ಜೀವನದಿ ಕಥನಗಳು: ನದಿ ಚಿಂತನೆ-1


Team Udayavani, Sep 4, 2017, 2:05 PM IST

04-ISIRI-3.jpg

ನದಿ ಕತೆಗಳ ಪುಣ್ಯಶ್ರವಣ ನಡೆಯುವಾಗ ನಾಡಿನಲ್ಲಿ ಶಾಲೆಗಳಿರಲಿಲ್ಲ. ಈಗ ನಮ್ಮ ಶಾಲೆಗಳಲ್ಲಿ ನದಿ ಹೋಗಲಿ ಕೆರೆಗಳ ಕತೆಯನ್ನೂ ಹೇಳುವವರಿಲ್ಲ. ಕೇಳುವವರೂ ಇಲ್ಲ. ಈಗ ನದಿಗಳಂತೆಯೇ, ಅವುಗಳ ಕುರಿತಾದ ಕತೆಗಳೂ ಕಳೆದು ಹೋಗಿವೆ. ನಲ್ಲಿಯ ಕತೆ, ಕೊಳವೆ ಬಾವಿಗೆ ಬಿದ್ದ ಮಕ್ಕಳ ಕತೆ, ಜಲಕ್ಷಾಮದ ಕತೆಗಳು ಜಾಸ್ತಿಯಾಗಿವೆ. ಮೋಡಬಿತ್ತನೆ, ಪಾತಾಳ ಗಂಗೆಯ ಕತೆಗಳು ಬರಲಿವೆ. ನದಿ ಸಂರಕ್ಷಣೆಯ ಆಂದೋಲನ ದೇಶದ ಗಮನ ಸೆಳೆಯುತ್ತಿರುವ ಈ ಸಮಯದಲ್ಲಿ ನದಿ ಕಥನಗಳ ಮೆಲುಕು ಇಲ್ಲಿದೆ.

ಒಮ್ಮೆ ಲೋಕಕ್ಕೆಲ್ಲ ಬರಗಾಲ ಬಂತು. ನದಿ, ಕೆರೆ, ಬಾವಿಗಳೆಲ್ಲ ಒಣಗಿದವು. ಬೇಸಾಯ ಕಷ್ಟವಾಗಿ ಬದುಕು ಕಷ್ಟವಾಯ್ತು. ಜನರ ಕಷ್ಟ ನೋಡಿದ ಗೌತಮ ಮಹರ್ಷಿಗಳು ಉಗ್ರತಪಸ್ಸು ಮಾಡಿದರು. ಬ್ರಹ್ಮ ಪ್ರತ್ಯಕ್ಷನಾಗಿ, ಬಿತ್ತಿದ ಕೂಡಲೆ ಬೀಜವಾಗಿ ಸಮೃದ್ಧ ಬೆಳೆ ನೀಡುವ ಮೂರು ಬೀಜಗಳನ್ನು ನೀಡಿದನು. ಗೌತಮರು ಆ ಬೀಜಗಳನ್ನು ಅಹಲೆಗೆ ನೀಡಿದರು. ಅಹಲೆ ಪ್ರತಿ ದಿನ ಆ ಬೀಜ ನೆಟ್ಟು ಸ್ನಾನಕ್ಕೆ ಹೋಗಿ ಬರುವಷ್ಟರಲ್ಲಿ ಫ‌ಲವಾಗುತ್ತಿತ್ತು. ಇದರಿಂದ ûಾಮದ ಸಮಯದಲ್ಲಿ ಆಶ್ರಮದಲ್ಲಿ ಅನ್ನದಾನ ಮಾಡಲು ಸಾಧ್ಯವಾಯಿತು. ವಿಷಯ ತಿಳಿದು ಬರದಿಂದ ತತ್ತರಿಸಿದ ಸಹಸ್ರಾರು ಜನಗಳೆಲ್ಲ ಗೌತಮರ ಆಶ್ರಮಕ್ಕೆ ಆಹಾರ ಹುಡುಕಿ ಬಂದರು.  ಸುದ್ದಿ ತಿಳಿದ ಬ್ರಾಹ್ಮಣರೂ ಆಶ್ರಮಕ್ಕೆ ಬಂದು ನೆಲೆಸಿದರು. ಬಹಳ ಕಾಲದ ನಂತರದ ಪರಿಸ್ಥಿತಿ ಸುಧಾರಿಸಿ ಉತ್ತಮ ಮಳೆ ಸುರಿಯಿತು. ಊರು ಬಿಟ್ಟು ಬಂದಿದ್ದ ಜನಗಳು ಊರಿಗೆ ಮರಳಿದರು. ಬ್ರಾಹ್ಮಣರಿಗೂ ಮರಳಿ ಊರಿಗೆ ಹೋಗುವ ಮನಸ್ಸಾಯಿತು. ಗೌತಮರಲ್ಲಿ ವಿಷಯ ತಿಳಿಸಿದರು. “ನಾನು ನಿಮ್ಮ ಸೇವೆ ಮಾಡುತ್ತೇನೆ. ನೀವು ಇಲ್ಲಿಯೇ ನೆಲೆಸಬೇಕು’ ಎಂದು ಗೌತಮರು ವಿನಂತಿಸಿದರು.  

ಊರಿಗೆ ಹೋಗುವ ವಿಷಯವನ್ನು ಇನ್ನೊಮ್ಮೆ ಪ್ರಸ್ತಾಪಿಸಿದರೆ ಗೌತಮ ಮುನಿಗಳು ಕೋಪಗೊಳ್ಳಬಹುದೆಂದು ಬ್ರಾಹ್ಮಣರು ಒಂದು ಉಪಾಯ ಮಾಡಿದರು. ಮುದಿಯಾದ ಒಂದು ಹಸುವನ್ನು ಗೌತಮರ ಗದ್ದೆಗೆ ನುಗ್ಗಿಸಿದರು. ಹಸು ಬೆಳೆ ತಿನ್ನುತ್ತಾ ನಿಂತಿತು.  ಹಸುವನ್ನು ನೋಡಿ ಸಿಟ್ಟಾದ ಗೌತಮರು ಕಮಂಡಲದಲ್ಲಿದ್ದ ನೀರನ್ನು ಹಸುವಿನ ಮೇಲೆ ಸಿಂಪಡಿಸಿದರು.  ಮುದಿ ಗೋವು ತಕ್ಷಣ ಸಾವನ್ನಪ್ಪಿತು. ಗೌತಮರಿಗೆ ಬ್ರಹೆ¾àತಿ ( ಗೋವು ಕೊಂದ ತಪ್ಪು) ತಗಲಿತು. ಆಶ್ರಮದ ಬ್ರಾಹ್ಮಣರಿಗೆ ವಿಷಯ ವಿವರಿಸಿದರು. ಆಶ್ರಮದಿಂದ ಹೋಗಲು ಬ್ರಾಹ್ಮಣರು ನಡೆಸಿದ ತಂತ್ರ ಫ‌ಲಿಸಿತು. ಗೋವಿನ ಸಾವು ನಡೆದ ಆಶ್ರಮದಲ್ಲಿರುವುದು ಸೂಕ್ತವಲ್ಲವೆಂದು ಬ್ರಾಹ್ಮಣರು ಊರಿಗೆ ಹೊರಟರು, ದೋಷ ಪರಿಹಾರಕ್ಕೆ ಗಂಗೆಯನ್ನು ಪಡೆಯಲು ನಿಶ್ಚಯಿಸಿ ಗೌತಮರು ಸಹ್ಯಾದ್ರಿ ಶಿಖರದಲ್ಲಿ ತಪಸ್ಸಿಗೆ ಕುಳಿತರು. ಗೌತಮರ ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾದ. “ನಾನು ಅಜಾnನದಿಂದ ಗೋವಧೆ ಮಾಡಿದೆ. ಪಾಪ ವಿಮೋಚನೆಗೆ ದೇವಗಂಗೆಯನ್ನು ಕರುಣಿಸಿ’ ಎಂದು ಗೌತಮರು ಬೇಡಿದರು. ಆಗ ಶಿವನು ಗೌತಮರಿಗೆ ಸಮಾಧಾನ ಹೇಳಿದನು. ಅದೆಲ್ಲಾ ಬ್ರಾಹ್ಮಣರು ಊರಿಗೆ ಮರಳಲು ನಡೆಸಿದ ಕಪಟವೆಂದು ತಿಳಿಸಿದನು. ಗಂಗೆಯ ಬಿಂದುವನ್ನು ಧಾರೆಯೆರೆದನು. ಗೌತಮನು ಆಶ್ರಮಕ್ಕೆ ಮರಳಿ ಸತ್ತುಬಿದ್ದ ಮುದಿ ಗೋವಿನ ಮೇಲೆ ಅದನ್ನು ಸುರಿದಾಗ ಮರಳಿ ಜೀವ ಬಂದಿತು. ಆ ಬಿಂದುವಾಗಿ ಬಿದ್ದ “ದೇವಗಂಗೆ’ ನದಿಯಾಗಿ  ಹರಿಯಿತು. ಅದೇ “ಗೋದಾವರಿ’ ಎಂದು ಹೆಸರು ಪಡೆಯಿತು. ನದಿಯ ನೀರನ್ನು ಗೌತಮ, ವೃದ್ದಗಂಗೆ ಎಂಬ ಹೆಸರಿನಿಂದಲೂ ಜನ ಸೇವಿಸತೊಡಗಿದರು. 

ಒಮ್ಮೆ ಧರ್ಮಗುಪ್ತನು ನೇಗಿಲು ಹಿಡಿದು ಎಳೆಯುತ್ತಿದ್ದಾಗ ಅದು ಭೂಗತವಾಗಿದ್ದ ಕೋಟಿ ಲಿಂಗನ ತಲೆಗೆ ತಗುಲಿ ಗಾಯವಾಯಿತು. ಶಿವನ ಜಡೆಯಲ್ಲಿ ನೆಲೆಸಿದ್ದ ದೇವಗಂಗೆ ಮೇಲಕ್ಕೆ ಉಕ್ಕಿ ಹರಿದು ಮಡುವಾಗಿ ನಿಂತಿತು. ಇದನ್ನು ನೋಡಿದ ಧರ್ಮಗುಪ್ತ ಮೂಛೆì ಹೋದನು. ಶಿವನ ತಲೆಗೆ ವಿಪ್ರರು ಗಾಯಗೊಳಿಸಿದರೆಂದು ದೇವತೆಗಳು ಬೆದರಿ ಶಿವನನ್ನು ಸ್ತುತಿಸಿದರು. ಶಿವನು ಪ್ರತ್ಯಕ್ಷನಾಗಿ ಇಂದ್ರನಿಗೆ ಹರಸಿದನು. ಆ ಬಳಿಕ ಧರ್ಮಗುಪ್ತನ ಸ್ವಪ್ನದಲ್ಲಿ ಬಂದು, ನೇಗಿಲ ಗಾಯ ಮಾಡಿದ್ದನ್ನು ಕ್ಷಮಿಸಿ ಪೂರ್ವಜನ್ಮದ ವಿವರವನ್ನು ನೆನಪು ಮಾಡಿದನು. “ಲಿಂಗಕ್ಕೆ ನಿಲಯವನ್ನು ರಚಿಸು, ಉತ್ಸವ ಮಾಡಿಸು. ಇವನ್ನು ನಡೆಸುವ ಭಾಗ್ಯವನ್ನು ನಾನು ಕೊಡುವೆ’ ಎಂದನು. ಧರ್ಮಗುಪ್ತ ಶಿಲ್ಪಿಗಳನ್ನು ಕರೆಸಿ ಲಿಂಗಕ್ಕೆ ದೇವಾಲಯ ಕಟ್ಟಿಸಿದನು. ಆನಂತರದಲ್ಲಿ ಧರ್ಮಗುಪ್ತನ ಭಾಗ್ಯ ವೃದ್ಧಿಯಾಯಿತು. ಚಂದ್ರಕುಲದ ಯಯಾತಿಯ ಪುತ್ರ ವಸುಚಕ್ರವರ್ತಿಯು ಪುಷ್ಪಕವಿಮಾನವೇರಿ ದೇವಲೋಕಕ್ಕೆ ಹೋಗಿ ಇಂದ್ರನು ನೀಡಿದ ವೇಣುಧ್ವಜವನ್ನು  ಪಡೆದನು.  ಆ ವೇಣುಧ್ವಜದ ಸಹಾಯದಿಂದ ಶತ್ರುಗಳನ್ನು ಸಂಹರಿಸಿ ಯಜ್ಞ, ಉತ್ಸವಗಳನ್ನು ಸಾಂಗವಾಗಿ ನಡೆಸಿದನು. ಅಲ್ಲಿಯವರೆಗೆ ಸ್ವರ್ಗದಲ್ಲಿ ನೆಲೆಸಿದ್ದ ಗಂಗೆ, ಯಮುನೆ, ಗೋಮತಿ, ನರ್ಮದೆ, ಗೋದಾವರಿ, ತುಂಗಭದ್ರೆ, ಕೃಷ್ಣವೇಣಿ, ಅಘನಾಶಿನಿ, ಕಾವೇರಿ ಮೊದಲಾದ ನದಿಗಳೆಲ್ಲ ಆನಂತರದಲ್ಲಿ ಓಡೋಡಿ ಭೂಮಿಗೆ ಬಂದವು. ಕಡಲ ತಡಿಯಲ್ಲಿ ಅಡಗಿದ ಶಿವನ ಮಸ್ತಕ ಒಡೆದು ಗಂಗೆ ತುಳುಕಿತು. ಶಿವನ ನಿಡುಜಡೆಯನ್ನು ಬಿಡಿಸಿದಾಗ ಭೂಮಿಯ ತುಂಬೆಲ್ಲ ನದಿಗಳೆಲ್ಲ ಹರಿದವು. ತೀರ್ಥರಾಜನು ನೆಲೆಸಿದ ಆ ಸ್ಥಳವು ಕೋಟಿತೀರ್ಥವೆಂದು ಹೆಸರಾಯಿತು. 

ನಮ್ಮ ನಾಡಿನ ನದಿಗಳಲ್ಲಿ ಜೀವಸೆಲೆಯಾದ ನೀರಷ್ಟೇ ಹರಿಯುತ್ತಿಲ್ಲ, ಸಂಸ್ಕೃತಿಯ ಮಹಾ ಕಥನ ಪ್ರವಹಿಸುತ್ತಿದೆ. ನದಿ ಮೂಲದಿಂದ ಸಾಗರ ಸಂಗಮದವರೆಗೆ ಸಹಸ್ರಾರು ವರ್ಷಗಳಿಂದ ಪ್ರಸಿದ್ಧ ತಾಣಗಳಿವೆ. ಇವು ನೆಮ್ಮದಿಯ ನೆಲೆಯಾಗಿ ಎಲ್ಲರನ್ನೂ ಸೆಳೆದಿವೆ.   ಶ್ರೀರಾಮನು  ವನವಾಸಕ್ಕೆ ಹೊರಟ ಸಂದರ್ಭದ ಇನ್ನೊಂದು ಕತೆ ಹೇಳಬೇಕು. ಸಹ್ಯಾದ್ರಿಯ ಮಾರ್ಗದಲ್ಲಿ ದಕ್ಷಿಣದತ್ತ ಋಷಿಗಳ ಆಶ್ರಮ ನೋಡುತ್ತ ಬರುವಾಗ ಶರಾವತಿ ನದಿಯನ್ನು  ಶ್ರೀರಾಮ ನೋಡಿದನು. “ಈ ಸ್ಥಳಕ್ಕೆ ಬಂದಾಗ ಅತ್ಯಧಿಕ ಸಂತೋಷವುಂಟಾಯಿತು.  ಕಾರಣವೇನು?’ ಎಂದು ಋಷಿಗಳನ್ನು ಕೇಳುತ್ತಾನೆ.  “ನೀನು ಶಾಲ್ಮಲಿ ಕಲ್ಪದಲ್ಲಿ ಹದಿಮೂರನೆಯ ಅವತಾರದಲ್ಲಿ ಜನಿಸಿದ ಕಾಲದಲ್ಲಿ ಈ ಸ್ಥಳದಲ್ಲಿ ನಿನಗೆ ಸೀತೆಯೊಂದಿಗೆ ವಿವಾಹ ನಡೆಯಿತು. ಸೀತೆಯೊಂದಿಗೆ ನೀನು ಈ ಸ್ಥಳದಲ್ಲಿ ಬಹಳಕಾಲ ಇದ್ದೆಯೆಂದು ಹೇಳುತ್ತಾರೆ. ಇದರಿಂದ ಸ್ಥಳಕ್ಕೆ ಬಂದಾಗ  ಆ ದಿನಗಳ ನೆನಪಾಗಿ ಸಂತೋಷವಾಗುತ್ತಿದೆ’ ಎಂದು ಮುನಿಗಳು ವಿವರಿಸುತ್ತಾರೆ. 

“ಇಲ್ಲಿನ ಶಿಲೆಗಳ ಮೇಲೆ ನೀನು ಬಾಣಗಳನ್ನು ಎಸೆದೆ. ಇದರಿಂದ ನದಿಗೆ ಶರಾವತಿಯೆಂದು ಹೆಸರು ಬಂದಿತು. ಬಾಣಸ್ಪರ್ಶ ಭೂಮಿಯಲ್ಲಿ ಕಲ್ಪಾಂತರದವರೆಗೆ ಕಾಣುವುದು’ ಎಂದರು. 

ಗೋದಾವರಿ, ಕೋಟಿತೀರ್ಥ, ಶರಾವತಿಗಳಿಗಷ್ಟೇ ಅಲ್ಲ, ಕಾವೇರಿ, ಕೃಷ್ಣೆ, ಭೀಮಾ, ವೇದಾವತಿ ಸೇರಿದಂತೆ ಎಲ್ಲದಕ್ಕೂ ಕತೆಗಳಿವೆ. ವೇದ ಪುರಾಣಗಳು ನದಿ ಕತೆಗಳ ಮಹಾ ಕಣಜವಾಗಿವೆ. ಸಂಸ್ಕೃತದಲ್ಲಿ 15-16ನೇ ಶತಮಾನದಲ್ಲಿ ರಚಿತವಾಗಿರಬಹುದೆನ್ನಲಾದ “ಸಹ್ಯಾದ್ರಿ ಖಂಡ’ ಕೃತಿ, ನದಿ ಕತೆಗಳ ಆಗರ. ಸಹ್ಯಾದ್ರಿ ಪರ್ವತವೇ ಶಿವನ ಲಿಂಗವೆಂಬ ಪತ್ರ ಭಾವನೆ ಇದೆ. ನಾಡಿನ  ಝರಿ, ನದಿಗಳು ದೈವಗಂಗೆಯಾಗಿವೆ. ಶಿವನ ಶಿರದ ಗಂಗೆಯಂತೆ ನಮ್ಮ ನದಿ ಮೂಲಗಳಿವೆ. ವೇದ ಪುರಾಣಗಳ ಪ್ರಕಾರ ಋಷಿ ಮುನಿಗಳು,  ರಾಜ ಮಹಾರಾಜರು,  ಗೃಹಸ್ಥರಾದಿಯಾಗಿ ಎಲ್ಲರೂ ತೀರ್ಥಯಾತ್ರೆ ಮಾಡಿದ್ದಾರೆ. ನದಿ, ಸರೋವರಗಳ ನೆಲೆಯಲ್ಲಿರುವ ಪುಣ್ಯಕ್ಷೇತ್ರಕ್ಕೆ ಪ್ರವಾಸ ಹೋಗುವ ಪವಿತ್ರ ಕಾರ್ಯದಲ್ಲಿ ನದಿ ದರ್ಶನ ಯೋಗವಿದೆ. ಜಗದ ಜನಜೀವನ, ಕೃಷಿ ಬದುಕು ಅರಿಯುವ ವಿಶೇಷವಿದೆ. ಕಾಲ್ನಡಿಗೆಯಲ್ಲಿ ಯಾತ್ರೆ ಹೋಗುತ್ತಿದ್ದ ಆ ಕಾಲದಲ್ಲಿ ತೀರ್ಥಯಾತ್ರೆಗೆ ಹೋದವರು ಮನೆಗೆ ಮರಳುತ್ತಾರೆಂಬ ನಂಬಿಕೆ ಇರಲಿಲ್ಲ. ದೈವೀಭಾವನೆಯಿಂದ ಕ್ಷೇತ್ರದರ್ಶನ ಜೀವನದ ಪುಣ್ಯ ಕೆಲಸವಾಗಿತ್ತು. ಪ್ರಕೃತಿಗೆ ಶರಣಾಗುವ ಯಾತ್ರೆಯ ಪರಿಕಲ್ಪನೆ ಅರಿವನ್ನು ವಿಸ್ತರಿಸುವ ಮಾರ್ಗವಾಗಿದೆ. 

ರಾಜ ಮಹಾರಾಜರ, ಋಷಿಮುನಿಗಳ ಭಕ್ತಿ ಮಾರ್ಗ ವಿವರಿಸುವ ಪುರಾಣಗಳು ನದಿ, ಕಾಡಿನ ಕತೆಗಳ ಮೂಲಕ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಪರಿಣಾಮಕಾರಿ ಪಠ್ಯವಾಗಿ ಕೆಲಸ ಮಾಡಿವೆ. ಹೀಗಾಗಿ ನಮಗೆ ನದಿಗಳೆಂದರೆ ವರ್ಷಕ್ಕೆ ಇಂತಿಷ್ಟು  ಕ್ಯುಸೆಕ್ಸ್‌ ನೀರು ಹರಿಸುವ ಕಾಲುವೆಗಳಲ್ಲ. ಅಣೆಕಟ್ಟೆಯಲ್ಲಿ ನಿಲ್ಲುವ ನೀರಲ್ಲ. ಮರಗಳೆಂದರೆ ಸಸ್ಯಶಾಸ್ತ್ರೀಯ ಹೆಸರು ಹೊತ್ತ ವಾಣಿಜ್ಯ ಉತ್ಪನ್ನವಲ್ಲ. ವೃಕ್ಷದಲ್ಲಿ ದೇವರನ್ನು ತೋರಿಸಿದ ಪುರಾಣ ನದಿ, ಕಾಡುಗಳನ್ನು ಪವಿತ್ರ ಭಾವನೆಯಿಂದ ನೋಡಲು ಕಲಿಸಿದೆ. ಭಕ್ತಿ ಶಿಕ್ಷಣ ನೀತಿ ಮೈದಳೆದಿದೆ. ಇಲ್ಲಿ ವಿಜಾnನದ ನಿಖರ ಕಾರ್ಯ-ಕಾರಣದ ವಿವರಗಳಿಲ್ಲದಿರಬಹುದು. ಪರಿಸರ ಸಂರಕ್ಷಣೆಯ ಮೂಲಕ ಒಟ್ಟಾರೆ ಸಂಕುಲದ ಭವಿಷ್ಯ ಉಳಿಸುವ ಕಾಳಜಿ ಇದೆ. ತಲೆಮಾರಿನ ಜನಕ್ಕೆ ಅರ್ಥವಾಗುವ ಮಾರ್ಗದಲ್ಲಿ ಮನಮುಟ್ಟುವ ಕತೆಗಳು ರೂಪುಗೊಂಡಿವೆ. ರಾಮಾಯಣ, ಮಹಾಭಾರತ ರಚನೆಯಾಗಿ ಸಾವಿರ ಸಾವಿರ ವರ್ಷಗಳ ಬಳಿಕವೂ ಸೀತೆ, ರಾಮ, ಹನುಮ, ಅರ್ಜುನ, ಕೃಷ್ಣರೆಲ್ಲ ಕಾಡು ನದಿಗಳಲ್ಲಿ ಸಿಗುತ್ತಾರೆ.  ಇಲ್ಲಿ ಕೃತಿಯ ಸತ್ವವೂ ಇದೆ, ನದಿಯ ಮಹತ್ವವೂ ಇದೆ. 

ಮುತ್ತುಗಕ್ಕೆ ಮೂರು ಎಲೆಗಳಿರುತ್ತವೆ. ಮಧ್ಯದ ಎಲೆ ವಿಷ್ಣು, ಎಡಗಡೆಯದು ಬ್ರಹ್ಮ, ಬಲಭಾಗದ್ದು ಶಿವನೆಂದು ನಂಬಲಾಗಿದೆ. ಮುತ್ತುಗದ ಕೋಲನ್ನು ವಟುಗಳು ಬ್ರಹ್ಮದಂಡವಾಗಿ ಬಳಸುತ್ತಾರೆ. ಮಹಾಭಾರತ ಕಾಲದಲ್ಲಿ  ಒಮ್ಮೆ ಜಮದಗ್ನಿ ಮಹರ್ಷಿಗಳು ದೇವತೆಗಳಿಗಾಗಿ ಒಂದು ಯಾಗ ಮಾಡುತ್ತಾರೆ. ಯಾಗಕ್ಕೆ ದೇಶದ ಎಲ್ಲ ನದಿಗಳು ಬಂದಿದ್ದವಂತೆ! ಯಾಗ, ಪಲಾಶ ವೃಕ್ಷ(ಮುತ್ತುಗ)ದ ವನದಲ್ಲಿ ನಡೆಯಿತೆಂಬ ಪ್ರತೀತಿ ಇದೆ. ಮುತ್ತುಗ ಜನಪದರಿಗೆ ಮಳೆಯ ಭವಿಷ್ಯ ಹೇಳುವ ಮರವಾಗಿದೆ. ಮುತ್ತುಗದ ಸೋಡಿಗೆಯಲ್ಲಿನ ಬೀಜಗಳ ಸಂಖ್ಯೆ, ಅವುಗಳ ಗಾತ್ರ ಗಮನಿಸಿ ಹಿಂಗಾರಿ, ಮುಂಗಾರಿ ಮಳೆ ಹೇಗೆ ಸುರಿಯುತ್ತದೆಂಬ ಅಂದಾಜು ಮಾಡುತ್ತಿದ್ದರು. ನಾಲ್ಕನೇ ಶತಮಾನದಲ್ಲಿ ರಚಿತವಾದ ಕುರುಬರ ರಟ್ಟಮತ ಶಾಸ್ತ್ರದಲ್ಲಿ ಮರದ ಮಳೆಯ ಕತೆ ಇದೆ. ಪರಿಸರ ಲಕ್ಷಣದ ರೀತ್ಯಾ ಹೇಳುವುದಾದರೆ  ಮುತ್ತುಗ ಅರೆಮಲೆನಾಡು, ಬಯಲುಸೀಮೆಯಲ್ಲಿರುತ್ತದೆ. ಅಂದರೆ ಸ್ವಾಭಾಕವಾಗಿ ನೀರಿನ ಸಮಸ್ಯೆ ಇರುವಲ್ಲಿದೆ. ಪಾಪ! ಜಮದಗ್ನಿ ಮಹರ್ಷಿ ನೀರಿಲ್ಲದ ಆ ನೆಲದಲ್ಲಿ ದೇವತೆಗಳಿಗೆ ಯಾಗ ಮಾಡುವಾಗ ದೇಶದ ನದಿಗಳೆಲ್ಲ ಬಂದಿದ್ದು  ದೇವತೆಗಳ ದಾಹ ತೀರಿಸುವ  ಸಂಕೇತದಂತಿದೆ! 

ಪುರಾಣದ ಕತೆ ಓದುತ್ತ, ನದಿ ನಾಡು ಸುತ್ತಾಡುವಾಗ, ವರ್ತಮಾನ ಸಂಕಟ ಹುಟ್ಟಿಸುತ್ತಿದೆ. ವರ್ಷವಿಡೀ ಭಕ್ತರನ್ನು ಸೆಳೆದು ಪುಣ್ಯಸ್ನಾನಕ್ಕೆ ನೆರವಾಗುತ್ತಿದ್ದ ಪತ್ರ ತೀರ್ಥಗಳು ಒಣಗಲು ಶುರುವಾಗಿ ದಶಕಗಳಾಗಿವೆ. ನದಿಗಳು ಬೇಸಿಗೆ ಆರಂಭದಲ್ಲಿಯೇ ಹರಿವು ನಿಲ್ಲಿಸಿ ಕಡಲ ನೆಂಟಸ್ತನ ಕಡಿದುಕೊಳ್ಳುತ್ತಿವೆ. ಪರಿಸರಸ್ನೇಹಿ ಬದುಕಿನ ಮಾರ್ಗ ತೋರಿಸಿದ ಋಷಿಮುನಿಗಳ ತಪಸ್ಸಿನಿಂದ ಧರೆಗಿಳಿದ ದೈವಗಂಗೆ ಕಳಕೊಂಡು ನಾಡು ನಡುಗುತ್ತಿದೆ. ನಮ್ಮ ಶಾಲೆಗಳಲ್ಲಿ  ನದಿ, ಕೆರೆಗಳ ಕತೆ ಕಳೆದು ಹೋಗಿದೆ. ನಲ್ಲಿಯ ಕತೆ, ಕೊಳವೆ ಬಾವಿಗೆ ಬಿದ್ದ ಮಕ್ಕಳ ಕತೆ, ಜಲಕ್ಷಾಮದ ಕತೆಗಳು ಜಾಸ್ತಿಯಾಗಿವೆ. ಮೋಡಬಿತ್ತನೆ, ಪಾತಾಳ ಗಂಗೆಯಿಂದ ನಿಸರ್ಗ ದೋಚುವ ಕತೆಗಳು ಬರುತ್ತಿವೆ.  ನದಿ ಸಂರಕ್ಷಣೆಯ ಆಂದೋಲನ ಈಗ ದೇಶದ ಜನರ ಗಮನವನ್ನೇನೋ ಸೆಳೆಯುತ್ತಿದೆ. ಆದರೆ ಮುನಿಗಳಂಥ ತಪಸ್ಸು, ಪರಿಸರಸ್ನೇಹಿ ಬದುಕಾದರೂ ಏಲ್ಲಿದೆ? ನದಿ ಉಳಿಸುವ ಮಾತಿನ ಜಾತ್ರೆ ಹವಾನಿಯಂತ್ರಿತ ಕೊಠಡಿಯಲ್ಲಿ ಮೆರೆಯುತ್ತಿದೆ, ಗಬ್ಬು ನೊರೆ ಸೂಸುವ ಬೆಂಗಳೂರಿನ ಬೆಳ್ಳಂದೂರು ಕೆರೆಯ ಚಿತ್ರಗಳು ನೆಲ ಜಲದ ಅನಾಗರಿಕ ನಡೆಗೆ ಸಾಕ್ಷಿಯಾಗಿವೆ.  

ಶಿವಾನಂದ ಕಳವೆ

ಟಾಪ್ ನ್ಯೂಸ್

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.