ಲೈಕು ಇಷ್ಟೇನೇ! ಕ್ಲಿಕ್ ಫಾರಂ ಎಂಬ ಲೈಕು ಸಾಕಣೆ ಕೇಂದ್ರ!
Team Udayavani, Mar 25, 2019, 6:00 AM IST
ಯಾವುದೋ ಒಂದು ವೀಡಿಯೋ ಬಹಳಷ್ಟು ಬಾರಿ ರಾತ್ರಿ ಬೆಳಗಾಗುವುದರೊಳಗೆ ಹಠಾತ್ತನೆ ಕೋಟ್ಯತರ ಲೈಕ್ ಪಡೆದುಬಿಡುತ್ತದೆ. ಮೊನ್ನೆಯಷ್ಟೇ ಸಿನಿಮಾದ ಯಾವುದೋ ಟ್ರೇಲರ್ ಬಿಡುಗಡೆಯಾಗಿದೆ ಎಂದು ಅಭಿಮಾನಿಗಳಿಗೆ ತಿಳಿಯುವ ಮೊದಲೇ ಕೋಟ್ಯಂತರ ವ್ಯೂ ಯೂಟ್ಯೂಬ್‌ನಲ್ಲಿ ಆಗಿರುತ್ತದೆ. ಅದೇ ರೀತಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಲಕ್ಷಾಂತರ ಲೈಕ್ ಪಡೆದಿರುತ್ತದೆ. ಟ್ವಿಟರ್‌ನಲ್ಲಿ ಜನಪ್ರಿಯ ವ್ಯಕ್ತಿಯೊಬ್ಬ ಖಾತೆ ತೆರೆಯುತ್ತಿದ್ದಂತೆಯೆ ಲಕ್ಷಾಂತರ ಫಾಲೋವರ್‌ಗಳಾಗುತ್ತಾರೆ. ಅರೆ ಎಷ್ಟು ಕ್ಲಿಕ್ ಆಗಿºಟ್ಟ ಆ ಮನುಷ್ಯ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೇವೆ. ವಾಸ್ತವ ಏನೆಂದರೆ, ಈ ಲೈಕುಗಳೂ ಕೂಡ ಮಾರಾಟದ ಸರಕು; ಜಾಹೀರಾತಿನ ಇನ್ನೊಂದು ರೂಪ. ದುಡ್ಡು ಕೊಟ್ಟರೆ ನಿಮಗೂ ಲೈಕು ಸಿಗುತ್ತದೆ. ಲೈಫ್ ಸೆಟ್ಲ ಆಗುತ್ತದೆ.
ಊರ ಆಚೆಗೆ ದೂರದಲ್ಲೊಂದು ಕೋಳಿ ಫಾರಂ. ಅಲ್ಲಿಂದ ಸುತ್ತ ಹತ್ತು ಊರುಗಳಿಗೂ ಕೋಳಿ ಹಾಗೂ ಕೋಳಿ ಮೊಟ್ಟೆ ಸಾಗುತ್ತವೆ. ಈ ಕೋಳಿಗಳು ಹಾಗೂ ಅವುಗಳ ಮೊಟ್ಟೆಗಳು ಈ ಭಾಗದಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತವೆ. ಇದು ವಾಸ್ತವ…
ಹಾಗೆಯೇ ಅಲ್ಲೊಂದು ಕ್ಲಿಕ್ ಫಾರಂ ಇದೆ. ಅಲ್ಲಿಂದ ಆ ಭಾಗದ ಸೆಲೆಬ್ರಿಟಿಗಳ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಲ್ಲಿ ಲೈಕ್ ಸಾಗಣೆಯಾಗುತ್ತವೆ. ಇದು ಅಲ್ಲಿನ ಪ್ರಚಾರಕ್ಕಾಗಿ ಹಸಿದವರ ಹೊಟ್ಟೆ ತುಂಬಿಸುತ್ತದೆ. ಅಂದಹಾಗೆ ಇದು ವರ್ಚುವಲ್ ಜಗತ್ತು!
ಬಹಳಷ್ಟು ಬಾರಿ ರಾತ್ರಿ ಬೆಳಗಾಗುವುದರೊಳಗೆ ಯಾವುದೋ ಒಂದು ವೀಡಿಯೋ ಹಠಾತ್ತನೆ ಕೋಟ್ಯತರ ಲೈಕ್ ಪಡೆದುಬಿಡುತ್ತದೆ. ಮೊನ್ನೆಯಷ್ಟೇ ಬಿಡುಗಡೆಯಾದ ಸಿನಿಮಾದ ಯಾವುದೋ ಟ್ರೇಲರ್ ಬಿಡುಗಡೆಯಾಗಿದೆ ಎಂದು ಅಭಿಮಾನಿಗಳಿಗೆ ತಿಳಿಯುವ ಮೊದಲೇ ಕೋಟ್ಯಂತರ ವ್ಯೂ ಯೂಟ್ಯೂಬ್‌ನಲ್ಲಿ ಆಗಿರುತ್ತದೆ. ಅದೇ ರೀತಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಲಕ್ಷಾಂತರ ಲೈಕ್ ಪಡೆದಿರುತ್ತದೆ. ಟ್ವಿಟರ್‌ನಲ್ಲಿ ಜನಪ್ರಿಯ ವ್ಯಕ್ತಿಯೊಬ್ಬ ಖಾತೆ ತೆರೆಯುತ್ತಿದ್ದಂತೆಯೆ ಲಕ್ಷಾಂತರ ಫಾಲೋವರ್‌ಗಳಾಗುತ್ತಾರೆ. ಇವೆಲ್ಲವನ್ನೂ ನಾವು ಅಚ್ಚರಿಯಿಂದ ನಂಬುತ್ತೇವೆ. ಅರೆ ಎಷ್ಟು ಕ್ಲಿಕ್ ಆಗಿºಟ್ಟ ಆ ಮನುಷ್ಯ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೇವೆ. ಆದರೆ ವಾಸ್ತವವೇ ಬೇರೆ.
ಒಂದು ಲಕ್ಷ ಜನರೂ ಕೂತು ಈ ವೀಡಿಯೋಗಳನ್ನು ನೋಡಿರುವುದಿಲ್ಲ. ಬದಲಿಗೆ ಅಲ್ಲಿ ಯಾವನೋ ಒಬ್ಬ ಕುಳಿತು ಒಂದು ಲಕ್ಷ ಖಾತೆ ಕ್ರಿಯೇಟ್ ಮಾಡಿಕೊಂಡು, ಅದರಿಂದ ಲೈಕ್ ಒತ್ತುತ್ತಿರುತ್ತಾನೆ. ಇದೆಲ್ಲ ನಡೆಯುವುದು ಕ್ಲಿಕ್ ಫಾರಂ! ಕಳೆದ ಎರಡು ವರ್ಷಗಳಲ್ಲಿ ಯಥೇಚ್ಚವಾಗಿ ಹುಟ್ಟಿಕೊಂಡ ಈ ಕ್ಲಿಕ್ ಫಾರಂಗೆ ವಿವಿಧ ಶೈಲಿಯಿವೆ. ಕೆಲವು ಕ್ಲಿಕ್ ಫಾರಂಗಳು ಕಡಿಮೆ ಖರ್ಚಿನಲ್ಲಿ ಕೆಲಸ ಮಾಡುತ್ತವೆ. ಅಂದರೆ ಒಂದು ರ್ಯಾಕ್‌ಗೆ ನೂರಾರು ಸ್ಮಾರ್ಟ್‌ಫೋನ್‌ಗಳನ್ನು ನೇತು ಹಾಕಿ ಅವುಗಳಲ್ಲಿ ಪೋಸ್ಟ್, ವೀಡಿಯೋಗಳಿಗೆ ಲೈಕ್, ಶೇರ್ ಮಾಡುವುದು ಒಂದು ಜನಪ್ರಿಯ ಮತ್ತು ಕಡಿಮೆ ಖರ್ಚಿನ ವಿಧಾನ. ಸಾಮಾನ್ಯವಾಗಿ ಸ್ಮಾಟ್‌ಫೋನ್‌ಗಳು ಕಡಿಮೆ ಜಾಗವನ್ನು ತಿನ್ನುವುದರಿಂದ ಇವುಗಳನ್ನು ನಿರ್ವಹಿಸುವುದು ಸುಲಭ. ಅಷ್ಟೇ ಅಲ್ಲ, ಕಡಿಮೆ ಹಣದಲ್ಲೂ ಇವು ಕೈಗೆ ಸಿಗುತ್ತವೆ. ಕೆಲವು ಕ್ಲಿಕ್ ಫಾರಂಗಳು ಕಂಪ್ಯೂಟರುಗಳನ್ನೂ ಇಟ್ಟುಕೊಳ್ಳುತ್ತವೆಯಾದರೂ, ಅವುಗಳ ಸಂಖ್ಯೆ ಕಡಿಮೆ.
ಇದರ ಹೊರತಾಗಿ ರೋಬಾಟ್‌ಗಳನ್ನು ಬಳಸಿ ಖಾತೆ ತೆರೆಯುವುದು ಹಾಗೂ ಕ್ಲಿಕ್ ಮಾಡುವ ಕ್ಲಿಕ್ ಫಾರಂಗಳೂ ಇವೆ. ಆದರೆ ರೋಬೋಗಳು ಸ್ವತಂತ್ರವಾಗಿ ಈ ಕೆಲಸ ಮಾಡಲಾರರು. ಯಾಕೆಂದರೆ ಬಹುತೇಕ ವೆಬ್‌ಸೈಟ್‌ಗಳು ಈಗ ರೋಬೋಗಳು ನಿರ್ವಹಿಸಲಾಗದಂತೆ ಕ್ಯಾಪಾc ಹಾಗೂ ಇಮೇಜ್ ಐಡೆಂಟಿಫಿಕೇಶನ್ ಸೌಲಭ್ಯವನ್ನು ಅಳವಡಿಸಿಕೊಂಡಿವೆ. ಹೀಗಾಗಿ ಈ ಹಂತವನ್ನು ಪಾಸಾಗಲು ಮನುಷ್ಯರ ಸಹಾಯ ಬೇಕೇ ಬೇಕು.
ಯಾಕೆ ಬೇಕು ಲೈಕು?
ಲೈಕ್ ಎಂಬುದು ವರ್ಚುವಲ್ ಜಗತ್ತಿನ ಮನೋಹರ ಮಂತ್ರ! ಅದೊಂದಿದ್ದರೆ ನೀವು ಯಾವ ಎತ್ತರಕ್ಕೆ ಬೇಕಾದರೂ ಏರಬಹುದು. ತೀರಾ ಕೆಲವೇ ದಿನಗಳ ಹಿಂದೆ ಒರು ಅಡಾರ್ ಲವ್ ಎಂಬ ಮಲಯಾಳಂ ಸಿನಿಮಾದಲ್ಲಿನ ಹಾಡೊಂದರಲ್ಲಿ ಹೀಗೆ ಬಂದು ಹಾಗೆ ಹೋಗುವ ನಟಿಯೊಬ್ಬಳು ಹುಬ್ಬು ಕುಣಿಸಿದ ಒಂದು ಸಣ್ಣ ಕ್ಲಿಪ್ ರಾತ್ರೋ ರಾತ್ರಿ ಹಿಟ್ ಆಗಿತ್ತು. ಆ ಹಾಡು ಹಿಟ್ ಆಗುತ್ತಿದ್ದಂತೆಯೇ ಆಕೆ ನೆಕ್ಸ್ಟ್ ಸಿನಿಮಾಗೆ ಹೀರೋಯಿನ್! ಇದು ಲೈಕ್‌ಗೆ ಇರುವ ಶಕ್ತಿ. ಬಾಲಿವುಡ್‌ನ ಸಿನಿಮಾದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಅದನ್ನು ಇಷ್ಟು ಲಕ್ಷ ಜನ ನೋಡಿದರು ಎಂಬುದು ಆ ಸಿನಿಮಾ ಬಿಡುಗಡೆಯಾಗುವುದಕ್ಕೂ ಮುಂಚೆ ಮಾರಾಟವಾಗುವ ಮೊತ್ತವನ್ನು ಸ್ಯಾಟಲೈಟ್, ಒಟಿಟಿ ಪ್ಲಾಟ್‌ಫಾರಂ, ಡಿಸ್ಟ್ರಿಬ್ಯೂಟರು ಅಳೆಯುವ ಶ್ರೇಣಿ!
ಇನ್ನು ಬೆಂಗಳೂರಿನ ಒಂದು ಲರ್ನಿಂಗ್ ಅಪ್ಲಿಕೇಶನ್ ಪ್ರಕಾರ ಅದರಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 40-50 ಖಾತೆಗಳನ್ನು ಮಾಡಿಕೊಡಲಾಗಿದೆ. ದಿನವೂ ಅವರು ಈ ಖಾತೆಗಳಿಂದ ಆ ಲರ್ನಿಂಗ್ ಅಪ್ಲಿಕೇಶನ್‌ಲ್ಲಿರುವ ವೀಡಿಯೋಗಳನ್ನು ನೋಡಬೇಕು. ಪ್ರತಿ ಖಾತೆಗೂ ಇಂಟಲೆಕುcವಲ್ ಪ್ರೊಫೈಲ್ ಕ್ರಿಯೇಟ್ ಮಾಡಲಾಗಿದೆ. ಅಂದರೆ ಅವರ ಖಾತೆಯನ್ನು ನೋಡಿದರೆ ನಿಮಗೆ ಅದು ನಿಜವಾದ ವ್ಯಕ್ತಿಯ ಖಾತೆ ಎಂದೇ ಭಾಸವಾಗುತ್ತದೆ. ಈ ಲೈಕ್‌ಗಳು ಈ ಸಂಸ್ಥೆಗೆ ಹೂಡಿಕೆದಾರರನ್ನು ಕರೆತರುತ್ತದೆ. ವೀಡಿಯೋಗಳಿಗೆ ಇಷ್ಟು ವ್ಯೂ ಇವೆ ಎಂಬುದನ್ನು ಹೂಡಿಕೆದಾರರ ಮುಂದಿಟ್ಟರೆ ಮುಂದೊಂದು ದಿನ ಈ ವೀಡಿಯೋ ಜೊತೆಗೆ ಜಾಹೀರಾತನ್ನೂ ಪ್ರಸಾರ ಮಾಡಿದರೆ ಆದಾಯ ಬರುತ್ತದೆ ಎಂಬ ಕಾರಣಕ್ಕೆ ಹೂಡಿಕೆ ಮಾಡುತ್ತಾರೆ.
ಇನ್ನೊಂದು ಸಂಸ್ಥೆ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರುತ್ತದೆ. ಈ ಸಂಸ್ಥೆ ತನ್ನ ಉತ್ಪನ್ನಗಳನ್ನು ಆ ವೆಬ್‌ಸೈಟ್‌ಗಳಲ್ಲಿ ಲೈಕ್ ಮಾಡಲು ಒಂದು ಕ್ಲಿಕ್ ಫಾರಂ ಬಳಸಿಕೊಳ್ಳುತ್ತದೆ. ಇದರಿಂದಾಗಿ ಈ ಉತ್ಪನ್ನಗಳು ಸರ್ಚ್‌ಮಾಡಿದಾಗ ಮೇಲ್ಗಡೆ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಖರೀದಿ ಮಾಡುವವರ ಮೇಲೆ ಒಳ್ಳೆಯ ಇಂಪ್ರಷನ್ ಮೂಡುತ್ತದೆ. ಸಾಮಾನ್ಯ ಜನರೇ ಗ್ರಾಹಕರಾಗಿರುವ ಬಹುತೇಕ ಕಂಪನಿಗಳ ಡಿಜಿಟಲ್ ಬಜೆಟ್ ಎಂಬುದು ಲೈಕ್ ಕೊಳ್ಳುವುದಕ್ಕೆ ತೆಗೆದಿಡುವ ಮೊತ್ತ ಎಂದೇ ಭಾವಿಸಲಾಗುತ್ತದೆ!
ಈ ಲೈಕ್ ಎಂಬ ಮಾಯಾಂಗನೆ ಯಾರನ್ನು ಎಲ್ಲಿ ಬೇಕಾದರೂ ಕೂರಿಸೀತು. ಹೀಗಾಗಿ ಎಲ್ಲರೂ ಲೈಕ್‌ಗಾಗಿ ಪರಿತಪಿಸುತ್ತಾರೆ. ಫೇಸ್‌ಬುಕ್‌ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿ, ನಿಮಿಷಕ್ಕೊಮ್ಮೆ ನೋಡಿಕೊಂಡು ಎಷ್ಟು ಲೈಕ್ ಬಂತು ಅಂತ ಲೆಕ್ಕ ಹಾಕುತ್ತೇವೆ. ಹೀಗೆ ಬಂದ ಲೈಕ್ ನಮ್ಮ ಜನಪ್ರಿಯತೆ ಅಳೆಯುತ್ತದೆ. ಆದರೆ ಅದು ನಿಜವಾಗಿಯೂ ಜನರು ಲೈಕ್ ಮಾಡಿದ್ದೇ ಅಥವಾ ರೋಬೋಗಳು ಮಾಡಿದ ಲೈಕ್‌ಗಳೇ ಎಂಬುದು ಸಾಮಾನ್ಯರಿಗೆ ತಿಳಿಯದು. ಹೀಗಾಗಿ ನಾವು ಈ ಕಣRಟ್ಟನ್ನು ನಿಜವೆಂದೇ ನಂಬುತ್ತೇವೆ. ಇದಕ್ಕಾಗಿ ಸೋಷಿಯಲ್ ಮೀಡಿಯಾಗಳು ಅಸ್ತಿತ್ವದಲ್ಲಿ ಇರುವವರೆಗೂ ಲೈಕುಗಳು ಇದ್ದೇ ಇರುತ್ತವೆ.
ಕ್ಲಿಕ್ ಫಾರಂಗಳು ಹೇಗೆ ಕೆಲಸ ಮಾಡುತ್ತವೆ?
ಈ ಕ್ಲಿಕ್ ಫಾರಂ ಎಂಬುದು ಹುಟ್ಟಿಕೊಂಡಿದ್ದು ಹೇಗೆ ಎಂಬುದಕ್ಕೆ ನಿರ್ದಿಷ್ಟ ಮೂಲವಿಲ್ಲ. ಒಂದೊಂದು ಉದ್ಯಮದ ಅಗತ್ಯಕ್ಕೆ ತಕ್ಕಂತೆ ಒಂದೊಂದು ರೀತಿಯಲ್ಲಿ ಈ ಕ್ಲಿಕ್ ಫಾರಂ ಕೆಲಸ ಮಾಡುತ್ತವೆ. ಸಾಮಾನ್ಯವಾಗಿ ಸಿನಿಮಾಗಳ ಟ್ರೇಲರ್‌ಗಳು, ಹಾಡುಗಳನ್ನು ಲೈಕ್ ಮಾಡಲು, ವ್ಯೂ ಮಾಡಲು ಈ ಕ್ಲಿಕ್ ಫಾರಂಗಳು ಭಾರತದಲ್ಲಿ ಯಥೇತ್ಛವಾಗಿ ಬಳಕೆಯಾಗುತ್ತವೆ. ಚೀನಾದ ಆರಡಿ ಅಗಲದ ಕೋಣೆಯಿಂದ ಆರಂಭಿಸಿ ಸಿಲಿಕಾನ್ ವ್ಯಾಲಿಯವರೆಗೂ ಈ ಕ್ಲಿಕ್ ಫಾರಂ ಸೆಟಪ್ ಇವೆ. ಕೆಲವು ವರ್ಷಗಳವರೆಗೆ ಇದೊಂದು ಐಡಿಯಾ ರೀತಿ ಹರಿದಾಡುತ್ತಿತ್ತು. ಆದರೆ ಮೂರು ವರ್ಷಗಳ ಹಿಂದೆ ಚೀನಾದಲ್ಲಿ ಕ್ಲಿಕ್ ಫಾರಂಗಳ ಅಸ್ತಿತ್ವವೂ ಸಿಕ್ಕಿವೆ. ಅಲ್ಲಿರುವ ಕ್ಲಿಕ್ ಫಾರಂಗಳನ್ನು ನೋಡಿದರೆ ಮೊಬೈಲ್ ಅಂಗಡಿಗಳ ರೀತಿ ಕಾಣಿಸುತ್ತವೆ. ಅಂದರೆ ರ್ಯಾಕ್‌ಗಳಲ್ಲಿ ಮೊಬೈಲ್‌ಗಳನ್ನು ಸಾಲಾಗಿ ಜೋಡಿಸಿಟ್ಟಿರುತ್ತಾರೆ. ಎಷ್ಟು ಮೊಬೈಲ್‌ಗಳನ್ನು ಇಟ್ಟುಕೊಳ್ಳುತ್ತಾರೆ ಎಂಬುದು ಅವರ ಹಣಕಾಸಿನ ಸಾಮರ್ಥ್ಯ ಹಾಗೂ ಉದ್ಯಮ ಸಾಮರ್ಥ್ಯವನ್ನು ಅವಲಂಬಿಸಿರುತ್ತವೆ. ನೂರಾರು ಮೊಬೈಲ್‌ಗಳಿಂದ 1 ಸಾವಿರ ಮೊಬೈಲ್‌ಗಳವರೆಗೂ ಇಲ್ಲಿರುತ್ತವೆ. ಕೆಲವು ಕ್ಲಿಕ್ ಫಾರಂಗಳನ್ನು ಒಬ್ಬನೇ ನಿರ್ವಹಿಸಿದರೆ, ಇನ್ನು ಕೆಲವು ಕಡೆಗೆ ಹಲವರು ಉದ್ಯೋಗಿಗಳನ್ನಿಟ್ಟು ನಿರ್ವಹಿಸಲಾಗುತ್ತದೆ.
ಇಲ್ಲಿ ಮನುಷ್ಯರೇ ಲಿಂಕ್‌ಗಳನ್ನು ತೆರೆದು ಲೈಕ್ ಮಾಡುತ್ತಿರುತ್ತಾರೆ. ಒಬ್ಬೊಬ್ಬರೂ ನುರಾರು ಖಾತೆಗಳನ್ನು ಹೊಂದಿರುತ್ತಾರೆ. ಆ ಖಾತೆಗಳಿಗೆ ಸೈನ್ ಇನ್ ಆಗಿ ಲೈಕ್ ಮಾಡುವುದೇ ಅವರ ಉದ್ಯೋಗ. ಇಲ್ಲಿರುವ ಎಲ್ಲ ಕೆಲಸಗಾರರಿಗೆ ಲೈಕ್ ಮಾಡುವುದೊಂದೇ ಕೆಲಸ. ಎಷ್ಟು ಬೇಗ ಎಷ್ಟು ಲೈಕ್ ಮಾಡುತ್ತಾರೆ ಎಂಬುದರ ಮೇಲೆ ಅವರಿಗೆ ಸಂಬಳ ನಿಗದಿಯಾಗಿರುತ್ತದೆ!
ಇನ್ನು ಬೋಟ್‌ಗಳೂ ಈ ಕೆಲಸ ಮಾಡುತ್ತವೆ. ಆದರೆ ಕ್ಯಾಪಾc ಹಾಗೂ ಇತರ ವಿಧಾನಗಳನ್ನು ಸೋಷಿಯಲ್ ಮೀಡಿಯಾಗಳು ಅಳವಡಿಸಿಕೊಂಡ ನಂತರ ಬೋಟ್‌ಗಳ ಮೂಲಕ ನಿರ್ವಹಣೆ ಸುಲಭವಿಲ್ಲ. ಆದರೂ, ಕೆಲವು ಕೆಲಸಗಳಿಗೆ ಬೋಟ್‌ಗಳನ್ನು ಬಳಸುತ್ತಿದ್ದಾರೆ.
ಲೈಕಿಗೆಷ್ಟು ಹೈಕು?
ಈ ಇಡೀ ಕಥೆ ಓದಿದ ಮೇಲೆ ಒಂದು ಲೈಕಿಗೆ ಎಷ್ಟು ಕಾಸು ಎಂಬ ಪ್ರಶ್ನೆ ನಮ್ಮ ತಲೆಯಲ್ಲಿ ಸುಳಿದೇ ಇರುತ್ತದೆ. ನಿಜ. ಈ ಲೈಕಿಗೆ ಇಷ್ಟು ದುಡ್ಡು ಎಂಬುದು ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತದೆ. ಸ್ವಂತವಾಗಿ ಕ್ಲಿಕ್ ಫಾರಂ ನಿರ್ವಹಿಸುತ್ತಿರುವವರು ಕಡಿಮೆ ದರದಲ್ಲಿ ಲೈಕ್‌ಗಳನ್ನು ಮಾಡಿಕೊಡುತ್ತಾರೆ. ಇನ್ನು ಇದು ಸಮಯವನ್ನೂ ಅವಲಂಬಿಸಿರುತ್ತದೆ. ರಾತ್ರೋ ರಾತ್ರಿ ಲೈಕ್ ಸ್ಪೈಕ್ ಆಗಬೇಕೆಂದಾದರೆ ಜಾಸ್ತಿ ದುಡ್ಡು ತೆತ್ತಬೇಕು. ಒಂದು ಮೂಲಗಳ ಪ್ರಕಾರ ಈಗ 10 ಸಾವಿರ ಲೈಕ್‌ಗಳಿಗೆ ಒಂದೂವರೆ ಸಾವಿರದಿಂದ ಮೂರು ಸಾವಿರದವರೆಗೂ ದುಡ್ಡು ಕೀಳಲಾಗುತ್ತದೆ.
ಇದು ಅಕ್ರಮ?
ಇದು ಅಕ್ರಮವೋ ಅಥವಾ ಸಕ್ರಮವೋ ಎಂಬುದು ದೊಡ್ಡ ಜಿಜ್ಞಾಸೆ. ನೀವು ಯಾವ ಸ್ಥಾನದಲ್ಲಿ ನಿಂತು ಯೋಚಿಸುತ್ತಿದ್ದೀರಿ ಎಂಬುದನ್ನು ಇದು ಅವಲಂಬಿಸಿರುತ್ತದೆ. ಸದ್ಯ ಸೋಷಿಯಲ್ ಮೀಡಿಯಾ ನೀತಿಗಳ ಪ್ರಕಾರ ಇದು ಅಕ್ರಮ. ಇದೇ ಕಾರಣಕ್ಕೆ ಫೇಸ್‌ಬುಕ್, ಟ್ವಿಟರ್‌ಗಳು ನಕಲಿ ಖಾತೆಗಳನ್ನು ಅಳಿಸುತ್ತಿರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಸುಮರು 200 ಕೋಟಿ ನಕಲಿ ಖಾತೆಗಳನ್ನು ಫೇಸ್‌ಬುಕ್ ಒಂದೇ ಅಳಿಸಿದೆ ಅಂದರೆ ಈ ನಕಲಿ ಖಾತೆಗಳು ಮತ್ತು ಅವುಗಳ ಹಾವಳಿ ಅದೆಷ್ಟಿದ್ದೀತು ಎಂದು ಅರಿವಾಗಬಹುದು.
ಇನ್ನು ಜಾಹೀರಾತು ಕೊಡುವವರೂ ನಕಲಿ ಲೈಕ್‌ಗಳು ಹಾಗೂ ಅಸಲಿ ಲೈಕ್‌ಗಳನ್ನು ಕಂಡುಕೊಳ್ಳುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಅಂದರೆ ಹಾಲಿನ ಡೇರಿಯಲ್ಲಿ ಹಾಲಿಗೆ ನೀರು ಬೆರೆಸಲಾಗಿದೆಯೇ ಎಂದು ಕಂಡುಹಿಡಿಯುವಂತೆ ಅದಕ್ಕೂ ಮಾಪನಗಳಿವೆ. ಇದನ್ನು ಆಧರಿಸಿ ಜಾಹೀರಾತುದಾರ ಕಂಪನಿಗಳು ವೀಡಿಯೋ ಹಾಗೂ ಇತರ ಕಂಟೆಂಟ್‌ನ ಅಸಲಿಯತ್ತನ್ನು ಕಂಡುಕೊಳ್ಳುತ್ತವೆ. ಗೂಗಲ್ ಹಾಗೂ ಫೇಸ್‌ಬುಕ್‌ನಂತಹ ಸಂಸ್ಥೆಗಳು ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿವೆ. ಹೀಗಾಗಿ ವಿಪರೀತ ನಕಲಿ ಲೈಕ್‌ಗಳಿರುವ ವೀಡಿಯೋಗಳಲ್ಲಿ ಜಾಹೀರಾತುಗಳ ಪ್ರಮಾಣ ಕಡಿಮೆ ಇರುತ್ತವೆ.
– ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.