ಖಾಲಿ ಜಾಗ ತುಂಬೋಣ
Team Udayavani, Nov 27, 2017, 12:52 PM IST
ದುಬಾರಿ ಬೆಲೆತೆತ್ತು ಹೆಚ್ಚುವರಿ ಕಟ್ಟಡಕಟ್ಟುವ ಬದಲು, ಇರುವ ಜಾಗದಲ್ಲೇ ನಮಗೆ ಬೇಕಾಗಿರುವುದನ್ನು ಉಪಾಯವಾಗಿ ಮಾಡಿಕೊಂಡರೆ, ನಮಗೆ ಹೆಚ್ಚಿನ ಸ್ಥಳದ ಅಗತ್ಯ ಇರುವುದಿಲ್ಲ. ಜೊತೆಗೆ ಚಿಕ್ಕದಾದ ಮನೆಯನ್ನು ಚೊಕ್ಕವಾಗಿ ಇಟ್ಟುಕೊಳ್ಳಲೂ ಸಹಾಯಕಾರಿ. ಈ ನಿಟ್ಟಿನಲ್ಲಿ ನಮಗೆ ಹೆಚ್ಚು ಅನುಕೂಲ ಮಾಡಿಕೊಳ್ಳಬಲ್ಲದು. ಮುಚ್ಚಿದಂತೆ ಇರುವ, ಬೇಕಾದಾಗ ತೆರೆದುಕೊಳ್ಳಬಹುದಾದ ಸ್ಥಳಗಳು. ಇವನ್ನು ಸಾಮಾನ್ಯವಾಗಿ ಗೋಡೆಯಲ್ಲಿ ಹುದುಗಿಸಿದಂತೆ ಇಲ್ಲವೇ ಹೊರಗೆ ಚಾಚಿದಂತೆ ಮಾಡಿಕೊಳ್ಳಬಹುದು. ಹಾಗೆಯೇ ಕಿಟಕಿಯ ಮುಂದೆ ಇಲ್ಲ ಕೆಳಗೆ ಸ್ವಲ್ಪ ಸ್ಥಳಾವಕಾಶವನ್ನು ಕೂಡ ಮಾಡಿಕೊಳ್ಳಬಹುದು.
ವಾರ್ಡ್‌ರೋಬ್ ಹೊಂದಿಸುವುದು
ಸಾಮಾನ್ಯವಾಗಿ ಎರಡು ಅಡಿ ಅಗಲದ್ದು. ಮೂರು ಅಡಿ ಅಗಲವಾದರೂ ಇರುವ ಬಹು ಉಪಯೋಗಿ ಪರಿಕರ ಇಲ್ಲದ ಮನೆ ಕಡಿಮೆ ಎನ್ನಬಹುದು. ಈ ಹಿಂದೆ ಇದ್ದ ಸ್ಟೀಲ್ ಅಲ್‌ಮೆರಾವನ್ನು ಬಹುತೇಕ ಹಿಂದಿಕ್ಕಿ ಹೆಚ್ಚು ಜನಪ್ರಿಯವಾಗಿರುವ ಇದು, ಡಝನ್ ಗಟ್ಟಲೆ ಬಟ್ಟೆಬರೆಯನ್ನು ತನ್ನ ಒಡಲಾಳದಲ್ಲಿ ಹುದುಗಿಸಿಕೊಂಡು, ಹೊರಗೆ ಮಾಮೂಲಿಯಾಗಿ ಬಾಗಿಲಿನಂತೆ ಕಾಣುತ್ತದೆ. ಕೋಣೆಯನ್ನು ಕಿರಿದಾಗದಂತೆ ತಡೆಯಲು ಇರುವ ಮಾರ್ಗ -ಇದೇ ವಾರ್ಡ್‌ರೋಬ್ ಅನ್ನು ಗೋಡೆಯಲ್ಲಿ ಹುದುಗಿಸಿಯೋ ಇಲ್ಲ ಸ್ವಲ್ಪ ಹೊರಚಾಚಿದಂತೆಯೋ ಮಾಡಿ, ಕೋಣೆಯ ಒಳಗಿನ ಸ್ಥಳವನ್ನು ಉಳಿಸಿಕೊಳ್ಳುವುದು.
ಇಟ್ಟಿಗೆ ಗೋಡೆಯಾದರೆ ಸುಮಾರು ಒಂಬತ್ತು ಇಂಚು ಸಾಕು. ಅದರಲ್ಲ ದಪ್ಪ ಸಿಗುತ್ತದೆ. ನೆಲ ಮಹಡಿಯಲ್ಲಾದರೆ, ಪ್ಲಿಂತ್ ಹಾಕುವಾಗಲೇ ಒಂದು ಸ್ಲಾéಬ್ ಅನ್ನು ಹೊರಚಾಚಿದಂತೆ ಮಾಡಬೇಕು ಹಾಗೂ ಇದರಿಂದ ಮೇಲಕ್ಕೆ ಕಂಬಿಗಳು- ಸಾಮಾನ್ಯವಾಗಿ ಎಂಟು ಎಂ ಎಂ ಕಂಬಿಗಳು ಮೇಲೆ ಮೆಶ್ ಗೋಡೆ ಕಟ್ಟಲು ಇಲ್ಲ ಕಾಂಕ್ರಿಟ್ ಹಾಕಲು ಸಹಾಯಕವಾಗಿರುವಂತೆ ಬಿಟ್ಟುಕೊಳ್ಳಬೇಕು. ಹಾಗೆಯೇ ಲಿಂಟಲ್ ಮಟ್ಟದಲ್ಲೂ ಒಂದೂಕಾಲು ಅಡಿ ಹೊರಚಾಚಿದಂತೆ ಹೆಚ್ಚುವರಿ ಕಾಂಕ್ರಿಟ್ ಸ್ಲಾéಬ್ ಅನ್ನು ಹಾಕಿಡಬೇಕು. ಈ ಎರಡನ್ನೂ ಬೆಸೆಯುವಂತೆ ಕಂಬಿ ಕಟ್ಟಿ, ಮೆಶ್ ಹಾಕಿ ಮೆತ್ತಿ ಇಲ್ಲವೇ ಮೂರು ಇಂಚಿನ ಕಾಂಕ್ರಿಟ್ ಹಾಕಿದರೆ, ನಮಗೆ ಗೋಡೆಯ ಒಳಗೆ ಹುದುಗಿರುವಂತಿರುವ ವಾರ್ಡ್‌ರೋಬ್ ಸಿದ್ಧವಾಗುತ್ತದೆ!
ಹೆಚ್ಚುವರಿ ಕೂರುವ ಸ್ಥಳ
ಮನೆ ಚಿಕ್ಕದಿರುವಾಗ ಇರುವ ನಾಲ್ಕಾರು ಆಸನಗಳು ಹಬ್ಬ ಹರಿದಿನಗಳಲ್ಲಿ ಹೆಚ್ಚುಮಂದಿ ನೆಂಟರಿಷ್ಟರು ಬಂದರೆ ಸಾಲದಾಗಬಹುದು. ಆಗ ನಾವು ಅನಿವಾರ್ಯವಾಗಿ ಹೆಚ್ಚುವರಿ ಪೀಠೊಪಕರಣಗಳ ಬಗ್ಗೆ ಚಿಂತಿಸಲು ತೊಡಗುತ್ತೇವೆ. ಆದರೆ ಇರುವ ಜಾಗದಲ್ಲಿ ಹೆಚ್ಚು ಖುರ್ಚಿ ಮತ್ತೂಂದನ್ನು ಹಾಕಿದರೆ, ಅದು ಕಿಷ್ಕಿಂದೆಯಂತೆ ಕಾಣುತ್ತದೆ! ಆದುದರಿಂದ ನಾವು ಬಿಲ್ಟ್ ಇನ್ ಫರ್ನಿಚರ್ ಬಗ್ಗೆ ಯೋಚಿಸುವುದು ಉತ್ತಮ. ಕಿಟಕಿಗಳಿರುವೆಡೆ ದಪ್ಪ ಗೊಡೆಗಳಿಂದ ಆರರಿಂದ ಎಂಟು ಇಂಚಿ ಜಾಗ ಪಡೆದುಕೊಂಡು, ನಾಲ್ಕಾರು ಇಂಚಿನಷ್ಟು ಒಳಗೆ ಹೊರಚಾಚಿದಂತೆ ಲೆಡ್ಜ್ ನೀಡಬೇಕು. ಬೆಂಚ್ ಮಾದರಿಯ ಸ್ಥಳ ನಾಲ್ಕಾರು ಜನರನ್ನು ಕೂರಿಸಲು ಸಾಲುತ್ತದೆ. ಇನ್ನೂ ಹೆಚ್ಚುವರಿ ಅಗಲಬೇಕೆಂದರೆ, ಕಿಟಕಿಯನ್ನು ಮಾಮೂಲಿಯಾಗಿ ಗೋಡೆಯ ಒಳಗೆ ಕೂರಿಸದೆ, ಅದರ ಸುತ್ತಲೂ ಫಿನ್ ಮಾದರಿಯಲ್ಲಿ ಆರರಿಂದ ಒಂಬತ್ತು ಇಂಚಿನಷ್ಟು ಹೊರಚಾಚಿ, ಅಲ್ಲಿ ಕಿಟಕಿಯನ್ನು ಕೂರಿಸಿ, ಸುಲಭದಲ್ಲಿ ಒಂದೂವರೆ ಇಂದ ಎರಡು ಅಡಿಗಳ ಅಗಲದ ಶಾಲ ಸ್ಥಳವನ್ನು ನಿರಾಯಾಸವಾಗಿ ಪಡೆಯಬಹುದು!
ಫೋಲ್ಡಬಲ್ ಡೈನಿಂಗ್ ಟೇಬಲ್
ಇಂದಿನ ಫಾಸ್ಟ್ ಲೈಫ್ – ಬಿರುಸಿನ ದಿನಗಳಲ್ಲಿ ಊಟಕ್ಕೆ ಎಂದು ದಿನವೂ ಕೂರುವ ಅವಧಿ ಅತಿ ಕಡಿಮೆ. ಬೆಳಗಿನ ತಿಂಡಿ ಹತ್ತಾರು ನಿಮಿಷದಲ್ಲಿ ಮುಗಿಯುತ್ತದೆ! ಕೆಲಸಕ್ಕೆ ಹೋಗುವುದರಿಂದ ಭಾನುವಾರ ಹಾಗೂ ಇತರೆ ರಜೆದಿನಗಳಲ್ಲಿ ಮಾತ್ರ ಮಧ್ಯಾಹ್ನದ ಊಟ. ರಾತ್ರಿ ಹತ್ತು ನಿಮಿಷದಲ್ಲಿ ತಿಂದು ಮುಗಿಸಿ ಟಿವಿ ನೋಡುವ ತರಾತುರಿಯಲ್ಲಿ ಇರುತ್ತೇವೆ! ಹಾಗಾಗಿ ದಿನದಲ್ಲಿ ಸುಮಾರು ಒಂದು ಗಂಟೆಯಷ್ಟು ವ್ಯಯಿಸುವ ಸ್ಥಳಕ್ಕೆ ಪ್ರತ್ಯೇಕ ಕೋಣೆಯ ಅಗತ್ಯವಿರುವುದಿಲ್ಲ. ಹಾಗಾಗಿ ಬೇಕೆಂದಾಗ ದಿಢೀರನೇ ಪ್ರತ್ಯಕ್ಷ ಆಗುವ ಫೋಲ್ಡಬಲ್ ಡೈನಿಂಗ್ ಟೇಬಲ್ “ಮಡಿಚಿಡಬಹುದಾದ ಊಟದ ಮೇಜು’ ಇತ್ತೀಚೆಗೆ ಹೆಚ್ಚು ಕಂಡುಬರುತ್ತಿದೆ. ಇದನ್ನು ನಾವು ಬೇಕೆಂದಾಗ ಎಳೆದುಕೊಂಡು ಉಪಯೋಗಿಸಿ, ಮಿಕ್ಕ ಅವಧಿಯಲ್ಲಿ ಹೆಚ್ಚು ಜಾಗ ತೆಗೆದುಕೊಳ್ಳದಂತೆ ಮಡಚಿ ಇಟ್ಟುಬಿಡಬಹುದು.
ಈ ಮೇಜಿನ ಮೇಲೆ ಬಿಸಿಯಾದ ಹಾಗೂ ಭಾರವಾದ ಆಹಾರ ವಸ್ತುಗಳನ್ನು ಇಡಲು ಬಳಸುವ ಕಾರಣ ಸ್ವಲ್ಪ ಗಟ್ಟಿಮುಟ್ಟಾಗಿ ವಿನ್ಯಾಸ ಮಾಡುವುದು ಅಗತ್ಯ.
ಹೆಚ್ಚಿನ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.