ಜೀವ ವಿಮೆ  vs ವಾಹನ ವಿಮೆ


Team Udayavani, Feb 20, 2017, 3:45 AM IST

vime.jpg

ವಾಹನ ನಮ್ಮ ಬದುಕಿನ ಅಗತ್ಯಗಳಲ್ಲಿ ಒಂದು. ಸ್ವಂತ ವಾಹನ ಹೊಂದುವುದು ಲಕುjರಿ ಎಂಬ ಭಾವನೆ ಇದ್ದ ದಿನಗಳು ದೂರಸರಿದು ಹೋಗಿದೆ. ಇಂದು ವಾಹನ ಎಲ್ಲರಿಗೂ ಬೇಕು. ಅದು ಅನಿವಾರ್ಯವೂ, ಬದುಕಿನ ಅವಿಭಾಜ್ಯ ಆಗಿಹೋಗಿದೆ.  

ಆದರೆ ಇಲ್ಲೊಂದು ಸಂಗತಿಯನ್ನು ನಾವು ಗಮನಿಸಬೇಕು. ಇಂದಿನ ಧಾವಂತದ ಯುಗದಲ್ಲಿ ಎಲ್ಲವೂ ಅನಿಶ್ಚಿತವಾಗಿರುವುದರಿಂದ ವಿಮೆ ಮಾಡಿಸುವುದು ಕೂಡ ತುಂಬಾ ಆವಶ್ಯಕ.  ಜೀವವಿಮೆ, ವಾಹನವಿಮೆ, ಸಾಲದಮೇಲೆವಿಮೆ, ಬೆಳೆವಿಮೆ, ಅಂಗಡಿ ವಿಮೆ, ಮನೆಮೇಲೆ ವಿಮೆ ಹೀಗೆ ಎಲ್ಲದಕ್ಕೂ ವಿಮಾ ರಕ್ಷೆ ಒದಗಿಸುವ ಸುವಿಧೆ ನಮಗಿದೆ. ಒಂದೊಂದಕ್ಕೂ ತನ್ನದೇ ಆದ ನೀತಿ ನಿಯಮಾವಳಿಗಳೂ ಇವೆ.

ಆದರೆ ವಾಹನ ವಿಮೆ ಹೊರತುಪಡಿಸಿ ಉಳಿದ್ಯಾವುದೂ ಕಡ್ಡಾಯವಲ್ಲ. ಜೀವ ವಿಮೆ ಮಾಡಿಸದೇ ಇರುವ ಅಥವಾ ಜೀವ ವಿಮೆಯನ್ನು ಇಷ್ಟಪಡದ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ವಾಹನ ವಿಮೆಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು. ಅನ್ಯಥಾ ನಿಮ್ಮ ವಾಹನ ರಸ್ತೆಗಿಳಿಯುವುದು ಸಾಧ್ಯವಿಲ್ಲ. ಕಾನೂನು ರೀತ್ಯಾ ಪ್ರತಿ ವಾಹನಕ್ಕೂ ವಿಮೆ ಕಡ್ಡಾಯ.  ಹಾಗಾಗಿ ಎಲ್ಲರೂ ಒಂದಿಲ್ಲೊಂದು ವಿಧದ ವಿಮೆಯನ್ನು ತಂತಮ್ಮ ವಾಹನದ ಮೇಲೆ ಮಾಡಿಸಿಕೊಂಡಿರುತ್ತೇವೆ. ಅಲ್ಲವೇ?  ಅಚಾನಕ್‌ ಆಗಿ ಸಂಭವಿಸಬಹುದಾದ ಅವಘಡ ಮತ್ತು ಅದರಿಂದ ಉಂಟಾಗಬಹುದಾದ ಹಾನಿಯ ನಷ್ಟಭರ್ತಿಗೆ ಅಥವಾ ವಾಹನ ಕಳವಾದರೆ ಈ ವಾಹನ ವಿಮೆ ನೆರವಾಗುತ್ತದೆ. 

ಆದರೆ ಜೀವ ವಿಮೆಯ ಬಗ್ಗೆ ನಿರ್ಲಕ್ಷವೇಕೆ?
ಇಲ್ಲೊಂದು ಉದಾಹರಣೆಯ ಮೂಲಕ ವಿಚಾರದ ಪರಾಮರ್ಶೆ ಮಾಡೋಣ. ಸರಿಸುಮಾರು ಎಂಟುಲಕ್ಷ ರೂಪಾಯಿ ಬೆಲೆಬಾಳುವ ವಾಹನವೊಂದಕ್ಕೆ ವಿಮೆ ಮಾಡಿಸಲು ವಾರ್ಷಿಕ ಸುಮಾರು ಇಪ್ಪತ್ತೆಂಟುಸಾವಿರ ಮೊತ್ತ ತುಂಬಬೇಕಾಗುತ್ತದೆ.  

ಆದರೆ ಇಂತಹ ವಾಹನವೊಂದನ್ನು ಹೊಂದಿರುವ ಅದರ ಮಾಲೀಕ ತನ್ನ ಜೀವಕ್ಕೆ ಅಷ್ಟು ಮೊತ್ತದ ಪ್ರೀಮಿಯಂ ಕಟ್ಟಿರುವುದಿಲ್ಲ, ಮತ್ತು ಅನೇಕರು ತಮ್ಮ ಸ್ವಂತ ಜೀವಕ್ಕೆ ವಿಮೆ ಮಾಡಿಸಿಕೊಂಡೇ ಇರುವುದಿಲ್ಲ.

ವಾಹನಕ್ಕಿಂತ ನಿಮ್ಮ ಜೀವ ಮುಖ್ಯವಲ್ಲವೇ?

ವಾಹನ ವಿಮೆ ಕಾನೂನುರೀತ್ಯಾ ಕಡ್ಡಾಯ ಎಂಬ ಕಾರಣಕ್ಕಾಗಿ ನಾವು ನೀವೆಲ್ಲರೂ ಅದನ್ನು ಮಾಡಿಸಿರುತ್ತೇವೆ. ಆದರೆ ವೈಯುಕ್ತಿಕ ಜೀವ ವಿಮೆಗೆ ಅಂತಹ ಕಾನೂನಾತ್ಮಕ ಕಡ್ಡಾಯಗಳೇನೂ ಇಲ್ಲವಲ್ಲ. ಹಾಗಾಗಿ ಆ ಬಗ್ಗೆ ದಿವ್ಯ ನಿರ್ಲಕ್ಷವನ್ನು ನಾವೆಲ್ಲರೂ ತಾಳಿರುತ್ತೇವೆ. ಹಾಗೆ ನೋಡಿದರೆ ವಾಹನ ನಮ್ಮ ಬದುಕಿನುದ್ದಕ್ಕೂ ಇರುವುದಿಲ್ಲ. ಸ್ಕೂಟರು, ಕಾರು, ಬೈಕುಗಳನ್ನು ನಾವು ಆಗಿಂದಾಗೆÂ ಬದಲಿಸುತ್ತಲೇ ಇರುತ್ತೇವೆ. ಆದರೆ ಪೂರ್ತಿ ಜೀವನ ನಮ್ಮ ಕುಟುಂಬದೊಂದಿಗೆ ಕಳೆಯುವ ನಮಗೆ ವೈಯುಕ್ತಿಕವಾಗಿ ವಿಮೆ ಬೇಕು ಎಂದೆನಿಸುವುದಿಲ್ಲ ಏಕೆ.  ವಾಹನ ಅವಘಡದ ಸಂದರ್ಭದಲ್ಲಿ ನಷ್ಟ ಭರ್ತಿ ಮಾಡಲು ಹೇಗೆ ವಿಮೆ ಸಹಾಯಕವಾಗುತ್ತದೋ, ಅದೇ ರೀತಿ ಆಕಸ್ಮಿಕವಾಗಿ ನಮ್ಮ ಬದುಕಿಗೆ ಆಘಾತ ಉಂಟಾದಾಗ ಅವಲಂಬಿತ ಕುಟುಂಬದ ನಷ್ಟಭರ್ತಿಗೆ ವಿಮೆ ಬೇಕೆಂಬ ಸಾಮಾನ್ಯ ಅರಿವು ಸಾರ್ವತ್ರಿಕವಾಗಿ ಏಕಿಲ್ಲ? 
ವಾಹನಕ್ಕೆ ಮೌಲ್ಯನಿಗದಿ ಮಾಡಿದಂತೆ ವೈಯುಕ್ತಿಕ ಜೀವಕ್ಕೂ ಮೌಲ್ಯಮಾಪನ ಆಗಬೇಕು. ಇದು ಬಹಳ ಮುಖ್ಯವಾದದ್ದು. ವಾಹನವೊಂದಕ್ಕೆ ಅದರ ಮಾರುಕಟ್ಟೆ ಮೌಲ್ಯ, ತಯಾರಿಕಾ ವರ್ಷ, ತಯಾರಿಕಾ ಕಂಪೆನಿ ಇವುಗಳ ತುಲನೆಯಲ್ಲಿ ಬೆಲೆನಿಗದಿಯಾಗುತ್ತದೆ.  ಅದಕ್ಕೆ ತಕ್ಕಂತೆ ವಿಮೆಯನ್ನೂ ವಾರ್ಷಿಕವಾಗಿ ಮಾಡಿಸಲಾಗುತ್ತದೆ. ಆದರೆ ವೈಯುಕ್ತಿಕವಾಗಿ ನಮ್ಮ ಜೀವಕ್ಕೆ ಅಂತ ಮೌಲ್ಯಮಾಪನ ಮಾಡುವುದಿಲ್ಲ. ನಮ್ಮ ವಾರ್ಷಿಕ ವರಮಾನ, ಅವಲಂಬಿತ ಕುಟುಂಬದ ಗಾತ್ರ, ಮಕ್ಕಳ ವಯಸ್ಸು, ಅವರ ಶಿಕ್ಷಣ ಮತ್ತು ಇನ್ನಿತರ ಅಗತ್ಯಗಳು, ವಯೋಮಾನ ಇವೆಲ್ಲವನ್ನೂ ಆಧರಿಸಿ ವ್ಯಕ್ತಿಗತವಾಗಿಯೂ ಮೌಲ್ಯನಿರ್ಧರಣೆ ಮಾಡಿಕೊಂಡು ಅದಕ್ಕನುಗುಣವಾಗಿ ಜೀವ ವಿಮೆ ಮಾಡಿಸುವುದು ಹಿತವಲ್ಲವೇ?  ಈ ಬಗ್ಗೆ ನಾವ್ಯಾರೂ ವ್ಯಾಪಕವಾಗಿ ಯೋಚಿಸಿಯೇ ಇರುವುದಿಲ್ಲ.

ಟರ್ಮ್ ಇನುÒರೆನ್ಸ್‌ ಸೂಕ್ತವೇ?
ಎಲ್ಲರಿಗೂ ತಿಳಿದಿರುವಂತೆ ವಾಹನ ವಿಮೆ ಬಾಬಿ¤ಗೆ ವಾರ್ಷಿಕವಾಗಿ ನಾವು ಕಟ್ಟುವ ಪ್ರೀಮಿಯಂ ಮೊತ್ತ ವಾಪಾಸು ಸಿಕ್ಕುವುದಿಲ್ಲ. ಒಂದೊಮ್ಮೆ ಅಪಘಾತ, ಕಳವು ಇಂತಹ ಪ್ರಸಂಗಗಳು ಎದುರಾದಾಗ ಪಾಲಿಸಿಯ ಮೇಲೆ ಕ್ಲೈಮು ಪಡೆಯುವುದು ಮಾತ್ರ ಸಾಧ್ಯ.  ಅಂತೆಯೇ ಜೀವ ವಿಮೆ ವಿಚಾರಕ್ಕೆ ಬರುವುದಾದರೆ, ಇಲ್ಲಿ ಜೀವ ವಿಮೆಯನ್ನು ಉಳಿತಾಯದ ದೃಷ್ಟಿಯಿಂದ, ಸುಭದ್ರತೆಯ ದೃಷ್ಟಿಯಿಂದ ಮಾಡಲಾಗುತ್ತದೆ.  ನಿಗದಿತ ಅವಧಿಯಲ್ಲಿ ಇಂತಿಷ್ಟು ಇಳುವರಿ ಕೊಡುವ ಪಾಲಿಸಿಗಳನ್ನು ಜನ ಕೊಂಡಿರುತ್ತಾರೆ.  ಆದರೆ ಇವೆಲ್ಲಕ್ಕೂ ಹೊರತಾಗಿ ಕೇವಲ ಒಬ್ಬ ವ್ಯಕ್ತಿಯ ಜೀವಿತವನ್ನು ಗಮನದಲ್ಲಿಟ್ಟು ವಿಮಾ ಕಂಪೆನಿಗಳು ಹೊರತಂದಿರುವ ಟರ್ಮ್ ಇನುÒರೆನ್ಸ್‌ ಪಾಲಿಸಿಗಳನ್ನು ಕೊಂಡರೆ ಅದು ಕೂಡ ವಾಹನ ವಿಮೆಗೆ ಸಮಾನವಾದ ಹೂಡಿಕೆಯಾಗುತ್ತದೆ. ವಾರ್ಷಿಕ ನಾವು ಕಟ್ಟುವ ಪ್ರೀಮಿಯಂ ವಾಪಾಸು ಸಿಗುವುದಿಲ್ಲ.

ಆದರೆ ಅವಘಡ, ಸಾವು ಸಂಭವಿಸಿದರೆ ಅವಲಂಬಿತರಿಗೆ ನಿಗದಿಯಾದ ಮೊತ್ತ ಸಂದಾಯವಾಗುತ್ತದೆ.  ಇದು ವಾಹನ ವಿಮೆಗೆ ಸಮಾನಾಂತರವಾದ ಜೀವಮಾ ಸವಲತ್ತು ಎಂಬುದು ಗಮನಾರ್ಹ. ಈ ವಿಚಾರವನ್ನು ನಾವು ಬಹುತೇಕ ಮಂದಿ ಗಮನಿಸಿಯೇ ಇಲ್ಲ. ನಾವು ನಮ್ಮ ವೈಯುಕ್ತಿಕ ಜೀವನಕ್ಕೆ ಕೊಡುವ ಪ್ರಾಮುಖ್ಯತೆಗಿಂತ ನಾವು ಬಳಸುವ ವಾಹನದ ಮೇಲೆ ಹೆಚ್ಚಿನ ಗಮನ ವಹಿಸಿರುತ್ತೇವೆ.  ಇದು ಸೂಕ್ತ ನಿರ್ಧಾರ ಖಂಡಿತವಾಗಿಯೂ ಅಲ್ಲ. ನಾವು ಬಳಸುವ ವಾಹನ ಅಥವಾ ಉಪಕರಣಕ್ಕಿಂತ ಹೆಚ್ಚಿನ ಮಹತ್ವ ನಮ್ಮ ಬದುಕಿಗಿದೆ. ಅದನ್ನು ನಾವು ಅರಿತಾಗ, ಅರಿತು ಜಾಣ ನಿರ್ಧಾರವನ್ನು ತೆಗೆದುಕೊಂಡಾಗ ಮಾತ್ರ ಬದುಕನ್ನು ಸಂತೋಷಮಯವಾಗಿಸುವುದು ಸಾಧ್ಯ. 

ವ್ಯತ್ಯಾಸ ಏನು?
ವಾಹನ ಹಾಗೂ ಟರ್ಮ್ ವಿಮೆ  ಈ ಎರಡರಲ್ಲೂ ಸಾಮ್ಯವಿದೆ. ಈ ಎರಡೂ ಪಾಲಿಸಿಗಳ ಬಾಬ್ತು ಪಾವತಿ ಮಾಡುವ ವಾರ್ಷಿಕ ಪ್ರೀಮಿಯಂ ಧಾರಕನಿಗೆ ವಾಪಾಸು ಸಿಗುವುದಿಲ್ಲ. ವಾಹನ ಅಪಘಾತಕ್ಕೆ ಒಳಗಾದರೆ, ವ್ಯಕ್ತಿ ತೀರಿಕೊಂಡರೆ ಕ್ಲೈಮು ಮಾಡುವುದಕ್ಕೆ ಅವಕಾಶ ಇದ್ದೇ ಇರುತ್ತದೆ.  ಹೀಗಾಗಿ ಹೆಚ್ಚಿನವರು ವೈಯುಕ್ತಿಕ ವಿಮೆ ಮಾಡಿಸಲು ಹೋಗುವುದಿಲ್ಲ ಅಥವಾ ಮಾಡಿಸಿದರೂ ತಮಗೆ ಸೂಕ್ತವಲ್ಲದ ಕಡಿಮೆ ಮೊತ್ತಕ್ಕೆ ಮಾಡಿಸಿರುತ್ತಾರೆ. 

ಒಂದು ಸತ್ಯ ಏನೆಂದರೆ ವಾಹನಮೆಯ ಅರ್ಧದಷ್ಟು ಮೊತ್ತದಲ್ಲಿ ವೈಯ್ಯಕ್ತಿಕ ಮೆ ಮಾಡಿಸಬಹುದು. ನೋಡಿ, ನಿಮ್ಮ ವಾಹನ ವಿಮೆಗೆ ವಾರ್ಷಿಕವಾಗಿ ವೆಚ್ಚ ಮಾಡುವ ಹಣದ ಅರ್ಧ ಮೊತ್ತವನ್ನು ವೈಯುಕ್ತಿಕ ವಿಮಾ ಪಾಲಿಸಿಗೆ ನಿಯೋಜಿಸಿದರೆ, ನಿಮ್ಮ ಅವಲಂಬಿತ ಕುಟುಂಬಕ್ಕೆ ಸಿಗುವ ಆರ್ಥಿಕ ಸುರಕ್ಷತೆ ಖಂಡಿತವಾಗಿಯೂ ದೊಡ್ಡದು. ಇದನ್ನು ಗಮನಿಸಿ,  ಅದಕ್ಕೆ ತಕ್ಕಂತೆ ನಮ್ಮ ಜೀವದ ಮೇಲೆ ವೈಯುಕ್ತಿಕ ಸುರಕ್ಷೆತೆಯನ್ನು ಮಾಡಿಸಿಕೊಳ್ಳುವುದು ಜಾಣತನದ ನಿರ್ಧಾರವಾದೀತು. 

– ನಿರಂಜನ

ಟಾಪ್ ನ್ಯೂಸ್

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

1-104

Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!

fadnavis

Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

1-raga

UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

2-gadaga

Gadaga: ಸಂತ ರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ

5

Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

4

Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು

1-ckm

Thirthahalli: ಡಿ.7 ರಂದು 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ, ಜಾತ್ರ ಮಹೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.