ಮುರಳಿ ಲಂಚ್‌ಬಾಕ್ಸ್‌


Team Udayavani, Nov 30, 2020, 5:02 PM IST

ಮುರಳಿ ಲಂಚ್‌ಬಾಕ್ಸ್‌

ಎಂಜಿನಿಯರಿಂಗ್‌ ಓದಿದ ಹುಡುಗರು, ಅದರಲ್ಲೂ ಕಾರ್ಪೋರೆಟ್‌ಕಂಪನಿಯಲ್ಲಿ ಒಳ್ಳೆಯ ಸಂಬಳದ ನೌಕರಿಯಲ್ಲಿದ್ದ ಹುಡುಗರು ಹೋಟೆಲ್‌ ಉದ್ಯಮದತ್ತ ಆಕರ್ಷಿತರಾಗುವುದು ಕಡಿಮೆ. ಅದರಲ್ಲೂ ಹೊಸದಾಗಿ ಸ್ಟಾರ್ಟ್‌ ಅಪ್‌ ಮಾದರಿಯ ಹೋಟೆಲ್‌ ಆರಂಭಿಸುವಕೆಲಸ ಆದರಂತೂ, ಇದೊಂದು ಹುಚ್ಚು ಸಾಹಸ, ಸುಮ್ಮನೇ ರಿಸ್ಕ್  ತಗೋಬೇಡ ಅನ್ನುವವರೇ ಹೆಚ್ಚು. ವಾಸ್ತವ ಹೀಗಿರುವಾಗ, ಬೆಂಗಳೂರಿನ ಕಾರ್ಪೋರೆಟ್‌ ಕಂಪನಿಯೊಂದರಲ್ಲಿ ನೌಕರಿಗಿದ್ದ ಮೈಸೂರಿನ ಹುಡುಗನೊಬ್ಬ, ಆ ಕೆಲಸಕ್ಕೆ ಗುಡ್‌ ಬೈ ಹೇಳಿ “ಫ‌ುಡ್ ಬಾಕ್ಸ್ ‘ ಹೆಸರಿನ ಬಿಸಿಬಿಸಿ ಊಟ ಪೂರೈಸುವ ಸ್ಟಾರ್ಟ್‌ ಅಪ್‌ ಆರಂಭಿಸಿ ದೊಡ್ಡ ಮಟ್ಟದ ಗೆಲುವುಕಂಡಿದ್ದಾನೆ.   ಆಮೂಲಕ, ಮಾಡುವಕೆಲಸದಲ್ಲಿ ಶ್ರದ್ಧೆ, ಉತ್ಸಾಹ ಮತ್ತು ಪ್ರೀತಿ ಇದ್ದರೆ, ಸ್ಟಾರ್ಟ್‌ ಅಪ್‌ ಆರಂಭಿಸಿ ಯಾರು ಬೇಕಾದರೂ ಗೆಲ್ಲಬಹುದು ಎಂಬ ಮಾತಿಗೆ ಸಾಕ್ಷಿಯಾಗಿದ್ದಾನೆ.

 ವಿವರಿಸುವುದು ಹೀಗೆ

“2014 ರಲ್ಲಿ ನನ್ನ ಎಂಜಿನಿಯರಿಂಗ್‌ ಮುಗೀತು. ಮೈಸೂರಿನಿಂದ ಸೀದಾ ಬೆಂಗಳೂರಿಗೆ ಬಂದೆ. ಜೆಎಸ್‌ಡಬ್ಲ್ಯೂ ಎಂಬ ಕಂಪನಿಯಲ್ಲಿಕೆಲಸಕ್ಕೂ ಸೇರಿಕೊಂಡೆ. ಮೈಸೂರಿನಲ್ಲಿ ಇದ್ದಷ್ಟು ದಿನವೂ ಅಮ್ಮ ಮತ್ತು ಅಜ್ಜಿಯ ಕೈರುಚಿಯ ಊಟ ತಿಂದು ಬೆಳೆದಿದ್ದ ನನಗೆ, ಒಳ್ಳೆಯ ಊಟ ಸಿಗದೇ ಪರದಾಡುವಂತಾಯಿತು. ಹೋಟೆಲ್‌ ಗಳೇನೋ ಸಾಕಷ್ಟು ಇದ್ದವು. ಆದರೆ ಅಲ್ಲಿನ ರುಚಿ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಜೊತೆಗೆ ಬೆಲೆಯೂ ದುಬಾರಿ ಅನಿಸುತ್ತಿತ್ತು.

ಅಮ್ಮನ ಕೈರುಚಿಯ ಊಟ ಸಿಕ್ಕದೆ ನನ್ನಂತೆಯೇ ಪರದಾಡುವ ಎಷ್ಟೋ ಜನ ಇರುತ್ತಾರೆ. ಅಂಥವರಿಗೆಊಟ ಪೂರೈಸುವ ಒಂದು ಸ್ಟಾರ್ಟ್‌ ಅಪ್‌ ಆರಂಭಿಸಬಾರದೇಕೆ?” ಎಂಬ ಯೋಚನೆ ಬಂದದ್ದೇ ಆಗ.

 ಗೆಲ್ಲಬಲ್ಲರೆ ಎಂಬ ನಂಬಿಕೆ ಇತ್ತು

ನಮ್ಮಕುಟುಂಬದ ಹಿರಿಯರಿಗೆ ಕೇಟರಿಂಗ್‌ನಲ್ಲಿ ಅನುಭವವಿತ್ತು. ಅದಕ್ಕೂ ಮಿಗಿಲಾಗಿ, ನಮ್ಮ ಅಜ್ಜಿ, ಅಮ್ಮ, ಚಿಕ್ಕಮ್ಮಂದಿರು ಯಾವುದೇ ತಿನಿಸು ಮಾಡಿದರೂ ಅದಕ್ಕೆ ಒಳ್ಳೆಯ ರುಚಿ ಸಿಗುತ್ತದೆ ಎಂದೂ ತಿಳಿದಿತ್ತು.

ಹಾಗಾಗಿ, ಈ ವೃತ್ತಿಯಲ್ಲಿ ಗೆಲ್ಲಬಲ್ಲೆ ಎಂಬ ನಂಬಿಕೆಯೂ ಇತ್ತು. ನಾನು ತಡ ಮಾಡಲಿಲ್ಲ. ನೇರವಾಗಿ ನಮ್ಮ ಬಾಸ್‌ ಬಳಿ ಹೋಗಿ, ನನ್ನ ನಿರ್ಧಾರ ತಿಳಿಸಿದೆ. ನಾಳೆಯಿಂದ ಕೆಲಸಕ್ಕೆ ಬರುವುದಿಲ್ಲ ಸರ್‌ ಎಂದೆ. ನಾನು ಆಗಷ್ಟೇ ಒಂದು ಪ್ರಾಜೆಕ್ಟ್ ನ ಯಶಸ್ವಿಯಾಗಿ ಮುಗಿಸಿದ್ದೆ. ಅದನ್ನು ನೆನಪಿಸಿಕೊಂಡ ನಮ್ಮ ಬಾಸ್‌- “”ನೋಡೂ, ನೀನು ಒಳ್ಳೆಯಕೆಲಸಗಾರ. ಶ್ರದ್ಧೆಯಿಂದಕೆ ಲಸ ಮಾಡು. ಖಂಡಿತ ಯಶಸ್ಸು ಸಿಗುತ್ತೆ. ನಿನಗೆ3 ತಿಂಗಳು ಸಂಬಳ ಸಹಿತ ರಜೆಕೊಡ್ತೇನೆ. ಈ ಹೊಸಾ ಬ್ಯುಸಿನೆಸ್‌ ಕೈ ಹಿಡಿಯದೇ ಹೋದ್ರೆ ಚಿಂತೆ ಬೇಡ. ಆರಾಮಾಗಿ ಮತ್ತೆಕೆಲಸಕ್ಕೆ ಬಾ. ಗುಡ್‌ ಲಕ್‌” ಎಂದು ಬೀಳ್ಕೊಟ್ಟರು.

ನಂತರ ಮೈಸೂರಿಗೆ ಬಂದು ಅಮ್ಮ, ಅಜ್ಜಿ, ಚಿಕ್ಕಮ್ಮಂದಿರ ಜೊತೆ ನನ್ನ ಕನಸುಗಳನ್ನು ಹೇಳಿಕೊಂಡೆ. ಅಮ್ಮ ತುಂಬಾ ಬ್ಯುಸಿ ಇದ್ದರು. ಹಾಗಾಗಿ ಅಜ್ಜಿ ಮತ್ತು ಚಿಕ್ಕಮ್ಮ ನನ್ನ ಕೆಲಸದಲ್ಲಿ ಸಾಥ್‌ಕೊಡಲು ಸಿದ್ಧರಾದರು. ಹಾಗೆ ರೂಪುಗೊಂಡದ್ದೇ- ಫ‌ುಡ್ ಬಾಕ್ಸ್ .ಅಮ್ಮನ ಕೈತುತ್ತು ನಿಮ್ಮ ಬಳಿಗೆ… ಘೋಷಣೆಯ ಯೋಜನೆ.

ಮನೆಮನೆಯ ಬಾಗಿಲು ತಟ್ಟಿ

ಅವತ್ತು ಡಿಸೆಂಬರ್‌3,2015. ಅವತ್ತೇ ನಮ್ಮ ಸ್ಟಾರ್ಟ್‌ ಅಪ್‌ ಶುರು ಆಗಿದ್ದು. ಅವತ್ತು ನಾನು ಪರಿಚಯದ 45 ಜನರ ಪಟ್ಟಿ ತಯಾರಿಸಿದೆ.ಅಷ್ಟೂ ಜನರಿಗೆ ಪಲಾವ್‌, ಮೊಸರನ್ನ, ಪಾಯಸ ಮತ್ತು ಫ‌ೂ›ಟ್‌ ಸಲಾಡ್‌ ತಯಾರಿಸಿಕೊಂಡು ಯಾವುದೇ ಸುಳಿವು ಕೊಡದೆ ಬೆಳಗ್ಗೆ ಬೆಳಗ್ಗೆಯೇ ಅವರ ಮನೆಬಾಗಿಲು ತಟ್ಟಿದೆ. ಇದು ನನ್ನ ಹೊಸ ಸಾಹಸ.

ಇವತ್ತಿಂದ ದಕ್ಷಿಣ ಭಾರತೀಯ ಶೈಲಿಯ ಊಟ-ತಿಂಡಿಯನ್ನು ಮನೆಮನೆಗೆ ಪೂರೈಸುವ ಕೆಲಸ ಶುರು ಮಾಡ್ತಾ ಇದ್ದೇನೆ. ದಯವಿಟ್ಟು ಒಮ್ಮೆ ಟೇಸ್ಟ್ ಮಾಡಿ ನೋಡಿ, ನಿಮಗೆ ಇಷ್ಟ ಆದರೆ ಇದರ ಬಗ್ಗೆ ನಾಲ್ಕು ಜನಕ್ಕೆ ಹೇಳಿ ಎಂದು ವಿನಂತಿಸಿದೆ. ಪ್ರತಿದಿನವೂ25 ಜನ ಗ್ರಾಹಕರು ಸಿಕ್ಕಿದರೆ ಸಾಕು, ಹಾಕಿದ ಬಂಡವಾಳಕ್ಕೆ ಮೋಸವಿಲ್ಲ ಎಂಬಂತೆ ಬದುಕಬಹುದು ಎಂಬ ಲೆಕ್ಕಾಚಾರ ನಮ್ಮದಾಗಿತ್ತು. ಆ ನಂತರದ ದಿನಗಳಲ್ಲಿ ನಡೆದಿದ್ದೆಲ್ಲಾ ಪವಾಡ ಅನ್ನಬೇಕು ಫ‌ುಡ್ ಬಾಕ್ಸ್ ನ ರುಚಿ ಗೆ ಮೈಸೂರಿನ ಜನ ಮರುಳಾದರು.

ನಮ್ಮ ನಿರೀಕ್ಷೆಯನ್ನು ಮೀರಿ ಆರ್ಡರ್‌ ಗಳು ಬಂದವು.ಕೆಲವು ಆಫೀಸ್‌ಗಳಲ್ಲಿ ವಾರವಿಡೀ3 ಹೊತ್ತೂ ಊಟ ತಂದುಕೊಡುವಂತೆ ಡಿಮ್ಯಾಂಡ್‌ ಬಂತು. ಇನ್ಫೋಸಿಸ್‌ನ ಕ್ಯಾಂಪಸ್‌ ನಿಂದಲೂ ಆರ್ಡರ್‌ ಬಂತು. ಇನ್ಫೋಸಿಸ್‌ ನ ಸಂಸ್ಥಾಪಕರಾದ ನಾರಾಯಣಮೂರ್ತಿ ಯವರೇಊಟದ ಗುಣಮಟ್ಟದ ಬಗ್ಗೆ ಮೆಚ್ಚುಗೆಯ ಮಾತಾಡಿದರು.

ನೂರು ರೂಪಾಯಿಗಳ ಆಚೀಚೆ

ವಿಶೇಷವೆಂದರೆ, ನಾವು ಪೂರೈಸುವ ಊಟ-ತಿಂಡಿಗಳ ಬೆಲೆ ನೂರು ರೂಪಾಯಿಗಳ ಆಚೀಚೆಯೆ ಇರುತ್ತದೆ. ಆನ್‌ಲೈನ್‌ ಮತ್ತು ಫೋನ್‌ ಮೂಲಕ ಆರ್ಡರ್‌ ಮಾಡುವ ಸೌಲಭ್ಯವಿದೆ. ಆರ್ಡರ್‌ ತಲುಪಿದ ಅರ್ಧ ಅಥವಾ ಮುಕ್ಕಾಲು ಗಂಟೆಯಲ್ಲಿ ಬಿಸಿ, ಶುಚಿ ಮತ್ತು ರುಚಿಯಾದ ಊಟ- ತಿಂಡಿಯನ್ನು ಗ್ರಾಹಕರ ಮನೆ- ಕಚೇರಿಗೆ ತಲುಪಿಸಲಾಗುತ್ತದೆ. ಐದು ವರ್ಷಗಳ ಹಿಂದೆ ಒಂದು ಚಿಕ್ಕ ಗ್ಯಾರೇಜಿನಲ್ಲಿ ಆರಂಭವಾದ ಫ‌ುಡ್‌ಬಾಕ್ಸ್, ಇದೀಗ ಒಂದು ಸುಸಜ್ಜಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ:ಲ್ಯಾಪ್‌ಟಾಪ್‌ಬಾಳಿಕೆಗೆ ಪಂಚ ಸೂತ್ರಗಳು

ಆರಂಭದ ದಿನಗಳಲ್ಲಿ ನಮ್ಮ ಅಜ್ಜಿ ಮತ್ತು ಚಿಕ್ಕಮ್ಮಂದಿರು ಅಡುಗೆ ಮನೆಯ ಉಸ್ತುವಾರಿ ವಹಿಸಿದ್ದರು. ಈಗ ಆ ಜಾಗಕ್ಕೆ ನುರಿತ ಬಾಣಸಿಗರು ಬಂದಿದ್ದಾರೆ. ಕೆಲಸಗಳನ್ನು ಹಂಚಿಕೊಳ್ಳಲು ನನ್ನೊಂದಿಗೆ ಚಿಕ್ಕಮ್ಮ ಉಷಾ, ಗೆಳೆಯರಾದ ಮಂಜು, ವಿನಯ, ಸ್ಕಂದ, ಆಲಾಪ್‌ ಮತ್ತು ಯತಿರಾಜ್‌ ಇದ್ದಾರೆ. ಐದು ಜನ ಕೆಲಸಗಾರರಿಂದ ಶುರುವಾದ ನಮ್ಮ ಸ್ಟಾರ್ಟ್‌ ಅಪ್‌ ಇವತ್ತು27 ಮಂದಿಗೆ ಕೆಲಸ ನೀಡಿದೆ.

ಮನೆಮನೆಗೂ ಶುಚಿ-ರುಚಿಯಊಟ ತಲುಪಿಸುತ್ತಲೇ ಈ ಉದ್ಯಮದಲ್ಲಿ ಲಾಭದ ಮುಖ ನೋಡುವುದಕ್ಕೂ ಸಾಧ್ಯವಾಗಿದೆ. ಫ‌ುಡ್‌ ಬಾಕ್ಸ್ ಮೈಸೂರಿನ ಮೂಲೆಮೂಲೆಯನ್ನೂ ತಲುಪಿದೆ ಎಂದು ಹೇಳಿಕೊಳ್ಳಲು, ಮೈಸೂರಿನಲ್ಲಿ ನಮಗೆ ಈಗ 30,000ಕ್ಕೂ ಹೆಚ್ಚು ಗ್ರಾಹಕರಿದ್ದಾರೆ ಎನ್ನಲು ನನಗೆ ಹೆಮ್ಮೆ, ಖುಷಿ ಅನ್ನುತ್ತಾರೆ ಮುರಳಿ. ಫ‌ುಡ್‌ ಬಾಕ್ಸ್ ಕುರಿತ ಇನ್ನಷ್ಟು ಮಾಹಿತಿಗೆ- http://www.foodboxmysuru.com/ ನಲ್ಲಿ ನೋಡಿ.

ಗೀತಾಂಜಲಿ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

complaint

Kundapura: ಹಲ್ಲೆ, ಗಾಯ; ದೂರು ದಾಖಲು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.