ಲೈಫ್ ಡಿಜಿಟಲ್‌ ಘೋಷಣೆಯ ತಾಪತ್ರಯ!


Team Udayavani, Dec 31, 2018, 12:30 AM IST

8.jpg

ಈಗ ಜೀವನ ಪ್ರಮಾಣ ಪತ್ರವನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ನಿರ್ದಿಷ್ಟ ಖಾತೆಯಲ್ಲಿ ವರ್ಷದ 365 ದಿನವೂ ಅದು ಸುರಕ್ಷಿತವಾಗಿರುತ್ತದೆ. ಇದಕ್ಕೆ ಅಧಿಕೃತ ದಾಖಲೆಯ ಮೌಲ್ಯವಿದೆ. ಪೆನ್ಷನ್‌ ಐಡಿಯನ್ನು ನೀಡಿರುವ ಬ್ಯಾಂಕ್‌ಗೆ ತಾನೇತಾನಾಗಿ ದೃಢೀಕರಣದ ದಾಖಲೆ ರವಾನೆಯಾಗುವ ವ್ಯವಸ್ಥೆಯೂ ಇದೆ. ಮತ್ತೆ ನಿವೃತ್ತ ನೌಕರರು ಬ್ಯಾಂಕ್‌ಗೆ ತೆರಳಿ ತನ್ನ ಜೀವಂತ ಪ್ರಮಾಣ ಪತ್ರ ಕೊಡಬೇಕಾಗಿಲ್ಲ.

ನಮ್ಮ ದೇಶದಲ್ಲಿ ಹಲವು ಕೋಟಿ ನಿವೃತ್ತರ ಕುಟುಂಬಗಳಿವೆ. ಇದಕ್ಕೆ ಸೇನೆ, ರಕ್ಷಣಾ ಇಲಾಖೆಯ ನಿವೃತ್ತರನ್ನು ಸೇರಿಸಿದರೆ ಈ ಸಂಖ್ಯೆ ಇನ್ನೂ 25 ಲಕ್ಷ ದಾಟುತ್ತದೆ. ಸಾಂಪ್ರದಾಯಿಕ ಉದ್ಯೋಗಗಳಿಂದ ನಿವೃತ್ತಿ ಎಂದರೆ ಅವರಿಗೆ 60 ದಾಟಿದೆ, ಅವರು ದೇಶದ ಹಿರಿಯ ನಾಗರಿಕರಾಗಿದ್ದಾರೆ ಎಂತಲೇ ಅರ್ಥ. ಇವರಿಗೆ ನಿವೃತ್ತಿ ವೇತನ ಕೊಡುವುದು ಸರ್ಕಾರದ ಜವಾಬ್ದಾರಿ. ಇದೇ ವೇಳೆ, ನಿವೃತ್ತಿಯ ನಂತರದ ಪ್ರತಿ ವರ್ಷ ನಿವೃತ್ತಿ ವೇತನ ಪಡೆಯುವವರಿಂದ ಜೀವಿತ ಪತ್ರವನ್ನು ಪಡೆಯದಿದ್ದರೆ ನಿವೃತ್ತರು ಮೃತರಾದ ನಂತರವೂ ಪೆನ್ಶನ್‌ ಸಂದಾಯವಾಗುತ್ತಿರುತ್ತದೆ. ಇಂಥ ವ್ಯವಸ್ಥೆ ದುರುಪಯೋಗ ಆಗುವುದನ್ನು ತಡೆಯುವುದು ಕೂಡ ಸರ್ಕಾರದ ಕರ್ತವ್ಯ.

ಡಿಜಿಟಲ್‌ ಜೀವಂತಿಕೆ!
ನಿವೃತ್ತಿ ವೇತನ ಪಡೆಯುವವ ಪ್ರತಿ ವರ್ಷದ ನವೆಂಬರ್‌ನಲ್ಲಿ ತಾನು ನಿವೃತ್ತಿ ವೇತನ ಪಡೆಯುವ ಬ್ಯಾಂಕ್‌, ಅಂಚೆ ಇಲಾಖೆಗೆ ತೆರಳಿ ಬದುಕಿರುವ ಬಗ್ಗೆ ಪ್ರಮಾಣ ಪತ್ರ ನೀಡುವುದು ಅತ್ಯಗತ್ಯ. ಈ ಹಿಂದೆ ಸದರಿ ಪೆನÒನ್‌ ಅಕೌಂಟ್‌ ಇರುವ ಬ್ಯಾಂಕಿಗೆ ತೆರಳಿ ಮ್ಯಾನೇಜರ್‌ ಮುಂದೆ ನಿಂತು ತಾವು ಬದುಕಿರುವುದನ್ನು ಸಾಬೀತು ಮಾಡಬೇಕಿತ್ತು ಅಥವಾ ಗೆಜೆಟೆಡ್‌ ಆಫೀಸರ್‌ ಅಥವಾ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪತ್ರ ಪಡೆದು ಅದನ್ನು ಖುದ್ದಾಗಿ ತಲುಪಿಸಬೇಕಾಗಿತ್ತು. ನಿವೃತ್ತರು ಎಂದರೆ 60 ವರ್ಷದವರು ಆಗಿರಬಹುದು ಅಥವಾ 80ಕ್ಕಿಂತ ಹೆಚ್ಚಿನ ವಯೋವೃದ್ಧರೂ ಇರಬಹುದು. ಇವರ ಸಂಕಷ್ಟಕ್ಕೆ ಒಂದು ಪರಿಹಾರವಾಗಿ 2014ರ ನವೆಂಬರ್‌ನಲ್ಲಿ ಡಿಜಿಟಲ್‌ ಜೀವನ್‌ ಪ್ರಮಾಣ್‌ ವ್ಯವಸ್ಥೆ ಘೋಷಣೆಯಾಯಿತು. ಸುಮಾರು ಒಂದು ವರ್ಷದ ಅಂತರದಲ್ಲಿ ಇದು ಅಕ್ಷರಶಃ ಜಾರಿಗೆ ಬಂದಿತು.

ಈ ಜೀವನ್‌ ಪ್ರಮಾಣ್‌ ಎನ್ನುವುದು ನಿವೃತ್ತನ ಬಯೋ ಮೆಟ್ರಿಕ್‌ ಆಧರಿಸಿದ ಜೀವನ ಪ್ರಮಾಣ ಪತ್ರ ವಿತರಿಸುವ ವ್ಯವಸ್ಥೆ. ಕೇಂದ್ರ ಸರ್ಕಾರ ರೂಪಿಸಿದ ಈ ಸೌಲಭ್ಯದಲ್ಲಿ ಮೊತ್ತ ಮೊದಲು ನಿವೃತ್ತರು ನೋಂದಣಿ ಮಾಡಿಕೊಳ್ಳಬೇಕು. ಮೊದಲು ಮೊಬೈಲ್‌ ಅಥವಾ ಪಿಸಿಗೆ ಜೀವನ ಪ್ರಮಾಣ್‌ ಸಾಫ್ಟ್ವೇರ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಿಮ್ಮ ಪೆನ್ಷನ್‌ ಆದೇಶ, ನಿಮ್ಮ ವಿಳಾಸ, ಬ್ಯಾಂಕ್‌ ವಿವರ, ಪೆನ್ಷನ್‌ ಐಡಿ ಮೊದಲಾದ, ಕೇಳುವ ಎಲ್ಲ ಮಾಹಿತಿಗಳನ್ನು ತುಂಬಬೇಕು. ಇಲ್ಲಿ ಆಧಾರ್‌ ಸಂಖ್ಯೆಯ ಜೋಡಣೆ ಮಾಡಿ ದೃಢೀಕರಿಸಿಕೊಳ್ಳಬೇಕು. ನಿವೃತ್ತರು ತಮ್ಮ ಬೆರಳಿನ ಮುದ್ರೆ, ಕಣ್ಣಿನ ಪಾಪೆ ಆಧರಿಸಿ ನೋಂದಣಿ ಮಾಡಿಕೊಳ್ಳಬೇಕು. ಅಧಿಕೃತ ಮೊಬೈಲ್‌ಗೆ ಬರುವ ಒಟಿಪಿ ಮೂಲಕ ದಾಖಲಿಸಿಕೊಳ್ಳುತ್ತಿದ್ದಂತೆ ಇ. ಜೀವನ್‌ ಪ್ರಮಾಣ್‌ ಪತ್ರ ಸಿದ್ಧವಾಗುತ್ತದೆ. ಈ ದಾಖಲೆಯನ್ನು ನಾವೇ ಮುದ್ರಿಸಿಕೊಂಡು ಅವಶ್ಯಕತೆ ಇರುವಲ್ಲಿ ಸಲ್ಲಿಸಬಹುದು. ನಿವೃತ್ತರ ಪರವಾಗಿ ದಾಖಲೆಗಳನ್ನು ಸಲ್ಲಿಸಲು ಅಧಿಕೃತ ವ್ಯಕ್ತಿಯನ್ನು ನೇಮಿಸಿಕೊಳ್ಳಲು ನಿಯಮಗಳಲ್ಲಿ ಅವಕಾಶವಿದೆ.

ಇಲ್ಲಿ ಸಿದ್ಧವಾಗುವ ಜೀವನ ಪ್ರಮಾಣ ಪತ್ರವನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ನಿರ್ದಿಷ್ಟ ಖಾತೆಯಲ್ಲಿ ವರ್ಷದ 365 ದಿನವೂ ಅದು ಸುರಕ್ಷಿತವಾಗಿರುತ್ತದೆ. ಇದಕ್ಕೆ ಅಧಿಕೃತ ದಾಖಲೆಯ ಮೌಲ್ಯವಿದೆ. ಪೆನ್ಷನ್‌ ಐಡಿಯನ್ನು ನೀಡಿರುವ ಬ್ಯಾಂಕ್‌ಗೆ ತಾನೇತಾನಾಗಿ ದೃಢೀಕರಣದ ದಾಖಲೆ ರವಾನೆಯಾಗುವ ವ್ಯವಸ್ಥೆಯೂ ಇದೆ. ಮತ್ತೆ ನಿವೃತ್ತ ನೌಕರರು ಬ್ಯಾಂಕ್‌ಗೆ ತೆರಳಿ ತನ್ನ ಜೀವಂತ ಪ್ರಮಾಣ ಪತ್ರ ಕೊಡಬೇಕಾದುದಿಲ್ಲ.

ಪ್ರತಿ ವರ್ಷ ಬಯೋಮೆಟ್ರಿಕ್‌ ಹಾಗೂ ಮೊಬೈಲ್‌ ಒಟಿಪಿ ಆಧಾರದಲ್ಲಿ ಜೀವಂತ ಇರುವುದನ್ನು ದಾಖಲಿಸಬಹುದು. ಮನೆಯಲ್ಲೊಂದು ಅಂಗೀಕೃತ ಕಂಪನಿಯ ಬಯೋಮೆಟ್ರಿಕ್‌ ಹೊಂದಿದಲ್ಲಿ ಮನೆಯ ಹೊರಗೆ ಕಾಲಿಡದೆಯೂ ಜೀವನ್‌ ಪ್ರಮಾಣ್‌ ಪತ್ರವನ್ನು ಊರ್ಜಿತಗೊಳಿಸಬಹುದು. ನಿವೃತ್ತಿ ವೇತನ ಪಡೆಯಬಹುದು. ದೇಶದ ಹಿರಿಯ ನಾಗರಿಕರಿಗೆ ಇರುವ ಸಂಕಷ್ಟಗಳನ್ನು ತೊಡೆದುಹಾಕಲು ಬಂದ ವ್ಯವಸ್ಥೆ ಇದು ಎಂದು ಬಣ್ಣಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಖುದ್ದು ಜೀವನ್‌ ಪ್ರಮಾಣ್‌ ವೆಬ್‌ಸೈಟ್‌ ಪರಿಶೀಲಿಸಬಹುದು, https://jeevanpramaan.gov.in ಮನೆಯಲ್ಲಿಯೇ ವಾರ್ಷಿಕ ದೃಢೀಕರಣ ಮಾಡಬೇಕೆಂದಿಲ್ಲ. ದೇಶದ ಉದ್ದಗಲದಲ್ಲಿರುವ 40 ಸಾವಿರ ಜೀವನ ಪ್ರಮಾಣ ಕೇಂದ್ರಗಳಲ್ಲಿ ಅಸ್ಥಿತ್ವವನ್ನು ದಾಖಲಿಸಿಕೊಳ್ಳಬಹುದು. ಹತ್ತಿರದ ಬಯೋಮೆಟ್ರಿಕ್‌ ವ್ಯವಸ್ಥೆ ಹೊಂದಿರುವ ಇಂಟರ್‌ನೆಟ್‌ ಕೆಫೆಯಲ್ಲಿಯೂ ಈ ಕೆಲಸ ಮಾಡಬಹುದು. ಈ ವ್ಯವಸ್ಥೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆಲ್ಲ ಅನ್ವಯ. ಅತಿ ಹೆಚ್ಚಿನ ಪ್ರಚಾರ ಪಡೆದರೂ ಈ ಸೌಲಭ್ಯ ತುಂಬಾ ಸಹಕಾರಿ ಅಲ್ಲ!

ಸಮಸ್ಯೆ ಇದೆ!
ಇಡೀ ವ್ಯವಸ್ಥೆ ಬಯೋಮೆಟ್ರಿಕ್‌ ಅನ್ನು ಆಧರಿಸಿದೆ. ಇದರಿಂದ ನಿವೃತ್ತ ನೌಕರನು ತನ್ನ ಮನೆಯಿಂದಲೇ ನೋಂದಾಯಿಸಲು ಅಥವಾ ನವೀಕರಿಸಲು ಒಂದು ಅಧಿಕೃತ ಬಯೋಮೆಟ್ರಿಕ್‌ ಉಪಕರಣವನ್ನು ಇರಿಸಿಕೊಳ್ಳುವುದು ಅನಿವಾರ್ಯ. ಒಂದು ಸಾಮಾನ್ಯ ಬಯೋಮೆಟ್ರಿಕ್‌ ಸಾಧನಕ್ಕೂ ಕನಿಷ್ಠ ಎಂದರೂ ನಾಲ್ಕು ಸಾವಿರ ರೂ.ಗಳ ದರವಿದೆ. ಇಷ್ಟು ವೆಚ್ಚ ಮಾಡಿ ಬಯೋಮೆಟ್ರಿಕ್‌ ಇರಿಸಿಕೊಳ್ಳುವ ಬದಲು ಬಾಡಿಗೆ ಆಟೋ, ಉಬರ್‌ ಟ್ಯಾಕ್ಸಿ ಬಳಸಿಯೂ ಕಡಿಮೆ ವೆಚ್ಚದಲ್ಲಿ ನಮ್ಮ ಇರುವಿಕೆಯನ್ನು ಪ್ರತಿಪಾದಿಸಿಕೊಳ್ಳಬಹುದು ಎಂದು ಹಿರಿಯ ಜೀವಗಳು ಲೆಕ್ಕಾಚಾರ ಮಂಡಿಸುತ್ತಾರೆ!

ಕೆಲವು ಬ್ಯಾಂಕ್‌ಗಳಲ್ಲಿ ಮಾತೃ ಶಾಖೆಯ ಹೊರತಾದ ಬ್ರಾಂಚ್‌ನಲ್ಲಿಯೂ ಜೀವನ ಪ್ರಮಾಣ ಪತ್ರ ಸಲ್ಲಿಸಬಹುದು ಎಂಬ ಅನುಕೂಲ ಇದೆ. ಆದರೆ ಇದು ಎಲ್ಲ ಬ್ಯಾಂಕ್‌ಗಳಲ್ಲಿಯೂ ಜಾರಿಯಲ್ಲಿಲ್ಲ. ಸ್ವಾರಸ್ಯ ಎಂದರೆ, ಮಾತೃ ಶಾಖೆಯಲ್ಲಿಯೇ ಸಲ್ಲಿಕೆ ನಿಯಮ ಇರುವಲ್ಲಿ ಡಿಜಿಟಲ್‌ ಜೀವನ ಪ್ರಮಾಣ ಪತ್ರ ಸೌಕರ್ಯ ಅಷ್ಟರಮಟ್ಟಿಗೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಫಿಂಗರ್‌ ಪ್ರಿಂಟ್‌ ಅಥೆಂಟಿಕೇಷನ್‌ಅನ್ನು ಅಧಿಕೃತ ಮೊಬೈಲ್‌ನ ಆ್ಯಪ್‌ ಬಳಸುವ ಮೂಲಕ ದೃಢೀಕರಿಸಿಕೊಳ್ಳುವ ವ್ಯವಸ್ಥೆ ಬಂದಿದ್ದರೆ ನಿವೃತ್ತರಿಗೆ ಹೆಚ್ಚು ಸುಲಭವಾಗುತ್ತಿತ್ತು ಎಂಬ ಅಭಿಪ್ರಾಯವಿದೆ. ಇದೇ ವೇಳೆ, ವಂಚನೆಗಳ ಕೂಪವಾಗಿರುವ ನಮ್ಮ ದೇಶದಲಿ,É ಈ ಸವಲತ್ತನ್ನು, ನಿವೃತ್ತರ ಹೆಸರಿನಲ್ಲಿ ಬದುಕಿರುವವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಭಯದಿಂದಲೇ ಕೇಂದ್ರ ಸರ್ಕಾರ ಡಿಜಿಟಲ್‌ ಜೀವನ ಪ್ರಮಾಣ ಪತ್ರದ ನವೀಕರಣವನ್ನು ಸರಳೀಕರಣ ಮಾಡಿಲ್ಲ ಎನ್ನಲಾಗುತ್ತಿದೆ.

ಆಧಾರ್‌ ಲಿಂಕ್‌ ಭವಿಷ್ಯ?
ಆಧಾರ್‌ ಕಾರ್ಡ್‌ಅನ್ನು ಬೇರೆ ಬೇರೆ ಯೋಜನೆಗಳಿಗೆ ಜೋಡಿಸುವುದಕ್ಕೆ ಸುಪ್ರೀಂ ಕೋರ್ಟ್‌ ಪ್ರತಿಬಂಧ ಹೇರಿದೆ. ಹಾಗಾಗಿಯೇ ಮೊಬೈಲ್‌ ಸಿಮ್‌ ಖರೀದಿಗೆ ಇನ್ನು ಮುಂದೆ ಆಧಾರ್‌, ಬೆರಳಚ್ಚು ನೀಡುವ ನಿಯಮ ಕೊನೆಗೊಳ್ಳುವಂತಾಗಿದೆ. ಬ್ಯಾಂಕ್‌ ಖಾತೆಯನ್ನು ತೆಗೆಯುವಾಗ ಆಧಾರ್‌ ಕೆವೈಸಿ ಪಡೆಯುವುದನ್ನು ಬಿಟ್ಟು ಹಿಂದಿನ ಸಾಂಪ್ರದಾಯಿಕ ದಾಖಲೆ ವ್ಯವಸ್ಥೆಗೆ ಮರಳಬೇಕಾಗಿದೆ. ಇಂಥದ್ದೇ ಸನ್ನಿವೇಶದಲ್ಲಿ ಇ ಜೀವನ್‌ ಪ್ರಮಾಣ್‌ ಸಂಪೂರ್ಣವಾಗಿ ಆಧಾರ್‌ ಜೋಡಣೆ ಹಾಗೂ ಫಿಂಗರ್‌ ಪ್ರಿಂಟ್‌ ಆಧರಿಸಿರುವುದರಿಂದ ಅದರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ. ಈವರೆಗೆ ಯಾವುದೇ ಸರ್ಕಾರದ ಇಲಾಖೆಯಿಂದ ಈ ಕುರಿತು ಸ್ಪಷ್ಟೀಕರಣವನ್ನು ನಾವು ಕೇಳಿಸಿಕೊಂಡಿಲ್ಲ. ವಯಸ್ಸಾಗುತ್ತಿದ್ದಂತೆ ಬೆರಳಿನ ಮುದ್ರೆಗಳು ಮಸುಕುಗೊಳ್ಳುತ್ತವೆ. ಇದೇ ಕಾರಣದಿಂದ ದೃಢೀಕರಿಸಿಕೊಳ್ಳುವ ಪ್ರಯತ್ನ ಪದೇ ಪದೇ ವಿಫ‌ಲವಾಗುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಕೂಡ ಗಮನ ಹರಿಸಬೇಕಾಗಿದೆ.

ಮೊನ್ನೆ ಮೊನ್ನೆಯ ಎರಡು ಬೆಳವಣಿಗೆಗಳನ್ನು ಇಲ್ಲಿ ಪ್ರಸ್ತಾಪಿಸಬೇಕು. ಸ್ಟೆಟ್‌ ಬ್ಯಾಂಕ್‌ ಆಫ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ, ನವೆಂಬರ್‌ 30ರೊಳಗೆ ಜೀವನ ಪ್ರಮಾಣ ಪತ್ರ ನೀಡದವರ ಖಾತೆಗೆ ನಾವು ನಿವೃತ್ತಿ ವೇತನವನ್ನು ಜಮಾ ಮಾಡುವುದನ್ನು ಸ್ಥಗಿತಗೊಳಿಸುತ್ತೇವೆ. ಇತ್ತ ದೇಶದ ಎಂಪ್ಲಾಯ್‌ ಪ್ರಾವಿಡೆಂಟ್‌ ಫ‌ಂಡ್‌ ಆರ್ಗನೈಸೇಷನ್‌ ಇಪಿಎಫ್ಓ ಸುತ್ತೋಲೆಯನ್ನು  ಕಳೆದ ಏಪ್ರಿಲ್‌ನಲ್ಲಿ ಹೊರಡಿಸಿ ನಿವೃತ್ತಿ ವೇತನ ತರಿಸುವ ಎಲ್ಲ ಬ್ಯಾಂಕ್‌, ಅಂಚೆಗೆ ಸ್ಪಷ್ಟಪಡಿಸಿದೆ- ಆಧಾರ್‌ ಕಾರ್ಡ್‌ ಇಲ್ಲದವರಿಗೆ, ಡಿಜಿಟಲ್‌ ಲಿಂಕ್‌ ಮಾಡದವರಿಗೆ ಹಾಗೂ ತಮ್ಮ ಆರೋಗ್ಯದ ಕಾರಣ ಬ್ಯಾಂಕ್‌ಗೆ ಬಂದು ಜೀವನ ಪ್ರಮಾಣ ಪತ್ರ ನೀಡಲಾಗದವರಿಗೆ ನಿವೃತ್ತ ವೇತನವನ್ನು ಸ್ಥಗಿತಗೊಳಿಸುವಂತಿಲ್ಲ. ಅಂತಹ ಪ್ರಕರಣಗಳಲ್ಲಿ ಜೀವನ ಪ್ರಮಾಣ ಪತ್ರ ನೀಡದಿರುವುದಕ್ಕೆ ಇರುವ ಕಾರಣವನ್ನು ಪರಿಶೀಲನೆಯಿಂದ ದೃಢಪಡಿಸಿಕೊಂಡು ಪ್ರತ್ಯೇಕ ದಾಖಲೆ ಪುಸ್ತಕದಲ್ಲಿ ನಮೂದಿಸಿ ನಿವೃತ್ತಿ ವೇತನವನ್ನು ವಿತರಿಸಲು ಕ್ರಮ ತೆಗೆದುಕೊಳ್ಳಬೇಕು.

ಕಳೆದ ನವೆಂಬರ್‌ 14ರಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ನಿವೃತ್ತರ ಹಿತರಕ್ಷಣಾ ವಿಭಾಗ ಹಿರಿಯರ ನೆರವಿಗೆ ಧಾವಿಸಿದೆ. ನಿವೃತ್ತರು ಎದ್ದೇಳದ ಸ್ಥಿತಿಯಲ್ಲಿದ್ದರೆ ಅವರ ವಿನಂತಿಯ ಮೇರೆಗೆ ನಿವೃತ್ತಿ ವೇತನ ಒದಗಿಸುವ ಬ್ಯಾಂಕ್‌ನ ಅಧಿಕಾರಿಯೇ ಅವರ ಮನೆಗೆ ಭೇಟಿ ನೀಡಿ ಜೀವನ ಪ್ರಮಾಣ ಪತ್ರವನ್ನು ನೀಡಬಹುದು, ನವೀಕರಿಸಬಹುದು. ಗೆಜೆಟೆಡ್‌ ದರ್ಜೆಯ ವೈದ್ಯರು ಕೂಡ ಹಿರಿಯ ನಿವೃತ್ತರನ್ನು ಪರೀಕ್ಷಿಸಿ ನೀಡುವ ದೃಢೀಕರಣ ಪತ್ರ, ನಿವೃತ್ತಿ ವೇತನ ಮುಂದುವರೆಸಲು ಸಾಕಾಗುವ ದಾಖಲೆಯಾಗಿರುತ್ತದೆ. ಈ ವೈದ್ಯರ ದಾಖಲೆಯನ್ನು ನೀಡಿದ 30 ದಿನಗಳೊಳಗೆ ಸಲ್ಲಿಕೆ ಮಾಡಿರಬೇಕು. ಈ ದೇಶದಲ್ಲಿ ಇವನ್ನು ನಿರೀಕ್ಷಿಸುವುದು ಕಷ್ಟ!

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.