ಬಂತು ನೋಡಿ ಸ್ಮಾರ್ಟ್ ಹುಂಡೈ ಸ್ಯಾಂಟ್ರೋ
Team Udayavani, Jan 21, 2019, 12:30 AM IST
ಟಾಟಾ ಟಿಯಾಗೋ, ರೆನಾಲ್ಟ್ ಕ್ವಿಡ್, ಮಾರುತಿ ಸೆಲೆರಿಯೋ, ವ್ಯಾಗನಾರ್‌ಗಳೊಂದಿಗೆ ಪೈಪೋಟಿಗೆ ಇಳಿಯಲು ಹೊಸ ಸ್ಯಾಂಟ್ರೋ ಸಿದ್ಧವಾಗಿದೆ. ಈಗಿನ ಕಾಲಕ್ಕೆ ತಕ್ಕಂತೆ ಹಲವು ಹೊಸ ಫೀಚರ್ಗಳನ್ನು ಇದು ಹೊಂದಿದೆ. ತುಸು ಮೊಟ್ಟೆ ಆಕಾರದ ದೊಡ್ಡ ಹೆಡ್‌ಲ್ಯಾಂಪ್‌ಗ್ಳು ಕೆಳಭಾಗದಲ್ಲಿ ಅಗಲವಾದ ಏರ್‌ವೆಂಟ್, ಬದಿಯಲ್ಲಿ ದೊಡ್ಡದಾದ ಫಾಗ್‌ಲ್ಯಾಂಪ್‌ಗ್ಳು ಇದರ ಪ್ಲಸ್‌ಪಾಯಿಂಟ್.
ಸ್ಯಾಂಟ್ರೋ ಅಂದರೆ ಸಾಕು; ಕಣ್ಣರಳಿಸಿ ನೋಡುತ್ತಿದ್ದವರು ಹಲವು ಮಂದಿ. 1998ರ ಬಳಿಕ ಭಾರತದ ಕಾರು ಮಾರುಕಟ್ಟೆಯಲ್ಲಿ ಅದು ಸೃಷ್ಟಿಸಿದ ಹವಾ ಹಾಗಿತ್ತು. ಆದರೆ ಕಾಲಾಂತರದಲ್ಲಿ ಸ್ಯಾಂಟ್ರೋ ಬಳಿಕ ಸ್ಯಾಂಟ್ರೋ ಕ್ಸಿಂಗ್, ಗ್ರಾಂಡ್ ಐ10 ಇತ್ಯಾದಿಗಳು ಬಂದವು. ಹೊಸ ಉತ್ಪನ್ನಗಳ ಭರಾಟೆಯಲ್ಲಿ ಸ್ಯಾಂಟ್ರೋ ತೆರೆಮರೆಗೆ ಸರಿಯಿತು. ಆದರೂ ಸ್ಯಾಂಟ್ರೋ ಹೆಸರು ಜನರ ಮನಸ್ಸಿನಿಂದ ಮರೆಗೆ ಸರಿದಿರಲಿಲ್ಲ. ದ.ಕೊರಿಯಾದ ಪ್ರಸಿದ್ಧ ಕಾರು ಕಂಪನಿ ಹುಂಡೈ ಇದನ್ನೇ ಗಮನದಲ್ಲಿಟ್ಟುಕೊಂಡು ಹೊಸ ತಲೆಮಾರಿನ ಸ್ಯಾಂಟ್ರೋವನ್ನು ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಟಾಟಾ ಟಿಯಾಗೋ, ರೆನಾಲ್ಟ್ ಕ್ವಿಡ್, ಮಾರುತಿ ಸೆಲೆರಿಯೋ, ವ್ಯಾಗನಾರ್‌ಗಳೊಂದಿಗೆ ಪೈಪೋಟಿಗೆ ಇಳಿಯಲು ಹೊಸ ಸ್ಯಾಂಟ್ರೋ ಸಿದ್ಧವಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾದ ಎರಡು ತಿಂಗಳಲ್ಲೇ ಅಂದರೆ ಡಿಸೆಂಬರ್‌ನಲ್ಲಿ ಈ ಮಾದರಿಯ ಕಾರುಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಸರನ್ನೂ ಇದು ಪಡೆದುಕೊಂಡಿದೆ.
ಹೇಗಿದೆ ಸ್ಯಾಂಟ್ರೋ?
ಹಳೆಯ ಸ್ಯಾಂಟ್ರೋಕ್ಕಿಂತ ಹೊಸ ಸ್ಯಾಂಟ್ರೋದ ವಿನ್ಯಾಸ ಸಂಪೂರ್ಣ ಬದಲಾಗಿದೆ. ಈಗಿನ ಕಾಲಕ್ಕೆ ತಕ್ಕಂತೆ ಹಲವು ಹೊಸ ಫೀಚರ್ಗಳನ್ನು ಇದು ಹೊಂದಿದೆ. ತುಸು ಮೊಟ್ಟೆ ಆಕಾರದ ದೊಡ್ಡ ಹೆಡ್‌ಲ್ಯಾಂಪ್‌ಗ್ಳು ಕೆಳಭಾಗದಲ್ಲಿ ಅಗಲವಾದ ಏರ್‌ವೆಂಟ್, ಬದಿಯಲ್ಲಿ ದೊಡ್ಡದಾದ ಫಾಗ್‌ಲ್ಯಾಂಪ್‌ಗ್ಳು ಇದರ ಪ್ಲಸ್‌ಪಾಯಿಂಟ್. ಹಾಗೆಯೇ, ಹಿಂಭಾಗ ಆಕರ್ಷಕ ಬ್ರೇಕ್‌ಲೈಟ್‌ಗಳು, ತುಸು ದೊಡ್ಡದಾದ ಟಯರ್‌ಗಳು ಹಿಂದಿನ ಸ್ಯಾಂಟ್ರೋಕ್ಕಿಂತ ಆಕರ್ಷಕವನ್ನಾಗಿಸಿದೆ. ಹಳೆಯ ಸ್ಯಾಂಟ್ರೋಕ್ಕಿಂತ ಇದರ ನಾಲ್ಕೂ ಗಾಜುಗಳ ಗಾತ್ರ ದೊಡ್ಡದಾಗಿದೆ. 2400 ಎಂ.ಎಂ. ವೀಲ್ ಬೇಸ್, 1560 ಎಂ.ಎಂ. ಎತ್ತರ. 164 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್, 235 ಲೀಟರ್ ಸಾಮರ್ಥ್ಯದ ಡಿಕ್ಕಿ ಹೊಂದಿದೆ. ಸಣ್ಣ ಕುಟುಂಬಗಳಿಗೆ, ನಗರದಲ್ಲಿರುವವರಿಗೆ ಇದು ಹೇಳಿ ಮಾಡಿಸಿದಂತಿದೆ.
ಒಳಾಂಗಣ
ಐವರು ಪ್ರಯಾಣಿಕರು ಕೂರಲು ಅನುಕೂಲವಾಗುವ ಸೀಟುಗಳನ್ನು ಹೊಂದಿದೆ. ಆಕರ್ಷಕ ಕ್ಯಾಬಿನ್, ಮುಂಭಾಗದ ಡ್ಯಾಶ್‌ಬೋಡ್ ಅನ್ನು ಇದು ಹೊಂದಿದೆ. ಮುಂದಿನ ಬಕೆಟ್ ಸೀಟ್‌ಗಳು ಸಾಕಷ್ಟು ಅಗಲವಾಗಿವೆ. ಆದರೆ ಡ್ರೆ„ವರ್ ಸೈಡ್ ಸೀಟ್ ಎತ್ತರಿಸುವ ವ್ಯವಸ್ಥೆ ಇದರಲ್ಲಿ ಇಲ್ಲ. ಸೀಟ್‌ನೊಂದಿಗೆ ಜೋಡಿಸಿರುವ ಹೆಡ್‌ರೆಸ್ಟ್, ಸ್ಟೀರಿಂಗ್ ಮೌಂಟ್ ಕಂಟ್ರೋಲರ್‌ಗಳು ನಾಲ್ಕು ಸ್ಪೀಕರ್‌ಗಳುಳ್ಳ ಉತ್ತಮ ಇನ್ಫೋ ಎಂಟರ್‌ಟೈನ್‌ಮೆಂಟ್ ಸಿಸ್ಟಂ, 17.64 ಸೆಂ.ುà. ನ ಟಚ್‌ಸ್ಕಿ$›àನ್ ವ್ಯವಸ್ಥೆಯ ಡಿಸ್ಪೆ$Éà, ಯುಎಸ್‌ಬಿ, ಬ್ಲೂಟೂತ್, ಸ್ಮಾಟ್‌ಫೋನ್ ಕನೆಕ್ಟಿವಿಟಿ, ಮೈಕ್ರೋ ಆಂಟೆನಾ ಹೊಂದಿದೆ. ಸಾಕಷ್ಟು ದೊಡ್ಡದಾದ ಗ್ಲೋಬಾಕ್ಸ್, ಪವರ್‌ಫುಲ್ ಎಸಿ, ಎಲೆಕ್ಟ್ರಾನಿಕ್ ಮಿರರ್ ಇದರ ಪ್ಲಸ್ ಪಾಯಿಂಟ್. ನಾಲ್ಕು ಪವರ್‌ವಿಂಡೋಗಳು, ಡ್ರೆ„ವರ್ ಭಾಗದಲ್ಲಿ ನಿಯಂತ್ರಕ ವ್ಯವಸ್ಥೆ, ಹಿಂಭಾಗವೂ ಎಸಿ ವೆಂಟ್ ಇದರಲ್ಲಿದೆ.
ಪವರ್‌ಫುಲ್ ಎಂಜಿನ್
ನಾಲ್ಕು ಸಿಲಿಂಡರ್‌ನ 1.1 ಲೀಟರ್‌ನ ಎಂಜಿನ್ ಅನ್ನು ಹೊಸ ಸ್ಯಾಂಟ್ರೋ ಹೊಂದಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂದು ಎರಡು ಮಾದರಿಗಳಲ್ಲಿ ಈ ಕಾರು ಲಭ್ಯವಿದೆ. ಪೆಟ್ರೋಲ್ ಎಂಜಿನ್ 68 ಬಿಎಚ್‌ಪಿ ಮತ್ತು 4500ರಲ್ಲಿ 99 ಟಾರ್ಕ್ ಉತ್ಪಾದನೆ ಮಾಡುತ್ತದೆ. ಹಾಗೆಯೇ, ಸಿಎನ್‌ಜಿ 58 ಬಿಎಚ್‌ಪಿ ಮತ್ತು 8500ರಲ್ಲಿ 84 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡುತ್ತದೆ. 5 ಗಿಯರ್ ಮತ್ತು ಆಟೋ ಗಿಯರ್ ಆಪ್ಷನ್ ಲಭ್ಯವಿದೆ. ಎಆರ್‌ಎಐ ಪ್ರಕಾರ ಸುಮಾರು 20 ಕಿ.ಮೀ ಮೈಲೇಜ್ ನೀಡುತ್ತದೆ. ನಗರದಲ್ಲಿ ಇದರ ಮೈಲೇಜ್ ಪ್ರಮಾಣ ಸುಮಾರು 13 ಕಿ.ಮೀ. ಆಗಿದೆ. ಒಟ್ಟಾರೆ 18.6 ಕಿ.ಮೀ.ನಷ್ಟು ಮೈಲೇಜ್ ನೀಡುತ್ತದೆ. ಸ್ಟೀರಿಂಗ್ ಅತ್ಯಂತ ಕಾರ್ಯಕ್ಷಮತೆ ಹೊಂದಿದ್ದು, ಆರಾಮದಾಯಕವಾಗಿದೆ. 14 ಇಂಚಿನ ಟಯರ್ ಮತ್ತು 2 ಏರ್‌ಬ್ಯಾಗ್, 35 ಲೀಟರ್‌ನ ಇಂಧನ ಟ್ಯಾಂಕ್ ಅನ್ನು ಇದು ಹೊಂದಿದೆ.
ಯಾರಿಗೆ ಬೆಸ್ಟ್?
ನಿತ್ಯವೂ ಓಡಾಟಕ್ಕೆ ಉತ್ತಮ ಕಾರು ಬೇಕು. ಅಪರೂಪಕ್ಕೊಮ್ಮೆ ಊರಿಗೆ ಹೋಗಬೇಕು, ಹೊರಗಡೆ ಸುತ್ತಾಡಲೂ ಆಗಬೇಕು ಎಂದಿದ್ದರೆ ಸ್ಯಾಂಟ್ರೋ ಉತ್ತಮ ಕಾರು. ಎಲ್ಲೆಡೆ ಹುಂಡೈ ಡೀಲರ್‌ಶಿಪ್ ಲಭ್ಯವಿದ್ದು, ಸರ್ವೀಸ್ ಸುಲಭವಾಗಿ ಮಾಡಿಸಿಕೊಳ್ಳಬಹುದು. ಹುಂಡೈ ಕಾರುಗಳು ಅತ್ಯಂತ ಸೈಲೆಂಟ್ ಕಾರುಗಳಾಗಿದ್ದು, ಆರಾಮದಾಯಕ ಸವಾರಿಗೆ ಉತ್ತಮ. ಇದರ ಬೆಲೆ 3.90 ಲಕ್ಷ ರೂ.ಗಳಿಂದ 5.47 ಲಕ್ಷ ರೂ.ಗಳವರೆಗೆ ಇದೆ. ಒಟ್ಟು ಆರು ಬಣ್ಣಗಳಲ್ಲಿ ಲಭ್ಯವಿದೆ.
– ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಅಪರಾಧ ಸುದ್ದಿಗಳು
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.