ಕುರಿ ಸಾಕಿದ್ದರಿಂದ ಖುಷಿಯ ಬದುಕು !
Team Udayavani, Nov 20, 2017, 11:53 AM IST
ನಮ್ಮಲ್ಲಿ ಕುರಿ ಸಾಕಣೆಯನ್ನು ನಂಬಿ ಬದುಕುವ ಸಾಕಷ್ಟು ಮಂದಿ ಇದ್ದಾರೆ. ಸಾಕಣೆಯ ಬಗ್ಗೆ ಅನುಭವ, ದುಡಿಯುವ ಮನಸ್ಸಿದ್ದರೆ ಕುರಿಗಳಿಂದ ನೆಮ್ಮದಿಯ ಜೀವನವನ್ನು ನಡೆಸಬಹುದೆಂಬುವುದನ್ನು ತರೀಕೆರೆ ತಾಲೂಕಿನ ಸಿದ್ಧರಹಳ್ಳಿಯ ನಾರಣಪ್ಪರವರು ತೋರಿಸಿಕೊಟ್ಟಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರಿಗೆ ಕುರಿ ಸಾಕುವಂತೆ ಪ್ರೇರಣೆಯನ್ನು ನೀಡಿದೆ. ಹತ್ತು ವರ್ಷಗಳ ಹಿಂದೆ ತುಮಕೂರಿನಿಂದ ಒಂದು ಗಂಡು ಒಂಭತ್ತು ಹೆಣ್ಣು ಕುರಿಮರಿಗಳನ್ನು ಖರೀದಿಸಿದ್ದಾರೆ. ಇವುಗಳ ಮರಿಗಳನ್ನು ಸಾಕಿದ್ದಾರೆ. ಇದೀಗ ಇವರ ಬಳಿ ಒಟ್ಟು ಐವತ್ತು ಕುರಿಗಳಿವೆ. ಪ್ರತಿವರ್ಷ ನಲುವತ್ತರಷ್ಟು ಮರಿಗಳನ್ನು ಇವರು ಮಾರಾಟ ಮಾಡುವ ಮೂಲಕ ಅದರಿಂದ ಆದಾಯವನ್ನು ಗಳಿಸುತ್ತಿದ್ದಾರೆ. ಮರಿಗೆ ಹದಿನೆಂಟು ತಿಂಗಳು ಆದಾಗ ಎರಡು ಹಲ್ಲುಗಳು ಬರುತ್ತವೆ. ಈ ಮರಿ ಹತ್ತು ಸಾವಿರ ರೂಪಾಯಿಗೆ ಮಾರಾಟವಾಗುತ್ತದೆ. ಕುರಿಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವುದಕ್ಕಿಂತ ಮರಿಗಳನ್ನು ಮಾರಾಟ ಮಾಡುವುದರಿಂದ ಅಧಿಕ ಲಾಭವಂತೆ. ಒಂದು ವರ್ಷದ ನಂತರ ವರ್ಷಕ್ಕೆ ಎರಡು ಬಾರಿ ಮರಿ ಹಾಕುತ್ತದೆ. ಮರಿಗಳಿಗೆ ಬಹುಬೇಡಿಕೆಯಿದ್ದು ನಾರಾಯಣಪ್ಪನವರ ಮನೆಗೇ ಬಂದು ವ್ಯಾಪಾರಿಗಳು ಕುರಿಗಳನ್ನು ಖರೀದಿಸುತ್ತಾರೆ.
ಪ್ರತಿನಿತ್ಯ ಪಕ್ಕದಲ್ಲಿರುವ ಗುಡ್ಡದಲ್ಲಿ ಮೇಯಲು ಬಿಡುತ್ತಾರೆ. ನಾಲ್ಕು ದಿನಕ್ಕೊಂದು ಬಾರಿ ಕುರಿಗಳನ್ನು ಕೂಡಿಹಾಕುವ ಜಾಗವನ್ನು ಬದಲಾಯಿಸುತ್ತಾರೆ. ಅದರಿಂದ ಕುರಿಗಳ ಆರೋಗ್ಯ ಮತ್ತು ಬೆಳವಣಿಗೆಯೂ ಚೆನ್ನಾಗಿದೆ. ವರ್ಷದಲ್ಲಿ ಎರಡು ಮೂರು ಲೋಡ್‌ನಷ್ಟು ಹಿಕ್ಕೆಗಳನ್ನು ಮಾರಾಟ ಮಾಡುತ್ತಾರೆ. ಲೋಡ್‌ಗೆ ರೂ. 8000 ದರವಿದ್ದು ತೆಂಗು ಅಡಕೆ ತೋಟಗಳಿಗೆ ಉತ್ತಮ ಗೊಬ್ಬರವಿದು. ಇತರ ಸಾಕಣೆಗೆ ಹೋಲಿಸಿದರೆ ಕುರಿಸಾಕಣೆ ತುಂಬಾ ಸುಲಭ. ಇಲ್ಲಿ ಅಧಿಕ ಲಾಭ ಗಳಿಸಬಹುದು. ನೂರು ಕುರಿಗಳ ಸಾಕಣೆಗೆ ಒಬ್ಬನೇ ಸಾಕಾಗುತ್ತದೆಯಂತೆ. ಕುರಿ ಸಾಕಣೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ನಾರಣಪ್ಪರವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್ : 8971338510.
ಚಂದ್ರಹಾಸ ಚಾರ್ಮಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.