ನಿಮಗೂ ಒಂದು ಸಿಪ್‌ ಇರಲಿ !


Team Udayavani, Jun 11, 2018, 11:55 AM IST

sip.jpg

ಷೇರುಪೇಟೆಯಲ್ಲಿ ಏರಿಳಿತ ಇದ್ದೇ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಏರಿಳಿತ ಅಧಿಕವಾಗುತ್ತಿದೆ. ವ್ಯವಹಾರದ ಪ್ರಮಾಣ ಅಧಿಕವಾದಾಗ ಸಹಜವಾಗಿಯೇ ಇಂತಹ ಏರಿಳಿತ ಇದ್ದೇ ಇರುತ್ತದೆ. ಅದೂ ದೇಶೀಯ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ವಹಿವಾಟಿನ ಪ್ರಮಾಣದಲ್ಲಿ  ಅಧಿಕ ಏರಿಕೆ ಆದಾಗ, ಖರೀದಿ ಮತ್ತು ಮಾರಾಟಗಳ ಭರಾಟೆ ಹೆಚ್ಚಿರುತ್ತದೆ.

ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಣ ಹೂಡುವುದು ಅಂದರೆ ಪರೋಕ್ಷವಾಗಿ ಷೇರಿನಲ್ಲಿ ಹಣ ಹೂಡುವುದು. ಹಾಗಾಗಿಯೇ ಷೇರು ಪೇಟೆಯ ಏರಿಳಿತಕ್ಕೆ ಮ್ಯೂಚುವಲ್‌ ಫ‌ಂಡ್‌ ಕೂಡ ಪ್ರತಿಸ್ಪಂದಿಸಲೇ ಬೇಕು. ಮ್ಯೂಚುವಲ್‌ ಫ‌ಂಡ್‌, ಹಣ ಹೂಡಿದ ಷೇರುಗಳ ಬೆಲೆಯಲ್ಲಿ ಇಳಿಕೆ ಆದಾಗ ಸಹಜವಾಗಿಯೇ ನಾವು ಹಣ ಹೂಡಿದ ಮ್ಯೂಚುವಲ್‌ ಫ‌ಂಡಿನ ಮೌಲ್ಯದಲ್ಲೂ ಇಳಿಕೆ ಆಗುತ್ತದೆ. ಮ್ಯೂಚುವಲ್‌ ಫ‌ಂಡ್‌ನ‌ ಸೆಕ್ಟರ್‌ಫ‌ಂಡ್‌ ಅಂದರೆ ಒಂದು ವಲಯದ ಕಂಪನಿಗಳಲ್ಲಿ ಮಾತ್ರ ಹಣ ಹೂಡಿದಾಗ ಹಲವು ಸಂದರ್ಭಗಳಲ್ಲಿ ನಷ್ಟವೇ ಹೆಚ್ಚಾಗುತ್ತಿತ್ತು. ಉದಾಹರಣೆಗೆ ರಿಯಲ್‌ ಎಸ್ಟೇಟ್‌ ಕಂಪನಿಗಳ ಬೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಅಂತಹ ಏರಿಕೆ ಆಗಲಿಲ್ಲ. ಒಂದು ವೇಳೆ ಇನ್‌ಪ್ರಾಫ‌ಂಡ್‌ ನಲ್ಲಿ ಹಣ ಹೂಡಿದ್ದರೆ, ಅವರು ಹೂಡಿದ ಹಣ, ಬೆಳೆಯುವ ಬದಲು ಕರಗುವ ಸಾಧ್ಯತೆಯೂ ಇದೆ. ಹಾಗಾಗಿ ಯಾವುದಾದರೂ ಒಂದೇ ವಲಯದ ಮ್ಯೂಚುವಲ್‌ ಫ‌ಂಡ್‌ಗೆ ಹಾಕುವ ಬದಲು ಎಲ್ಲವೂ ಸೇರಿರುವ, ಒಳಗೊಂಡಿರುವ, ಯೋಜನೆಗಳಲ್ಲಿ ಹಣ ಹೂಡುವುದು ಕ್ಷೇಮ.

ಷೇರುಪೇಟೆಯಲ್ಲಿ ಏರಿಳಿತ ಇದ್ದೇ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಏರಿಳಿತ ಅಧಿಕವಾಗುತ್ತಿದೆ. ವ್ಯವಹಾರದ ಪ್ರಮಾಣ ಅಧಿಕವಾದಾಗ ಸಹಜವಾಗಿಯೇ ಇಂತಹ ಏರಿಳಿತ ಇದ್ದೇ ಇರುತ್ತದೆ. ಅದೂ ದೇಶೀಯ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ವಹಿವಾಟಿನ ಪ್ರಮಾಣದಲ್ಲಿ  ಅಧಿಕ ಏರಿಕೆ ಆದಾಗ, ಖರೀದಿ ಮತ್ತು ಮಾರಾಟಗಳ ಭರಾಟೆ ಹೆಚ್ಚಿರುತ್ತದೆ. ಖರೀದಿಸುವುದು ಮತ್ತು ಮಾರುವುದು ಬಹಳ ಶೀಘ್ರವಾಗಿ ಆಗುವಾಗಲೇ ಏರಿಳಿತವೂ ಅಷ್ಟೆ ತೀವ್ರವಾಗಿ ಇರುತ್ತದೆ. ಈ ಏರಿಳಿತವನ್ನು ಅನುಕೂಲಕರವಾಗಿ, ಲಾಭದಾಯಕವಾಗಿ, ಬಳಸಿಕೊಳ್ಳುವ ಸುಲಭ ಉಪಾಯವೇ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ ಇದನ್ನೇ ಸಿಪ್‌ ಎನ್ನುತ್ತೇವೆ. ಸಿಪ್‌ ಅನ್ನು ಸರಳವಾಗಿ ಹೇಳುವುದಾದರೆ ಒಂದು ಆರ್‌.ಡಿ ಕಟ್ಟಿದ ಹಾಗೆ.

ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಮ್ಯೂಚುವಲ್‌ ಫ‌ಂಡ್‌ನ‌ ಯೋಜನೆಯಲ್ಲಿ ಕಟ್ಟುತ್ತ ಬರುವುದು. ಕನಿಷ್ಠ 500 ರೂಪಾಯಿಗಳಿಂದಲೂ ಈ ಹೂಡಿಕೆ ಆರಂಭಿಸಬಹುದು. ಯಾರು ಬೇಕಾದರೂ ಕಟ್ಟಬಹುದು. ಪ್ರತಿ ತಿಂಗಳೂ ಬ್ಯಾಂಕ್‌ ಖಾತೆಯಿಂದ ನೇರವಾಗಿ ಜಮಾ ಆಗುವ ವ್ಯವಸ್ಥೆ ಇದೆ.

ಮುಖ್ಯವಾಗಿ ಆಗಷ್ಟೇ ಕೆಲಸಕ್ಕೆ ಸೇರಿರುವ, ಮಕ್ಕಳ ಹೆಸರಿನಲ್ಲಿ ಕಟ್ಟಬೇಕು ಎನ್ನುವವರು, ಆರ್ಥಿಕ ಶಿಸ್ತಿನ ಬಹುಮುಖ್ಯ ಭಾಗವಾಗಿ ಸಿಪ್‌ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರತಿ ತಿಂಗಳು ಉಳಿತಾಯ ಮಾಡಿದ ಹಾಗೂ ಆಯಿತು. ಉಳಿಸಿದ್ದನ್ನು ಬೆಳೆಸಲು ಸಹಕಾರಿಯೂ ಆಯಿತು.

ಹೂಡಿಕೆದಾರರ ಅಗತ್ಯಕ್ಕೆ ಅನುಗುಣವಾಗಿ ಸಿಪ್‌ನಲ್ಲೂ ಹಲವಾರು ಯೋಜನೆಗಳಿವೆ, ಅನುಕೂಲತೆಗಳಿವೆ. ಸಣ್ಣ ಹೂಡಿಕೆದಾರರ ಅಗತ್ಯವನ್ನು ಮನಗಂಡು ಹಲವಾರು ರೀತಿಯಿಂದ ಹಣ ಹಿಂಪಡೆಯುವ ಅವಕಾಶವೂ ಇಲ್ಲಿದೆ. ಈಗಂತೂ ಸಿಪ್‌ ಬಗೆಗೆ ಎಲ್ಲೆಡೆಯೂ ಪ್ರಚಾರ ಮಾಡಲಾಗುತ್ತಿದೆ. ಇರುವುದರಲ್ಲಿ ಇದು ಹೆಚ್ಚು ಸುರಕ್ಷ ಅನ್ನಿಸುತ್ತಿದೆ. ಷೇರು ಪೇಟೆ ಇಳಿದಾಗ ನಾವು ಹಾಕಿದ ಅದೇ ಹಣಕ್ಕೆ ಜಾಸ್ತಿ ಯೂನಿಟ್‌ ಪಡೆಯುತ್ತೇವೆ. ಪೇಟೆ ಮೇಲಿರುವಾಗ ಅದೇ ಹಣಕ್ಕೆ ಕಡಿಮೆ ಯೂನಿಟ್‌ ಬರಬಹುದು. ಅಂದರೆ ಮಾರುಕಟ್ಟೆಯ ಅನಿಶ್ಚಿತತೆಯನ್ನು ಸರಿಯಾಗಿ ಎದುರಿಸುವುದಕ್ಕೆ ಇದು ಅತ್ಯಂತ ಸೂಕ್ತ ಮತ್ತು ಸರಳವಾದದ್ದು.

– ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.