ಗುಡುಗು, ಸಿಡಿಲಿನಿಂದ ಪಾರಾಗುವುದು ಹೀಗೆ…


Team Udayavani, Apr 30, 2018, 6:15 AM IST

night-lightning-house21.jpg

ಮನೆಗಳಿಗೆ ಸಿಡಿಲು ಬಡಿಯದಂತೆ ತಡೆಯಲು ಎತ್ತರದ ಸ್ಥಳದಲ್ಲಿ ಗುರಾಣಿಯಂತೆ ವಿದ್ಯುತ್‌ ನಿರೋಧಕಗಳನ್ನು ಅಳವಡಿಸಬೇಕು. ಒಂದೊಮ್ಮೆ ಸಿಡಿಲು ಬಡಿದರೂ, ಅದು ಮನೆಯನ್ನು ತಾಗುವ ಮೊದಲೇ ಈ ವಾಹಕಗಳ ಸೆಳೆತಕ್ಕೆ ಒಳಗಾಗಿ ತಾಮ್ರವ ಇಲ್ಲವೇ ಇತರೆ ಉತ್ತಮ ಕಂಡಕ್ಟರ್‌ಗಳ ಮೂಲಕ ಭೂಮಿಯನ್ನು ಶೀಘ್ರವಾಗಿ ಸೇರಲು ಸೂಕ್ತ ಗ್ರೌಂಡಿಂಗ್‌ ವ್ಯವಸ್ಥೆಯನ್ನು ಮಾಡಲಾಗುತ್ತದೆ. 

ಗುಡುಗುಸಹಿತ ಮಳೆ ಮುಂಗಾರಿಗೆ ಮುಂಚೆಯೇ ಶುರುವಾಗುತ್ತದೆ. ಜೊತೆಗೆ ಸಿಡಿಲಿನ ಆರ್ಭಟವೂ ಜೋರಾಗಿರುತ್ತದೆ. ಗುಡುಗನ್ನು ನಾವು ಕಿವಿಗಡಚಿಕ್ಕುವ ಸದ್ದು ಎಂದು ಹೆಚ್ಚು ತಲೆ ಕೆಡಿಸಿಕೊಳ್ಳದಿದ್ದರೂ, ಅದರ ಮೂಲವಾದ ಸಿಡಿಲನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಅಗಾಧವಾದ ವೋಲ್ಟೆàಜ್‌ ಹೊತ್ತ ಮೋಡಗಳು ಭೂಮಿಗೆ ಈ ಶಕ್ತಿಯನ್ನು ಪ್ರಹರಿಸಿದಾಗ ಸಿಡಿಲು   ಉಂಟಾಗುತ್ತದೆ. ಮೋಡಗಳಲ್ಲಿರುವ ವಿದ್ಯುತ್‌ ಶಕ್ತಿ ಸಿಡಿಲಿನ ರೂಪದಲ್ಲಿ  ಭೂಮಿಗೆ ಇಳಿಯುತ್ತದೆ. ಹೀಗೆ ಇಳಿಯುವಾಗ ವಿದ್ಯುತ್‌ಶಕ್ತಿ ತನಗೆ ಎಲ್ಲಿ ಕಡಿಮೆ “ರೆಸಿಸ್ಟನ್ಸ್‌’ ವ್ಯಕ್ತವಾಗುತ್ತದೋ ಆ ಹಾದಿಯ ಮೂಲಕ ಹರಿದು ಭೂಮಿಯನ್ನು ಸೇರಲು ಪ್ರಯತ್ನಿಸುತ್ತದೆ. ಆದುದರಿಂದ, ಮನೆ ಕಟ್ಟುವಾಗ ಅದು ಕಡಿಮೆ ನಿರೋಧ, ಅಂದರೆ ಉತ್ತಮ ವಾಹಕವಾಗಿರದಂತೆ ಎಚ್ಚರ ವಹಿಸಬೇಕು.

ಪ್ರತಿವರ್ಷ ನೂರಾರು ಮಂದಿ ಸಿಡಿಲಿಗೆ ಬಲಿಯಾಗುವುದರ ಬಗ್ಗೆ ಓದುತ್ತಿರುತ್ತೇವೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಸಿಡಿಲು ಹೊಡೆಯುವುದು ಕಡಿಮೆ. ಇದಕ್ಕೆ ಮುಖ್ಯ ಕಾರಣ  ನಗರಗಳಲ್ಲಿ ನೂರಾರು ಕಟ್ಟಡಗಳಿದ್ದು, ಅವುಗಳಲ್ಲಿ ಹೆಚ್ಚು 

ಎತ್ತರವಾಗಿರುವುದಕ್ಕೆ ವಿದ್ಯುತ್‌ ಆಘಾತ ನಿರೋಧಕಗಳನ್ನು ಅಳವಡಿಸಿರುತ್ತಾರೆ. ಈ ಎತ್ತರದ ಕಟ್ಟಡಗಳಿಗೆ ಸಿಡಿಲು ಬಡಿದರೂ, ಅವಕ್ಕೆ ಅಳವಡಿರುವ ವಿದ್ಯುತ್‌ ವಾಹಕಗಳ ಮೂಲಕ ಭೂಮಿಗೆ ತಲುಪಿ, ಕಟ್ಟಡಕ್ಕೆ ಏನೂ ಅಪಾಯವನ್ನು ಮಾಡುವುದಿಲ್ಲ. ಅದೇ ಹಳ್ಳಿಗಳ ಕಡೆ ಬಯಲಿನಲ್ಲಿ ಮೇಯುವ ಆಡು, ಕುರಿಗಳಿಗೂ ಸಿಡಿಲು ಬಡಿದದ್ದನ್ನು ನಾವು ಓದುತ್ತಲೇ ಇರುತ್ತೇವೆ. ಹಾಗೆಯೇ ಒಂಟಿ ಮರದ ಕೆಳಗೆ ಮಳೆಯಿಂದ ಆಶ್ರಯ ಪಡೆಯಲು ನಿಂತಿದ್ದವರಿಗೂ ಸಿಡಿಲು ಬಡಿಯುವುದು ಸಾಮಾನ್ಯ.

ಸಿಡಿಲು ಬಡಿಯದಂತೆ ಮುಂಜಾಗರೂಕತೆ
ನಿಮ್ಮ ಮನೆ, ನೀವಿರುವ  ಪ್ರದೇಶದಲ್ಲಿನ ಅತಿ ಎತ್ತರದ ಕಟ್ಟಡಗಳಲ್ಲಿ ಒಂದೇ? ಎಂದು ಪರಿಶೀಲಿಸಿ. ಹಾಗೆಯೇ, ನಿಮ್ಮ ಮನೆಯ ಅಕ್ಕ ಪಕ್ಕ ಎತ್ತರದ ಮರ ಅಥವಾ ಕಬ್ಬಿಣದ ಕಂಬ ಇತ್ಯಾದಿ ಇದೆಯೇ? ಎಂದು ಪರಿಶೀಲಿಸಿ. ಸಾಮಾನ್ಯವಾಗಿ ಸಿಡಿಲು ಬಡಿಯುವುದು ಆಯಾ ಪ್ರದೇಶದ ಎತ್ತರದ ವಸ್ತು ಇಲ್ಲವೇ ಮನೆಗಳಿಗೇ ಹೆಚ್ಚು. ಹಾಗಾಗಿ, ಪರಿಸ್ಥಿತಿಯನ್ನು ಗಮನಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಗುಡ್ಡ ಇಲ್ಲವೇ ದಿನ್ನೆಗಳ ಮೇಲಿರುವ ಮನೆಗಳಿಗೆ ತಾರಸಿಯ ಮೇಲೆ ಕಬ್ಬಿಣದ ತಂತಿ, ರೇಲಿಂಗ್‌ ಇತ್ಯಾದಿ ಹಾಕುವ ಬದಲು ಪ್ಲಾಸ್ಟಿಕ್‌ ವೈರ್‌ ಬಳಸಬಹುದು. ಹಾಗೆಯೇ ಪ್ಯಾರಪೆಟ್‌ಗೆ ಸಿಮೆಂಟ್‌ ಉರುಳುಗಳನ್ನು ಇಲ್ಲವೇ ತೆಳು ಗೋಡೆಗಳನ್ನು ಬಳಸಬಹುದು. ಈ ಮೂಲಕ ನಾವು ವಿದ್ಯುತ್‌ ಪ್ರಹಾರ ಆಗದಂತೆ ತಡೆಯಬಹುದು.

ಮನೆಯ ಅಕ್ಕ ಪಕ್ಕ ಎತ್ತರದ ಮರ ಗಿಡಗಳಿದ್ದರೆ
ಮಳೆ ಜೋರಾಗಿ ಬೀಳುವಾಗ ಇಡೀ ಮರ ಒದ್ದೆಯಾಗಿ ಉತ್ತಮ ವಿದ್ಯುತ್‌ ವಾಹಕವಾಗಿಬಿಡುತ್ತದೆ. ಹಾಗಾಗಿ ಮೋಡದಲ್ಲಿ ಏರು ಒತ್ತಡದಲ್ಲಿರುವ ವಿದ್ಯುತ್‌ಶಕ್ತಿ ಭೂಮಿಗೆ ತನ್ನ ಭಾರ ಇಳಿಸಲು ಉತ್ಸುಕವಾಗಿರುವಾಗ ಮೊದಲು ಸಿಗುವುದೇ ಎತ್ತರದ ಮರಗಳು. ಹಾಗಾಗಿ ಇತರೆ ಎತ್ತರದ ವಸ್ತುಗಳು ಇಲ್ಲದ ಸ್ಥಳಗಳಲ್ಲಿ ಮರಗಳಿಗೆ ಸಿಡಿಲು ಬಡಿಯುವುದು ಸಾಮಾನ್ಯ. ಹಾಗೆಯೇ, ಮಳೆ ಎಂದು ಒಂಟಿ ಮರಗಳ ಕೆಳಗೆ ನಿಂತವರಿಗೂ ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಮನೆಯ ಹತ್ತಿರ ಎತ್ತರದ ಮರವಿದ್ದು, ಮನೆ ಇರುವ ಸ್ಥಳವೂ ಎತ್ತರವಿದ್ದರೆ, ಸಿಡಿಲು ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಉತ್ತಮ. 

ಹೈಟೆನ್‌ಶನ್‌ ಗೋಪುರಗಳು ಹತ್ತಿರವಿದ್ದರೆ
ಸಾಮಾನ್ಯವಾಗಿ ಬೃಹದಾಕಾರದ ಅತಿ ಹೆಚ್ಚು ವಿದ್ಯುತ್‌ಶಕ್ತಿ ಪ್ರವಹಿಸುವ ಟವರ್‌ಗಳಿಗೆ ಸೂಕ್ತ ಸಿಡಿಲು ನಿರೋಧಕಗಳನ್ನು ಅಳವಡಿಸಲಾಗಿರುತ್ತದೆ. ಜೊತೆಗೆ ಹೈಟೆನÒನ್‌ ವೈರ್‌ಗಳ ಹತ್ತಿರ ಮನೆಗಳನ್ನು ಕಟ್ಟಲು ಅನುಮತಿ ನೀಡುವುದೂ ಇಲ್ಲ. ಆದರೂ ಕೆಲವೊಮ್ಮೆ ತಿರುವುಗಳಲ್ಲಿ ಇಲ್ಲವೇ ಗಾಳಿ ಜೋರಾಗಿ ಬೀಸಿದಾಗ, ಈ ಹೈಟೆನÒನ್‌ ವೈರ್‌ಗಳು ಮನೆಯಿಂದ ಇರಬೇಕಾದ ದೂರ ಉಳಿಸಿಕೊಳ್ಳಲಾಗದೆ, 

ಆಘಾತಗಳಾಗಬಹುದು. ಈಗಾಗಲೇ ಪ್ರವಹಿಸುತ್ತಿರುವ ಹೈಟೆನÒನ್‌ ವಿದ್ಯುತ್‌ಶಕ್ತಿಯ ಜೊತೆಗೆ ಮೋಡದಿಂದ ಬಂದೆರಗಿದ ಹೆಚ್ಚುವರಿ ಶಕ್ತಿಯೂ ಮನೆಯತ್ತ ಹಾಯ್ದರೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಆದುದರಿಂದ ನಿಮ್ಮ ಮನೆಯ ಹತ್ತಿರ ಹೈಟೆನÒನ್‌ ವೈರ್‌ ಹಾದು ಹೋಗಿದ್ದರೆ, ಅದು ಸೂಕ್ತ ದೂರದಲ್ಲಿ ಇದೆಯೇ ಎಂದು  ಇಲಾಖೆಯಿಂದ ಖಾತರಿ ಪಡಿಸಿಕೊಳ್ಳಿ.

ಕೆಲವೊಮ್ಮೆನ ವಿದ್ಯುತ್‌ ಕಂಬಕ್ಕೆ ಸಿಡಿಲು ಬಡಿದರೆ, ಕಂಬಿಗಳ ಮೂಲಕ ಅದರ ಸೌಮ್ಯರೂಪ ಮನೆಮನೆಗಳಿಗೆ ವಿದ್ಯುತ್‌ ಕೊಂಡೊಯ್ಯುವ ಕೇಬಲ್‌ ಕನೆಕ್ಷನ್‌ ಮೂಲಕ ಒಳಗೆ ಪ್ರವೇಶಿಸಬಹುದು. ಆಗ ಆ ಸಮಯದಲ್ಲಿ ಚಾಲೂ ಇರುವ ಟಿವಿ, ವಿದ್ಯುತ್‌ ದೀಪಗಳು, ಫ್ಯಾನ್‌ ಇತ್ಯಾದಿಗಳಿಗೆ ಇದ್ದಕ್ಕಿದ್ದಂತೆ ಅತಿಹೆಚ್ಚು ವಿದ್ಯುತ್‌ ಹರಿದು ಅವು ಸುಟ್ಟು ಕರಕಲಾಗುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಇದನ್ನು ತಪ್ಪಿಸಲು ಕಷ್ಟವಾದರೂ ಸಾಮಾನ್ಯವಾಗಿ ಉತ್ತಮ ಗ್ರೌಂಡಿಂಗ್‌ನಿಂದ ಭೂಮಿಗೆ ಹರಿದುಹೋಗುವ ವ್ಯವಸ್ಥೆಯನ್ನು ಮಾಡಿದ್ದರೆ, ಅದರ ಮೂಲಕ ಹೆಚ್ಚುವರಿ ವಿದ್ಯುತ್‌ ಪಸರಿಸಿ, ಸಲಕರಣೆಗಳು ಹಾಳಾಗುವುದನ್ನು ತಪ್ಪಿಸಬಹುದು.

 ವಿದ್ಯುತ್‌ ನಿರೋಧಕಗಳು
ಮನೆಗಳಿಗೆ ಸಿಡಿಲು  ಬಡಿಯದಂತೆ ತಡೆಯಲು ಎತ್ತರದ ಸ್ಥಳದಲ್ಲಿ ಗುರಾಣಿಯಂತೆ ವಿದ್ಯುತ್‌ ನಿರೋಧಕಗಳನ್ನು ಅಳವಡಿಸಬೇಕು. ಒಂದೊಮ್ಮೆ ಸಿಡಿಲು ಬಡಿದರೂ, ಅದು ಮನೆಯನ್ನು ತಾಗುವ ಮೊದಲೇ ಈ ವಾಹಕಗಳ ಸೆಳೆತಕ್ಕೆ ಒಳಗಾಗಿ ತಾಮ್ರವ ಇಲ್ಲವೇ ಇತರೆ ಉತ್ತಮ ಕಂಡಕ್ಟರ್‌ಗಳ ಮೂಲಕ ಭೂಮಿಯನ್ನು ಶೀಘ್ರವಾಗಿ ಸೇರಲು ಸೂಕ್ತ ಗ್ರೌಂಡಿಂಗ್‌ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಆಕಾಶದಲ್ಲಿ ಎಷ್ಟೇ ವಿದ್ಯುತ್‌  ಉತ್ಪಾದನೆ ಆದರೂ ಕಡೆಗೆ ಅದೆಲ್ಲವನ್ನೂ ಆಪೋಷನ ಮಾಡುವ ಶಕ್ತಿ ಭೂಮಿಗೆ ಇರುತ್ತದೆ. ಹಾಗಾಗಿ ನಮ್ಮ ಮನೆಗಳಿಗೆ ಸಿಡಿಲು ಬಡಿಯದಂತೆ ಮಾಡಲು ಸಾಮಾನ್ಯವಾಗಿ ಮನೆಯ ಹೊರಗೆ ನೇರದಾರಿಯಲ್ಲಿ ಈ ನಿರೋಧಕಗಳನ್ನು ಅಳವಡಿಸಬೇಕಾಗುತ್ತದೆ. 

ಸಿಡಿಲು ಬಡಿತದ ಲೆಕ್ಕಾಚಾರ
ಸಾಮಾನ್ಯವಾಗಿ ಶಬ್ದ ಒಂದು ಸೆಕೆಂಡಿಗೆ ಸುಮಾರು ಒಂದುಸಾವಿರದ ಒಂದುನೂರು ಅಡಿಗಳಷ್ಟು ವೇಗದಲ್ಲಿ ನುಗ್ಗುತ್ತದೆ. ನಿಮಗೆ ಸಿಡಿಲಿನ ಬೆಳಕು ಕಂಡು ಬಂದನಂತರ, ಅದರ ಶಬ್ದ ಎಷ್ಟು ಸೆಕೆಂಡ್‌ ಆದಮೇಲೆ ತಲುಪಿತು ಎಂದು ಲೆಕ್ಕ ಇಡಿ. ಗಡಿಯಾರ ಇಲ್ಲದೆಯೂ ನಾವು “ಒಂದು ಎರಡು’ ಎಂದು ಎಣಿಸುವುದು ಸೆಕೆಂಡಿನ ಅಳತೆಯಲ್ಲೇ ಇರುತ್ತದೆ. ಹಾಗಾಗಿ ನೀವು ಸಿಡಿಲಿನ ಬೆಳಕು ಕಂಡು ಐದು ಸೆಕೆಂಡಿನ ಬಳಿಕ ಅದರ ಶಬ್ದ ಕೇಳಿದರೆ ಅದು ಸುಮಾರು ಐದುಸಾವಿರದ ಐದುನೂರ ಅಡಿಗಳಷ್ಟು ದೂರದಲ್ಲಿ ಬಡಿಯಿತು ಎಂದು ಅಂದಾಜಿಸಬಹುದು! 

ಹೆಚ್ಚಿನ ಮಾತಿಗೆ ಫೋನ್‌ 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ

11-udupi

Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

14-aranthodu

Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.