. ಅಂದರೆ ಶೇ. 50ರ ಹೆಚ್ಚಿನ ಆಫ‌ರ್‌. ಟಾಕ್‌ಟೈಮ್‌ ವರ್ಗಾವಣೆಯ ಶುಲ್ಕ ಶೇ. 10 ವೆಚ್ಚವಾದರೂ ಶೇ. 40ರಷ್ಟು ಲಾಭ ಆಗುವುದು ಕಡಿಮೆಯೇ? ಇಂತಹ ಅವಕಾಶಗಳನ್ನು ಬಿಎಸ್‌ಎನ್‌ಎಲ್‌ ಅಲ್ಲದೆ ಬೇರೆ ಖಾಸಗಿ ನೆಟ್‌ವರ್ಕ್‌ಗಳೂ ನೀಡುತ್ತಿರಬಹುದು. ಹೆಚ್ಚಿನ ಮಾಹಿತಿಗೆ ಅವುಗಳ ಕಾಲ್‌ ಸೆಂಟರ್‌ನಲ್ಲಿ ವಿಚಾರಿಸಿ.

ಬಿಎಸ್‌ಎನ್‌ಎಲ್‌ನಲ್ಲಿ ಹಲವು ಡಾಟಾ ಪ್ಯಾಕ್‌, ವಾಯ್ಸ ಪ್ಯಾಕ್‌ಗಳನ್ನು ಎಸ್‌ಎಂಎಸ್‌ ಮೂಲಕವೂ ಚಾಲನೆಗೊಳಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ರೀತಿ ಮಾಡಿದಾಗ ಆ ಮೌಲ್ಯವರ್ಧಿತ ಸೇವೆ “ವ್ಯಾಸ್‌’ನ ಘೋಷಿತ ಬೆಲೆಗಿಂತ ಕಡಿಮೆಗೇ ಸೇವೆ ಲಭ್ಯವಾಗುತ್ತದೆ. ಬಹುಶಃ ಉದಾಹರಣೆಯ ಸಹಿತ ಹೇಳಿದರೆ ಹೆಚ್ಚು ಸುಲಭವಾಗಿ ಅರ್ಥವಾಗಬಹುದು. 

ಇತ್ತೀಚೆಗೆ ಬಿಎಸ್‌ಎನ್‌ಎಲ್‌ 429 ರೂ. ವೆಚ್ಚದ ಪ್ಲಾನ್‌ ಒಂದನ್ನು ಘೋಷಿಸಿದೆ. ಈ ಪ್ಲಾನ್‌ನಲ್ಲಿ ವ್ಯಾಲಿಡಿಟಿಯ ಸಹಿತ ಮುಂದಿನ 90 ದಿನಗಳವರೆಗೆ ಎಲ್ಲ ನೆಟ್‌ವರ್ಕ್‌ಗೆ ಉಚಿತ ಕರೆ ಹಾಗೂ ಪ್ರತಿ ದಿನ ಒಂದು ಜಿಬಿ ತ್ರಿಜಿ ವೇಗದ ಡಾಟಾ ಪಡೆಯಬಹುದು. ಈ ಪ್ಲಾನ್‌ ಚಾಲನೆಗೊಳಿಸಲು PLAN BSNL429  ಎಂದು 123ಗೆ ಎಸ್‌ಎಂಎಸ್‌ ಕಳುಹಿಸಿದರೆ ಸಾಕು. ಸೇವೆ ಚಾಲನೆಗೊಳ್ಳಲು ಸುಮಾರು 400 ರೂ. ನಮ್ಮ ಟಾಕ್‌ಟೈಮ್‌ ಇದ್ದಿರಬೇಕು. ಆದರೆ ಸೇವೆ ಚಾಲನೆಯಾಗಲು 429 ರೂ. ಟಾಕ್‌ಟೈಮ್‌ನಿಂದ ಕತ್ತರಿಸಲ್ಪಡುವ ಬದಲು ಕೇವಲ 370 ರೂ. ಅಷ್ಟೇ ಕಡಿತಗೊಳ್ಳುತ್ತದೆ. ಹಲವು ವಾಯ್ಸ, ಡಾಟಾ ಸೇವೆಯನ್ನು ಚಾಲನೆಗೊಳಿಸಲು ಕೂಡ ನಿರ್ದಿಷ್ಟ ಎಸ್‌ಎಂಎಸ್‌ ಮಾದರಿಯ ಜೊತೆ ಊರ್ಜಿತಗೊಳಿಸಿಕೊಳ್ಳಲು ಸಾಧ್ಯ. ದೊಡ್ಡ ಮೊತ್ತದ ರೀಚಾರ್ಜ್‌ಗೆ ಹೆಚ್ಚುವರಿ ಟಾಕ್‌ಟೈಮ್‌ ಕೊಡುವುದನ್ನು ಸದಾ ಬಿಎಸ್‌ಎನ್‌ಎಲ್‌ ಮಾಡುತ್ತಿರುತ್ತದೆ. ಅದನ್ನು ಬಳಸಿಕೊಳ್ಳಬಹುದು. ದಿನದಲ್ಲಿ ಕರೆಯನ್ನೇ ಮಾಡದವರು, ಮನೆಯಲ್ಲಿ ಸಿಗ್ನಲ್‌ ಸಿಗದೆ ಪರಿತಪಿಸುವವರಿಗೆ ಈ ಸಲಹೆಗಳು ಸಿಹಿ ಎನ್ನಿಸದೇ ಇರಬಹುದು!

ಅಂಚೆ ಇಲಾಖೆಗೆ ಕನ್ನ!
ನಿಮ್ಮ ಸ್ನೇಹಿತರೊಬ್ಬರಿಗೆ ಅಗತ್ಯ ದಾಖಲೆಗಳ ನಕಲುಗಳು ಮುದ್ದಾಂ ತಲುಪುವಂತೆ ಮಾಡಬೇಕು. ಇಂದಿನ ಕೊರಿಯರ್‌ ವೆಚ್ಚಗಳು ತೀರಾ ದುಬಾರಿ. ಅಂಚೆಯ ನೋಂದಾಯಿತ ರವಾನೆ ಕೂಡ ತುಟ್ಟಿಯೇ. ಈ ಹಿನ್ನೆಲೆಯಲ್ಲಿ 10 ರೂ. ಅಂಚೆ ಚೀಟಿಗಳ ಅಗತ್ಯವಿರುವ ಅಂಚೆ ಲಕೋಟೆಗೆ ಕೇವಲ ಐದು ರೂ. ಸ್ಟಾಂಪ್‌ ಹಚ್ಚಿ ಉದ್ದೇಶಪೂರ್ವಕವಾಗಿ “ಡ್ನೂ’ ಮಾಡಿ ಕಳುಹಿಸಬೇಕು. ಡ್ನೂ ಆದ ಹಿನ್ನೆಲೆಯಲ್ಲಿ ಅಂಚೆಯವ ವಿಳಾಸದಾರನ ಮನೆಗೆ ತೆರಳಿ ದಂಡದ ಮೊತ್ತ ವಸೂಲಿಸಿ ಪತ್ರವನ್ನು ತಲುಪಿಸಬೇಕಾಗುತ್ತದೆ. ಅಂದರೆ ಕೊರಿಯರ್‌ ಅಥವಾ ನೋಂದಾಯಿತ ಅಂಚೆಯಲ್ಲಾದಂತೆ ಮುದ್ದಾಂ ವಿಳಾಸದಾರರಿಗೆ ಪತ್ರ ತಲುಪುವ ಸೌಲಭ್ಯ ಲಭ್ಯವಾಗುತ್ತದೆ. 10 ರೂ. ಸ್ಟಾಂಪ್‌ನ ಲಕೋಟೆಗೆ 5 ರೂ.ನದಷ್ಟೇ ಸ್ಟಾಂಪ್‌ ಹಚ್ಚಿದರೆ ಇನ್ನುಳಿದ 5 ರೂ.ಗೆ ಅಷ್ಟೇ ಪ್ರಮಾಣದ ದಂಡ ವಿಧಿಸಿ ಅಂದರೆ 10 ರೂ. ಪಡೆದು ಲಕೋಟೆ ತರಿಸಲಾಗುತ್ತದೆ. ಕೇವಲ 15 ರೂ.ಗೆ ಪತ್ರ ವಿಳಾಸದಾರರನ್ನು ತಲುಪಿದೆ. ನೋಂದಾಯಿತ ಅಂಚೆಯಲ್ಲೂ ಕನಿಷ್ಠ 22 ರೂ. ವೆಚ್ಚವಾಗುತ್ತದೆ. ಈ ಡ್ನೂ ಮಾಡುವ ಸಂಗತಿಯನ್ನು ಸ್ನೇಹಿತರಿಗೆ ಮೊದಲೇ ತಿಳಿಸಿ ದಂಡ ಪಡೆಯಲು ಹೇಳಿರುವುದು ಕ್ಷೇಮ. ದಂಡ ಪಾವತಿ ಅಂಚೆ ದಾಖಲೆಗಳಲ್ಲಿ ನಮೂದಾಗುವ ಕಾರಣ ಮುಂದೆ ಅಂಚೆ ಸ್ವೀಕೃತಿಯ ಬಗ್ಗೆ ದಾಖಲೆ ಕೂಡ ಅಂಚೆ ಇಲಾಖೆಯಲ್ಲಿ ಸೃಷ್ಟಿಯಾಗಿರುವುದರಿಂದ ಅಷ್ಟರಮಟ್ಟಿಗೆ ನಾವು ಕ್ಷೇಮ!

ವಾಸ್ತವವಾಗಿ ಅಂಚೆ ಇಲಾಖೆಯ ವಿವಿಧ ಸೇವೆಗಳು ಖಾಸಗಿ ಕೊರಿಯರ್‌ ಸೇವೆಗಳಿಗಿಂತ ಕಡಿಮೆ ದರದಲ್ಲಿ ಸಿಗುತ್ತವೆ. ಆರಂಭಿಕ ದಿನಗಳಲ್ಲಿ ರಿಜಿಸ್ಟರ್ಡ್‌ ಪೋಸ್ಟ್‌ಗಿಂತ ಕಡಿಮೆ ದರಕ್ಕೆ ನಮ್ಮ ಸೇವೆ ಲಭ್ಯ ಎಂಬ ವಾತಾವರಣವನ್ನು ಖಾಸಗಿ ಕೊರಿಯರ್‌ಗಳು ನಿರ್ಮಿಸಿದ್ದರಿಂದ ಈಗಲೂ ನಾವದರ ಪರ್ಯಾಯಗಳನ್ನು ಗಮನಿಸುತ್ತಿಲ್ಲ. ಅಂಚೆಯ ಪಿ, ಪಿಪಿ, ಪಾರ್ಸೆಲ್‌ ಅವಕಾಶಗಳು ಕಡಿಮೆ ದರದಲ್ಲಿಯೂ ಪರಿಕರಗಳ ರವಾನೆಗೆ ಅನುಕೂಲ. ಈ ಬಗ್ಗೆ ಅಂಚೆ ಇಲಾಖೆಯ ವೆಬ್‌ನಲ್ಲಿ ಪೂರ್ಣ ಮಾತಿ ಪಡೆಯಬಹುದು. ಅಂಚೆ ಲಕೋಟೆಗಳನ್ನು ಕಳುಹಿಸಲು ಬೀಳುವ ವೆಚ್ಚ ಕುರಿತು https://www.indiapost.gov.in/VAS/Pages/calculatePostage.aspx# … ಈ ವೆಬ್‌ ಪುಟ ಸ್ಪಷ್ಟ ಮಾತಿ ಕೊಡುತ್ತದೆ.

ಕೊನೆ ಕೊಸರು: ಅಂಚೆ ಇಲಾಖೆಯಲ್ಲಿ ಡ್ನೂ ಆದ ಪತ್ರ, ಲಕೋಟೆಯನ್ನು ಅದರ ಮೇಲಿನ ವಿಳಾಸದಾರ ದಂಡ ತೆತ್ತು ಬಿಡಿಸಿಕೊಳ್ಳಲು ಒಪ್ಪದಿದ್ದರೆ ಅದು ರವಾನೆದಾರರಿಗೆ ವಾಪಾಸಾಗುತ್ತದೆ. ಆಗ ಆತ ಈ ದಂಡ ಮೊತ್ತವನ್ನು ಪಾವತಿಸಿ ತಾನೇ ಸ್ವೀಕರಿಸಬೇಕು. ಆತ ದಂಡ ಮೊತ್ತವನ್ನೂ ಪಾವತಿಸಿದ್ದಾನೆ ಎಂದ ಮೇಲೆ ಆ ಪತ್ರ ಮತ್ತೆ ವಿಳಾಸದಾರರಿಗೆ ತಲುಪಬೇಕಿತ್ತಲ್ಲವೇ? ದಂಡ ತೆತ್ತೂ ಅವನಿಗೆ ಅವನು ಬಯಸಿದ ಸೇವೆ ಸಿಗಲಿಲ್ಲ ಎಂತಾದರೆ ಅದು ಸೇವಾನ್ಯೂನ್ಯತೆ ಆಗುವುದಿಲ್ಲವೇ?
        
ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.